ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್ ಈ ಸಿಂಗರ್ ಜೋಗಿ ಪ್ರೇಮ್

‘KD’ ಜೋಡೆತ್ತು.. ‘ರಕ್ಕಸಪುರದೋಳ್’ ಸಿದ್ದಯ್ಯ ಸ್ವಾಮಿ ಬನ್ನಿ

BeFunky collage (91)

ಜೋಗಿ ಪ್ರೇಮ್‌‌ಗೆ ಹ ಕಾರ ಹಾಗೂ ಅ ಕಾರಗಳ ನಡುವೆ ವ್ಯತ್ಯಾಸವೇ ಗೊತ್ತಿಲ್ಲ ಅನ್ನೋ ಮಾತಿದೆ. ಆ ಬಗ್ಗೆ ಸ್ವತಃ ಪ್ರೇಮ್ ಅವ್ರೇ ಒಮ್ಮೆ ಮೌನ ಕೂಡ ಮುರಿದಿದ್ದರು. ಆದ್ರೀಗ ಕೆಡಿ ಹಾಗೂ ರಕ್ಕಸಪುರದೋಳ್ ಚಿತ್ರಗಳ ಹಾಡುಗಳನ್ನ ಹಾಡೋ ಮೂಲಕ ಆಡಿಕೊಂಡವ್ರ ಹೃಯದ ಮುಟ್ಟಿದ್ದಾರೆ. ಆಡು ಭಾಷೆಯ ಸಾಹಿತ್ಯಕ್ಕೆ ಕೇರ್ ಆಫ್ ಅಡ್ರೆಸ್ ಆಗಿರೋ ಪ್ರೇಮ್ ಕಂಠದ ಕಥೆ ಇಲ್ಲಿದೆ ನೋಡಿ.

ಇದು ರಾಜ್ ಬಿ ಶೆಟ್ಟಿ ನಟನೆಯ ರಕ್ಕಸಪುರದೋಳ್ ಚಿತ್ರದ ಜಾನಪದ ಸೊಗಡಿನ ಸಾಂಗ್. ಇತ್ತೀಚೆಗೆ ರಿಲೀಸ್ ಆದ ಸಿದ್ದಯ್ಯ ಸ್ವಾಮಿ ಬನ್ನಿ ಅನ್ನೋ ಈ ಹಾಡು ಎಲ್ಲರೂ ಗುನುಗುವಂತಾಗಿದೆ. ಅದಕ್ಕೆ ಕಾರಣ ಡೈಲಾಗ್ ರೈಟರ್ ಕ್ರಾಂತಿ ಕುಮಾರ್ ಅವರ ಸಾಹಿತ್ಯ, ಅರ್ಜುನ್ ಜನ್ಯ ಸಂಗೀತ ಹಾಗೂ ಜೋಗಿ ಪ್ರೇಮ್ ಅವರ ಕಂಠ. ಯೆಸ್.. ಹಳ್ಳಿ ಬ್ಯಾಗ್ರೌಂಡ್, ಜಾನಪದ, ಭಾವಗೀತೆ ಟಚ್ ಇರೋ ಆಡು ಭಾಷೆ ಶೈಲಿಯ ಹಾಡುಗಳಿಗೆ ಪ್ರೇಮ್ ಅವರ ಕಂಠ ಕೇರ್ ಆಫ್ ಅಡ್ರೆಸ್.

ಹಕಾರ ಅಕಾರ ಪ್ರಾಬ್ಲಮ್ ಅಂದವ್ರ ಹೃದಯ ಮುಟ್ಟಿದ ಪ್ರೇಮ್

‘KD’ ಜೋಡೆತ್ತು.. ‘ರಕ್ಕಸಪುರದೋಳ್’ ಸಿದ್ದಯ್ಯ ಸ್ವಾಮಿ ಬನ್ನಿ

ಸದ್ಯ ಈ ಹಾಡಿನಲ್ಲಿ ಅರ್ಜುನ್ ಜನ್ಯ ಅವರೇ ನಟಿಸಿದ್ದು, ಪ್ರೇಮ್ ಗಾಯನ ಮನ ಮುಟ್ಟುವಂತಿದೆ. ಹ ಕಾರ ಹಾಗೂ ಅ ಕಾರಗಳಿಗೆ ವ್ಯತ್ಯಾಸವೇ ಗೊತ್ತಿಲ್ಲ ಪ್ರೇಮ್‌ಗೆ ಅಂತ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿತ್ತು. ಅದಕ್ಕೆ ಸ್ವತಃ ಅವರೇ ಪ್ರತಿಕ್ರಿಯೆ ಕೂಡ ನೀಡಿದ್ರು. ನನಗೆ ಭಾವ ತುಂಬುವುದಷ್ಟೇ ಗೊತ್ತು. ಸಂಗೀತ ಅಂದ್ರೆ ಮನಸ್ಸು ಮುಟ್ಟಬೇಕು. ಹೃದಯಕ್ಕೆ ತಟ್ಟಬೇಕು ಎಂದಿದ್ರು. ಅದು ಮೊದಲಿನಿಂದಲೂ ಆಗ್ತಿದೆ. ಅದ್ರಲ್ಲೂ ಇತ್ತೀಚೆಗೆ ರಿಲೀಸ್ ಆದ ಕೆಡಿ ಚಿತ್ರದ ಜೋಡೆತ್ತು ಹಾಗೂ ರಕ್ಕಸಪುರದೋಳ್ ಚಿತ್ರದ ಗೀತೆಗಳು ಪ್ರೇಮ್ ಎಂತಹ ಅದ್ಭುತ ಗಾಯಕ ಅನ್ನೋದಕ್ಕೆ ಮಗದೊಮ್ಮೆ ಸಾಕ್ಷಿ ಆಗಿವೆ.

ಆಡು ಭಾಷೆಯ ಸಾಂಗ್ಸ್‌‌ಗೆ ಪ್ರೇಮ್ ಕಂಠ ಕೇರ್ ಆಫ್ ಅಡ್ರೆಸ್

ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್ ಈ ಸಿಂಗರ್ ಜೋಗಿ ಪ್ರೇಮ್

ಎಕ್ಸ್‌‌ಕ್ಯೂಸ್‌ ಮೀ ಚಿತ್ರದ ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೋ ಹಾಡು, ಜೋಗಿ ಚಿತ್ರದ ಬೇಡುವೆನು ವರವನ್ನು ಹಾಡುಗಳಿಂದ ಹಿಡಿದು ಸಾಲು ಸಾಲು ಸಾಂಗ್ಸ್‌ಗೆ ಸಾಹಿತ್ಯವೂ ರಚಿಸಿದ್ದಾರೆ. ಅತ್ಯದ್ಭುತವಾಗಿ ಭಾವ ತುಂಬಿ ಹಾಡಿದ್ದಾರೆ ಕೂಡ. ಪ್ರೇಮ್ ನಟ, ನಿರ್ದೇಶಕ, ನಿರ್ಮಾಪಕ, ಬರಹಗಾರ ಅಷ್ಟೇ ಅಲ್ಲ, ಪ್ರೊಫೆಷನಲ್ ಸಿಂಗರ್‌ನೇ ಮೀರಿಸೋ ಅಂತಹ ಗಾಯಕ ಅಂತಿದೆ ಕರುನಾಡು.

 

Exit mobile version