ಬಾಲಿವುಡ್ ನ ಖ್ಯಾತ ನಟಿಯರಲ್ಲಿ ಒಬ್ಬರಾದ ಜಾನ್ವಿ ಕಪೂರ್ ಯಾವಾಗಲೂ ಸುದ್ದಿಗಳಲ್ಲಿರುತ್ತಾರೆ. ಶ್ರೀದೇವಿ ಮತ್ತು ಬೋನಿ ಕಪೂರ್ ಅವರ ಪುತ್ರಿಯಾಗಿ ಬಾಲಿವುಡ್‌ಗೆ ಕಾಲಿಟ್ಟ ಜಾನ್ವಿ, ತನ್ನ ನಟನೆಗೆ ಅಷ್ಟೇ ಅಲ್ಲ, ಫ್ಯಾಷನ್ ಸಂಸ್ಕೃತಿಯಲ್ಲೂ ಜನಪ್ರಿಯತೆ ಹೊಂದಿದ್ದಾರೆ. ಇದೀಗ ಜಾನ್ವಿ ಕಪೂರ್‌ಗೆ ಹೊಸ ಐಷಾರಾಮಿ ಕಾರು ಉಡುಗೊರೆಯಾಗಿ ಕೊಟ್ಟಿದ್ದಾರೆ.
ಇದು ಸಾಮಾನ್ಯ ಕಾರು ಅಲ್ಲ, ಬರೋಬ್ಬರಿ ರೂ. 4.99 ಕೋಟಿ ಮೌಲ್ಯದ ಲ್ಯಾಂಬೋರ್ಗಿನಿ ಹುರಾಕನ್ ಇವೊ ಸ್ಪೈಡರ್. ಈ ಕಾರು ಅತ್ಯಂತ ದುಬಾರಿಯಾಗಿದ್ದು, ಅದರದೇ ಆದ ವಿಶೇಷತೆಯನ್ನು ಹೊಂದಿದೆ. ಆದರೆ ಈ ಕಾರನ್ನು ಉಡುಗೊರೆಯಾಗಿ ಕೊಟ್ಟವರು ಯಾರು ಎಂದು ಎಲ್ಲರಿಗೂ ಕುತೂಹಲ ಮೂಡಿಸಿದೆ.
ಅಭಿಮಾನಿಗಳು ಮೊದಲಿಗೆ ಬೋನಿ ಕಪೂರ್ ಅಥವಾ ಜಾನ್ವಿಯ ಗೆಳೆಯ ಶಿಖರ್ ಪಹಾರಿಯಾ ಈ ಕಾರು ಕೊಟ್ಟಿರಬಹುದೆಂದು ಊಹಿಸಿದ್ದರು. ಆದರೆ, ಅಚ್ಚರಿ ಎಂದರೆ ಈ ಲಗ್ಜುರಿ ಕಾರು ಅನನ್ಯಾ ಬಿರ್ಲಾ ಎಂಬ ಉದ್ಯಮಿಯಿಂದ ಜಾನ್ವಿಗೆ ಉಡುಗೊರೆಯಾಗಿ ಬಂದಿದೆ ಎನ್ನಲಾಗಿದೆ.
ಅನನ್ಯಾ ಬಿರ್ಲಾ, ಬಿಲಿಯನೇರ್ ಉದ್ಯಮಿ ಕುಮಾರ್ ಮಂಗಲಂ ಬಿರ್ಲಾ ಮತ್ತು ನೀರ್ಜಾ ಬಿರ್ಲಾ ದಂಪತಿಗಳ ಪುತ್ರಿ. ಅವರು ಭಾರತದಲ್ಲಿಯೇ ಅಲ್ಲ, ಜಾಗತಿಕ ಮಟ್ಟದಲ್ಲಿಯೂ ಪ್ರಸಿದ್ಧಿ ಗಳಿಸಿದ್ದಾರೆ. ಸಂಗೀತ, ಉದ್ಯಮ ಮತ್ತು ಸಾಮಾಜಿಕ ಸೇವೆಗಳಲ್ಲಿ ಸಕ್ರಿಯರಾಗಿರುವ ಅನನ್ಯಾ, ಇದೀಗ ಸೌಂದರ್ಯ ಉದ್ಯಮದಲ್ಲಿ ಕಾಲಿಟ್ಟಿದ್ದಾರೆ.
ಜಾನ್ವಿ ಕಪೂರ್ ಅವರಿಗೆ ಈ ಕಾರಿನ ಜೊತೆ, ಒಂದು ದೊಡ್ಡ ಪೆಟ್ಟಿಗೆ ಕೂಡ ಕಳುಹಿಸಲಾಗಿದೆ. ಅದರ ಮೇಲೆ ‘ಅನನ್ಯಾ’ ಎಂಬ ಹೆಸರು ಉಲ್ಲೇಖವಾಗಿದೆ. ಈ ಮೂಲಕ ಕಾರು ಕೊಟ್ಟಿರುವ ವ್ಯಕ್ತಿ ಅನನ್ಯಾ ಬಿರ್ಲಾ ಎಂಬುದು ಖಚಿತವಾಗಿದೆ ಎಂದು ಬಾಲಿವುಡ್ ಮೂಲಗಳು ತಿಳಿಸುತ್ತಿವೆ.
ಹೆಚ್ಚು ಆಪ್ತರಾದ ಜಾನ್ವಿ ಮತ್ತು ಅನನ್ಯಾ, ಕೆಲ ಸಮಯದಿಂದ ಸ್ನೇಹಿತರು. ಜಾನ್ವಿ, ಅನನ್ಯಾ ಬಿರ್ಲಾ ಅವರ ಹೊಸ ಮೇಕಪ್ ಬ್ರ್ಯಾಂಡ್‌ಗೆ ಬ್ರಾಂಡ್ ಅಂಬಾಸಿಡರ್ ಆಗಲಿದ್ದು, ಈ ಸಹಕಾರದ ಭಾಗವಾಗಿ ಅವರು ಈ ಬಹುಮೌಲ್ಯ ಕಾರು ಹಾಗೂ ಹಲವು ಕೋಟಿ ಸಂಭಾವನೆ ಸ್ವೀಕರಿಸಿದ್ದಾರೆ ಎನ್ನಲಾಗುತ್ತಿದೆ.
ಅನನ್ಯಾ ಬಿರ್ಲಾ ತಮ್ಮ ಸಂಗೀತ ವೃತ್ತಿಜೀವನವನ್ನು 2016ರಲ್ಲಿ ‘ಲಿವಿನ್’ ದಿ ಲೈಫ್’ ಎಂಬ ಸಿಂಗಲ್ ಮೂಲಕ ಪ್ರಾರಂಭಿಸಿದ್ದರು. ಈಗ ಅವರು ತಮ್ಮ ವ್ಯಾಪಾರ ವಿಸ್ತರಣೆಯ ಭಾಗವಾಗಿ ಸೌಂದರ್ಯ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಅವರ ಈ ಹೊಸ ಪ್ರಯತ್ನವನ್ನು ಬಾಲಿವುಡ್‌ನ ಹಲವು ಕಲಾವಿದರು ಮತ್ತು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
ಜಾನ್ವಿಯ ಐಷಾರಾಮಿ ಕಾರು ಸಂಗ್ರಹ ಈಗ ಲ್ಯಾಂಬೋರ್ಗಿನಿಯಿಂದ ಇನ್ನೂ ಶ್ರೀಮಂತವಾಗಿದೆ. ಈಗಾಗಲೇ ಅವರು 2.5 ಕೋಟಿ ಮೌಲ್ಯದ ಟೊಯೋಟಾ ಲೆಕ್ಸಸ್, 1.62 ಕೋಟಿ ಮೌಲ್ಯದ ಮರ್ಸಿಡಿಸ್ ಎ-ಕ್ಲಾಸ್, 67.15 ಲಕ್ಷದ ಮರ್ಸಿಡಿಸ್ GLE250D ಮತ್ತು 95.9 ಲಕ್ಷ ಮೌಲ್ಯದ BMW X5 ಹೊಂದಿದ್ದಾರೆ.
ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..
- Tata Play-1665
- U-Digital-ಮೈಸೂರು-160
- Metro Cast Network-ಬೆಂಗಳೂರು-ಬೆಳಗಾವಿ-30-828
- V4 digital network-623
- Abhishek network-817
- Malnad Digital network-45
- JBM network-ರಾಮದುರ್ಗ-54
- Channel net nine-ಧಾರವಾಡ-128
- Basava cable network-ಚಳ್ಳಕೆರೆ-54
- City channel network– ಚಳ್ಳಕೆರೆ-54
- RST digital-ಕಾರ್ಕಳ-101
- Vinayak cable-ಪಟ್ಟನಾಯಕನಹಳ್ಳಿ-54
- Mubarak digital-ಸಂಡೂರು-54
- SB cable-ಸವದತ್ತಿ-54
- Bhosale network-ವಿಜಯಪುರ-54
- Surya digital-ಜಗಳೂರು-54
- Gayatri network-ಸಿಂಧನೂರು-54
- Global vision-ದಾವಣಗೆರೆ-54
- Janani cable-ಮಂಡ್ಯ-54
- Hira cable-ಬೆಳಗಾವಿ-ಹುಬ್ಬಳ್ಳಿ-54
- UDC network-ಹಾರೋಗೇರಿ-54
- Moka cable-ಬಳ್ಳಾರಿ-100
- CAN network-ಚಿಕ್ಕೋಡಿ-54
- KK digital-ಗಂಗಾವತಿ-54
- Victory network-ದಾವಣಗೆರೆ-54
