ಜನನಾಯಗನ್ ಸಿನಿಮಾಗೆ ಸಾಲು ಸಾಲು ಸಂಕಷ್ಟಗಳು ಎದುರಾಗಿವೆ. ಎಲ್ಲಾ ಸಮಸ್ಯೆಗಳು ಇತ್ಯರ್ಥವಾಗಿ ಇನ್ನೇನು ಸಿನಿಮಾ ರಿಲೀಸ್ ಗೆ ಬರಬೇಕು ಎನ್ನವ ಹೊತ್ತಿನಲ್ಲಿ ಮತ್ತೊಂದು ದೊಡ್ಡ ಆಘಾತ ಚಿತ್ರತಂಡಕ್ಕೆ ಎದುರಾಗಿದೆ. ತಮಿಳುನಾಡಿನ ಸಿಎಂ ವಿಜಯ್ ದಳಪತಿ ಅಭಿನಯದ ಕೊನೆಯ ಸಿನಿಮಾ ಜನನಾಯಗನ್ ಸಿನಿಮಾಗೆ ಎದುರಾದ ಸಂಕಷ್ಟವೇನು..? ಮತ್ತೆ ರಿಲೀಸ್ ಡೇಟ್ ಪೋಸ್ಟ್ ಪೋನ್ ಆಗುತ್ತಾ..? ಈ ಕುರಿತು ಒಂದು ಸ್ಪೇಷಲ್ ಸ್ಟೋರಿ ಇಲ್ಲಿದೆ ನೋಡಿ.
- ಜನನಾಯಗನ್‌ಗೆ ಕರ್ನಾಟಕದಲ್ಲಿ ನೋ ಎಂಟ್ರಿ..!
- ವಿಜಯ್ ರಾಜಕೀಯ ನಿರ್ಧಾರಕ್ಕೆ ಜನನಾಯಗನ್ ಬಲಿ..?
- ಮೇಕೆದಾಟು ಕಿಚ್ಚು..ಕೆವಿಎನ್ಗೆ ಕೋಟಿ ಕೋಟಿ ನಷ್ಟದ ಭೀತಿ..!
- ವಿಜಯ್ ಸಿನಿಮಾ VS ಕನ್ನಡಿಗರ ಅಭಿಮಾನ..ಚಿತ್ರತಂಡಕ್ಕೆ ಟೆನ್ಷನ್
ಕೆವಿಎನ್ ನಿರ್ಮಾಣದಲ್ಲಿ ಅದ್ಧೂರಿ ಬಜೆಟ್ ನಲ್ಲಿ ನಿರ್ಮಾಣವಾದ ಜನನಾಯಗನ್ ಸಿನಿಮಾ ಸದ್ಯದಲ್ಲಿಯೇ ರಿಲೀಸ್ ಗೆ ತಯಾರಿ ಮಾಡಿಕೊಙಡ ಹೊತ್ತಿನಲ್ಲೇ ಮತ್ತೊಂದು ಸಂಕಷ್ಟ ಎದುರಾಗಿದೆ. ತಮಿಳುನಾಡಿ ಸಿಎಂ ವಿಜಯ್ ನಟನೆಯ ‘ಜನ ನಾಯಗನ್’ ಚಿತ್ರ ಹಲವಾರು ಸಂಕಷ್ಟಗಳನ್ನ ಎದುರಿಸಿ ರಿಲೀಸ್ ಹಂತಕ್ಕೆ ಬಂದು ನಿಂತಿದೆ. ಆದರೆ ಇದೀಗ ಕನ್ನಡಪರ ಸಂಘಟನೆಗಳ ಮುಖಂಡ ವಾಟಾಳ್ ನಾಗರಾಜ್ ಮಾತನಾಡಿ, ‘ಜನ ನಾಯಗನ್’ ಸಿನಿಮಾ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿದ್ದು, ಸಿನಿಮಾ ರಿಲೀಸ್ ಆಗಲು ಬಿಡುವುದಿಲ್ಲ ಎನ್ನವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕನ್ನಡ ನಿರ್ಮಾಣ ಸಂಸ್ಥೆ ತಯಾರು ಮಾಡಿದ ಸಿನಿಮಾಗೆ ಕರ್ನಾಟಕದಲ್ಲಿ ರಿಲೀಸ್ ಗೆ ಯಾಕೆ ತಡಯೊಡ್ಡುತ್ತಿದ್ದಾರೆ ಎನ್ನುವ ಪ್ರಶ್ನೆ ಮೂಡೋದು ಸಹಜ. ಆದ್ರೆ ಅದಕ್ಕೆ ಮುಖ್ಯಕಾರಣವೆಂದ್ರೆ, ಈಗಿನ ತಮಿಳುನಾಡು ಮುಖ್ಯಮಂತ್ರಿ ವಿಜಯ್, ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ವಿಜಯ್ ಅವರು ನಟರಾಗಿದ್ದವರು ಈಗ ಅಧಿಕಾರಕ್ಕೆ ಬಂದಿದ್ದಾರೆ. ನಟನೆ ಮಾಡುವುದು ಸುಲಭ ಆದರೆ ಅಧಿಕಾರ ನಡೆಸುವುದು ಕಷ್ಟ. ಮೇಕೆದಾಟಿಗೆ ವಿರೋಧ ಮಾಡಿದರೆ ಕರ್ನಾಟಕದಲ್ಲಿ ಅವರ ಯಾವುದೇ ಸಿನಿಮಾ ಬಿಡುಗಡೆಗೆ ಅವಕಾಶ ಕೊಡಲ್ಲ’ ಎಂದು ವಾಟಾಳ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ವಿಜಯ್ ದಳಪತಿ ಸಿನಿಮಾಗೆ ಒಂದಾದ ನಂತರ ಒಂದು ಸಮಸ್ಯೆಗಳು ಎದುರಾಗ್ತಾನೇ ಇವೆ. ಅದೆಲ್ಲ ಸಂಕಷ್ಟಗಳನ್ನ ನೆಟ್ಟಿನಿಂತು ಈಗ ರಿಲೀಸ್ ಹಂತವನ್ನ ತಲುಪಿದೆ. ಸೆನ್ಸಾರ್ ಮಂಡಳಿಯಿಂದ ಎದುರಾದ ಸಂಕಷ್ಟದಿಂದ ಸಿನಿಮಾ ಜನವರಿಯಲ್ಲಿ ರಿಲೀಸ್ ಆಗ್ಲಿಲ್ಲ. ಜನವರಿಯಲ್ಲಿ ತೆರೆಗೆ ತರಲು ಚಿತ್ರತಂಡ ಹರಸಾಹಸವನ್ನೇ ಮಾಡಿತು. ಆದ್ರೆ ಎಷ್ಟೇ ಪ್ರಯತ್ನ ಪಟ್ಟರೂ ಚಿತ್ರ ರಿಲೀಸ್ ಆಗ್ಲಿಲ್ಲ ಅಷ್ಟರಲ್ಲೇ ತಮಿಳುನಾಡಿನಲ್ಲಿ ನೀತಿ ಸಂಹಿತೆ ಜಾರಿಯಾಗಿತ್ತು. ಇದೆಲ್ಲ ಮುಗಿಸಿಕೊಂಡು ಈ ತಿಂಗಳು ಸಿನಿಮಾ ತೆರೆಗೆ ಬರಬೇಕು ಆದ್ರೆ ಅದಕ್ಕೆ ಕರ್ನಾಟಕದಲ್ಲಿ ಅವಕಾಶವಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಕನ್ನಡಿಗರು ಯಾವ ವಿಚಾರವನ್ನಾದರೂ ಸಹಿಸಿಕೊಳ್ಳುತ್ತಾರೆ. ಆದ್ರೆ ಕನ್ನಡದ ನೆಲ, ಜಲ ಹಾಗೂ ಭಾಷೆ ವಿಚಾರಕ್ಕೆ ಬಂದ್ರೆ ಯಾರೂ ಸುಮ್ಮನೇ ಕೂರುವುದಿಲ್ಲ. ಈ ಬಗ್ಗೆ ಈಗಾಗ್ಲೇ ಹಲವಾರು ನಿದರ್ಶನಗಳು ನಮ್ಮ ಕಣ್ಮುಂದಿವೆ. ಈಗಾಗಲೇ ಕಮಲ್ ಹಾಸನ್ ಅವರ ಸಿನಿಮಾವನ್ನು ರಾಜ್ಯದಲ್ಲಿ ಬಿಡುಗಡೆ ಆಗದಂತೆ ತಡೆಯಲು ಯಶಸ್ವಿ ಆಗಿದ್ದಾರೆ ನಮ್ಮ ಕನ್ನಡಪರ ಹೋರಾಟಗಾರರು.
ಅದೇ ರೀತಿ, ಮೇಕೆದಾಟಿಗೆ ವಿರೋಧ ಮಾಡುತ್ತಿರುವ ತಮಿಳುನಾಡು ಸಿಎಂ ಅವರಿಗೂ ನಾವು ಬುದ್ಧಿ ಕಲಿಸುತ್ತೇವೆ’ ಎಂದು ವಾಟಾಳ್ ಗುಡುಗಿದ್ದಾರಂತೆ. ವಿಜಯ್ ಅವರು ಸಿಎಂ ಆದ ಬಳಿಕ ಮೇಕೆದಾಟು ವಿವಾದದ ಬಗ್ಗೆ ಸುಪ್ರೀಂಕೋರ್ಟ್ನಲ್ಲಿ ಪುನರ್ಪರಿಶೀಲನೆ ಅರ್ಜಿ ಹಾಕಿದ್ದಾರೆ. ಅಲ್ಲದೆ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಆದಾಗ ಮೇಕೆದಾಟು ಬಗ್ಗೆ ಪ್ರಸ್ತಾಪಿಸಿದ್ದು, ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ವಿಜಯ್ ಅವರ ಈ ಕರ್ನಾಟಕ ವಿರೋಧಿ ಚಿಂತನೆ ಕನ್ನಡಪರ ಸಂಘಟನೆಗಳನ್ನು ಕೆರಳಿಸಿದೆ.
ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾ ಶೀಘ್ರವೇ ಬಿಡುಗಡೆ ಆಗುವ ಸಾಧ್ಯತೆ ಇದೆ. ಜನವರಿಯಲ್ಲೇ ಬಿಡುಗಡೆ ಆಗಬೇಕಿದ್ದ ಈ ಸಿನಿಮಾ ಈ ವರೆಗೆ ಬಿಡುಗಡೆ ಆಗಿಲ್ಲ. ಕೆವಿಎನ್ ನಿರ್ಮಾಣ ಸಂಸ್ಥೆ ಈ ಸಿನಿಮಾವನ್ನು ನಿರ್ಮಿಸಿದೆ. ಒಂದೊಮ್ಮೆ ‘ಜನ ನಾಯಗನ್’ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಆಗದಿದ್ದಲ್ಲಿ ನಿರ್ಮಾಪಕರಿಗೆ ಭಾರಿ ದೊಡ್ಡ ನಷ್ಟವೇ ಆಗಲಿದೆ. ಇನ್ನು ಜನನಾಯಗನ್ ಸಿನಿನಾದ ವಿತರಕರು, ಪ್ರದರ್ಶಕರು ನಿರ್ಮಾಪಕರಿಗೆ ಭಾರಿ ಮೊತ್ತದ ಹಣ ಕೊಟ್ಟು ‘ಜನ ನಾಗಯನ್’ ಸಿನಿಮಾ ಬಿಡುಗಡೆ ಮಾಡಲು ಕಾಯುತ್ತಿರುವಾಗ, ಸಿನಿಮಾದ ಬಿಡುಗಡೆಯನ್ನು ಹಠಾತ್ತಾಗಿ ತಡೆ ಹಿಡಿಯಲಾಗಿತ್ತು. ಹಣ ಕೊಟ್ಟ ನಿರ್ಮಾಪಕರು ತಿಂಗಳಾನುಗಟ್ಟಲೆ ಕಾದರೂ ಸಹ ಸಿನಿಮಾ ಬಿಡುಗಡೆ ಆಗಿಲ್ಲ. ಇದೀಗ ವಿಜಯ್ ಸೂಚನೆ ಮೇರೆಗೆ ನಿರ್ಮಾಪಕರು ವಿತರಕರ ಹಣ ಮರಳಿಸಿದ್ದಾರೆ ಎನ್ನಲಾಗುತ್ತಿದೆ.
