ಜನನಾಯಗನ್.. ದಳಪತಿ ವಿಜಯ್ ಕಟ್ಟ ಕಡೆಯ ಸಿನಿಮಾ ಎನ್ನಲಾಗ್ತಿತ್ತು. ಆದ್ರೀಗ ಸಿಎಂ ವಿಜಯ್ ಫ್ಯಾನ್ಸ್‌ಗೆ ಗುಡ್ ನ್ಯೂಸ್ ನೀಡಿದ್ದು, ಇದು ಮುಖ್ಯಮಂತ್ರಿಯ ಮೊಟ್ಟ ಮೊದಲ ಚಿತ್ರ ಎನ್ನಲಾಗ್ತಿದೆ. ಅಷ್ಟೇ ಅಲ್ಲ, ನಿರ್ದೇಶಕ ವಿನೋದ್ ಸಾಕಷ್ಟು ವಿಷಯಗಳನ್ನ ತೆರೆದಿಟ್ಟಿದ್ದಾರೆ.
ಸಿಎಂ ಕೊನೆ ಚಿತ್ರವಲ್ಲ ‘ಜನನಾಯಗನ್’.. ಡೈರೆಕ್ಟರ್ ರಿವೀಲ್
‘ಇದು ಮುಖ್ಯಮಂತ್ರಿ ಮೊದಲ ಚಿತ್ರ’- ನಿರ್ದೇಶಕ ವಿನೋದ್
8 ಸಾವಿರ ಸ್ಕ್ರೀನ್ಸ್.. ವಿಶ್ವದಾದ್ಯಂತ ಜನನಾಯಗನ್ ಪ್ರದರ್ಶನ
CM ವಿಜಯ್ ಕ್ರೇಜ್ ಡಬಲ್.. 1000Cr ಬಾಕ್ಸ್ ಆಫೀಸ್..!
ಜನನಾಯಗನ್.. ಭಾರತೀಯ ಚಿತ್ರರಂಗದಲ್ಲಿ ಈ ವರ್ಷ ಸಿಕ್ಕಾಪಟ್ಟೆ ಸಂಚಲನ ಮೂಡಿಸಿದ ಸಿನಿಮಾ. ತಮಿಳು ಸೂಪರ್ ಸ್ಟಾರ್ ದಳಪತಿ ವಿಜಯ್ ನಟನೆಯ ಈ ಸಿನಿಮಾ, ಸೆನ್ಸಾರ್ ಸಮಸ್ಯೆಯಿಂದಾಗಿ ಸಿನಿದುನಿಯಾದಲ್ಲಿ ಬಹುದೊಡ್ಡ ಚರ್ಚೆಗೆ ಪಾತ್ರವಾಗಿತ್ತು. ಆದ್ರೀಗ ಕೊನೆಗೂ ಸಿನಿಮಾ 7 ತಿಂಗಳ ನಂತ್ರ ತೆರೆಗಪ್ಪಳಿಸುತ್ತಿದೆ. ಆದ್ರೆ ಈ ಹಿಂದೆ ಇದ್ದಂತಹ ಕ್ರೇಜ್, ಹೈಪ್, ನಿರೀಕ್ಷೆಗಳು ಡಬಲ್ ಆಗಿವೆ. ಅದಕ್ಕೆ ಕಾರಣ ನಾಯಕನಟ ವಿಜಯ್ ಸಿಎಂ ಅನ್ನೋದು.
ನಮ್ಮ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ಜನನಾಯಗನ್ ಚಿತ್ರ ವಿಜಯ್ ಸಿಎಂ ಆಗೋಕೆ ಮುನ್ನ ನಟಿಸಿದ್ದಣತಹ ಚಿತ್ರ. ಇದೀಗ ಅವರು ತಮಿಳುನಾಡು ರಾಜ್ಯದ ಮುಖ್ಯಮಂತ್ರಿ. ಸೋ.. ಜನನಾಯಗನ್ ಸಹಜವಾಗಿಯೇ ಬಾಕ್ಸ್ ಆಫೀಸ್‌ನಲ್ಲಿ ಬಿಗ್ ಓಪನಿಂಗ್ ಪಡೆದುಕೊಳ್ಳಲಿದೆ. ಈಗಾಗ್ಲೇ ಚಿತ್ರದ ಹೆಚ್‌ಡಿ ಕಾಪಿ ಪೈರಸಿ ಆಗಿದ್ರೂ ಸಹ, ಭಾರತ ಒಂದರಲ್ಲೇ ಸುಮಾರು 8000 ಸ್ಕ್ರೀನ್ಸ್‌ನಲ್ಲಿ ತೆರೆಗೆ ಬರ್ತಿದೆ. ತಮಿಳುನಾಡಿನಲ್ಲಿ ಮಾತ್ರ 3500 ಸ್ಕ್ರೀನ್ಸ್‌ನಲ್ಲಿ ಜನನಾಯಗನ್ ದರ್ಶನ ಕೊಡಲಿದ್ದಾನೆ. ಸೋ ವರ್ಲ್ಡ್‌ವೈಡ್ ಎನ್ನೆಷ್ಟು ಸ್ಕ್ರೀನ್ಸ್ ಆಗಬಹುದು ಅಂತ ನೀವೇ ಊಹಿಸಿಕೊಳ್ಳಿ.
ತಮಿಳುನಾಡಿನಲ್ಲಿ 150 ರಿಂದ 190 ರೂಪಾಯಿ ಮಾತ್ರ ಟಿಕೆಟ್ ದರ ಇದ್ರೆ, ಕರ್ನಾಟಕದಲ್ಲಿ ಕನಿಷ್ಟ ಸಾವಿರ. ಗರಿಷ್ಟ 2600 ರೂಪಾಯಿ ಟಿಕೆಟ್ ಪ್ರೈಸ್ ಅಂದ್ರೆ ನೀವು ನಂಬಲೇಬೇಕು. ನಿರ್ಮಾಪಕ ಹಾಗೂ ಪ್ರದರ್ಶಕರು ಹಗರು ದರೋಡೆಗೆ ಇಳಿದಿದ್ದು, ಕನಿಷ್ಟ ಸಾವಿರ ಕೋಟಿ ರೂಪಾಯಿ ಮೊದಲ ವಾರದಲ್ಲಿ ದೋಚುವ ಯೋಜನೆಯಲ್ಲಿದ್ದಾರೆ. ಇಂಟರೆಸ್ಟಿಂಗ್ ಅಂದ್ರೆ ಇದು ವಿಜಯ್ ಕೊನೆಯ ಸಿನಿಮಾ ಅಲ್ಲ. ಬದಲಿಗೆ ಸಿಎಂ ವಿಜಯ್ ಅವರ ಫಸ್ಟ್ ಮೂವಿ. ಹೀಗಂತ ಖುದ್ದು ಡೈರೆಕ್ಟರ್ ವಿನೋದ್ ಅವರೇ ಹೇಳಿಕೊಂಡಿದ್ದಾರೆ.
ಖಚಿತವಾಗಿ ಇದೇ ಸಿಎಂ ವಿಜಯ್ ಅವರ ಕಟ್ಟ ಕಡೆಯ ಸಿನಿಮಾ ಅಂತ ಯಾರಿಂದಲೂ ಹೇಳೋಕೆ ಸಾಧ್ಯವಿಲ್ಲ. ಆದ್ರೆ ಮುಖ್ಯಮಂತ್ರಿಯಾಗಿ ಇದು ಅವ್ರ ಮೊಟ್ಟ ಮೊದಲ ಸಿನಿಮಾ ಅಂತೂ ಹೌದು ಅಂದಿದ್ದಾರೆ ಜನನಾಯಗನ್ ಡೈರೆಕ್ಟರ್. ಈ ಮಾತಿನ ಅರ್ಥ ವಿಜಯ್ ಮುಂದೆ ಕೂಡ ಸಿನಿಮಾಗಳನ್ನ ಮಾಡ್ತಾರೆ. ನಟಿಸಲಿದ್ದಾರೆ ಎಂದರ್ಥ. ಸೋ.. ವಿನೋದ್ ನೀಡಿರೋ ಈ ಸ್ಟೇಟ್ಮೆಂಟ್‌ಗೆ ವಿಜಯ್ ಫ್ಯಾನ್ಸ್ ದಿಲ್‌ಖುಷ್ ಆಗಿದ್ದು, ಟಿವಿಕೆ ಕಾರ್ಯಕರ್ತರು ಹಾಗೂ ತಮಿಳುನಾಡಿನ ಜನ ಕೂಡ ವಿಜಯ್ ಮತ್ತೆ ಬಣ್ಣ ಹಚ್ಚಲಿ ಅಂತಲೇ ಆಶಿಸುತ್ತಿದ್ದಾರೆ. ಸೋ.. ವಿಜಯ್ ಆಟ ಬೆಳ್ಳಿತೆರೆಯಲ್ಲಿ ಇನ್ನೂ ಮುಗಿದಿಲ್ಲ. ಈಗಷ್ಟೇ ಪೊಲಿಟಿಕಲ್ ಗೇಮ್ ಶುರುವಿಟ್ಟಿರೋ ಅವ್ರು, ಮತ್ತಷ್ಟು ಕಲಾ ಸೇವೆ ಮಾಡುವ ಧಾವಂತದಲ್ಲಿದ್ದಾರೆ ಅನ್ನೋದು ಸ್ಪಷ್ಟವಾಗಿದೆ.
