ತಮಿಳು ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆದ ವಿಜಯ್

ಜನ ನಾಯಗನ್ 100 ಡೇಸ್ ಫಂಕ್ಷನ್‌‌ಗೆ ಫ್ರಾನ್ಸ್ ಸಜ್ಜು

Untitled Design 2026 11 04T154037.892

ಜನ ನಾಯಗನ್ ಚಿತ್ರದಿಂದ ಹಿಸ್ಟರಿ ಕ್ರಿಯೇಟ್ ಮಾಡೋಕೆ ಮುಂದಾಗಿದ್ದಾರೆ ಜನನಾಯಕ, ತಮಿಳುನಾಡು ಸಿಎಂ ದಳಪತಿ ವಿಜಯ್. ಯೆಸ್.. ಪ್ರೀ-ರಿಲೀಸ್ ಇವೆಂಟ್‌ನ ಮಲೇಷ್ಯಾದಲ್ಲಿ ನಡೆಸಿದ್ದ ವಿಜಯ್, ಇದೀಗ ಗ್ರ್ಯಾಂಡ್ ಹಂಡ್ರೆಡ್ ಡೇಸ್ ಫಂಕ್ಷನ್‌ನ ಫ್ರಾನ್ಸ್‌‌‌ನಲ್ಲಿ ಮಾಡೋಕೆ ಸಜ್ಜಾಗಿದ್ದಾರೆ. ಇದು ಭಾರತೀಯ ಚಿತ್ರರಂಗದಲ್ಲೇ ಮೊದಲು ಅನ್ನೋ ಗರಿಮೆಗೆ ಪಾತ್ರವಾಗ್ತಿದ್ದು, ಆ ಕಲರ್‌‌ಫುಲ್ ಕಹಾನಿ ಇಲ್ಲಿದೆ ನೋಡಿ.

ಜನ ನಾಯಗನ್.. ತಮಿಳುನಾಡು ಸಿಎಂ ದಳಪತಿ ವಿಜಯ್ ನಟನೆಯ ಕಟ್ಟ ಕಡೆಯ ಸಿನಿಮಾ ಆಗಿ ಇತಿಹಾಸದ ಪುಟಗಳು ಸೇರಿದೆ. ಈ ಸಿನಿಮಾ ರಿಲೀಸ್‌ಗೂ ಮುನ್ನ ವಿಜಯ್ ಒಬ್ಬ ಸೂಪರ್ ಸ್ಟಾರ್ ಅಷ್ಟೇ. ಆದ್ರೆ ಆತ ಸಿಎಂ ಆಗಿ ಪದಗ್ರಹಣ ಆದ ಬಳಿಕ ರಿಲೀಸ್ ಆದ ಸಿನಿಮಾ ಅನ್ನೋ ದಾಖಲೆ ಕೂಡ ಬರೆಯಿತು. ರಿಲೀಸ್‌ಗೆ ಎದುರಾದ ಅಡೆ ತಡೆಗಳನ್ನ ನೋಡಿದ್ರೆ ಸಿನಿಮಾಗಿಂತ ದೊಡ್ಡ ಪಿಚ್ಚರ್ ಅನ್ನಬಹುದು. ಅಷ್ಟರ ಮಟ್ಟಿಗೆ ಆ ಸಿನಿಮಾಗೆ ಅಡ್ಡಿ ಆತಂಕಗಳು ಎದುರಾದವು.

ವಿನೋದ್ ನಿರ್ದೇಶನದ ಹಾಗೂ ನಮ್ಮ ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ಜನ ನಾಯಗನ್ ರಿಲೀಸ್‌ಗೋ ಮೊದಲೇ ಪೈರಸಿ ಆಗಿ ಹೆಚ್ ಡಿ ಪ್ರಿಂಟ್ ಸೋರಿಕೆ ಆಗಿಬಿಟ್ಟಿತ್ತು. ಆದಾಗ್ಯೂ ಕೂಡ ಚಿತ್ರ ಬಾಕ್ಸ್ ಆಫೀಸ್‌‌ನಲ್ಲಿ ಬರೋಬ್ಬರಿ 300 ಕೋಟಿ ಕ್ಲಬ್ ಸೇರಿತು. ಇದು ನಿರ್ಮಾಪಕರ ಪೂರ್ವಜನ್ಮದ ಪುಣ್ಯವೂ ಹೌದು.. ವಿಜಯ್ ಸ್ಟಾರ್‌ಡಮ್ ಕೂಡ ಹೌದು.

ಇಂಟರೆಸ್ಟಿಂಗ್ ಅಂದ್ರೆ ಜನನಾಯಗನ್ ಚಿತ್ರದ ಪ್ರೀ-ರಿಲೀಸ್ ಇವೆಂಟ್‌ಗೆ ಕರೂರು ಕಾಲ್ತುಳಿತ ಪ್ರಕರಣವನ್ನೇ ಮುಖ್ಯವಾಗಿಟ್ಟುಕೊಂಡು ತಮಿಳುನಾಡಿನಲ್ಲಿ ಆಗಿನ ಸಿಎಂ ಸ್ಟಾಲಿನ್ ಪರ್ಮಿಷನ್ ನೀಡಿರಲಿಲ್ಲ. ಆದ್ರೆ ವಿಜಯ್ ದೂರದ ಮಲೇಷ್ಯಾದಲ್ಲಿ ಗ್ರ್ಯಾಂಡ್ ಪ್ರೀ ರಿಲೀಸ್ ಇವೆಂಟ್ ಮಾಡುವ ಮೂಲಕ ಭಾರತೀಯ ಚಿತ್ರರಂಗ ಹುಬ್ಬೇರಿಸುವಂತೆ ಮಾಡಿದ್ರು. ಕೌಲಾಲಂಪುರದ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಇವೆಂಟ್‌ಗೆ 85 ಸಾವಿರದಿಂದ 90 ಸಾವಿರ ಮಂದಿ ಫ್ಯಾನ್ಸ್ ಸೇರಿದ್ರು. ಅದು ಇತಿಹಾಸವೇ ಸರಿ.

ಇದೀಗ ಅಂಥದ್ದೇ ಮತ್ತೊಂದು ಹಿಸ್ಟರಿ ಕ್ರಿಯೇಟ್ ಮಾಡೋಕೆ ಸಜ್ಜಾಗ್ತಿದ್ದಾರೆ ದಳಪತಿ ವಿಜಯ್. ಜನ ನಾಯಗನ್ ಸಿನಿಮಾ ಯಶಸ್ವೀ ಹಂಡ್ರೆಡ್ ಡೇಸ್ ಕಂಪ್ಲೀಟ್ ಮಾಡಿದ್ದು, ಆ ಅದ್ಧೂರಿ ಶತದಿನೋತ್ಸವ ಕಾರ್ಯಕ್ರಮವನ್ನ ಫ್ರಾನ್ಸ್‌‌ನಲ್ಲಿ ಮಾಡಲು ತಯಾರಿ ನಡೆಸ್ತಿದ್ದಾರೆ. ಒನ್ ಲಾಸ್ಟ್ ಟೈಂ.. ಒನ್ ಲಾಸ್ಟ್ ಸೆಲೆಬ್ರೇಷನ್ ಹೆಸರಲ್ಲಿ ಈ ಗ್ರ್ಯಾಂಡ್ ಇವೆಂಟ್‌ಗೆ ಯೋಜನೆಗಳು ನಡೆಯುತ್ತಿದ್ದು, ಇದೇ ನವೆಂಬರ್ 8ಕ್ಕೆ ಡೇಟ್ ಕೂಡ ಫಿಕ್ಸ್ ಆಗಿದೆ. ಆ ಮಾಸ್ ಮೊಮೆಂಟ್‌‌ ಕ್ರಿಯೇಟ್ ಆಗೋಕೆ ಫ್ರಾನ್ಸ್ ಆರ್ ಯು ರೆಡಿ ಅನ್ನೋ ಪೋಸ್ಟರ್ ಕೂಡ ರಿವೀಲ್ ಆಗಿದೆ.

ಬರೀ ತಮಿಳು ಚಿತ್ರರಂಗ ಮಾತ್ರವಷ್ಟೇ ಅಲ್ಲ.. ಬಹುಶಃ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಒಂದು ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಹಾಗೂ ಹಂಡ್ರೆಡ್ ಡೇಸ್ ಫಂಕ್ಷನ್ ಎರಡೂ ಹೀಗೆ ಫಾರಿನ್‌‌ಗಳಲ್ಲಿ ನಡೆದಿರೋದು ಇದೇ ಮೊದಲಾಗಲಿದೆ. ವಿಜಯ್ ಸಿಎಂ ಆಗಿರೋದ್ರಿಂದ ಅವ್ರ ಕ್ರೇಜ್ ಈಗ ದುಪ್ಪಟ್ಟು ಆಗಿದ್ದು, ಫ್ರಾನ್ಸ್‌ನಲ್ಲಿ ಇನ್ನೆಷ್ಟು ಮಂದಿ ಈ ಇವೆಂಟ್‌ಗೆ ಸಾಕ್ಷಿ ಆಗ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್ 

Exit mobile version