ತಲೈವಾ ನಿಮಗಿದು ಬೇಕಿತ್ತಾ..?! ಇಂದಿನಿಂದ ಜೈಲರ್-2 ಶೂಟಿಂಗ್..!

74ರ ಇಳಿ ವಯಸ್ಸಿನಲ್ಲಿ ರಕ್ತಾಭಿಷೇಕ..!! 1000 ಕೋಟಿ ಲೆಕ್ಕಾಚಾರ..!

Befunky collage 2025 03 10t120253.942

ದಿ ವೆಯ್ಟ್ ಈಸ್ ಓವರ್.. ಸೂಪರ್ ಸ್ಟಾರ್ ರಜನೀಕಾಂತ್ ನಟನೆಯ ಜೈಲರ್-2 ಸಿನಿಮಾದ ಶೂಟಿಂಗ್ ಇಂದಿನಿಂದ ಶುಭಾರಂಭವಾಗಿದೆ. ಚೆನ್ನೈನಲ್ಲಿ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು, ಸನ್ ಪಿಕ್ಚರ್ಸ್ ಬ್ಯಾನರ್ ನಡಿ ಕಲಾನಿಧಿ ಮಾರನ್ ನಿರ್ಮಾಣದ ಈ ಸಿನಿಮಾಗೆ ನೆಲ್ಸನ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಅಂದಹಾಗೆ ಇದು 2023ರ ಬಾಕ್ಸ್ ಆಫೀಸ್ ಬ್ಲಾಕ್ ಬಸ್ಟರ್ ಜೈಲರ್ ಚಿತ್ರದ ಸೀಕ್ವೆಲ್. 200 ಕೋಟಿ ಬಜೆಟ್ ನಲ್ಲಿ ತಯಾರಾಗಿದ್ದ ಜೈಲರ್ ಸಿನಿಮಾ 650ಕ್ಕೂ ಅಧಿಕ ಕೋಟಿ ಗಳಿಸೋ ಮೂಲಕ ಕಾಲಿವುಡ್ ಪಾಲಿಗೆ ಆ ವರ್ಷದ ಬೂಸ್ಟರ್ ಡೋಸ್ ಆಗಿತ್ತು.

ಜೈಲರ್ ಸಿನಿಮಾದಲ್ಲಿ ತಲೈವಾ ರಜನೀಕಾಂತ್ ಜೊತೆ ನಮ್ಮ ಶಿವರಾಜ್ ಕುಮಾರ್, ಮಲಯಾಳಂನ ಮೋಹನ್ ಲಾಲ್, ತೆಲುಗಿನ ಸುನಿಲ್, ರಮ್ಯಾಕೃಷ್ಣ, ತಮನ್ನಾ, ಕಿಶೋರ್, ಬಾಲಿವುಡ್ ನ ಜಾಕಿಶ್ರಾಫ್ ಹೀಗೆ ದೊಡ್ಡ ತಾರಾದಂಡು ಕಮಾಲ್ ಮಾಡಿತ್ತು. ಆದ್ರೀಗ ಜೈಲರ್-2ನಲ್ಲಿ ಯಾರೆಲ್ಲಾ ಮಿಂಚು ಹರಿಸಲಿದ್ದಾರೆ ಅನ್ನೋದನ್ನ ನಿರೀಕ್ಷಿಸಬೇಕಿದೆ. ಚಿತ್ರತಂಡವೇ ರಿವೀಲ್ ಮಾಡಿರೋ ಮಾಹಿತಿ ಪ್ರಕಾರ ಸದ್ಯ ಇಂದಿನಿಂದ ಚಿತ್ರೀಕರಣ ಶುರುವಾಗಿದ್ದು, ಎರಡು ವಾರಗಳ ಕಾಲ ರಜನೀಕಾಂತ್ ದೃಶ್ಯಗಳನ್ನ ಎರಡು ವಾರಗಳ ಕಾಲ ಸೆರೆಹಿಡಿಯುತ್ತಾರಂತೆ. ಮುಂದಿನ ತಿಂಗಳು ಅಂದ್ರೆ ಏಪ್ರಿಲ್ ನಿಂದ ಉಳಿದ ಕಲಾವಿದರ ಜೈಲರ್-2 ಸೆಟ್ ಎಂಟ್ರಿ ಆಗಲಿದೆ ಎನ್ನಲಾಗುತ್ತಿದೆ.

ಅನಿರುದ್ದ್ ರವಿಚಂದರ್ ಸಂಗೀತ ಸಿನಿಮಾಗೆ ಪ್ಲಸ್ ಆಗಲಿದ್ದು, ಮೊದಲ ಭಾಗದಲ್ಲಿನಂತೆ ಸೀಕ್ವೆಲ್ ನಲ್ಲೂ ಕಿಕ್ ಕೊಡೋ ಹಿನ್ನೆಲೆ ಸಂಗೀತ ಹಾಗೂ ಟ್ರೆಂಡಿಂಗ್ ಸಾಂಗ್ ಕೊಡೋ ಸೂಚನೆ ಇದೆ. ನಿರ್ಮಾಪಕರಿಗೆ ನಿರೀಕ್ಷೆ ಮೀರಿ ಹಣ ಬಂದ ಹಿನ್ನೆಲೆಯಲ್ಲಿ, ಬಹಳ ಖುಷಿಯಿಂದ ತಲೈವಾ ರಜನೀಕಾಂತ್ ರಿಗೆ BMW X7, ನಿರ್ದೇಶಕ ನೆಲ್ಸನ್ ಹಾಗೂ ಸಂಗೀತ ಸಂಯೋಜಕ ಅನಿರುದ್ದ್ ಅವರಿಗೆ ತಲಾ ಒಂದೊಂದು ಪೋರ್ಷೆ ದುಬಾರಿ ಕಾರ್ ಗಳನ್ನ ಗಿಫ್ಟ್ ಮಾಡಿದ್ರು. ಈ ಬಾರಿ ಜೈಲರ್-2 ಸಾವಿರ ಕೋಟಿ ಗಳಿಸೋ ಲೆಕ್ಕಾಚಾರಗಳು ನಡೆಯುತ್ತಿದ್ದು, ಮತ್ತಷ್ಟು, ಮಗದಷ್ಟು ವಯಲೆಂಟ್ ಆಗಲಿದ್ದಾರೆ ಜೈಲರ್ ತಲೈವಾ. ಅಲ್ಲದೆ, ಈ ಬಾರಿ ಮೊದಲ ಭಾಗದಲ್ಲಿದ್ದ ಪರಭಾಷಾ ಸ್ಟಾರ್ ಗಳನ್ನ ಮತ್ತೊಂದು ರೌಂಡ್ ಅಖಾಡಕ್ಕಿ ಇಳಿಸೋ ಯೋಜನೆಯಲ್ಲಿದೆ ಟೀಂ.

ಇದೆಲ್ಲವೂ ಓಕೆ.. ಆದ್ರೆ 74ರ ಈ ಇಳಿ ವಯಸ್ಸಲ್ಲಿ ರಜನೀಕಾಂತ್ ಅವರಿಗೆ ಇದೆಲ್ಲಾ ಬೇಕಿತ್ತಾ ಅನ್ನೋ ಪ್ರಶ್ನೆ ಒಂದಷ್ಟು ಮಂದಿಯನ್ನ ಗಾಢವಾಗಿ ಕಾಡ್ತಿದೆ. ಯೆಸ್.. ಜೈಲರ್-2 ಕಾನ್ಸೆಪ್ಟ್ ಟೀಸರ್ ವೊಂದನ್ನ ಲಾಂಚ್ ಮಾಡಿದ್ದ ಟೀಂ, ರಜನಿಯವರನ್ನ ರಕ್ತದಲ್ಲಿ ಸ್ನಾನ ಮಾಡಿ ಬಂದಂತೆ ತೋರಿಸಿದ್ದಾರೆ. ಅಷ್ಟೊಂದು ರಕ್ತಸಿಕ್ತತೆ ಅವಶ್ಯಕತೆ ಏನಿತ್ತು ಅಂತಲೂ ನೆಟ್ಟಿಗರು ಮಾತಾಡ್ತಿದ್ದಾರೆ. ವಯಸ್ಸಿಗೆ ತಕ್ಕನಾದ ಪಾತ್ರಗಳನ್ನ ಮಾಡಬೇಕು. ಜೊತೆಗೆ ವಯಲೆನ್ಸ್ ಇಲ್ಲದಂತಹ ಅಥವಾ ನಂಬೋಕೆ ಹತ್ತಿರವಾಗುವಂತಹ ಆ್ಯಕ್ಷನ್ ಸೀಕ್ವೆನ್ಸ್ ಗಳನ್ನ ಮಾಡಿದಿದ್ರೆ ಜನಕ್ಕೆ ಇನ್ನೂ ಜಾಸ್ತಿ ಇಷ್ಟವಾಗ್ತಿತ್ತು ಅನಿಸ್ತಿದೆ. ಆದ್ರೂ ಡೈರೆಕ್ಟರ್ ನೆಲ್ಸನ್ ನಮ್ಮ ಪ್ರಶಾಂತ್ ನೀಲ್ ರೀತಿ ಕ್ರೌರ್ಯದಿಂದಲೇ ಬಾಕ್ಸ್ ಆಫೀಸ್ ಗೆ ರಕ್ತದ ಹೊಳೆ ಹರಿಯುತ್ತೆ ಅನ್ನೋ ಫಾರ್ಮುಲಾ ಅಪ್ಲೈ ಮಾಡ್ತಿರೋದು ದುರಂತ.

Exit mobile version