ಎಲ್ಲಾದರು ಇರು.. ಎಂತಾದರು ಇರು.. ಎಂದೆಂದಿಗೂ ನೀ ಕನ್ನಡವಾಗಿರು.. ಅನ್ನೋ ಮಾತನ್ನ ಬಾಲಿವುಡ್ ಸೂಪರ್ ಸ್ಟಾರ್ ಸುನಿಲ್ ಶೆಟ್ಟಿ ಚಾಚೂ ತಪ್ಪದೆ ಪಾಲಿಸ್ತಿದ್ದಾರೆ. ಯೆಸ್.. ಪೈಲ್ವಾನ್ ಬಳಿಕ ಮತ್ತೆ ಕನ್ನಡ ಸಿನಿಮಾವೊಂದರಲ್ಲಿ ಬಣ್ಣ ಹಚ್ಚಿರೋ ಅವ್ರು, ಟ್ರೈಲರ್ ಲಾಂಚ್‌ಗಾಗಿ ನಮ್ಮ ಸಿಲಿಕಾನ್ ಸಿಟಿ ಬೆಂಗಳೂರಿಗೆ ಬಂದಿದ್ರು. ಕನ್ನಡಾಭಿಮಾನ, ಹುಲಿ ಕುಣಿತ ಸೇರಿದಂತೆ ಜೈ ಸಿನಿಮಾ ಟ್ರೈಲರ್ ಲಾಂಚ್ ಹೇಗಿತ್ತು ಅನ್ನೊದನ್ನ ಝಲಕ್ ಇಲ್ಲಿದೆ ನೋಡಿ.
ಸುನಿಲ್ ಶೆಟ್ಟಿ ಕನ್ನಡಕ್ಕೆ ‘ಜೈ’.. ಟೀಂ ಜೊತೆ ಹುಲಿ ಕುಣಿತ
ಬೆಂಗಳೂರಲ್ಲಿ KL ರಾಹುಲ್ ಮಾವ.. ಕನ್ನಡಾಂಬೆಗೆ ಜೈ..!
ಇದು ಜೈ ಸಿನಿಮಾದ ಟ್ರೈಲರ್ ಝಲಕ್. ಬಾಲಿವುಡ್ ನಟ ಸುನಿಲ್ ಶೆಟ್ಟಿ ಲಾಂಚ್ ಮಾಡಲಾದ ಈ ಟ್ರೈಲರ್‌ನಲ್ಲಿ ಕರಾವಳಿ ನೆಲದ ಲೋಕಲ್ ಪಾಲಿಟಿಕ್ಸ್ ಗತ್ತು, ಗಮ್ಮತ್ತು ಜೋರಿದೆ. ಅಂದಹಾಗೆ ಬೆಂಗಳೂರಿನ ಮಂತ್ರಿ ಮಾಲ್‌ನಲ್ಲಿ ನಡೆದ ಟ್ರೈಲರ್ ಲಾಂಚ್ ಫಂಕ್ಷನ್‌ಗೆ ಮುಂಬೈನಿಂದ ಆಗಮಿಸಿದ ಸುನಿಲ್ ಶೆಟ್ಟಿ, ಕನ್ನಡದಲ್ಲೇ ಮಾತು ಆರಂಭಿಸಿ, ಕನ್ನಡ ಅರ್ಥ ಆಗತ್ತೆ ಆದ್ರೆ ಸ್ವಲ್ಪ ಸ್ಪಲ್ಪ ಬರುತ್ತೆ. ತುಳು ಜಾಸ್ತಿನೇ ಬರುತ್ತೆ ಎಂದರು. ಅಲ್ಲದೆ, ಅವ್ರ ಹುಲಿ ಕುಣಿತ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿತ್ತು.
ಸುನಿಲ್ ಶೆಟ್ಟಿ ಬರೀ ಟ್ರೈಲರ್ ಲಾಂಚ್ ಮಾಡಲಿಲ್ಲ. ಜೈ ಚಿತ್ರದ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಕೂಡ ಹಚ್ಚಿದ್ದಾರೆ. ರಾಜ್ ದೀಪಕ್ ಶೆಟ್ಟಿ ಖಳನಾಯಕನಾಗಿ ಬಣ್ಣ ಹಚ್ಚಿದ್ದು, ಅದ್ವಿತಿ ಶೆಟ್ಟಿ ನಾಯಕನಟಿಯಾಗಿ ಲೀಡ್‌ನಲ್ಲಿ ಮಿಂಚಿದ್ದಾರೆ. ಇನ್ನು ಈ ಚಿತ್ರದ ಮೂಲಕ ಬಿಗ್‌ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ಲೀಡ್‌ನಲ್ಲಿ ನಟಿಸೋದ್ರ ಜೊತೆ ಡೈರೆಕ್ಷನ್‌ಗೂ ಕೈ ಹಾಕಿ ಭೇಷ್ ಅನಿಸಿಕೊಂಡಿದ್ದಾರೆ.
ಕರಾವಳಿ ಪಾಲಿಟಿಕ್ಸ್.. ಯೂತ್ ಗ್ಯಾಂಗ್ & ಪ್ರೇಮಕಥೆ
ರೂಪೇಶ್ ಶೆಟ್ಟಿ ಪ್ರಯೋಗ.. ಪ್ರೀಮಿಯರ್‌ನಲ್ಲೇ ಜೈಕಾರ
ಗುರುಕಿರಣ್ ಕೂಡ ಟ್ರೈಲರ್ ಲಾಂಚ್ ಇವೆಂಟ್‌ನಲ್ಲಿ ಭಾಗಿಯಾಗಿ ಗಮನ ಸೆಳೆದರು. ಇನ್ನು ಅದ್ವಿತಿ ಶೆಟ್ಟಿ ಚಿತ್ರದ ಖಳನಟ ರಾಜ್ ದೀಪಕ್ ಶೆಟ್ಟಿಯೊಂದಿಗೆ ಕುಣಿದ ಹುಲಿಕುಣಿತ ಬೈಂಡ್ ಬ್ಲೋಯಿಂಗ್. ಕಾರ್ಯಕ್ರಮಕ್ಕೆ ಮಾಜಿ ಡಿಸಿಎಂ ಅಶ್ವತ್ಥ್ ನಾರಾಯಣ್ ಕೂಡ ಬಂದು ಶುಭ ಕೋರಿದ್ರು. ಅಂದಹಾಗೆ ಜೈ ಸಿನಿಮಾ ಈಗಾಗ್ಲೇ ಗಲ್ಫ್ ಕಂಟ್ರಿಗಳು ಸೇರಿದಂತೆ, ಮಂಗಳೂರಿನಲ್ಲಿ ಸ್ಪೆಷಲ್ ಪ್ರೀಮಿಯರ್ ಆಗಿದೆ. ಎಲ್ಲೆಡೆ ಪೇಯ್ಡ್ ಪ್ರೀಮಿಯರ್‌ನಿಂದ ಪ್ರೇಕ್ಷಕರ ಮನಸ್ಸು ಗೆದ್ದಿದೆ. ಜೈ ಇದೇ ನವೆಂಬರ್ 14ಕ್ಕೆ ಎಲ್ಲೆಡೆ ಗ್ರ್ಯಾಂಡ್ ಆಗಿ ರಿಲೀಸ್ ಆಗ್ತಿದೆ.
