ಸಂಬಂಧಗಳನ್ನು ಮರೆಯುತ್ತಿರುವ ಯಾಂತ್ರಿಕ ಬದುಕು: ‘ಐಡೆಂಟಿಟಿ ಕಾರ್ಡ್’ ಹಿಂದಿನ ಕಹಿ ಸತ್ಯ

ಮಹಾನಗರದ ಗ್ಲಾಮರ್ ಬಿಟ್ಟು ತೂರಿಗೆ ಮರಳುವ ನಿರ್ಧಾರ ಕಣ್ಣೀರ ಕಥೆಯ ಸಕ್ಸಸ್

Untitled Design 2026 11 04T132207.771

“ನಗರದ ಯಾಂತ್ರಿಕ ಬದುಕಿನಲ್ಲಿ ಕಳೆದುಹೋಗುವ ಮಧ್ಯಮ ವರ್ಗದವರ ಅಸಲಿ ಮುಖ ಹಾಗೂ ಮಹಾನಗರದ ಕಾಂಕ್ರೀಟ್ ಕಾಡಿನಲ್ಲಿ ಬದುಕು ಕಟ್ಟಿಕೊಳ್ಳಲು ಹೆಣಗಾಡುವ ಹಳ್ಳಿಗರ ಕಥೆ. ಯೆಸ್, ಡ್ರುಷ್ಟಿ ಸ್ಟುಡಿಯೋಸ್ ಲಾಂಛನದಲ್ಲಿ ನಿತಿನ್ ಪಿ. ನಿರ್ದೇಶನದಲ್ಲಿ ಮೂಡಿಬಂದಿರುವ ಐಡೆಂಟಿಟಿ ಕಾರ್ಡ್ ಎನ್ನುವ ಶಾರ್ಟ್ ಮೂವಿ ಈಗ ಸೋಶಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ ಮನು ಮುಲೆರ್ ಹಾಗೂ ರಾಜೇಶ್ವರಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಕಥೆ ಪ್ರತಿಯೊಬ್ಬರ ಕಣ್ಣಂಚನ್ನು ಒದ್ದೆಯಾಗಿಸುವುದಂತೂ ಪಕ್ಕಾ. ಈ ಮನಕಲುಕುವ ಭಾವನಾತ್ಮಕ ಕಥೆಯ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ, ಲೆಟ್ಸ್ ವಾಚ್

ದೊಡ್ಡ ಸಿಟಿಯಲ್ಲಿ ಒಂದು ಸಣ್ಣ ಬಾಡಿಗೆ ಮನೆ ಹುಡುಕುವುದರಿಂದ ಹಿಡಿದು ದಿನನಿತ್ಯದ ಬದುಕು ಸಾಗಿಸಲು ಹೆಣಗಾಡುವ ಬಸವ ಮತ್ತು ಜ್ಯೋತಿ ದಂಪತಿಯ ಪಾತ್ರಗಳ ಮೂಲಕ ನಿರ್ದೇಶಕರು ಮಧ್ಯಮ ವರ್ಗದವರ ಅಸಲಿ ನೋವನ್ನು ತೆರೆದಿಟ್ಟಿದ್ದಾರೆ. ಹಳ್ಳಿಯಿಂದ ಕನಸುಗಳನ್ನು ಹೊತ್ತು ಮಹಾನಗರಕ್ಕೆ ಕಾಲಿಟ್ಟ ಈ ಜೋಡಿಗೆ ಸಿಟಿಯ ಯಾಂತ್ರಿಕ ಜೀವನ ಹಾಗೂ ಮನೆ ಮಾಲೀಕರ ಹಣದ ತರಾಟೆ ಅಕ್ಷರಶಃ ನರಕದ ಅನುಭವ ನೀಡುತ್ತದೆ. ಕಂಪನಿ ಕೆಲಸದ ಒತ್ತಡದಲ್ಲಿ ದಿನಪೂರ್ತಿ ದುಡಿದರೂ, ಜೇಬಿನಲ್ಲಿ ಕಾಸಿಲ್ಲದೆ ಸಂಬಂಧಗಳನ್ನು ಮರೆಯುತ್ತಿರುವ ಇಂದಿನ ಬದುಕಿನ ಕಹಿ ಸತ್ಯವನ್ನು ಈ ಕಿರುಚಿತ್ರ ಅತ್ಯಂತ ನೈಜವಾಗಿ ಕಟ್ಟಿಕೊಟ್ಟಿದೆ.

ಚಿತ್ರದ ಶೀರ್ಷಿಕೆಯಂತೆ ಕಂಪನಿ ನೀಡುವ ‘ಐಡೆಂಟಿಟಿ ಕಾರ್ಡ್’ (ಗುರುತಿನ ಚೀಟಿ) ಕೇವಲ ಒಂದು ಉದ್ಯೋಗದ ಸಂಕೇತವಲ್ಲ, ಬದಲಿಗೆ ಮನುಷ್ಯ ತನ್ನ ಅಸ್ತಿತ್ವವನ್ನೇ ಕಳೆದುಕೊಂಡು ಯಂತ್ರದಂತೆ ಬದುಕುವ ದುಸ್ಥಿತಿಯ ಪ್ರತೀಕವಾಗಿದೆ. ಕೆಲಸದ ಸ್ಥಳದಲ್ಲಿ ಮೇಲಾಧಿಕಾರಿಗಳ ಗದರಿಕೆ, ಮೊಬೈಲ್ ಬಳಸಿದ್ದಕ್ಕೆ ಸಿಗುವ ವಾರ್ನಿಂಗ್‌ಗಳು ಮತ್ತು ಸಂಬಳ ಸಾಲದ ಬದುಕಿನ ಮಧ್ಯೆ ನಲುಗಿಹೋಗುವ ನಾಯಕನ ಪರದಾಟ ಪ್ರೇಕ್ಷಕರ ಎದೆಗೆ ನೇರವಾಗಿ ನಾಟುತ್ತದೆ. ಊರು, ಅಪ್ಪ, ಅಮ್ಮ, ಬಂಧು-ಬಳಗ ಎಲ್ಲವನ್ನೂ ಬಿಟ್ಟು ಬಂದು, ನಾಲ್ಕು ಗೋಡೆಗಳ ನಡುವೆ ಯಾರೂ ಇಲ್ಲದವರಂತೆ ಬದುಕುವ ದುಃಖ ಜ್ಯೋತಿ ಪಾತ್ರದ ಮೂಲಕ ಕಣ್ಣಿಗೆ ಕಟ್ಟಿದಂತೆ ಮೂಡಿಬಂದಿದೆ.

ಕೊನೆಗೆ ನಗರದ ಈ ಅಮಾನವೀಯ ವ್ಯವಸ್ಥೆಯಿಂದ ಬೇಸತ್ತು, ರೊಕ್ಕದ ಗೋಜಿಗೆ ಬಿದ್ದು ನೆಮ್ಮದಿ ಕಳೆದುಕೊಳ್ಳುವುದಕ್ಕಿಂತ ತಮ್ಮೂರಿನ ಮಣ್ಣಿನ ವಾಸನೆಯೇ ಮೇಲು ಎಂದು ಅರಿತುಕೊಳ್ಳುವ ದಂಪತಿ ತವರು ಮನೆಗೆ ಮರಳಲು ನಿರ್ಧರಿಸುವುದೇ ಈ ಕಥೆಯ ಹೈಲೈಟ್. ಮಂಜು ಮುಲೆರ್ ಅವರ ಸಹಜ ನಟನೆ ಹಾಗೂ ಸಚಿನ್ ಬಿ.ಕೆ. ಅವರ ಕ್ಯಾಮೆರಾ ಕೈಚಳಕ ಕಿರುಚಿತ್ರದ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಮಹಾನಗರದ ಮಿಥ್ಯೆ ಲೋಕವನ್ನು ಬಿಟ್ಟು ಸತ್ಯದ ಹಾದಿಯತ್ತ ಹೆಜ್ಜೆಹಾಕುವ ಈ ಕಥೆ ಪ್ರತಿಯೊಬ್ಬರ ಕಣ್ಣು ತೆರೆಸುವಂತಿದ್ದು, ಸದ್ಯ ಯೂಟ್ಯೂಬ್‌ನಲ್ಲಿ ಸಕ್ಕತ್ ಸೌಂಡ್ ಮಾಡ್ತಿದೆ.

Exit mobile version