‘ಥಮ’ ಸಿನಿಮಾಗಾಗಿ ಕಾಂತಾರ-1 ಶೋ ಕಡಿತ: PVRಗೆ ಹೊಂಬಾಳೆ ಶಾಕ್

Untitled design 2025 10 26t112258.103

ಕನ್ನಡ ಚಿತ್ರರಂಗದ ಹೆಮ್ಮೆಯ ಸಂಸ್ಥೆ ಹೊಂಬಾಳೆ ಫಿಲಂಸ್, ಮುಂಬೈನ ಚಿತ್ರಮಂದಿರ PVR ಮತ್ತು ಐನಾಕ್ಸ್‌ಗೆ ತನ್ನ ದಿಟ್ಟ ನಿರ್ಧಾರದಿಂದ ಕನ್ನಡಿಗರ ಗೆಲುವಿನ ಗರಿಮೆಯನ್ನು ತೋರಿಸಿದೆ. ಮುಂಬೈ ಮೂಲದ ಸಿನಿಮಾ ವಿತರಕ ಸಂಸ್ಥೆಗಳಾದ ಪಿವಿಆರ್ (PVR) ಹಾಗೂ ಐನಾಕ್ಸ್ (INOX) ನಿಂದ ನಡೆದ ಅನ್ಯಾಯದ ವಿರುದ್ಧ ಹೊಂಬಾಳೆ ಸಂಸ್ಥೆ ತೀವ್ರ ಪ್ರತಿಕ್ರಿಯೆ ನೀಡಿದ್ದು, ಅದರ ಫಲವಾಗಿ ಈ ಇಬ್ಬರು ದಿಗ್ಗಜ ಸಂಸ್ಥೆಗಳು ಕೊನೆಗೂ ಕನ್ನಡಿಗರ ಮುಂದೆ ಮಂಡಿಯೂರಬೇಕಾಯಿತು.

ಕಾಂತಾರ ಚಿತ್ರವು 2022ರಲ್ಲಿ ಬಿಡುಗಡೆಯಾದಾಗಿನಿಂದಲೂ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿತು. ರಿಷಬ್ ಶೆಟ್ಟಿಯವರ ನಿರ್ದೇಶನ ಮತ್ತು ನಟನೆಯ ಈ ಚಿತ್ರವು ಕೇವಲ ಕನ್ನಡಿಗರಿಗೆ ಮಾತ್ರವಲ್ಲದೆ, ದೇಶಾದ್ಯಂತ ಸಿನಿಮಾಪ್ರಿಯರ ಮನಗೆದ್ದಿತು. ಆದರೆ, ಈ ಚಿತ್ರದ ಯಶಸ್ಸಿನ ಹಾದಿಯಲ್ಲಿ PVR ಮತ್ತು ಐನಾಕ್ಸ್‌ನಂತಹ ಮಲ್ಟಿಪ್ಲೆಕ್ಸ್‌ ದೈತ್ಯರು ತಡೆಯೊಡ್ಡಲು ಯತ್ನಿಸಿದರು. ದಕ್ಷಿಣ ಭಾರತದಲ್ಲಿ ಕಾಂತಾರ ಚಿತ್ರದ ಪ್ರದರ್ಶನಗಳನ್ನು ಕಡಿಮೆ ಮಾಡಿ, ಹಿಂದಿ ಚಿತ್ರವಾದ ‘ಥಮ್’ಗೆ ಹೆಚ್ಚಿನ ಶೋಗಳನ್ನು ನೀಡಿದ್ದರು. ಈ ನಿರ್ಧಾರವು ಕನ್ನಡಿಗರ ಕೆಂಗಾಲಿಗೆ ಕಾರಣವಾಯಿತು.

ಹೊಂಬಾಳೆ ಫಿಲಂಸ್ ಈ ಸವಾಲನ್ನು ಎದುರಿಸಿದ್ದು, PVR ಮತ್ತು ಐನಾಕ್ಸ್‌ಗೆ ಕಂಟೆಂಟ್ ಲೈಸೆನ್ಸ್ ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತು. ಸಾಮಾನ್ಯವಾಗಿ, ಈ ಚಿತ್ರಮಂದಿರಗಳಿಗೆ ವಾರಕ್ಕೊಮ್ಮೆ ಲೈಸೆನ್ಸ್ ನವೀಕರಣ ಮಾಡಲಾಗುತ್ತಿತ್ತು. ಆದರೆ, ಹೊಂಬಾಳೆ ಫಿಲಂಸ್ ಈ ಬಾರಿ ಕೇವಲ ಮೂರು ದಿನಗಳಿಗೆ ಮಾತ್ರ ಲೈಸೆನ್ಸ್ ನೀಡಿತು. ಇದರ ಜೊತೆಗೆ, ಕಾಂತಾರಕ್ಕೆ ಹೆಚ್ಚಿನ ಶೋಗಳನ್ನು ನೀಡಿದರೆ ಮಾತ್ರ ಲೈಸೆನ್ಸ್‌ನ ಭರವಸೆ ನೀಡಿತು.

ಈ ಘಟನೆಯಿಂದಾಗಿ, ಆನ್‌ಲೈನ್‌ನಲ್ಲಿ ಟಿಕೆಟ್‌ ಬುಕಿಂಗ್‌ಗೆ ಭಾರೀ ಬೇಡಿಕೆಯಿತ್ತು. ಕಾಂತಾರ ಚಿತ್ರದ ಜನಪ್ರಿಯತೆಯನ್ನು ಗಮನಿಸಿದ PVR ಮತ್ತು ಐನಾಕ್ಸ್, ಹೊಂಬಾಳೆ ಫಿಲಂಸ್ ಜೊತೆ ಸಂಧಾನಕ್ಕೆ ಮುಂದಾದವು. ಕೊನೆಗೆ, ಕಾಂತಾರಕ್ಕೆ ಹೆಚ್ಚುವರಿ ಶೋಗಳನ್ನು ನೀಡುವ ಒಪ್ಪಂದಕ್ಕೆ ಒಪ್ಪಿಕೊಂಡವು. ಇದರ ಜೊತೆಗೆ, ಭವಿಷ್ಯದಲ್ಲಿ ಇಂತಹ ತಪ್ಪುಗಳನ್ನು ತಪ್ಪಿಸುವ ಭರವಸೆಯನ್ನೂ ನೀಡಿದವು.

ದಕ್ಷಿಣ ಭಾರತದ ಚಿತ್ರಮಂದಿರ ವಲಯದಲ್ಲಿ PVR ಮತ್ತು ಐನಾಕ್ಸ್‌ನ ಏಕಸ್ವಾಮ್ಯವು ಯಾವಾಗಲೂ ಚರ್ಚೆಗೆ ಗ್ರಾಸವಾಗಿತ್ತು. ಈ ಸಂಸ್ಥೆಗಳು ತಮ್ಮ ಇಚ್ಛೆಯಂತೆ ಶೋಗಳನ್ನು ನಿಗದಿಪಡಿಸುತ್ತಿದ್ದವು. ದಕ್ಷಿಣ ಭಾರತದ ಚಿತ್ರಗಳಿಗೆ ಕಡಿಮೆ ಶೋಗಳನ್ನು ನೀಡಿ, ಹಿಂದಿ ಚಿತ್ರಗಳಿಗೆ ಆದ್ಯತೆ ಕೊಡುವುದು ಸಾಮಾನ್ಯವಾಗಿತ್ತು. ಆದರೆ, ‘ಕಂಟೆಂಟ್ ಈಸ್ ದಿ ಕಿಂಗ್’ ಎಂಬ ಮಾತನ್ನು ಕಾಂತಾರದ ಯಶಸ್ಸು ಸಾಬೀತುಪಡಿಸಿತು.

Exit mobile version