ದರ್ಶನ್ ಅಣ್ಣ ಹೇಳಿದ್ದಕ್ಕೆ ವಿಜಿ ಅಕ್ಕ ಇವೆಂಟ್‌ಗೆ ಬಂದ್ರು

ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟಿನ ಕೊರತೆ ಎಂದ ಸಮೃದ್ಧಿ..!

ಮದ್ಯಪಾನ ಆರೋಗ್ಯಕ್ಕೆ ಹಾನಿಕರ (2)

ಹಯಗ್ರೀವ ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಮಂಡ್ಯ ಇವೆಂಟ್ ಬಳಿಕ ಬೆಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿದ ಚಿತ್ರತಂಡ, ಧನ್ವೀರ್ ಗೌಡ ಅವ್ರನ್ನ ಬೇಕು ಅಂತಲೇ ತುಳಿಯುವ ಹುನ್ನಾರ ನಡೆಯುತ್ತಿದೆ ಅಂದಿದ್ದಾರೆ ಪ್ರೊಡ್ಯೂಸರ್. ಇನ್ನೂ ದರ್ಶನ್ ಅಣ್ಣ ಹೇಳಿದ್ದಕ್ಕೇನೇ ಅಕ್ಕ ಇವೆಂಟ್‌ಗೆ ಬಂದ್ರು ಅಂತ ದಚ್ಚು ಭಂಟ ಧನ್ವೀರ್ ಸ್ಪಷ್ಟನೆ ನೀಡಿದ್ರು.

ಹಯಗ್ರೀವ.. ಇದೇ ಶುಕ್ರವಾರ ಫೆಬ್ರವರಿ 27ಕ್ಕೆ ಪ್ರೇಕ್ಷಕರ ಮುಂದೆ ಬರೋಕೆ ಸಜ್ಜಾಗಿರೋ ಚಿತ್ರ. ಡಿಬಾಸ್ ದರ್ಶನ್ ಆಪ್ತ, ಕರುನಾಡ ಶೋಕ್ದಾರ್ ಧನ್ವೀರ್ ಗೌಡ ಹಾಗೂ ಬ್ಯಾಂಗಲ್ ಬಂಗಾರಿ ಸಂಜನಾ ಆನಂದ್ ಕಾಂಬಿನೇಷನ್ ಸಿನಿಮಾ. ಟೀಸರ್ ಹಾಗೂ ಸಾಂಗ್ಸ್‌ನಿಂದ ಸದ್ದು ಮಾಡ್ತಿದ್ದ ಈ ಸಿನಿಮಾ, ಇದೀಗ ಟ್ರೈಲರ್‌ನಿಂದ ಎಲ್ಲೆಡೆ ಟಾಕ್ ಕ್ರಿಯೇಟ್ ಮಾಡಿದೆ. ಅಂದಹಾಗೆ ಇತ್ತೀಚೆಗೆ ಈ ಚಿತ್ರದ ಟ್ರೈಲರ್‌ನ ಮಂಡ್ಯದಲ್ಲಿ ಬಹುದೊಡ್ಡ ವೇದಿಕೆಯಲ್ಲಿ ವಿಜಯಲಕ್ಷ್ಮೀ ದರ್ಶನ್ ಅವರೇ ಲಾಂಚ್ ಮಾಡಿದ್ರು.

 

ದರ್ಶನ್ ಅಣ್ಣ ಹೇಳಿದ್ದಕ್ಕೆ ವಿಜಿ ಅಕ್ಕ ಇವೆಂಟ್‌ಗೆ ಬಂದ್ರು

ಯಾವ್ದೋ ರೂಪದಲ್ಲಿ ದಚ್ಚು ಸಪೋರ್ಟ್ ಇದ್ದೇ ಇದೆ..!

ಈ ಬಗ್ಗೆ ಇತ್ತೀಚೆಗೆ ನಡೆದ ಬೆಂಗಳೂರಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ಧನ್ವೀರ್, ದರ್ಶನ್ ಅಣ್ಣ ಹೇಳಿದ್ದಕ್ಕೆ ವಿಜಯಲಕ್ಷ್ಮೀ ಅಕ್ಕ ಬಂದು ಟ್ರೈಲರ್ ಲಾಂಚ್ ಮಾಡಿಕೊಟ್ರು. ಡಿಬಾಸ್ ದರ್ಶನ್ ಅಣ್ಣ ಯಾವುದೋ ರೂಪದಲ್ಲಿ ಸಪೋರ್ಟ್ ಮಾಡ್ತಾನೇ ಇರ್ತಾರೆ ಅಂತ ಕೃತಜ್ಞತಾ ಭಾವ ತೋರಿಸಿದ್ದಾರೆ ಧನ್ವೀರ್.

ಇನ್ನೂ ನಿರ್ಮಾಪಕ ಸಮೃದ್ಧಿ ಮಂಜುನಾಥ್ ಮಾತನಾಡುತ್ತಾ, ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟಿನ ಕೊರತೆ ಇದೆ ಅಂತ ಬೇಸರ ವ್ಯಕ್ತಪಡಿಸಿದ್ರು. ನಮ್ಮಲ್ಲಿ ಒಗ್ಗಟ್ಟಿಲ್ಲ ಎಂದ ಸಮೃದ್ಧಿ ಮಂಜುನಾಥ್, ಚಿತ್ರರಂಗ ಅಂದ್ಮೇಲೆ ಒಂದೇ ತಾಯಿ ಮಕ್ಕಳಂತೆ ಇರಬೇಕು ಅಂತ ಅಭಿಪ್ರಾಯ ವ್ಯಕ್ತಪಡಿಸಿದ್ರು.

ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟಿನ ಕೊರತೆ ಎಂದ ಸಮೃದ್ಧಿ..!

ಧನ್ವೀರ್‌ನ ತುಳಿಯೋಕೆ ಹುನ್ನಾರ ಮಾಡ್ತಿರೋದ್ಯಾರು..?

ಅಲ್ಲದೆ ಧನ್ವೀರ್‌ನ ಒಂದಷ್ಟು ಮಂದಿ ತುಳಿಯೋಕೆ ಪ್ರಯತ್ನ ಪಡ್ತಿದ್ದಾರೆ ಅಂತ ಬಾಂಬ್ ಸಿಡಿಸಿದ್ದಾರೆ ಹಯಗ್ರೀವ ಪ್ರೊಡ್ಯೂಸರ್. ಧನ್ವೀರ್ ನಾಲ್ಕು ಸಿನಿಮಾ ಮಾಡಿದ್ದಾರೆ. ಆತನನ್ನ ತುಳಿಯೋಕೆ ಹುನ್ನಾರ ನಡೀತಿದೆ ಅಂತ ವಿವಾದಾತ್ಮನಕ ಹೇಳಿಕೆ ನೀಡಿದ್ದಾರೆ. ಆದ್ರೆ ಅದು ಯಾರು ಅನ್ನೋದನ್ನ ಮಾತ್ರ ರಿವೀಲ್ ಮಾಡಿಲ್ಲ ಸಮೃದ್ಧಿ ಮಂಜುನಾಥ್.

ಒಟ್ಟಾರೆ ಈ ವಾರ ಹಾರರ್ ಸಸ್ಪೆನ್ಸ್ ಥ್ರಿಲ್ಲರ್ ಕಮ್ ಆ್ಯಕ್ಷನ್ ವೆಂಚರ್ ಹಯಗ್ರೀವ ವಿಭಿನ್ನ ಕಥೆ, ಪಾತ್ರಗಳು ಹಾಗೂ ಮೇಕಿಂಗ್‌ನಿಂದ ನೋಡುಗರಿಗೆ ಮಸ್ತ್  ಮನರಂಜನೆ ನೀಡಲಿದೆ. ಧನ್ವೀರ್ ಜೊತೆ ದರ್ಶನ್ ಫ್ಯಾನ್ಸ್ ಕೂಡ ಈ ಚಿತ್ರದ ರಿಲೀಸ್‌ಗಾಗಿ ಕಾಯ್ತಿದ್ದು, ಬಾಕ್ಸ್ ಆಫೀಸ್‌‌ನಲ್ಲಿ ಬಹುದೊಡ್ಡ ಓಪನಿಂಗ್ ಪಡೆಯುವ ಲಕ್ಷಣ ತೋರಿದೆ.

 

Exit mobile version