ಕರುನಾಡ ಶೋಕ್ದಾರ್ ಧನ್ವೀರ್ ಗೌಡ ನಟನೆಯ ಹಯಗ್ರೀವ್ ಅಡ್ಡಾದಿಂದ ಮತ್ತೊಂದು ಸಾಂಗ್ ರಿವೀಲ್ ಆಗಿದೆ. ಸೇನೆ ಮುಖ್ಯಸ್ಥ ಅನ್ನೋ ಈ ಹಾಡು ಗಣಪತಿ ಮೇಲೆ ಕೇಂದ್ರೀಕೃತವಾಗಿದ್ದು, ನಾಯಕನಟನ ಪ್ಲ್ಯಾನ್ ಆಫ್ ಆ್ಯಕ್ಷನ್‌ನ ಸಾರುತ್ತಿದೆ. ಅದು ಹೇಗಿದೆ..? ಸಿನಿಮಾ ಯಾವಾಗ ರಿಲೀಸ್ ಅಂತೀರಾ..?
ಸಿಂಗಲ್ ಟೀಸರ್ ಹಾಗೂ ಹಾಡಿನಿಂದಲೇ ಹಲ್‌ಚಲ್ ಎಬ್ಬಿಸಿರೋ ಹಯಗ್ರೀವ ಇದೇ ಫೆಬ್ರವರಿ 27ಕ್ಕೆ ಥಿಯೇಟರ್‌ಗೆ ಎಂಟ್ರಿ ಕೊಡ್ತಿದೆ. ಪೊಲೀಸ್ ಕಾಪ್ ಆಗಿ ಕರುನಾಡ ಶೋಕ್ದಾರ್ ಧನ್ವೀರ್ ಗೌಡ ಲೀಡ್‌ನಲ್ಲಿ ಮಿಂಚು ಹರಿಸಲಿದ್ದು, ಇದೊಂದು ಔಟ್ ಆಫ್ ದಿ ಬಾಕ್ಸ್ ಸಿನಿಮಾ ಆಗಿ ನಿಲ್ಲಲಿದೆ. ಯಾಕಂದ್ರೆ ಕಥೆ, ಟೈಮ್‌ಲೈನ್, ಆ್ಯಕ್ಷನ್, ಥ್ರಿಲ್ಲರ್ ಎಲ್ಲವೂ ಸಂಥಿಂಗ್ ಸ್ಪೆಷಲ್ ಅನಿಸಿವೆ.
ರಘು ಕುಮಾರ್ ನಿರ್ದೇಶನದ ಈ ಸಿನಿಮಾಗೆ ಸಮೃದ್ಧಿ ಮಂಜುನಾಥ್ ಬಂಡವಾಳ ಹೂಡಿದ್ದು, ಧನ್ವೀರ್‌ಗೆ ಜೋಡಿಯಾಗಿ ಸಂಜನಾ ಆನಂದ್ ನಟಿಸಿದ್ದಾರೆ. ಮೊದಲನೇ ಮಾತು ಅನ್ನೋ ಫಸ್ಟ್ ಸಾಂಗ್ ಎಲ್ಲರೂ ಮೆಚ್ಚುವಂತಹ ಗೀತೆಯಾಗಿ ಸದ್ದು ಮಾಡ್ತಿದೆ. ಇದೀಗ ಹಯಗ್ರೀವ ಅಡ್ಡಾದಿಂದ ಮತ್ತೊಂದು ಸಾಂಗ್ ಹೊರಬಂದಿದೆ. ಅದೇ ಸೇನೆ ಮುಖ್ಯಸ್ಥ ಸಾಂಗ್.
ಹಯಗ್ರೀವ ಅಡ್ಡಾದಿಂದ ಸೆಕೆಂಡ್ ಸಾಂಗ್ ರಿವೀಲ್..!
ಸೇನೆ ಮುಖ್ಯಸ್ಥನಾಗಿ ಕರುನಾಡ ಶೋಕ್ದಾರ್ ಕಮಾಲ್
ವಿನಾಯಕ ಮೇಲೆ ಫೋಕಸ್ ಆಗಿರೋ ಈ ಸಾಂಗ್, ಹೀರೋ ಪ್ಲ್ಯಾನ್ ಆಫ್ ಆ್ಯಕ್ಷನ್ ಹೇಳ್ತಿದೆ. ಡಾ ವಿ ನಾಗೇಂದ್ರ ಪ್ರಸಾದ್ ಸಾಹಿತ್ಯದ ಈ ಹಾಡಿಗೆ ಜೂಡಾ ಸ್ಯಾಂಡಿ ಸಂಗೀತ ಸಂಯೋಜಿಸಿದ್ದು, ಕನ್ನಡದ ಱಪರ್ ಚಂದನ್ ಶೆಟ್ಟಿ ಗಾಯನವಿದೆ.
ಧನ್ವೀರ್ ಗೌಡಗೆ ವಾಮನ ನಂತ್ರ ಬರ್ತಿರೋ ಈ ಸಿನಿಮಾಗೆ ಡಿಬಾಸ್ ದರ್ಶನ್ ಹೊರಗೆ ಇಲ್ಲ ಅನ್ನೋ ಬೇಸರವಿದೆ. ಆದ್ರೆ ದಚ್ಚು ಫ್ಯಾನ್ಸ್ ಈ ಸಿನಿಮಾನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾದಂತೆ ಮುಂದೆ ನಿಂತು ಸೆಲೆಬ್ರೇಟ್ ಮಾಡೋ ಮೂಲಕ ದೊಡ್ಡ ಮಟ್ಟದ ಓಪನಿಂಗ್‌ಗೆ ಮುನ್ನುಡಿ ಬರೆಯುವ ಧಾವಂತದಲ್ಲಿದ್ದಾರೆ.
