ಹರ್ಷಿಕಾ ಪೂಣಚ್ಚ ಚೊಚ್ಚಲ ನಿರ್ದೇಶನದ ಚಿತ್ರ ಚಿ:ಸೌಜನ್ಯ-“ಒಂದು ಹೆಣ್ಣಿನ ಕಥೆ” ಪೋಸ್ಟರ್ ಬಿಡುಗಡೆ!

Untitled design 2025 03 20t110638.877

ಸದಾ ಸಿನಿಮಾ ಮತ್ತು ಸಾಮಾಜಿಕ ಕೆಲಸಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುವ ಬಹುಭಾಷಾ ನಟಿ ಹರ್ಷಿಕಾ ಪೂಣಚ್ಚ ರವರು ಸಿನಿಮಾ ನಿರ್ದೇಶಕಿಯಾಕಿ ಬಡ್ತಿ ಪಡೆಯುತ್ತಿದ್ದಾರೆ.

ಈ ಕ್ರೈಂ ಥ್ರಿಲ್ಲರ್ ಸಿನಿಮಾವನ್ನು ತಮ್ಮ ಪತಿ ಹಾಗು Bhuvanam Entertainment ಮುಖ್ಯಸ್ಥರಾದ ನಟ ಭುವನ್ ಪೊನ್ನಣ್ಣ , ಮಧು ಕಂಸಾಳೆ ಫಿಲಂಸ್ ಬ್ಯಾನರ್ ಹಾಗು ಗಣೇಶ್ ಮಹಾದೇವ್ ಅವರ ನೇತೃತ್ವದಲ್ಲಿ ನಿರ್ಮಿಸಲ್ಪಡುತ್ತಿದೆ. ಸಿನಿಮಾದ ಡಿಜಿಟಲ್ ಪೋಸ್ಟರ್ ಹಾಗು ಟೈಟಲ್ ಲಾಂಚ್ ಸಮಾರಂಬವು ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ ನೆರವೇರಿತು.

ನಟ ಕಿಶೋರ್ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿರುವ ಈ ಸಿನಿಮಾಗೆ ಇಬ್ಬರು ಹೀರೋಯಿನ್/ನಾಯಕಿ ಗಳು. ಇವರ ಹುಡುಕಾಟ ಶುರುವಾಗಿದೆ ಎಂದು ನಿರ್ಮಾಪಕರು ತಿಳಿಸಿದರು. ವಿಲನ್ ಪಾತ್ರಗಳಲ್ಲಿ ಉಗ್ರಂ ಮಂಜು, ಕಾಕ್ರೊಚ್ ಸುದೀ ಮತ್ತಿತರರು ಕಾಣಿಸಿಕೊಳ್ಳಲಿದ್ದಾರೆ.

ಸದ್ಯ ಸ್ಕ್ರಿಪ್ಟ್ ಕೆಲಸ ಮುಗಿಸಿಕೊಳ್ಳುತ್ತಿರುವ ತಂಡ ಮುಂದಿನ ತಿಂಗಳು ಶೂಟಿಂಗ್ ತಯ್ಯಾರಿ ಮಾಡಿಕೊಳ್ಳುತ್ತಿದೆ. ದೈಯದಿಂದ ಒಂದು ಹೆಣ್ಣು ಇಂತಾ ಸಾಮಾಜಿಕ ಕಳಕಳಿಯ ಚಿತ್ರ ನಿರ್ದೇಶಿಸಲು ಮಾಡಿದ ಯೋಚನೆಗೆ ಎಲ್ಲಾ ವರ್ಗಗಳಿಂದ ಪ್ರಶಂಸೆಯ ಸುರಿಮಳೆ ಹರಿದು ಬರುತ್ತಿದೆ. ಇವರಿಗೆ ಶುಭ ಕೋರೋಣ.

Exit mobile version