ತಮಿಳು ಸೂಪರ್ ಸ್ಟಾರ್ ವಿಜಯ್ ಬರೀ ತೆರೆ ಮೇಲಷ್ಟೇ ಅಲ್ಲ, ನಿಜ ಜೀವನದಲ್ಲೂ ಹೀರೋನೇ. ಯಾಕಂದ್ರೆ ಸಿನಿಮಾ ಬಿಟ್ಟು ರಾಜಕಾರಣಕ್ಕೆ ಧುಮುಕಿರೋ ದಳಪತಿ, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಟಿವಿಕೆ ಪಕ್ಷವನ್ನ ಅಧಿಕಾರಕ್ಕೆ ತಂದು, ಸಿಎಂ ಆಗುವ ಕನಸು ಕಂಡಿದ್ದಾರೆ. ಸದ್ಯ ಅಭ್ಯರ್ಥಿಗಳ ಪಟ್ಟಿ ಘೋಷಣೆ ಆಗ್ತಿದ್ದು, ತಮ್ಮ ಕಾರ್ ಡ್ರೈವರ್ ಮಗನಿಗೆ ಎಂಎಲ್‌ಎ ಟಿಕೆಟ್ ನೀಡಿ, ಜನ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ದಳಪತಿ ಕಾರ್ ಡ್ರೈವರ್ ಮಗನಿಗೆ ಟಿಕೆಟ್..
ವಿಜಯ್ ರಿಯಲ್ ಹೀರೋ
ಒಂದಲ್ಲ ಎರಡೆರಡು ಕ್ಷೇತ್ರಗಳಲ್ಲಿ ಟಿವಿಕೆ ಮುಖ್ಯಸ್ಥ ಕಂಟೆಸ್ಟ್..!
ದಳಪತಿ ವಿಜಯ್.. ಸೂಪರ್ ಸ್ಟಾರ್ ರಜನೀಕಾಂತ್ ನಂತ್ರ ತಮಿಳುನಾಡಿನಲ್ಲಿ ಅತಿಹೆಚ್ಚು ಫ್ಯಾನ್ ಫಾಲೋಯಿಂಗ್ ಹೊಂದಿರೋ ಸ್ಟಾರ್. ಇಲ್ಲಿಯ ತನಕ 68 ಸಿನಿಮಾಗಳನ್ನ ಮಾಡಿರೋ ವಿಜಯ್, ತಮ್ಮ 69ನೇ ಚಿತ್ರ ಜನನಾಯಗನ್ ಸೆನ್ಸಾರ್ ಸಮಸ್ಯೆಯಿಂದ ರಿಲೀಸ್ ಆಗೋದು ತಡವಾಗಿದೆ. ಸದ್ಯ ರಿಲೀಸ್ ಆಗುವ ಯಾವುದೇ ಮುನ್ಸೂಚನೆ ಕೂಡ ಇಲ್ಲ. ಯಾಕಂದ್ರೆ ತಮಿಳುನಾಡಿನಲ್ಲಿ ಈಗಾಗ್ಲೇ ಎಲೆಕ್ಷನ್ ಡೇಟ್ ಅನೌನ್ಸ್ ಆಗಿದ್ದು, ಇದೇ ಏಪ್ರಿಲ್ 23ಕ್ಕೆ ವಿಧಾನಸಭಾ ಚುನಾವಣೆ ನಡೆಯುತ್ತಿದೆ.
ನಟ ವಿಜಯ್ ಕೂಡ ಸದ್ಯ ಬಣ್ಣದಲೋಕಕ್ಕೆ ಗುಡ್ ಬೈ ಹೇಳಿ, ಜನಸೇವೆ ಮಾಡೋಕೆ ರಿಯಲ್ ಪಾಲಿಟಿಕ್ಸ್‌ಗೆ ಧುಮುಕಿದ್ದಾರೆ. ಟಿವಿಕೆ ಪಕ್ಷ ಕಟ್ಟಿ ವಿಧಾನಸಭಾ ಚುನಾವಣೆಗೆ ರಾಜ್ಯದ 234 ಕ್ಷೇತ್ರಗಳಿಂದಲೂ ಸಹ ತನ್ನ ಪಕ್ಷದ ಅಭ್ಯರ್ಥಿಗಳನ್ನ ನಿಲ್ಲಿಸಲು ಸಜ್ಜಾಗಿದ್ದಾರೆ. ಈಗಾಗ್ಲೇ ಟಿಕೆಟ್ಸ್ ಅನೌನ್ಸ್ ಮಾಡ್ತಿದ್ದು, ತಮ್ಮ ಕಾರ್ ಡ್ರೈವರ್ ಆಗಿ ಬಹಳ ದಿನಗಳಿಂದ ಜೊತೆಗೆ ಕೆಲಸ ಮಾಡ್ತಿರೋ ವ್ಯಕ್ತಿಯ ಮಗನಿಗೆ ಟಿವಿಕೆ ಪಕ್ಷದಿಂದ ಎಂಎಲ್‌ಎ ಟಿಕೆಟ್ ನೀಡಿದ್ದಾರೆ ದಳಪತಿ. ವಿಜಯ್‌ರ ಈ ನಡೆ ನಿಜಕ್ಕೂ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಗಿದ್ದು, ಟಿಕೆಟ್ ಪಡೆದ ಡ್ರೈವರ್ ಮಗ ಶಬರಿನಾಥನ್, ಟಿವಿಕೆ ನೇತಾರ ವಿಜಯ್ ಕಾಲಿಗೆ ಬಿದ್ದು, ಕೃತಜ್ಞತೆ ಸಲ್ಲಿಸಿದ್ದಾರೆ.
ಎಲೆಕ್ಷನ್ ಮುಗಿಯೋ ತನಕ ಇಲ್ಲ ‘ಜನನಾಯಗನ್’ ಆಟ..!
ಜನ ಸೇವೆಗಾಗಿ ಕಲಾ ಸೇವೆಗೆ ಗುಡ್ ಬೈ ಹೇಳಿರೋ ವಿಜಯ್
ಅಂದಹಾಗೆ ನಟ ವಿಜಯ್ ಒಂದಲ್ಲ ಎರಡೆರಡು ಕ್ಷೇತ್ರಗಳಲ್ಲಿ ಎಲೆಕ್ಷನ್‌ಗೆ ಕಂಟೆಸ್ಟ್ ಮಾಡ್ತಿದ್ದು, ಎರಡೂ ಕಡೆ ಗೆದ್ದರೂ ಅಚ್ಚರಿಯಿಲ್ಲ ಎನ್ನಲಾಗ್ತಿದೆ. ಚೆನ್ನೈನ ಪೆರಂಬೂರ್ ಹಾಗೂ ತಿರುಚಿರಾಪಲ್ಲಿ ಈಸ್ಟ್ ಕ್ಷೇತ್ರಗಳಿಂದ ಚುನಾವಣಾ ಸ್ಪರ್ಧೆಗೆ ಇಳಿದಿದ್ದಾರೆ ವಿಜಯ್. ಸೋ.. ಎಲ್ಲರ ಚಿತ್ತ ವಿಜಯ್ ರಾಜಕೀಯ ಚುನಾವಣೆ & ಫಲಿತಾಂಶದ ಮೇಲೆ ನೆಟ್ಟಿದೆ.
