ಗುರುಪ್ರಸಾದ್ ಕೊನೆಯ ಚಿತ್ರ ಬಿಡುಗಡೆಗೆ ಕೋರ್ಟ್ ತಡೆಯಾಜ್ಞೆ!

ಎದ್ದೇಳು ಮಂಜುನಾಥ -2 ಚಿತ್ರ ಬಿಡುಗಡೆಗೆ ಕೋರ್ಟ್ ತಡೆಯಾಜ್ಞೆ

Eddelu manjunatha

ದಿವಂಗತ ಹಿರಿಯ ನಿರ್ದೇಶಕ ಹಾಗೂ ನಟ ಗುರುಪ್ರಸಾದ್ ಅವರ ಕೊನೆಯ ಸಿನಿಮಾ ಎದ್ದೇಳು ಮಂಜುನಾಥ -2 ಬಿಡುಗಡೆಗೆ ಕೋರ್ಟ್ ತಡೆಯಾಜ್ಞೆ ನೀಡಿದೆ. ಈ ಚಿತ್ರವನ್ನು ನಾಳೆ ಅದ್ದೂರಿಯಾಗಿ ಬಿಡುಗಡೆ ಮಾಡಬೇಕಾಗಿದ್ದರೂ, ಗುರುಪ್ರಸಾದ್ ಅವರ ಪತ್ನಿ ಸುಮಿತ್ರ ಅವರು ಬ್ರೇಕ್ ಹಾಕಿದ್ದಾರೆ.

 

ಪತ್ನಿ – ನಿರ್ಮಾಪಕರ ಜಟಾಪಟಿ

ಈ ಚಿತ್ರದ ಹಕ್ಕುಗಳನ್ನು ಮೊದಲಿಗೆ ಮೈಸೂರಿನ ಪ್ರಸಿದ್ಧ ನಿರ್ಮಾಪಕ ಮೈಸೂರ್ ರಮೇಶ್ ಅವರು ಪಡೆದಿದ್ದರು. ಆದರೆ, ಗುರುಪ್ರಸಾದ್ ಅವರ ಪತ್ನಿ ಸುಮಿತ್ರಾ ಅವರು ಕೋರ್ಟ್ ಮೆಟ್ಟಿಲೇರಿದ್ದು, ಸಿನಿಮಾದ ಮೇಲೆ ತಡೆಯಾಜ್ಞೆ ತಂದಿದ್ದಾರೆ. ನಿರ್ಮಾಪಕರಿಗೆ ಹಣದ ಬೇಡಿಕೆ ಇಟ್ಟಿದ್ದರೂ, ತಕ್ಕ ಪ್ರತಿಕ್ರಿಯೆ ಸಿಗದೆ ನ್ಯಾಯಾಲಯದ ಮೊರೆ ಹೋಗಿದ್ದಾರೆ.

 

ನಿರ್ಮಾಪಕರ ಆಕ್ರೋಶ

ನಿರ್ಮಾಪಕರಾದ ರವಿ ದೀಕ್ಷಿತ್ ಹಾಗೂ ಮೈಸೂರ್ ರಮೇಶ್ ಈಗ ನಾಳೆಯೇ ಚಿತ್ರವನ್ನು ರಿಲೀಸ್ ಮಾಡಲು ಮತ್ತೊಮ್ಮೆ ಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ ಸಿಟಿ ಸಿವಿಲ್ ಕೋರ್ಟ್ ಈ ಸಂಬಂಧ ತಡೆಯಾಜ್ಞೆ ಹೊರಡಿಸಿದ್ದು, ನಿರ್ಮಾಪಕರಿಗೆ ಬಿಗ್‌ ಶಾಕ್‌ ನೀಡಿದೆ.

 

ನಿರ್ದೇಶಕ-ನಟ ಗುರುಪ್ರಸಾದ್ ಅವರು ಕೊನೆಯುಸಿರೆಳೆದರೂ, ಅವರ ಕೊನೆಯ ಸಿನಿಮಾವನ್ನು ಅಭಿಮಾನಿಗಳು ವೀಕ್ಷಿಸಿ ಗೌರವ ಸಲ್ಲಿಸಲು ಇನ್ನಷ್ಟು ಕಾಲ ಕಾಯಬೇಕು ಎಂಬ ಸ್ಥಿತಿ ಉಂಟಾಗಿದೆ. ಹೀಗಾಗಿ, ಈ ವಿವಾದ ಶೀಘ್ರದಲ್ಲಿ ಪರಿಹಾರವಾಗಬೇಕು ಎಂಬುದು ಚಿತ್ರಪ್ರೇಮಿಗಳ ನಿರೀಕ್ಷೆ.

Exit mobile version