ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ “ಪಿನಾಕ” ಚಿತ್ರದ ಪೋಸ್ಟರ್ !

Befunky Collage 2025 02 27t164441.413

ಪ್ರತಿಷ್ಟಿತ ಪೀಪಲ್ ಮೀಡಿಯಾ ಫ್ಯಾಕ್ಟರಿ ಲಾಂಛನದಲ್ಲಿ ಟಿ.ಜಿ.ವಿಶ್ವ ಅವರು ನಿರ್ಮಿಸುತ್ತಿರುವ, ನೃತ್ಯ ನಿರ್ದೇಶಕರಾಗಿ ಜನಪ್ರಿಯರಾಗಿರುವ ಬಿ.ಧನಂಜಯ್ ಚೊಚ್ಚಲ ನಿರ್ದೇಶನದ ಹಾಗೂ ತಮ್ಮ ಅಮೋಘ ಅಭಿನಯದ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿ ನಟಿಸುತ್ತಿರುವ ಬಹು ನಿರೀಕ್ಷಿತ “ಪಿನಾಕ” ಚಿತ್ರದ ಪೋಸ್ಟರ್ ಮಹಾ ಶಿವರಾತ್ರಿ ದಿನದಂದು ಬಿಡುಗಡೆಯಾಗಿದೆ. “ಪಿನಾಕ” ಚಿತ್ರದ ವಿಭಿನ್ನ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ರಾಜ್ಯದ ಜನತೆಗೆ ಚಿತ್ರತಂಡ ಮಹಾ ಶಿವರಾತ್ರಿ ಶುಭಾಶಯ ತಿಳಿಸಿದೆ. ಪೋಸ್ಟರ್ ನಲ್ಲಿ ತ್ರಿಶೂಲ ಹಿಡಿದು ನಿಂತಿರುವ ಗಣೇಶ್ ಅವರ ನೋಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

“ಪಿನಾಕ” ಎಂದರೆ‌ ಶಿವನ ತ್ರಿಶೂಲ. ಈ ಚಿತ್ರದ ಶೀರ್ಷಿಕೆಯೂ ಹೌದು. ಗಣೇಶ್ ಅವರು ಸಹ ಈ ಚಿತ್ರದಲ್ಲಿ ಕ್ಷುದ್ರ ಹಾಗೂ ರುದ್ರ ಎಂಬ ಎರಡು ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಫಸ್ಟ್ ಲುಕ್ ಟೀಸರ್ ಗೆ ಮಹಾಪೂರವೇ ಹರಿದು ಬಂದಿದೆ.

ADVERTISEMENT
ADVERTISEMENT
Exit mobile version