ಒಂದೇ ಒಂದು ಬಿಗ್‌ಬಾಸ್ ಶೋ ಒಬ್ಬ ಕಲಾವಿದನ ಬದುಕನ್ನ ಕಂಪ್ಲೀಟ್ ಆಗಿ ಬದಲಿಸಿಬಿಟ್ಟಿದೆ. ಹಳ್ಳಿ ಹೈದ ಗಿಲ್ಲಿ ಪ್ಯಾಟೇಗ್ ಬರೋಕೆ ಕಾರಣ ಆಗಿದೆ. ಅಷ್ಟೇ ಅಲ್ಲ ಸ್ಟಾರ್ ನಟರ ರೇಂಜ್‌ಗೆ ಹೋದಲ್ಲೆಲ್ಲಾ ಗಿಲ್ಲಿ ಹವಾ ಜೋರಿದೆ. ಅದ್ರಲ್ಲೂ ರಾಜ್ಯದ ಮೊದಲ ಪ್ರಜೆ ರಾಜ್ಯಪಾಲರೊಂದಿಗೇನೇ ವೇದಿಕೆ ಶೇರ್ ಮಾಡಿಕೊಳ್ಳುವಷ್ಟು ಎತ್ತರಕ್ಕೆ ಬೆಳೆದಿರೋದು ಟ್ಯಾಲೆಂಟ್‌ಗಿರೋ ಪವರ್‌ನ ಪ್ರತೀಕವಾಗಿದೆ.
ಕಾಮಿಡಿ ಕಿಲಾಡಿಗಳು ಖ್ಯಾತಿಯ ಗಿಲ್ಲಿ, ಬಿಗ್‌ಬಾಸ್‌ನಿಂದ ನೇಮು, ಫೇಮು ಎಲ್ಲಾ ಪಡೆದರು. ಎಲ್ಲೋ ಹಳ್ಳಿಯಲ್ಲಿ ಯೂಟ್ಯೂಬ್ ವಿಡಿಯೋಸ್ ಮಾಡಿಕೊಂಡಿದ್ದಂತಹ ಗಿಲ್ಲಿ ನಟ, ಇಂದು ಇಡೀ ಕರುನಾಡೇ ಕೊಂಡಾಡುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಅದಕ್ಕೆ ಕಾರಣ ಆತನಲ್ಲಿರೋ ಅಗಾಧವಾದ ಪ್ರತಿಭೆ ಹಾಗೂ ಆತನ ಹಾರ್ಡ್‌ವರ್ಕ್.
ಮುಗಿಲು ಮುಟ್ಟಿದ ಗಿಲ್ಲಿ ಕ್ರೇಜ್..ರಾಜ್ಯಪಾಲರ ಜೊತೆ ಸ್ಟೇಜ್
ಆನೇಕಲ್ ಸ್ಕೂಲ್ ಫಂಕ್ಷನ್..ಗಿಲ್ಲಿ, ಗೆಹ್ಲೋಟ್ ಚೀಫ್ ಗೆಸ್ಟ್
ಈ ಬಾರಿಯ ಬಿಗ್‌ಬಾಸ್ ವಿನ್ನರ್ ಟ್ರೋಫಿ ಎತ್ತಿ ಹಿಡಿದ ಗಿಲ್ಲಿ, ಬಿಗ್‌ಬಾಸ್‌ಗೂ ಮುನ್ನ ಒಂದು ಲೆಕ್ಕ. ಬಿಗ್‌ಬಾಸ್ ಬಳಿಕ ಹೊಸ ಲೆಕ್ಕ ಅಂತಿದ್ದಾರೆ. ಹೌದು.. ಮೊದಲೆಲ್ಲಾ ಖಾಸಗಿ ಕಾರ್ಯಕ್ರಮಗಳಿಗೆ ಒಂದಕ್ಕೆ ಹತ್ತು ಸಾವಿರ ತಗೊಳ್ತಿದ್ದ ಗಿಲ್ಲಿ, ಇದೀಗ ಕನಿಷ್ಟ 5 ಲಕ್ಷ ಇಲ್ಲ ಅಂದ್ರೆ ಕಾಲಿಡಲ್ಲ ಅಂತಾರಂತೆ. ಅದ್ರಲ್ಲಿ ತಪ್ಪು ಕೂಡ ಇಲ್ಲ ಬಿಡಿ. ಆತನ ಟ್ಯಾಲೆಂಟ್‌ಗೆ ಬೆಲೆ ಕಟ್ಟೋಕೆ ಸಾಧ್ಯವೇ ಇಲ್ಲ. ಅಷ್ಟರ ಮಟ್ಟಿಗೆ ಎದುರಿಗೆ ಇರೋರನ್ನ ಮಂತ್ರಮುಗ್ಧರನ್ನಾಗಿಸ್ತಾರೆ ಗಿಲ್ಲಿ.
ಭಾಷಣ ಮಾಡಿದ್ರೆ ಕಾಮಿಡಿ..ಡೈಲಾಗ್ ಹೊಡೆದು ಕಿವಿಮಾತು
ಗಿಲ್ಲಿ ಬರ್ತಿದ್ದಂತೆ ಪೊಲೀಸರೇ ಸೆಲ್ಫಿಗೆ ಮುಗಿ..ಸ್ಟೂಡೆಂಟ್ಸ್ ಖುಷ್
ಇತ್ತೀಚೆಗೆ ಆನೇಕಲ್‌ನಲ್ಲಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವೊಂದಕ್ಕೆ ಗಿಲ್ಲಿನೇ ಚೀಫ್ ಗೆಸ್ಟ್. ಅವರೊಟ್ಟಿಗೆ ಈ ರಾಜ್ಯದ ಮೊದಲ ಪ್ರಜೆ ರಾಜ್ಯಪಾಲರಾದಂತಹ ಥಾವರ್ ಚಂದ್ ಗೆಹ್ಲೋಟ್ ಕೂಡ ಇದ್ರು ಅನ್ನೋದು ಇಂಟರೆಸ್ಟಿಂಗ್. ಒಬ್ಬ ಸಾಮಾನ್ಯ ಹುಡುಗ ರಾಜ್ಯದ ರಾಜ್ಯಪಾಲರ ಜೊತೆ ವೇದಿಕೆ ಹಂಚಿಕೊಳ್ಳೋದು ಸಾಮಾನ್ಯದ ಮಾತಲ್ಲ. ಆದ್ರೆ ಗಿಲ್ಲಿ ಬರೋ ಅಷ್ಟರಲ್ಲಿ ರಾಜ್ಯಪಾಲರು ಬಂದು ಹೊರಟು ಹೋಗಿದ್ರು ಅನ್ನೋದು ಬೇಸರದ ಸಂಗತಿ.
ವಾರ್ಷಿಕೋತ್ಸವಕ್ಕೆ ಲೇಟ್ ಆಗಿ ಬಂದ್ರೂ ಲೇಟೆಸ್ಟ್ ಆಗಿ ಎಂಟ್ರಿ ಕೊಟ್ಟಂತಹ ಗಿಲ್ಲಿ ನಟನ ಜೊತೆ ಸೆಲ್ಫಿಗೆ ಮಕ್ಕಳು, ಟೀಚರ್ಸ್ ಅಷ್ಟೇ ಅಲ್ಲ, ಅಲ್ಲಿ ನೆರೆದಿದ್ದ ಪೊಲೀಸ್ ಇಲಾಖೆ ಖಾಕಿಧಾರಿಗಳೇ ಮುಗಿಬಿದ್ದಿದ್ದಾರೆ. ಇನ್ನೂ ಸ್ಟೇಜ್ ಮೇಲೆ ಮೈಕ್ ಹಿಡಿದ ಗಿಲ್ಲಿ, ನಾನು ಜಾಸ್ತಿ ಭಾಷಣೆ ಮಾಡಲ್ಲ. ಸೀರಿಯಸ್ ಆಗಿ ಮಾತಾಡಿದ್ರೆ ಕಾಮಿಡಿ ಅನಿಸುತ್ತೆ. ಚೆನ್ನಾಗಿ ಓದಿ ಅಂತ ಮಕ್ಕಳಿಗೆ ಕಿವಿಮಾತು ಹೇಳಿದ್ರು.
ಆನೇಕಲ್ ಶಾಸಕ ಬಿ ಶಿವಣ್ಣ ಕೂಡ ಉಪಸ್ಥಿತರಿದ್ದ ಆ ವೇದಿಕೆಯಲ್ಲಿ ಗಿಲ್ಲಿ ಡೈಲಾಗ್ಸ್ ಹೊಡೆದು ಶಿಳ್ಳೆ, ಚಪ್ಪಾಳೆ ಗಿಟ್ಟಿಸಿದ್ದಾರೆ. ಅಷ್ಟೇ ಅಲ್ಲ, ಶಿವಣ್ಣನ ಟಗರು ಸಿನಿಮಾದ ಹಾಡಿಗೆ ಮಕ್ಕಳು ಹಾಗೂ ಶಾಲಾ ಸಿಬ್ಬಂದಿ ಜೊತೆ ಮಸ್ತ್ ಡ್ಯಾನ್ಸ್ ಮಾಡಿ ಕಿಕ್ಕೇರಿಸಿದ್ದಾರೆ.
