ಫಸ್ಟ್ ಫ್ರೇಮ್ ಎಂಟರ್ಟೈನ್ಮೆಂಟ್ ನಿರ್ಮಿಸಿರುವ, ಕ್ರಿಶ್ ನಿರ್ದೇಶನದ ಹಾಗೂ ಕನ್ನಡದ ನಟಿ ಅನುಷ್ಕ ಶೆಟ್ಟಿ ಪ್ರಮುಖಪಾತ್ರದಲ್ಲಿ ನಟಿಸಿರುವ ಬಹು ನಿರೀಕ್ಷಿತ “ಘಾಟಿ” ಚಿತ್ರ ಇದೇ ಸೆಪ್ಟೆಂಬರ್ 5 ರಂದು ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಕರ್ನಾಟಕದಲ್ಲಿ ಈ ಚಿತ್ರದ ವಿತರಣೆಯ ಹಕ್ಕನ್ನು ನಿರ್ಮಾಪಕಿ ಪುಷ್ಪ ಅರುಣ್ ಕುಮಾರ್(ನಟ ರಾಕಿಂಗ್ ಸ್ಟಾರ್ ಯಶ್ ತಾಯಿ) ಪಡೆದುಕೊಂಡಿದ್ದಾರೆ.
ಇದೇ ಮೊದಲ ಬಾರಿಗೆ ವಿತರಣಾ ವಲಯಕ್ಕೆ ಅಡಿಯಿಟ್ಟಿರುವ ಪುಷ್ಪ ಅವರು ತಮ್ಮ PA ಪ್ರೊಡಕ್ಷನ್ಸ್ ಮೂಲಕ ಕರ್ನಾಟಕದಾದ್ಯಂತ ಈ ಚಿತ್ರವನ್ನು ಅದ್ದೂರಿಯಾಗಿ ಶ್ರೀಧರ್ ಕೃಪ ಕಂಬೈನ್ಸ್ ಥ್ರೂ ಬಿಡುಗಡೆ ಮಾಡುತ್ತಿದ್ದಾರೆ. ಈ ಚಿತ್ರದ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಿರ್ದೇಶಕ ಕ್ರಿಶ್, ನಾಯಕ ವಿಕ್ರಮ್ ಪ್ರಭು ಹಾಗೂ ವಿತರಕಿ ಪುಷ್ಪ ಅರುಣ್ ಕುಮಾರ್ ಭಾಗಿಯಾಗಿದ್ದರು.
ಪಶ್ಚಿಮ ಘಟ್ಟದ ಮಹಿಳೆ ಸ್ವೀಟಿ ಶೆಟ್ಟಿ (ಅನುಷ್ಕಾ ಶೆಟ್ಟಿ), ಪೂರ್ವ ಘಟ್ಟದ ಘಾಟಿಯಾಗಿ ಈ ಚಿತ್ರದಲ್ಲಿ ನಟಿಸಿರುವುದು ವಿಶೇಷ. ಆಂಧ್ರ ಪ್ರದೇಶ ಮತ್ತು ಒರಿಸ್ಸಾದ ಗಡಿ ಪ್ರದೇಶದಲ್ಲಿ ನಡೆಯುವ ಕಥೆ ಇದು. ಅಲ್ಲಿನ ಘಟ್ಟದ ಪ್ರದೇಶದಲ್ಲಿ ವಾಸಿಸುತ್ತಿರುವವರಿಗೆ ಘಾಟಿ ಎಂದು ಕರೆಯಲಾಗುತ್ತದೆ. ಅವರ ವಿಶೇಷತೆಯೆಂದರೆ, ಒಬ್ಬೊಬ್ಬ ಘಾಟಿ 120 ರಿಂದ 150 ಕೆಜಿ ತೂಕ ಎತ್ತಿಕೊಂಡು ಬೆಟ್ಟ ಹತ್ತುತ್ತಾರೆ.
ಅವರನ್ನು ಗಾಂಜಾ ಸಾಗಿಸುವುದಕ್ಕೆ ಬಳಸಿಕೊಳ್ಳಲಾಗುತ್ತದೆ. ಅವರ ಕಥೆಯನ್ನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡುತ್ತಿದ್ದೇವೆ. ಇದುವರೆಗೂ ಯಾರೂ ಅವರ ಕಥೆಯನ್ನು ಹೇಳಿರಲಿಲ್ಲ. ಅನುಷ್ಕಾ ಇಲ್ಲಿ ಶೀಲಾವತಿ ಎಂಬ ಪಾತ್ರ ಮಾಡಿದ್ದಾರೆ. ದೇಸಿರಾಜು ಎಂಬ ಪಾತ್ರದಲ್ಲಿ ವಿಕ್ರಮ್ ಪ್ರಭು ನಟಿಸಿದ್ದಾರೆ. ಅದ್ಭುತವಾಗಿ ಲೊಕೇಶನ್‍ಗಳಲ್ಲಿ ನಾವು ಚಿತ್ರೀಕರಣ ಮಾಡಿದ್ದೇವೆ.
ನನಗೆ ಬೆಂಗಳೂರು ಎಂದರೆ ಬಹಳ ಇಷ್ಟ ಎಂದು ಮಾತನಾಡಿದ ನಾಯಕ ವಿಕ್ರಮ್ ಪ್ರಭು, ಪುನೀತ್ ರಾಜಕುಮಾರ್ ಅವರನ್ನು ಬಹಳ ನೆನಪಿಸಿಕೊಂಡರು. ಇನ್ನೂ ನಿರ್ದೇಶಕ ಕ್ರೀಶ್ ಅವರು ಹೇಳಿದ ಈ ಚಿತ್ರದ ಕಥೆ ಬಹಳ ಇಷ್ಟವಾಯಿತು. ನಾನು ದೇಸಿ ರಾಜು ಎಂಬ ಪಾತ್ರದಲ್ಲಿ ಅಭಿನಯಿಸಿದ್ದೇನೆ ಎಂದರು.
