ಸಿಂಪಲ್ ಸುನಿಯ ‘ಗತವೈಭವ’ದ ಮೊದಲ ಹಾಡು ರಿಲೀಸ್

'ವರ್ಣಮಾಲೆ' ಯಲ್ಲಿ ದುಶ್ಯಂತ್-ಆಶಿಕಾ ಮಿಂಚಿಗ್‌

Untitled design 2025 10 09t182534.651

ನಿರ್ದೇಶಕ ಸಿಂಪಲ್ ಸುನಿ ಅವರ ಹೊಸ ಚಿತ್ರ ‘ಗತವೈಭವ’ ನವೆಂಬರ್ 14ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ದುಶ್ಯಂತ್ ಮತ್ತು ಆಶಿಕಾ ರಂಗನಾಥ್ ನಾಯಕ-ನಾಯಕಿಯಾಗಿ ಅಭಿನಯಿಸಿರುವ ಈ ಚಿತ್ರದ ಮೊದಲ ಹಾಡು ‘ವರ್ಣಮಾಲೆ’ ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ನಲ್ಲಿ ರಿಲೀಸ್ ಆಗಿದೆ.

ಪತ್ರಗಳ ಮೂಲಕ ಪ್ರೀತಿ ವಿನಿಮಯ ಮಾಡುವ ನವ ಪ್ರೇಮಿಗಳ ಕಥೆಯನ್ನು ಹೇಳುವ ಈ ಹಾಡಿಗೆ ಸಿಂಪಲ್ ಸುನಿ ಅವರೇ ಕ್ಯಾಚಿ ಮ್ಯಾಚಿ ಪದಗಳನ್ನು ರಚಿಸಿದ್ದಾರೆ. ಅಭಿನಂದನ್ ಮಹಿಶಾಲೆ ಮತ್ತು ಸುನಿಧಿ ಗಣೇಶ್ ಅವರ ಕಂಠಸಂಗೀತ, ಜೂಡಾ ಸ್ಯಾಂಡಿ ಅವರ ಸಂಗೀತ ಸಂಯೋಜನೆಯಲ್ಲಿ ಹಾಡು ಪ್ರೇಕ್ಷಕರನ್ನು ಮುಗ್ಧಗೊಳಿಸಿದೆ. ಹಳ್ಳಿ ಗೆಟಪ್ ನಲ್ಲಿ ಚಿತ್ರೀಕರಿಸಲಾದ ಈ ಹಾಡಿನಲ್ಲಿ ದುಶ್ಯಂತ್-ಆಶಿಕಾ ಜೋಡಿ ರಸಿಕತೆಯಿಂದ ಮಿಂಚಿದ್ದಾರೆ.

‘ಗತವೈಭವ’ ಫ್ಯಾಂಟಸಿ, ಪುರಾಣ ಮತ್ತು ರೋಮ್ಯಾಂಟಿಕ್ ಪ್ರೇಮಕಥೆಯ ಅದ್ಭುತ ಮಿಶ್ರಣವಾಗಿದೆ. ಸಿಂಪಲ್ ಸುನಿ ಅವರ ವೃತ್ತಿಜೀವನದಲ್ಲಿ ಇದು ವಿಭಿನ್ನ ಪ್ರಯತ್ನವಾಗಿದೆ. ಅವರು ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಹಾಡಿನ ಸಾಹಿತ್ಯವನ್ನು ಸ್ವತಃ ರಚಿಸಿದ್ದಾರೆ. ದೀಪಿಕಾ ತಿಮ್ಮಯ್ಯ ಮತ್ತು ಸುನಿ ಅವರು ಸರ್ವಗರ ಸಿಲ್ವರ್ ಸ್ಕ್ರೀನ್ಸ್ ಮತ್ತು ಸುನಿ ಸಿನಿಮಾಸ್ ಬ್ಯಾನರ್‌ನಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ.

ಚಿತ್ರದ ಛಾಯಾಗ್ರಹಣ ವಿಲಿಯಂ ಡೇವಿಡ್ ಅವರದ್ದಾಗಿದೆ. ಗತವೈಭವ ಕನ್ನಡದ ಜೊತೆಗೆ ತೆಲುಗು ಸೇರಿದಂತೆ ಇತರ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಇತ್ತೀಚೆಗೆ ಚಿತ್ರತಂಡ ಹೈದರಾಬಾದ್‌ನಲ್ಲಿ ಪ್ರಚಾರ ಕಾರ್ಯಕ್ರಮ ನಡೆಸಿ, ಬಹುಭಾಷಾ ಬಿಡುಗಡೆಗೆ ತಯಾರಿ ನಡೆಸಿದೆ.

Exit mobile version