ಓಟಿಟಿ ಟ್ರೆಂಡಿಂಗ್‌‌ನಲ್ಲಿ ಕನ್ನಡದ ಫಾರೆಸ್ಟ್ ಸಿನಿಮಾ..!

11 (29)

2025 ಕನ್ನಡ ಚಿತ್ರರಂಗ ಎಷ್ಟು ಹಿಟ್ ಸಿನಿಮಾಗಳನ್ನ ಕೊಡುತ್ತೆ ಅನ್ನೋ ಲೆಕ್ಕಾಚಾರ ಈ ಮೊದಲೇ ಶುರುವಾಗಿತ್ತು. ಅಂದಹಾಗೆ ಜನವರಿ ಯಲ್ಲೇ ಗ್ರ್ಯಾಂಡ್ ಓಪನಿಂಗ್ ಪಡೆದ ಸಿನಿಮಾಗಳ ಪಟ್ಟಿಯಲ್ಲಿ ಫಾರೆಸ್ಟ್ ಸಿನಿಮಾ ಕೂಡ ಒಂದಾಗಿದೆ. ಬ್ಲಾಕ್ ಬಸ್ಟರ್ ಹಿಟ್ ಲಿಸ್ಟ್ ನಲ್ಲಿಗ ಫಾರೆಸ್ಟ್ ಚಿತ್ರ ಅಬ್ಬರಿಸಿ ಬೊಬ್ಬೆರೆಯುತ್ತಿದೆ. ಆಟಕ್ಕೂ ಫಾರೆಸ್ಟ್ ನಲ್ಲಿ ಹಂತ ವಿಶೇಷತೆ ಏನಿತ್ತು..? ಪ್ರೇಕ್ಷಕರ ಮನಸಿಗ್ಗೆ ಇಷ್ಟು ಬೇಗ ಹೇಗೆ ಹತ್ತಿರವಾಯ್ತು ಅನ್ನೋ ಪ್ರಶ್ನೆಗಳಿಗೆ ಇಂದು ಉತ್ತರ ಸಿಕ್ಕಿದೆ.

ಈಗಿನ ಕಾಲದಲ್ಲಿ ಸಿನಿಮಾ 25ದಿನ ಓಡೋದೇ ಹೆಚ್ಚು ಅದ್ರಲ್ಲೂ ಚಿಕ್ಕಣ್ಣ ಅಭಿನಯಿಸಿರುವ ಫಾರೆಸ್ಟ್ ಚಿತ್ರ ಬರೋಬ್ಬರಿ 50ದಿನಗಳ ಯಶಸ್ವಿ ಪ್ರದರ್ಶನ ಚಿತ್ರಮಂದಿರದಲ್ಲಿ ಕಂಡಿದೆ.

ಜನವರಿ 24, 2025ರಲ್ಲಿ ಬಿಡುಗಡಯಾದ ಕನ್ನಡದ ಫಾರೆಸ್ಟ್ ಸಿನಿಮಾ 50ದಿನಗಳ ಯಶಸ್ವಿ ಪ್ರದರ್ಶನ ಕಂಡು ಸದ್ಯ ಓಟಿಟಿ ಯಲ್ಲಿ ಬಿರುಗಾಳಿ ಎಬ್ಬಿಸಿದೆ. ಹೌದು ರಂಗಾಯಣ ರಘು, ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್, ಅರ್ಚನಾ ಕೊಟ್ಟಿಗೆ, ಶರಣ್ಯ ಶೆಟ್ಟಿ ಅವರು ಅಭಿನಯಿಸಿರುವ ‘ಫಾರೆಸ್ಟ್​’ ಸಿನಿಮಾ ಮಾರ್ಚ್ 14 ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ ಮಾಡಲಾಗಿತ್ತು. ಇದೀಗ ಈ ಚಿತ್ರ ಬಿಡುಗಡೆಯಾಗಿ ಸದ್ಯ no.1 ಟ್ರೆಂಡಿಂಗ್ ನಲ್ಲಿದೆ ಅನ್ನೋದು ಚಿತ್ರತಂಡಕ್ಕೆ ಖುಷಿಯ ಸಂಗತಿ.

ಚಂದ್ರಮೋಹನ್ ನಿರ್ದೇಶನ ಮಾಡಿರೋ ಈ ಚಿತ್ರ ಅಡ್ವೆಂಚರ್‌ ಕಾಮಿಡಿ ಕಥಾಹಂದರ ಹೊಂದಿದೆ. ಇದರ ಜೊತೆಗೆ
ಎನ್.ಎಂ. ಕಾಂತರಾಜ್ ಅವರು ‘ಎನ್.ಎಂ.ಕೆ. ಸಿನಿಮಾಸ್’ ಮೂಲಕ ಫಾರೆಸ್ಟ್ ನ ನಿರ್ಮಾಣ ಮಾಡಿದ್ದಾರೆ.

Exit mobile version