ಇತ್ತೀಚಿನ ಸಿನಿಮಾಗಳಲ್ಲಿ ಲಿಪ್‌ಕಿಸ್ ದೃಶ್ಯಗಳು ಸಾಮಾನ್ಯವಾಗಿದೆ. ಅದರಲ್ಲೂ ಲವ್ ಸ್ಟೋರಿಗಳಲ್ಲಿ ಹೆಚ್ಚಾಗುತ್ತಲೇ ಇರುತ್ತದೆ. ಹೀಗಾಗಿ ಇಂದಿನ ಸಿನಿಮಾಗಳಲ್ಲಿ ಕಿಸ್ ದೃಶ್ಯಗಳು ಅಚ್ಚರಿಯ ವಿಷಯವಲ್ಲ. ಆದರೆ ಭಾರತೀಯ ಸಿನಿಮಾದ ಮೊದಲ ಲಿಪ್ ಕಿಸ್ ಕುರಿತು ನಿಮಗೆ ಗೊತ್ತಿದೆಯಾ? ಇದನ್ನು ಮೊದಲ ಬಾರಿಗೆ 1933ರಲ್ಲಿ ತೆರೆ ಮೇಲೆ ತರುವ ಮೂಲಕ ಭಾರತೀಯ ಚಿತ್ರರಂಗ ಹೊಸ ಮೈಲುಗಲ್ಲು ಮುಟ್ಟಿತ್ತು. ಭಾರತೀಯ ಸಿನಿಮಾದ ಮೊದಲ ಲಿಪ್ ಕಿಸ್‌ಗೆ ಇದೀಗ 92 ವರ್ಷ.
4 ನಿಮಿಷಗಳ ಚುಂಬನ ದೃಶ್ಯ
1933ರಲ್ಲಿ ಬಿಡುಗಡೆಯಾದ ಕರ್ಮಾ ಚಿತ್ರದಲ್ಲಿ ಭಾರತದ ಮೊದಲ ಲಿಪ್ ಕಿಸ್ ದೃಶ್ಯ ಕಾಣಿಸಿಕೊಂಡಿತು. ಇದು ಬರೋಬ್ಬರಿ 4 ನಿಮಿಷದ ದೃಶ್ಯ, ಈ ದೃಶ್ಯದಲ್ಲಿ ನಾಯಕಿ ದೇವಿಕಾ ರಾಣಿ ಮತ್ತು ನಾಯಕ ಹಿಮಾಂಶು ರೈ ನೇರಾ ನೇರಾ ಲಿಪ್ ಕಿಸ್ ನೀಡಿದ್ದರು. ಆ ಕಾಲದಲ್ಲಿ ಸಿನಿಮಾ ತಂತ್ರಜ್ಞಾನಗಳು ಅಷ್ಟು ಅಭಿವೃದ್ಧಿಯಾಗಿರಲಿಲ್ಲ. ಗ್ರಾಫಿಕ್ಸ್ ಅಥವಾ ಡೂಪ್ ಕಲಾಕಾರರ ಬಳಸಿಲ್ಲ. ನಟರು ರಿಯಲ್ ಆಗಿ ಈ ದೃಶ್ಯದಲ್ಲಿ ನಟಿಸಿದ್ದರು.
ಕರ್ಮಾ ಚಿತ್ರ ಮತ್ತು ಅದರ ವಿಶೇಷತೆ
ಕರ್ಮಾ ಚಿತ್ರವನ್ನು ಬ್ರಿಟಿಷ್ ನಿರ್ದೇಶಕ ಫ್ರೀರ್ ಹಂಟ್ ಮಾಡಿದ್ದರು. ಈ ಚಿತ್ರವು ಭಾರತದ ರಾಜಮನೆತನದ ಜೀವನಶೈಲಿಯನ್ನು ತೋರಿಸುವ ಒಂದು ಪ್ರಯತ್ನವಾಗಿತ್ತು. ಅದರಲ್ಲಿ ರಾಜಮನೆತನದ ಸಾಂಸ್ಕೃತಿಕ, ಹವ್ಯಾಸ ಮತ್ತು ಮನೋರಂಜನೆಗೆ ಸಂಬಂಧಿಸಿದ ಹಲವಾರು ದೃಶ್ಯಗಳಿದ್ದವು. 63 ನಿಮಿಷಗಳ ಈ ಚಿತ್ರದಲ್ಲಿ ಚುಂಬನ ದೃಶ್ಯವು ಪ್ರೇಕ್ಷಕರನ್ನು ಆಶ್ಚರ್ಯಗೊಳಿಸಿತು. ಭಾರತೀಯ ಚಿತ್ರರಂಗಕ್ಕೆ ಇದು ಹೊಸ ಅನುಭವವಾಗಿತ್ತು.
ಹಿಮಾಂಶು ರೈ ಮತ್ತು ದೇವಿಕಾ ರಾಣಿ ಜೋಡಿ
ಹಿಮಾಂಶು ರೈ ಮತ್ತು ದೇವಿಕಾ ರಾಣಿ ಈ ದೃಶ್ಯವನ್ನು ಶೂಟಿಂಗ್ ಮಾಡುವಾಗ ಪತಿ-ಪತ್ನಿಯರಾಗಿದ್ದರು. ಈ ಸಿನಿಮಾದಲ್ಲಿ ಹಿಮಾಂಶು ರೈ ಹಾಗೂ ದೇವಿಕಾ ರಾಣಿ ಮದುವೆಯಾಗಿದ್ದರು. ಹೀಗಾಗಿ ಈ ಲಿಕ್ ಕಿಸ್ ದೃಶ್ಯ ನ್ಯಾಚ್ಯುರಲ್ ಆಗಿ ಬಂದಿತ್ತು. ದೇವಿಕಾ ರಾಣಿ ಅವರನ್ನು ಭಾರತದ ಮೊದಲ ಸೂಪರ್ ಸ್ಟಾರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.
ಸ್ವಾತಂತ್ರ್ಯ ಪೂರ್ವದ ಭಾರತೀಯ ಸಿನಿಮಾಗಳನ್ನು ಮುಖ್ಯವಾಗಿ ಬ್ರಿಟಿಷ್ ಅಧಿಕಾರಿಗಳು ನೋಡುತ್ತಿದ್ದರು. ಆದರೆ ಭಾರತೀಯ ಸಿನಿಮಾದಲ್ಲಿ ಈ ರೀತಿಯ ದೃಶ್ಯಗಳು ಹೊಸದಾಗಿತ್ತು. ಸಿನಿ ಪ್ರೇಕ್ಷರಿಗೆ ಇದು ಎಲ್ಲಾ ಮೀರಿದ ಚಿತ್ರವಾಗಿತ್ತು. ಆದರೂ ಕರ್ಮಾ ಚಿತ್ರವು ಭಾರತೀಯ ಸಿನಿಪ್ರೇಕ್ಷಕರಲ್ಲಿ ದೊಡ್ಡ ಸಂಚಲನವನ್ನು ಉಂಟುಮಾಡಿತು.
ದಿ ಲಾಂಗೆಸ್ಟ್ ಕಿಸ್ – ದೇವಿಕಾ ರಾಣಿ ಜೀವನಚರಿತ್ರೆ
2020ರಲ್ಲಿ ಸಾಹಿತಿ ಕಿಶ್ವರ್ ದೇಸಾಯಿ ಅವರು ದಿ ಲಾಂಗೆಸ್ಟ್ ಕಿಸ್, ದಿ ಲೈಫ್ ಆ್ಯಂಡ್ ಟೈಮ್ಸ್ ಆಫ್ ದೇವಿಕಾ ರಾಣಿ ಎಂಬ ಪುಸ್ತಕವನ್ನು ಬರೆದರು. ಈ ಕೃತಿಯಲ್ಲಿ ದೇವಿಕಾ ರಾಣಿ ಅವರ ಜೀವನ ಮತ್ತು ಕರ್ಮಾ ಚಿತ್ರದಲ್ಲಿ ನಟಿಸಿರುವ ಕಿಸ್ಸಿಂಗ್ ದೃಶ್ಯದ ಕುರಿತು ವಿವರಿಸಲಾಗಿದೆ. ಇದು ಭಾರತೀಯ ಚಿತ್ರರಂಗದ ಮಹತ್ವದ ಒಂದು ಭಾಗವೆಂದು ಪರಿಗಣಿಸಲಾಗುತ್ತದೆ.
