ಕಾಂತಾರ ದೈವದ ಬಗ್ಗೆ ಅವಹೇಳನ: ನಟ ರಣವೀರ್ ಸಿಂಗ್ ವಿರುದ್ಧ ಎಫ್‌ಐಆರ್‌

Untitled design 2025 12 03T165056.954

ಬಾಲಿವುಡ್ ನಟ ರಣವೀರ್ ಸಿಂಗ್ ‘ಕಾಂತಾರ’ ಚಿತ್ರದ ದೈವದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ಮೇಲೆ ಅವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಗೋವಾದಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (IFFI) ಸಂದರ್ಭದಲ್ಲಿ ಅವರು ಮಾತನಾಡಿದ ಮಾತುಗಳು ವಿವಾದವನ್ನು ಸೃಷ್ಟಿಸಿದ್ದು, ಈಗ ಹೈಗೌಂಡ್ಸ್ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ದೂರು ದಾಖಲಾಗಿದೆ. ದೂರು ದಾಖಲಿಸಿದ ವಕೀಲ ಪ್ರಶಾಂತ್ ಮೇತಲ್, ರಣವೀರ್ ಸಿಂಗ್ ‘ಫೀಮೇಲ್ ಗೋಸ್ಟ್’ (ಹೆಣ್ಣು ಭೂತ) ಎಂದು ಸಂಬೋಧಿಸಿದ್ದು ತುಳುನಾಡಿನ ಜನರ ಧಾರ್ಮಿಕ ಭಾವನೆಗೆ ಘೋರ ಅಪಮಾನ ಎಂದು ತಿಳಿಸಿದ್ದಾರೆ.

ಗೋವಾದಲ್ಲಿ ನಡೆದ ಚಲನಚಿತ್ರೋತ್ಸವದ ಕಾರ್ಯಕ್ರಮದಲ್ಲಿ ರಣವೀರ್ ಸಿಂಗ್ ಹಾಜರಿದ್ದರು. ಅಲ್ಲಿ ಅವರು ಕನ್ನಡ ಸಿನಿಮಾ ‘ಕಾಂತಾರ: ಎ ಲೆಜೆಂಡ್’ ಮತ್ತು ಅದರ ನಟ-ನಿರ್ದೇಶಕ ರಿಷಬ್ ಶೆಟ್ಟಿಯವರನ್ನು ಕುರಿತು ಮಾತನಾಡುತ್ತಿದ್ದರು. ರಿಷಬ್ ಶೆಟ್ಟಿಯವರ ಅಭಿನಯವನ್ನು ಹೊಗಳುವ ಸಂದರ್ಭದಲ್ಲಿ, ರಣವೀರ್ ಸಿಂಗ್, “ನಾನು ಥಿಯೇಟರ್ನಲ್ಲಿ ‘ಕಾಂತಾರ 1’ ನೋಡಿದೆ. ರಿಷಬ್ ಶೆಟ್ಟಿ ಅವರ ಅಭಿನಯ ನಿಜವಾಗಿಯೂ ಅದ್ಭುತವಾಗಿತ್ತು. ಆ ಹೆಣ್ಣು ದೈವ (ಫೀಮೇಲ್ ಗಾಡ್) ನಿಮ್ಮ ಮೇಲೆ ಬರುತ್ತಲ್ಲ, ಅದು ಅದ್ಭುತ. ನಿಮ್ಮ ನಟನೆ ಸೂಪರ್ ಎಂದು ಹೇಳಿದರು. ಈ ‘ಹೆಣ್ಣು ದೈವ’ ಅಥವಾ ‘ಫೀಮೇಲ್ ಗೋಸ್ಟ್’ ಪದಪ್ರಯೋಗವೇ ವಿವಾದಕ್ಕೆ ಕಾರಣವಾಗಿದೆ.

ವಕೀಲ ಪ್ರಶಾಂತ್ ಮೇತಲ್ ದಾಖಲಿಸಿದ ದೂರಿನ ಪ್ರಕಾರ, ರಣವೀರ್ ಸಿಂಗ್ ಅವರ ಮಾತು ಕೇವಲ ಅವಿವೇಕದ್ದಲ್ಲ, ಬದಲಿಗೆ ತುಳುನಾಡಿನ ಕರಾವಳಿ ಕರ್ನಾಟಕದ ಲಕ್ಷಾಂತರ ಭಕ್ತರು ಆರಾಧಿಸುವ ‘ಗುಳಿಗ ದೈವ’ ಮತ್ತು ‘ಚಾಮುಂಡಿ’ ಮುಂತಾದ ದೈವಶಕ್ತಿಗಳಿಗೆ ನೇರವಾಗಿ ಅವಮಾನವಾಗಿದೆ. ‘ಕಾಂತಾರ’ ಚಿತ್ರದ ಹೆಚ್ಚು ಜನಪ್ರಿಯವಾಗಲೂ ಕಾರಣವೇ ಈ ದೈವ ಸಂಕಲ್ಪ ಹಾಗೂ ನಮ್ಮ ಸಂಸ್ಕೃತಿ. ದೈವವನ್ನು ‘ಭೂತ’ ಎಂದು ಕರೆಯುವುದರ ಮೂಲಕ, ನಟ ರಣವೀರ್‌ ಸಿಂಗ್‌ ವಿವಾದಕ್ಕೆ ಕಾರಣವಾಗಿದ್ದಾರೆ. ಹೀಗಾಗಿ ಅವರ ಮೇಲೆ ದೂರು ದಾಖಲಾಗಿದೆ. ಇದು ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 295A (ಧಾರ್ಮಿಕ ಭಾವನೆಗೆ ಇರುವ ಉದ್ದೇಶಪೂರ್ವಕ ಹಾಗೂ ದುರುದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಅಪರಾಧವೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ರಣವೀರ್‌ ಸಿಂಗ್‌ನ ಈ ವಿಡಿಯೋ, ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾದ ಟೀಕೆ ಮತ್ತು ರೋಷದ ಪ್ರತಿಕ್ರಿಯೆ ಬಂತು. ಅನೇಕರು, ವಿಶೇಷವಾಗಿ ಕರ್ನಾಟಕ ಮತ್ತು ತುಳುನಾಡಿನಿಂದ, ರಣವೀರ್ ಸಿಂಗ್ ಅವರ ಮಾತು ಸಂಸ್ಕೃತಿಯ ಅಜ್ಞಾನ ಮತ್ತು ಅಗೌರವವನ್ನು ತೋರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಒತ್ತಡದ ನಡುವೆ, ರಣವೀರ್ ಸಿಂಗ್ ತಮ್ಮ ಇನ್ಸ್ಟಾಗ್ರಾಂ ಮೂಲಕ ಕ್ಷಮಾಪಣೆ ಕೇಳಿದ್ದಾರೆ. ಅವರು, ನನ್ನ ಮಾತುಗಳ ಅರ್ಥ ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ನಾನು ‘ಕಾಂತಾರ’ ಮತ್ತು ರಿಷಬ್ ಶೆಟ್ಟಿ ಅವರ ಅದ್ಭುತ ನಟನೆಯನ್ನ ವರ್ಣಿಸಲು ಹೊರಟಿದ್ದೆ. ಯಾವುದೇ ಧಾರ್ಮಿಕ ಭಾವನೆಗೆ ನೋವುಂಟಾಗಿದ್ದರೆ, ನಾನು ಹೃತ್ಪೂರ್ವಕವಾಗಿ ಕ್ಷಮೆ ಕೋರುತ್ತೇನೆ” ಎಂದು ತಿಳಿಸಿದರು. 

ಕ್ಷಮಾಪಣೆಯ ನಂತರವೂ, ವಕೀಲ ಪ್ರಶಾಂತ್ ಮೇತಲ್ ಅವರು ಹೈಗೌಂಡ್ಸ್ ಪೊಲೀಸ್ ಠಾಣೆಯಲ್ಲಿ ಔಪಚಾರಿಕ ದೂರು ದಾಖಲಿಸಿದ್ದಾರೆ. ಪೊಲೀಸರು ಈಗ ದೂರನ್ನು ಪರಿಶೀಲಿಸಿ, ಪ್ರಾಥಮಿಕ ತನಿಖೆ ನಡೆಸುತ್ತಿದ್ದಾರೆ.

Exit mobile version