ಅಬ್ಬಬ್ಬಾ..ಅಂದು ರಾಜರತ್ನ..ಇಂದು ಯುವರತ್ನ..ಅದೇ ಜಾಕಿ ಫ್ಲೇವರ್ ಆಫ್ ಎಂಟರ್‌ಟೈನ್ಮೆಂಟ್. ಚಿಕ್ಕ ಕೆರೆಯಿಂದ ದೊಡ್ಡ ಸುಮುದ್ರಕ್ಕೆ ಬೀಳುವ ಔಟ್ ಅಂಡ್ ಔಟ್ ರಾ ಟ್ರೈಲರ್ ಎಕ್ಕ. ಸಾಂಗ್ಸ್ ಹಾಗೂ ಟೀಸರ್‌ನಿಂದ ಸದ್ದು ಮಾಡ್ತಿದ್ದ ಎಕ್ಕ, ಇದೀಗ ಜಬರ್ದಸ್ತ್ ಟ್ರೈಲರ್‌ನಿಂದ ಮಾಸ್‌ಗೆ ಕೇರ್ ಆಫ್ ಅಡ್ರೆಸ್ ಆಗಿದೆ.
ಯುವ ರಾಜ್‌ಕುಮಾರ್ ಎರಡನೇ ಆಟ ಎಕ್ಕ ಬಿಡುಗಡೆ ಹೊಸ್ತಿಲಲ್ಲಿದ್ದು, ಸದ್ಯ ಭರದಿಂದ ಪ್ರಚಾರ ಕಾರ್ಯಗಳನ್ನ ಮಾಡ್ತಿದೆ. ಸ್ಯಾಂಡಲ್‌ವುಡ್‌ನ ಪ್ರತಿಷ್ಠಿತ ಫಿಲ್ಮ್ ಪ್ರೊಡಕ್ಷನ್ ಬ್ಯಾನರ್‌ಗಳೆಲ್ಲಾ ಜಂಟಿಯಾಗಿ ನಿರ್ಮಿಸಿರೋ ಬಹುನಿರೀಕ್ಷಿತ ಚಿತ್ರದ ಟ್ರೈಲರ್ ರಿವೀಲ್ ಆಗಿದೆ. ಎಕ್ಕ ಪಕ್ಕ ಶೋ ರೀತಿ ಇದೆ. ಹಳ್ಳಿ ಬಿಟ್ಟು ಸಿಟಿಗೆ ಬಂದ ಹುಡ್ಗ ಕೆರೆಯಿಂದ ಸಮುದ್ರಕ್ಕೆ ಬಿದ್ದ ಕಥೆಯನ್ನು ರೋಹಿತ್ ಪದಕಿ ಹೇಳೋಕ್ಕೆ ಹೊರಟಿದ್ದಾರೆ. ಒಬ್ಬ ಸಾಮಾನ್ಯ ಹುಡ್ಗ ಅಂಡರ್ ವರ್ಲ್ಡ್ ಗೆ ಎಂಟ್ರಿ ಕೊಟ್ಟು, ಬೆಳೆಯೋದು ಎಕ್ಕ ಚಿತ್ರದ ಹೈಲೆಟ್.
ಯುವ ಮಾಸ್ ಆಗಿ ಅಬ್ಬರಿಸಿದ್ದು, ಸಂಜನಾ ಆನಂದ್ ಹಾಗೂ ಸಂಪದಾ ನಾಯಕಿಯರಾಗಿ ಗ್ಲಾಮರ್ ಸಾಥ್ ಕೊಟ್ಟಿದ್ದಾರೆ. ಅಂದಹಾಗೆ ಎಕ್ಕ ಕಂಪ್ಲೀಟ್ ರಾ & ರಗಡ್ ಸಿನಿಮಾ. ಇಲ್ಲಿ ಇವರು ಬೇರೆ ರೀತಿಯ ಕಥೆಯನ್ನೇ ಹೇಳುತ್ತಿದ್ದಾರೆ. ಯುವ ಚಿತ್ರದ ನಾಯಕ ನಟ ಯುವರಾಜ್‌ಕುಮಾರ್ ಅವರನ್ನ ಇಲ್ಲಿ ಬೇರೆ ರೀತಿ ತೋರಿಸುತ್ತಿದ್ದಾರೆ. ಎಕ್ಕ ಚಿತ್ರದಲ್ಲಿ ಡೆಡ್ಲಿ ಸೋಮ ಖ್ಯಾತಿಯ ನಟ ಆದಿತ್ಯ ಕೂಡ ನಟಿಸಿದ್ದಾರೆ. ಬಾಲಿವುಡ್‌ನ ಅತುಲ್ ಕುಲಕರ್ಣಿ ಸಹ ತಾರಾಗಣದಲ್ಲಿದ್ದಾರೆ.
ಎಕ್ಕ ಚಿತ್ರಕ್ಕೆ ರೋಹಿತ್ ಪದಕಿ ನಿರ್ದೇಶನ ಮಾಡಿದ್ದು, ಚರಣ್ ರಾಜ್ ಸಂಗೀತ, ಸತ್ಯಾ ಹೆಗಡೆ ಕ್ಯಾಮೆರಾ ಕೈಚಳಕ ಚಿತ್ರಕ್ಕಿದೆ. ಅಶ್ವಿನಿ ಪುನೀತ್ ರಾಜ್‌ಕುಮಾರ್, ಜಯಣ್ಣ, ಕಾರ್ತಿಕ್ ಗೌಡ ಒಟ್ಟಿಗೆ ಸೇರಿ ಈ ಚಿತ್ರವನ್ನ ನಿರ್ಮಿಸಿದ್ದಾರೆ. ಜುಲೈ-18 ರಂದು ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ. ಯುವರಾಜ್ ಎರಡನೇ ಸಿನಿಮಾ ಇದಾಗಿದ್ದು, ಎಕ್ಕ ಚಿತ್ರದ ವಿಚಾರಕ್ಕೆ ಬಂದ್ರೆ ಇದು ಪಕ್ಕಾ ರಾ ಕಮರ್ಷಿಯಲ್ ಎಂಟರ್‌ಟೈನರ್. ಮಾಸ್ ಪ್ರೇಕ್ಷರಕನ್ನು ಗಮನದಲ್ಲಿಟ್ಟುಕೊಂಡು ಈ ಸಿನಿಮಾ ತಯಾರಾಗಿದ್ದು, ಯೂತ್ಸ್‌ಗೆ ಬೇಗ ಕನೆಕ್ಟ್ ಆಗಲಿದೆ.
