ಯುವರಾಜ್‌ಕುಮಾರ್‌ ನಟನೆಯ ʼಎಕ್ಕʼ ಸಿನಿಮಾ ಜುಲೈ 18ಕ್ಕೆ ರಿಲೀಸ್!‌

ರೆಗೆ ಬರಲು ರೆಡಿ ʼಎಕ್ಕʼ..ಜುಲೈ 18ಕ್ಕೆ ಯುವರಾಜ್‌ ಕುಮಾರ್‌ ಸಿನಿಮಾ ರಿಲೀಸ್!

Untitled design (72)

ಯುವ ಸಿನಿಮಾ ಬಳಿಕ ದೊಡ್ಮನೆ ಕುಡಿ ಯುವರಾಜ್‌ ಕುಮಾರ್‌ ನಟಿಸಿರುವ ಮತ್ತೊಂದು ಬಹುನಿರೀಕ್ಷಿತ ಸಿನಿಮಾ ಎಕ್ಕ. ಟೀಸರ್‌ ಹಾಗೂ ಟೈಟಲ್‌ ಟ್ರ್ಯಾಕ್‌ ಮೂಲಕ ಭಾರೀ ನಿರೀಕ್ಷೆ ಹೆಚ್ಚಿಸಿರುವ ಚಿತ್ರವೀಗ ತೆರೆಗೆ ಎಂಟ್ರಿ ಕೊಡಲು ರೆಡಿಯಾಗಿದೆ. ಜುಲೈ 18ಕ್ಕೆ ಎಕ್ಕ ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ.

ಪಿಆರ್‌ಕೆ ಪ್ರೊಡಕ್ಷನ್ಸ್, ಕೆಆರ್‌ಜಿ ಸ್ಟುಡಿಯೋಸ್ ಹಾಗೂ ಜಯಣ್ಣ ಫಿಲ್ಮ್ಸ್ ಒಟ್ಟಾಗಿ ಚಿತ್ರ ನಿರ್ಮಾಣ ಮಾಡುತ್ತಿರುವ ಎಕ್ಕ ಸಿನಿಮಾಗೆ ರೋಹಿತ್‌ ಪದಕಿ ಆಕ್ಷನ್‌ ಕಟ್‌ ಹೇಳಿದ್ದಾರೆ. ನಾಯಕ ಯುವರಾಜ್‌ ಕುಮಾರ್‌ಗೆ ಸಂಜನಾ ಆನಂದ್ ಹಾಗೂ ಸಂಪದಾ ನಾಯಕಿಯರಾಗಿ ಸಾಥ್‌ ಕೊಟ್ಟಿದ್ದಾರೆ. ಅತುಲ್ ಕುಲಕರ್ಣಿ, ಡೆಡ್ಲಿ ಆದಿತ್ಯಾ ಸೇರಿದಂತೆ ದೊಡ್ಡ ತಾರಗಣ ಚಿತ್ರದಲ್ಲಿದೆ. ‘ರತ್ನನ್ ಪ್ರಪಂಚ’ ಬಳಿಕ ‘ಉತ್ತರಕಾಂಡ’ ಸಿನಿಮಾ ಆರಂಭಿಸಿದ್ದ ರೋಹಿತ್ ಪದಕಿ ಅದನ್ನು ಪಕ್ಕಕ್ಕಿಟ್ಟು ‘ಎಕ್ಕ’ ಚಿತ್ರ ಕೈಗೆತ್ತಿಕೊಂಡಿದ್ದಾರೆ.

ADVERTISEMENT
ADVERTISEMENT

ರೋಹಿತ್ ಪದಕಿ ನಿರ್ದೇಶನದ ಪಕ್ಕಾ ಕಮರ್ಷಿಯಲ್ ಎಂಟರ್‌ಟೈನರ್ ಸಿನಿಮಾ ‘ಎಕ್ಕ’. ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗುತ್ತಿದೆ. ಇತ್ತೀಚೆಗೆ ನಟ ಯುವರಾಜ್‌ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಚಿತ್ರದ ಸಣ್ಣ ಟೀಸರ್ ರಿಲೀಸ್ ಆಗಿ ಧೂಳೆಬ್ಬಿಸಿತ್ತು. ಅದಕ್ಕೂ ಮುನ್ನ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಆಗಿ ಧೂಳೆಬ್ಬಿಸಿತ್ತು.

ಎಕ್ಕ ಬೆಂಗಳೂರಿನ ಅಂಡರ್‌ವರ್ಲ್ಡ್ ಕಥೆ ಚಿತ್ರದಲ್ಲಿದೆ ಎಂದು ಹೇಳಲಾಗುತ್ತಿದೆ. ಯುವ ರಾಜ್‌ಕುಮಾರ್ ಸಿಕ್ಕಾಪಟ್ಟೆ ರಡಗ್ ಲುಕ್‌ನಲ್ಲಿ ನಟಿಸಿದ್ದಾರೆ. ‘ಜಾಕಿ’ ಚಿತ್ರದಲ್ಲಿ ‘ಎಕ್ಕ ರಾಜ ರಾಣಿ’ ಎಂಬ ಸಾಂಗ್ ಬಂದು ಹಿಟ್ ಆಗಿದ್ದು ಗೊತ್ತೇಯಿದೆ. ಇನ್ನು ‘ಜಾಕಿ’ ಚಿತ್ರದ ದೃಶ್ಯವೊಂದರಲ್ಲಿ ಅಪ್ಪು ವಿಭಿನ್ನ ಅವತಾರದಲ್ಲಿ ದರ್ಶನ ಕೊಟ್ಟಿದ್ದರು. ‘ಎಕ್ಕ’ ಟೀಸರ್‌ನಲ್ಲಿ ಯುವ ಕೂಡ ಅಂಥದ್ದೇ ಲುಕ್‌ನಲ್ಲಿ ಯುವ ಕೂಡ ಕಾಣಿಸಿಕೊಂಡಿದ್ದರು. ಭಾರೀ ನಿರೀಕ್ಷೆ ಹೆಚ್ಚಿಸಿರುವ ಸಿನಿಮಾವೀಗ ಜುಲೈ 18ಕ್ಕೆ ರಿಲೀಸ್‌ ಆಗಲಿದೆ.

ರೋಹಿತ್‍ ಪದಕಿ, ವಿಕ್ರಂ ಹತ್ವಾರ್ ಜೊತೆಗೆ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಚರಣ್ ರಾಜ್ ಸಂಗೀತ, ಸತ್ಯ ಹೆಗಡೆ ಛಾಯಾಗ್ರಹಣ ಮತ್ತು ದೀಪು ಎಸ್‍ ಕುಮಾರ್ ಸಂಕಲನ ‘ಎಕ್ಕ’ ಸಿನಿಮಾಗಿದೆ.

Exit mobile version