ಫ್ಯಾನ್ಸ್‌ಗೆ ವಿಜಯ್ ಕೊಟ್ರು ಅಭಿಮಾನದ ಪ್ರೀತಿಯ ಆಮಂತ್ರಣ

ಬರ್ತ್‌ ಡೇಗೂ ಮೊದಲೇ ಫ್ಯಾನ್ಸ್ ಮೀಟ್..ಎಲ್ಲರಿಗೂ ಊಟ

BeFunky collage 2026 01 17T185814.779

ಸಿನಿಮಾಗಳ ಸ್ಟಾರ್ಸ್‌ & ಅವ್ರ ಫ್ಯಾನ್ಸ್..ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅವರಿಬ್ಬರ ಸಂಬಂಧಕ್ಕೆ ಬೆಲೆ ಕಟ್ಟೋಕೆ ಸಾಧ್ಯವೇ ಇಲ್ಲ. ಅದನ್ನ ಪದಗಳಲ್ಲಿ ಬಣ್ಣಿಸೋಕೂ ಆಗಲ್ಲ. ಸದ್ಯ ಲ್ಯಾಂಡ್‌‌ಲಾರ್ಡ್‌ ಸಿನಿಮಾ ಸೆನ್ಸಾರ್ ಪಾಸ್ ಮಾಡಿ, ಪ್ರೇಕ್ಷಕರ ಮುಂದೆ ಬರ್ತಿದ್ದು, ದುನಿಯಾ ವಿಜಯ್ ಸ್ಯಾಂಡಲ್‌ವುಡ್ ದುನಿಯಾಗೊಂದು ಮೈಲಿಗಲ್ಲು ಚಿತ್ರ ನೀಡೋ ಮುನ್ಸೂಚನೆ ನೀಡಿದ್ದಾರೆ. ಇಷ್ಟಕ್ಕೂ ಫ್ಯಾನ್ಸ್‌ಗಾಗಿ ವಿಜಯ್ ಮಾಡ್ತಿರೋದೇನು..? ಆ ಅಭಿಮಾನಕ್ಕೆ ಫ್ಯಾನ್ಸ್ ಮಾಡಿದ್ದೇನು ಅಂತೀರಾ..?

51 ವರ್ಷ ಪೋರೈಸಿರೋ ದುನಿಯಾ ವಿಜಯ್ ಇದೇ ಜನವರಿ 20ಕ್ಕೆ 52ನೇ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಳ್ತಾರೆ.  ಸಾಕಷ್ಟು ಏರಿಳಿತಗಳನ್ನ ಕಂಡು, ಕಷ್ಟ ಸುಖಗಳ ನಡುವೆ ಬಹುದೊಡ್ಡ ಜರ್ನಿ ಮಾಡಿ ಬಂದಿರೋ ವಿಜಯ್, ಸದ್ಯ ವಿಜಯದ ಮಾಲೆಯನ್ನೇ ಧರಿಸಿದ್ದಾರೆ. ಇತ್ತೀಚೆಗೆ ದುನಿಯಾ ವಿಜಯ್ ಕೈ ಹಾಕಿದ್ದೆಲ್ಲಾ ಚಿನ್ನ ಆಗ್ತಿದೆ. ನಟನೆ, ನಿರ್ದೇಶನ, ನಿರ್ಮಾಣ, ಪರಭಾಷೆಗಳಿಂದ ಬರ್ತಿರೋ ಆಫರ್‌‌ಗಳು..ಹೀಗೆ ಎಲ್ಲವನ್ನ ಸಮರ್ಪಕವಾಗಿ ಬಳಸಿಕೊಂಡು ಬಹಳ ಪಾಸಿಟಿವ್ ನೋಟ್‌‌ನಲ್ಲಿ ಸಾಗುತ್ತಿದ್ದಾರೆ.

ಫ್ಯಾನ್ಸ್‌ಗೆ ವಿಜಯ್ ಕೊಟ್ರು ಅಭಿಮಾನದ ಪ್ರೀತಿಯ ಆಮಂತ್ರಣ

ಬರ್ತ್‌ ಡೇಗೂ ಮೊದಲೇ ಫ್ಯಾನ್ಸ್ ಮೀಟ್..ಎಲ್ಲರಿಗೂ ಊಟ

 

ಅಂದಹಾಗೆ ಇದೇ ಜನವರಿ 23ಕ್ಕೆ ಬಹುನಿರೀಕ್ಷಿತ ಲ್ಯಾಂಡ್‌ಲಾರ್ಡ್‌ ಮೂವಿ ತೆರೆಗೆ ಬರ್ತಿದೆ. ರಚಿತಾ ರಾಮ್, ರಾಜ್ ಬಿ ಶೆಟ್ಟಿ ಕೂಡ ಲೀಡ್‌‌ನಲ್ಲಿರೋ ಈ ಚಿತ್ರ ಬರವಣಿಗೆ, ನಿರ್ದೇಶನ ಹಾಗೂ ಮೇಕಿಂಗ್‌ನಿಂದ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಸಿನಿಮಾದ ರಿಲೀಸ್ ವಿಚಾರ ಸಾಕಷ್ಟು ಕೆಲಸ ಕಾರ್ಯಗಳಲ್ಲಿ ಬ್ಯುಸಿ ಇರೋ ದುನಿಯಾ ವಿಜಯ್, ಈ ಬಾರಿಯ ಬರ್ತ್ ಡೇನ ನಾಳೆಯೇ ಅಂದ್ರೆ ಜನವರಿ 18ರ ಭಾನುವಾರದಂದು ಅಭಿಮಾನಿಗಳ ಜೊತೆ ಸೆಲೆಬ್ರೇಟ್ ಮಾಡಿಕೊಳ್ತಿದ್ದಾರೆ. ಎರಡು ದಿನ ಮೊದಲೇ ಫ್ಯಾನ್ಸ್‌ಗೆ ಪ್ರೀತಿಯ, ಅಭಿಮಾನದ ಆಮಂತ್ರಣ ನೀಡಿದ್ದಾರೆ ಸ್ಯಾಂಡಲ್‌ವುಡ್ ಭೀಮ.

ಈ ಬಾರಿ ಆನೇಕಲ್‌‌‌ ಅಲ್ಲ..ನಂದಿ ಲಿಂಕ್ಸ್ ಗ್ರೌಂಡ್‌‌ನಲ್ಲಿ ವೇದಿಕೆ

ಅಭಿಮಾನಿಗಳಿಂದಲೇ ಟ್ರೈಲರ್..ಲ್ಯಾಂಡ್‌‌ಲಾರ್ಡ್‌ ಉತ್ಸವ..!!

ಪ್ರತೀ ವರ್ಷ ಆನೇಕಲ್‌ನ ಕುಂಬಾರನಹಳ್ಳಿಯಲ್ಲಿ ತಂದೆ-ತಾಯಂದಿರ ಸಮಾಧಿಗಳ ಬಳಿ ಬೃಹತ್ ಪೆಂಡಾಲ್ ಹಾಕಿ, ರಾಜ್ಯದ ಮೂಲೆ ಮೂಲೆಗಳಿಂದ ಬಂದಂತಹ ಫ್ಯಾನ್ಸ್ ಜೊತೆ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಳ್ತಿದ್ರು ವಿಜಯ್ ಕುಮಾರ್. ಆದ್ರೆ ಈ ವರ್ಷ ನಾಯಂಡಳ್ಳಿ ಜಂಕ್ಷನ್ ಬಳಿ ಇರೋ ನಂದಿ ಲಿಂಕ್ಸ್ ಗ್ರೌಂಡ್‌‌ನಲ್ಲಿ ತಮ್ಮ ಹುಟ್ಟುಹಬ್ಬವನ್ನ ಸೆಲೆಬ್ರೇಟ್ ಮಾಡಿಕೊಳ್ತಿದ್ದಾರೆ. ಇದು ಬರಿ ಸೆಲೆಬ್ರೇಷನ್ ಅಲ್ಲ, ಲ್ಯಾಂಡ್‌ಲಾರ್ಡ್‌ ಉತ್ಸವವೂ ಹೌದು.

ಅಭಿಮಾನಿಗಳ ಕೈಯಿಂದ ಟ್ರೈಲರ್ ಅಥ್ವಾ ಹಾಡನ್ನ ಲಾಂಚ್ ಮಾಡಿಸೋ ಪ್ಲ್ಯಾನ್‌‌ನಲ್ಲಿರೋ ವಿಜಯ್ ಕುಮಾರ್, ಭಾನುವಾರ ಎಷ್ಟು ಸಾವಿರ ಮಂದಿ ಫ್ಯಾನ್ಸ್ ಬರ್ತಾರೋ ಅವರೆಲ್ಲರಿಗೂ ಊಟದ ವ್ಯವಸ್ಥೆ ಕೂಡ ಮಾಡ್ತಿದ್ದಾರೆ. ಅಲ್ಲದೆ, ಎಲ್ಲರಿಗೂ ಫೋಟೋಗೆ ಅವಕಾಶ ಮಾಡಿಕೊಡ್ತಾರಂತೆ. ಇದಲ್ಲವೇ ಒಬ್ಬ ಸ್ಟಾರ್ ಹಾಗೂ ಆತನ ಫ್ಯಾನ್ಸ್‌‌ಗಿರೋ ಬಾಂಧವ್ಯ..? ಇದಲ್ಲವೇ ನಿಷ್ಕಲ್ಮಶ ಪ್ರೀತಿ, ಅಭಿಮಾನದ ಪ್ರತೀಕ.

ಲ್ಯಾಂಡ್‌‌ಲಾರ್ಡ್‌ಗೆ U/A ಪತ್ರ.. ಕಾಟೇರಮ್ಮನಿಗೆ ಕುರಿ ತರ್ಪಣ

ವಿಜಯಕ್ಕೆ ಹೊಸಕೋಟೆ, ಕೆಆರ್ ಪುರಂ ಫ್ಯಾನ್ಸ್ ವಿಶೇಷ ಪೂಜೆ

ಲ್ಯಾಂಡ್‌ಲಾರ್ಡ್‌ 80ರ ದಶಕದ ಸಿನಿಮಾ. ರೆಬೆಲ್ ಕಥಾನಕವಿರೋ ಸಿನಿಮಾ. ಮಗಳು ರಿತನ್ಯಾರನ್ನ ಕೂಡ ಈ ಚಿತ್ರದ ಮೂಲಕ ಪ್ರೇಕ್ಷಕರಿಗೆ ಪರಿಚಯಿಸ್ತಿದ್ದಾರೆ ವಿಜಯ್. ರಾಜ್ ಬಿ ಶೆಟ್ಟಿ ರೂಲರ್ ಆಗಿ ಸಾಹುಕಾರನ ಖದರ್ ತೋರಲಿದ್ದಾರೆ. ಅಲ್ಲದೆ ಶಿಶಿರ್ ಬೈಕಾಡಿ, ರಾಕೇಡ್ ಅಡಿಗ, ಗಾಳಿಪಟ ಭಾವನಾ ಸೇರಿದಂತೆ ಬಹುದೊಡ್ಡ ತಾರಾಗಣವಿದೆ. ರಚಿತಾ ರಾಮ್ ನಿಂಗವ್ವನಾಗಿ ಮಿಂಚಲಿದ್ದಾರೆ. ಸಿಕ್ಕಾಪಟ್ಟೆ ಎಕ್ಸ್‌ಪೆರಿಮೆಂಟ್ ಮಾಡಿರೋ ರಚ್ಚು ನಿರ್ಧಾರಕ್ಕೆ ಪ್ರೇಕ್ಷಕರು ಭಲೇ ಅಂತಿದ್ದಾರೆ.

ಟೀಸರ್‌ಗಳು ಹಾಗೂ ಸಾಂಗ್ಸ್ ಈಗಾಗ್ಲೇ ಸೂಪರ್ ಹಿಟ್ ಆಗಿದ್ದು, ಸಿನಿಮಾಗಾಗಿ ಎಲ್ರೂ ಕಾತರರಾಗಿದ್ದಾರೆ. ಸೆನ್ಸಾರ್ ಮಂಡಳಿ ಕೂಡ ಸಿನಿಮಾ ನೋಡಿ ಭೇಷ್ ಅಂದಿದೆ. U/A ಪ್ರಮಾಣ ಪತ್ರ ನೀಡಿ ಪ್ರಶಂಸಿಸಿದೆ. ಇನ್ನೂ ವಿಜಯ್ ಕುಮಾರ್ ಫ್ಯಾನ್ಸ್ ಲ್ಯಾಂಡ್‌ಲಾರ್ಡ್ ಸಿನಿಮಾ ಬಹುದೊಡ್ಡ ಹಿಟ್ ಆಗಲಿ, ತಮ್ಮ ನೆಚ್ಚಿನ ನಾಯಕನಟನಿಗೆ ಯಾರ ದೃಷ್ಠಿಯೂ ತಾಕದಿರಲಿ ಅಂತ ಕಾಟೇರಮ್ಮನಿಗೆ ಕುರಿ ಬಲಿ ಕೊಟ್ಟು, ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಕೆಆರ್ ಪುರಂ ಹಾಗೂ ಹೊಸಕೋಟೆ ಭಾಗದ ವಿಜಯ್ ಫ್ಯಾನ್ಸ್ ಈ ರೀತಿ ಶಕ್ತಿ ದೇವತೆ ಮೊರೆ ಹೋಗಿದ್ದು, ಒಬ್ಬ ಸ್ಟಾರ್‌ಗೆ ಇದಕ್ಕಿಂತ ಖುಷಿ ಮತ್ತೇನಿದೆ ಅಲ್ಲವೇ..? ನಂದಿ ಲಿಂಕ್ಸ್ ಗ್ರೌಂಡ್‌‌ನಲ್ಲಿ ಕೂಡ ಅಭಿಮಾನಿಗಳಿಂದಲೇ ದೊಡ್ಡ ಕಟೌಟ್ ತಲೆ ಎತ್ತಿದ್ದು, ರಾಜ್ಯದ ಎಲ್ಲೆಡೆ ದೊಡ್ಡ ಮಟ್ಟದ ಸೆಲೆಬ್ರೇಷನ್‌ನೊಂದಿಗೆ ಲ್ಯಾಂಡ್‌ಲಾರ್ಡ್‌ನ ಬೆಳ್ಳಿತೆರೆಗೆ ಬರಮಾಡಿಕೊಳ್ಳೋಕೆ ಕಾತರರಾಗಿದ್ದಾರೆ.

 

Exit mobile version