ತೆರೆ ಮೇಲೆ ವಿಲನ್‌ಗಳನ್ನ ಧೂಳಿಪಟ ಮಾಡೋ ನಟ ದುನಿಯಾ ವಿಜಯ್, ರಿಯಲ್ ಲೈಫ್‌ನಲ್ಲಿ ಕಣ್ಣೀರಿಟ್ಟಿದ್ದಾರೆ. ಇಷ್ಟು ದಿನ ಸೈಲೆಂಟ್ ಆಗಿದ್ದ ವಿಜಯ್ ಮನೆ, ಇದೀಗ ಏಕಾಏಕಿ ಇಂಥದ್ದೊಂದು ಎಮೋಷನಲ್ ಘಟನೆಗೆ ಕಾರಣವಾಗಿದೆ. ಸಲಗನ ಕಣ್ಣೀರಿಗೆ ಸಾಕ್ಷಿಯಾದ ಆ ವಿಶೇಷ ಕ್ಷಣ ಆದ್ರೂ ಯಾವುದು..? ಅದ್ರ ಕಂಪ್ಲೀಟ್ ಸ್ಟೋರಿ ಇಲ್ಲಿದೆ ನೋಡಿ.
- ಮಗನನ್ನ ಕಂಡ ಕ್ಷಣವೇ ಕಣ್ಣೀರಾಕಿದ ದುನಿಯಾ ವಿಜಯ್
- ಮಗನ ಬರ್ತ್ಡೇನಲ್ಲಿ ಮನ ಮುಟ್ಟುವ ಭಾವುಕ ಕ್ಷಣಗಳು
- ವ್ಯಾಸಂಗದತ್ತ ಸಾಮ್ರಾಟ್ ಚಿತ್ತ.. ತಂದೆಯಿಂದ ದೂರ
- ಸಿನಿಮಾದಿಂದ ಸದ್ಯಕ್ಕೆ ದೂರ ಉಳಿದ ವಿಜಯ್ ಪುತ್ರ
ತೆರೆ ಮೇಲೆ ರಗಡ್ ಆಗಿ ಅಬ್ಬರಿಸೋ ಸ್ಯಾಂಡಲ್‌ವುಡ್‌ನ ಸಲಗ ವಿಜಯ್, ರಿಯಲ್ ಲೈಫ್‌ನಲ್ಲಿ ಮಗನನ್ನ ನೋಡಿ ಭಾವುಕರಾಗಿದ್ದಾರೆ. ತಮ್ಮ ಪ್ರೀತಿಯ ಮಗ ಸಾಮ್ರಾಟ್ ವಿಜಯ್ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದ ವಿಜಯ್, ಬಹಳ ದಿನಗಳ ನಂತರ ಮಗನನ್ನು ಭೇಟಿಯಾಗುತ್ತಿದ್ದಂತೆ ಕಣ್ಣೀರು ಸುರಿಸಿದ್ದಾರೆ.ಪತ್ನಿಯಿಂದ ದೂರಾಗಿರೋ ವಿಜಯ್ ಸದ್ಯ ಇಬ್ಬರು ಹೆಣ್ಣುಮಕ್ಕಳ ಜೊತೆ ಇರುತ್ತಿದ್ದು, ಮಗ ಸಾಮ್ರಾಟ್ ತಾಯಿ ನಾಗರತ್ನ ಜೊತೆಗಿದ್ದಾರೆ. ಇದೀಗ ಬರ್ತ್‌ಡೇ ನೆಪದಲ್ಲಿ ಎದುರಾದ ಮಗನನ್ನ ಗಟ್ಟಿಯಾಗಿ ತಬ್ಬಿಕೊಂಡು ದುನಿಯಾ ವಿಜಯ್ ಕಣ್ಣೀರು ಹಾಕಿರೋ ಎಮೋಷನಲ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.
ಈಗಾಗಲೇ ಕುಸ್ತಿ ಚಿತ್ರದ ಮೂಲಕ ಬೆಳ್ಳಿಪರದೆಗೆ ಎಂಟ್ರಿ ಕೊಟ್ಟಿದ್ದ ಸಾಮ್ರಾಟ್‌ನ ದೊಡ್ಡ ಮಟ್ಟದಲ್ಲಿ ಹೀರೊ ಮಾಡುವ ಪ್ಲ್ಯಾನ್ ತಂದೆ ವಿಜಯ್‌ಗಿತ್ತು. ಇಬ್ಬರು ಪುತ್ರಿಯರಾದ ರಿತನ್ಯಾ ಮತ್ತು ಮೋನಿಕಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ, ಸಾಮ್ರಾಟ್ ಸದ್ಯಕ್ಕೆ ಸಿನಿಮಾ ಬೇಡ ಅಂತ ವಿದ್ಯಾಭ್ಯಾಸದ ಕಡೆ ಕಂಪ್ಲೀಟ್ ಗಮನ ಹರಿಸಿದ್ದು, ಓದಿನ ಸಲುವಾಗಿಯೇ ತಂದೆಯಿಂದ ದೂರ ಉಳಿದಿದ್ದಾರೆ. ತಂದೆ-ಮಗನ ನಡುವೆ ಎಷ್ಟೇ ದೂರವಿದ್ದರೂ, ರಕ್ತದ ಬಾಂಧವ್ಯದ ಪ್ರೀತಿ ಮಾತ್ರ ಕಮ್ಮಿಯಾಗಿಲ್ಲ ಅನ್ನೋದು ಈ ಬರ್ತ್‌ಡೇ ಸೆಲೆಬ್ರೇಷನ್‌ನಲ್ಲಿ ಮತ್ತೊಮ್ಮೆ ಪ್ರೂವ್ ಆಗಿದೆ.
ಮಗನ ಹುಟ್ಟುಹಬ್ಬಕ್ಕೆ ಕೇಕ್ ಕತ್ತರಿಸಿ ಸಂಭ್ರಮಿಸಿದ ವಿಜಯ್, ಆ ಭಾವನಾತ್ಮಕ ಕ್ಷಣಗಳ ವಿಡಿಯೋವನ್ನು ಹ್ಯಾಪಿ ಬರ್ತ್‌ಡೇ ಸಾಮ್ರಾಟ್ ಎಂದು ಬರೆದುಕೊಂಡು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ. ಕಟುವಾದ ಹಣೆಬರಹ ಹಾಗೂ ಕೌಟುಂಬಿಕ ಏರುಪೇರುಗಳ ನಡುವೆಯೂ ಮಗನ ಮೇಲಿರೋ ವಿಜಯ್ ಅವರ ಈ ಅಪಾರ ಪ್ರೀತಿ ಮತ್ತು ಕಣ್ಣೀರು ಫ್ಯಾನ್ಸ್ ಮನ ಮುಟ್ಟುವಂತೆ ಮಾಡಿದೆ. ಸದ್ಯ ಗಾಂಧಿನಗರದ ಮಂದಿ ಹಾಗೂ ಅಭಿಮಾನಿಗಳು ವಿಜಯ್ ಮಗನಿಗೆ ಹುಟ್ಟುಹಬ್ಬದ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
