ಸೆಟ್ಟೇರಿತು ಜವರ.. ವರ್ಸಟೈಲ್ ಆ್ಯಕ್ಟರ್ ರಿಷಿ ಜೊತೆ ರಿತನ್ಯಾ

ಸ್ಮಶಾನ ಕುರಿತ ಕಥೆಯಲ್ಲಿ ರಂಗಾಯಣ ರಘು- ಶ್ರುತಿ ಮಿಂಚು

Untitled design 2025 12 07T165108.239

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ಯಮನ ಇನ್ನೊಂದು ಹೆಸರು ಜವರ. ಇಂಥದ್ದೊಂದು ಟೈಟಲ್‌‌ ಸಿನಿಮಾದಲ್ಲಿ ದುನಿಯಾ ವಿಜಯ್ ಪುತ್ರಿ ರಿತನ್ಯಾ ಹಾಗೂ ರಿಷಿ ಬಣ್ಣ ಹಚ್ಚೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಹಾಗಾದ್ರೆ ಹೇಗಾಯ್ತು ಜವರ ಮುಹೂರ್ತ..? ರಂಗಾಯಣ ರಘು- ಶ್ರುತಿ ಕಾಂಬೋ ಹೇಗಿರಲಿದೆ ಅನ್ನೋದ್ರ ಡಿಟೈಲ್ಡ್ ರಿಪೋರ್ಟ್‌ ನಿಮ್ಮ ಮುಂದೆ.

ಸ್ಟಾರ್ ಫ್ಯಾಮಿಲಿಯಿಂದ‌ ಬಂದ ನಟನಟಿಯರು ತಮ್ಮದೇ ಆದ ರೀತಿಯಲ್ಲಿ ನಟಿಸಿ ತಮ್ಮನ್ನ ತಾವು ಪ್ರೂವ್ ಮಾಡಿರೋ ಹಲವು ಸನ್ನಿವೇಶಗಳಿವೆ. ಈಗ ಅದೇ ಸಾಲಿಗೆ ನಟ ದುನಿಯಾ ವಿಜಯ್ ಮೊದಲ ಪುತ್ರಿ ರಿತನ್ಯ ಕೂಡ ಸೇರಿದ್ದಾರೆ. ಎಸ್, ಜವರ…ಸ್ಯಾಂಡಲ್‌ವುಡ್‌ನಲ್ಲಿ ಸೆಟ್ಟೇರಿದ ಹೊಸ ಸಿನಿಮಾ… ಅಪರೇಷ್ ಅಲಮೇಲಮ್ಮ ಖ್ಯಾತಿಯ ನಟ ರಿಷಿ ಹಾಗೂ ದುನಿಯ ವಿಜಯ್ ಅವರ ಮೊದಲ ಪುತ್ರಿ ರಿತನ್ಯಾ ನಟಿಸುತ್ತಿರುವ ಸಿನಿಮಾ ಜವರ. ಸದ್ಯ ಜವರ ಸಿನಿಮಾದ ಮುಹೂರ್ತ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ  ನೆರವೇರಿತು.

ಸೆಟ್ಟೇರಿತು ಜವರ.. ವರ್ಸಟೈಲ್ ಆ್ಯಕ್ಟರ್ ರಿಷಿ ಜೊತೆ ರಿತನ್ಯಾ

ದುನಿಯಾ ವಿಜಯ್ ಹಿರಿಯ ಮಗಳ ಎರಡನೇ ಸಿನಿಮಾ..!

ಜವರ ಟೈಟಲ್ ಕೇಳಿದ್ರೆ ಮೈ ಜುಮ್ ಎನ್ನುವಂತಿದೆ. ಮಾಸ್ ಟೈಟಲ್ ರಿವೀಲ್ ಮಾಡುವ ಜೊತೆಗೆ ಚಿತ್ರೀಕರಣಕ್ಕೆ ಚಾಲನೆ ಕೂಡ ಸಿಕ್ಕಿದೆ.  ಬರೋಬ್ಬರಿ 35 ವರ್ಷಗಳಿಂದ ಮೈಸೂರಿನ  ಸ್ಮಶಾನದಲ್ಲಿ ಶವಗಳನ್ನು ಹೂಳುವ ಕೆಲಸ ಮಾಡುತ್ತಿರುವ ನೀಲಮ್ಮ ಜವರ ಸಿನಿಮಾಗೆ ಕ್ಲಾಪ್ ಮಾಡಿದ್ದು ವಿಶೇಷವಾಗಿತ್ತು.ಸದ್ಯ ಈ ಸಿನಿಮಾದಲ್ಲಿ ರಿಷಿ ಎಂದು ಮಾಡಿರದ ಒಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ರೆ ನಟಿ ರಿತನ್ಯ ಮೆಡಿಕಲ್ ಕಾಲೇಜ್ ಸ್ಟುಡೆಂಟ್ ಆಗಿ ನಟಿಸ್ತಿದ್ದಾರೆ.

ಇನ್ನು ಹಲವು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳನ್ನ ಮಾಡಿ ಸೈ ಅನ್ನಿಸಿಕೊಂಡಿರೋ ರಂಗಾಯಣ ರಘು ಗೌರಿ ಎನ್ನುವ ಪಾತ್ರಕ್ಕೆ ಬಣ್ಣ ಹಚ್ಚಿದ್ರೆ ನಟಿ ಶೃತಿ ರಾಯಲ್ ಮೀನಾಕ್ಷಿ ಆಗಿ ರಾ ಲುಕ್ ನಲ್ಲಿ ಕಾಣಿಸಿಕೊಳ್ತಿದ್ದಾರೆ.  ಈ ಜೋಡಿ ಜವರ ಸಿನಿಮಾದಲ್ಲಿ ಮತ್ತಷ್ಟು ವಿಭಿನ್ನವಾಗಿ ಕಮಾಲ್ ಮಾಡೋದು ಪಕ್ಕಾ ಅಂತಿದೆ ಚಿತ್ರತಂಡ.

ಸ್ಮಶಾನ ಕುರಿತ ಕಥೆಯಲ್ಲಿ ರಂಗಾಯಣ ರಘು- ಶ್ರುತಿ ಮಿಂಚು

ಎಲಾ ಕುನ್ನಿ ಡೈರೆಕ್ಟರ್‌‌ ಪ್ರದೀಪ್‌‌ ಪ್ರಯೋಗದಲ್ಲಿ ಅಂಥದ್ದೇನಿದೆ ?

ಜವರ ಸಿನಿಮಾ ನಿರ್ದೇಶಕ ಪ್ರದೀಪ್ ದಳವಾಯ್ ಸಾರಥ್ಯದಲ್ಲಿ ಮೂಡಿಬರುತ್ತಿದ್ದು, ಚಿದಾವೃಷಭ ಅವರು ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಇದೊಂದು ಯಮರಾಯ ಹಾಗೆ ಸ್ಮಶಾನದ ಸುತ್ತ ನಡೆಯೋ ಕಥೆ ಆಗಿದ್ದು ನಟ ದುನಿಯಾ ವಿಜಯ್ ಕೂಡ ಕಥೆ ಮೆಚ್ಚಿ ಕೆಲವು ಇನ್ ಪುಟ್ ಕೊಟ್ಟಿದ್ದಾರೆ ಅಂತಿದ್ದಾರೆ ನಿರ್ದೇಶಕ ಪ್ರದೀಪ್.

ನಿರ್ದೇಶಕ ಪ್ರದೀಪ್ ಈ ಸಿನಿಮಾದಲ್ಲಿ ನಿರ್ದೇಶನದ ಜೊತೆಗೆ ಸಂಭಾಷಣೆಯ ಜಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಧರ್ಮ ವಿಶ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಯಲಾ ಕುನ್ನಿ ಸಿನಿಮಾದಲ್ಲೂ ನಿರ್ದೇಶಕ ಪ್ರದೀಪ್ ಮತ್ತು ಧರ್ಮವಿಶ್ ಒಟ್ಟಿಗೆ  ಕೆಲಸ ಮಾಡಿದ್ದರು ಇದೀಗ ಜವರ ಸಿನಿಮಾದಲ್ಲೂ ಇಬ್ಬರ ಕಾಂಬಿನೇಷನ್ ಮುಂದುವರೆದಿದೆ. ಹಾಗೆ ಹಾಲೇಶ್ ಕ್ಯಾಮರಾ ವರ್ಕ್ ಸಿನಿಮಾಗಿರಲಿದೆ. ಒಟ್ಟಿನಲ್ಲಿ ಜವರ ಅನ್ನೋ ಡಿಫರೆಂಟ್ ಟೈಟಲ್‌ನಲ್ಲಿ ಸಿನಿಮಾ ಹೇಗೆ ಮೂಡಿ ಬರುತ್ತೆ ಪ್ರೇಕ್ಷಕರನ್ನ ಹೇಗೆ ರಂಜಿಸುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

 

Exit mobile version