ಬಾಲಿವುಡ್ ನಟ ವಿವೇಕ್ ಒಬೇರಾಯ್ ಹಾಗೂ ನಮ್ಮ ಹೆಮ್ಮೆಯ ಕನ್ನಡಿಗ ರಿಷಬ್ ಶೆಟ್ಟಿ ಒಟ್ಟಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅದಕ್ಕೆ ಸಾಕ್ಷಿ ಆಗಿದ್ದು ದುಬೈನಲ್ಲಿ ನಡೆದ ಕರಾವಳಿ ವೇದಿಕೆ. ಛತ್ರಪತಿ ಶಿವಾಜಿ ಮಹಾರಾಜ್ ಚಿತ್ರದಲ್ಲಿ ಒಟ್ಟಿಗೆ ನಟಿಸ್ತಿರೋ ಇವರುಗಳ ಕುರಿತ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ.
- ಶೆಟ್ರ ಜೊತೆ ವಿವೇಕ್.. ಔರಂಗಾಜೇಬ್ ಮೀಟ್ಸ್ ಶಿವಾಜಿ..!
- ದುಬೈ ಕರಾವಳಿ ವೇದಿಕೆಯಲ್ಲಿ ರಿಷಬ್-ಬಾಲಿವುಡ್ ಸ್ಟಾರ್
- ದೇವರು, ದೈವ ಅಂದ್ರೆ ವಿವೇಕ್ ಒಬೇರಾಯ್ಗೆ ಎಷ್ಟು ಭಕ್ತಿ
- ಡಿವೈನ್ ಸ್ಟಾರ್ ಜೊತೆ ಪ್ರಗತಿ ರಿಷಬ್ ಶೆಟ್ಟಿ ಕೂಡ ಮಿಂಚು
ರಿಷಬ್ ಶೆಟ್ಟಿ.. ಕಾಂತಾರ ಚಿತ್ರದಿಂದ ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮ ತಂದುಕೊಟ್ಟ ಕಲಾವಿದ ಕಮ್ ತಂತ್ರಜ್ಞ. ಕಾಂತಾರ ಹಾಗೂ ಕಾಂತಾರ-1 ಚಿತ್ರಗಳ ಮೂಲಕ ವಿಶ್ವದ ಮೂಲೆ ಮೂಲೆಗೆ ತಲುಪಿದ್ದಾರೆ ಡಿವೈನ್ ಸ್ಟಾರ್. ಅದರಲ್ಲೂ ದುಬೈನಲ್ಲಿ ಇತ್ತೀಚೆಗೆ ನಡೆದ ಭಾವೈಕ್ಯ-ಬಂಟರ ಮಹಾಸಮಾಗಮ ಕಾರ್ಯಕ್ರಮದಲ್ಲಿ ಕೇಂದ್ರಬಿಂದು ಆಗಿದ್ದು ಮಾತ್ರ ನಮ್ಮ ಹೆಮ್ಮೆಯ ಕನ್ನಡಿಗ ರಿಷಬ್.
ರಿಷಬ್ ಜೊತೆ ಬಾಲಿವುಡ್‌ನ ಬಹುದೊಡ್ಡ ಸ್ಟಾರ್ ವಿವೇಕ್ ಒಬೇರಾಯ್ ಕೂಡ ಅದೇ ವೇದಿಕೆಯನ್ನ ಹಂಚಿಕೊಂಡಿದ್ದು ಮತ್ತೊಂದು ವಿಶೇಷ. ಆಳ್ವ ಫ್ಯಾಮಿಲಿಯಲ್ಲಿ ಮದ್ವೆ ಆಗುವ ಮೂಲಕ ಕರ್ನಾಟಕದ ಅಳಿಯ ಅನಿಸಿಕೊಂಡಿರೋ ವಿವೇಕ್ ಒಬೇರಾಯ್, ಹದಿನೈದು ವರ್ಷಗಳಾದ್ರೂ ದೈವ ಹಾಗೂ ಭೂತಕೋಲ ಪದ್ಧತಿಯ ಪರಿಚಯ ಆಗಿರಲಿಲ್ಲವಂತೆ. ರಿಷಬ್ ಶೆಟ್ಟಿ ವಿಚಾರಕ್ಕೆ ಭಾರತೀಯರಾದ ನಾವು ತುಂಬಾ ಹೆಮ್ಮೆ ಪಡಬೇಕು. ದೈವ, ಭೂತಕೋಲ ಸಂಸ್ಕೃತಿಯನ್ನ ಹದಿನೈದು ವರ್ಷಗಳಲ್ಲಿ ನಾನು ಇದೇ ಮೊದಲ ಬಾರಿಗೆ ಕಂಡಿದ್ದು. ನೀವು ಇಡೀ ವಿಶ್ವವನ್ನೇ ಕಾಂತಾರ ಚಿತ್ರದ ಮೂಲಕ ಎಜುಕೇಟ್ ಮಾಡಿದ್ದೀರಿ ಎಂದು ಕೊಂಡಾಡಿದ್ರು.
ಅಂದಹಾಗೆ ಬಂಟರ ಮಹಾಸಮಾಗಮ ವೇದಿಕೆ ಭಾವೈಕ್ಯದ ಮೂಲಕವಷ್ಟೇ ಇವರುಗಳು ಒಟ್ಟಿಗೆ ಕಾಣಿಸಿಕೊಂಡಿಲ್ಲ. ಈಗಾಗ್ಲೇ ರಿಷಬ್ ಶೆಟ್ಟಿ ಕಮಿಟ್ ಆಗಿರೋ ಬಾಲಿವುಡ್‌ನ ಪ್ರತಿಷ್ಠಿತ ಛತ್ರಪತಿ ಶಿವಾಜಿ ಮಹಾರಾಜ್ ಸಿನಿಮಾದಲ್ಲಿ ವಿವೇಕ್ ಒಬೇರಾಯ್ ನಟಿಸ್ತಿದ್ದಾರೆ. ಶಿವಾಜಿ ಮಹಾರಾಜನಾಗಿ ನಮ್ಮ ರಿಷಬ್ ಬಣ್ಣ ಹಚ್ಚಿದ್ರೆ, ಅವರ ಎದುರು ಖಡಕ್ ಖಳನಟ ಔರಂಗಾಜೇಬನಾಗಿ ವಿವೇಕ್ ಕಾಣಸಿಗಲಿದ್ದಾರೆ ಅನ್ನೋದು ಇಂಟರೆಸ್ಟಿಂಗ್.
ಸದ್ಯ ಜೈ ಹನುಮಾನ್ ಸಿನಿಮಾಗೆ ಡೇಟ್ಸ್ ನೀಡಿರೋ ರಿಷಬ್, ಹೊಸ ವರ್ಷದಲ್ಲಿ ತೆಲುಗು ಡೈರೆಕ್ಟರ್ ಪ್ರಶಾಂತ್ ವರ್ಮಾ ಜೊತೆ ಕೆಲಸ ಮಾಡಲಿದ್ದಾರೆ. ಅದಾದ ಬಳಿಕ ರಿಷಬ್-ವಿವೇಕ್ ಕಾಂಬೋನ ಶಿವಾಜಿ ಮಹಾರಾಜ್ ಚಿತ್ರ ಸೆಟ್ಟೇರಲಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
