ಸ್ಯಾಂಡಲ್‌ವುಡ್‌ನ ದೂದ್‌ಪೇಡಾ ದಿಗಂತ್, ಬ್ಯೂಟಿ ಸಮಂತಾ ಎದುರೇ ಟಾಲಿವುಡ್ ಅಂಗಳದಲ್ಲಿ ಮತ್ತೊಂದು ಚಾನ್ಸ್ ಕೇಳಿದ್ದಾರೆ. ಮಾ ಇಂಟಿ ಬಂಗಾರಂ ಜೊತೆ ಕನ್ನಡಿಗ ದಿಗ್ಗಿ ಎಲ್ಲೆಡೆ ಕಮಾಲ್ ಮಾಡ್ತಿದ್ದು, ಈ ಬಾರಿ ಪಕ್ಕದ ಇಂಡಸ್ಟ್ರಿಯಿಂದ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ.
- ಸಮಂತಾ ಮುಂದೆ ಇನ್ನೊಂದು ಚಾನ್ಸ್ ಕೇಳಿದ ದಿಗಂತ್
- 2ನೇ ಮದ್ವೆ ಬಳಿಕ ಸಮಂತಾಗೆ ಗಂಡನಾಗಿರೋ ಕನ್ನಡಿಗ
- ಆಂಧ್ರದಲ್ಲಿ ದೂದ್‌ಪೇಡಾ ದಿಗಂತ್ ಅದೃಷ್ಟ ಪರೀಕ್ಷೆ..!!
- ಈ ವಾರದಿಂದ ನಿಮ್ಮ ಮುಂದೆ ‘ಮಾ ಇಂಟಿ ಬಂಗಾರಂ’
ಮಾ ಇಂಟಿ ಬಂಗಾರಂ.. ನಟಿ ಸಮಂತಾ ನಟನೆಯ ಟಾಲಿವುಡ್‌ನ ಬಹುನಿರೀಕ್ಷಿತ ಸಿನಿಮಾ. ನಮ್ಮ ಶಿವಮೊಗ್ಗದಲ್ಲೂ ಚಿತ್ರೀಕರಣಗೊಂಡಿರೋ ಈ ಸಿನಿಮಾದಲ್ಲಿ ಸ್ಯಾಂಡಲ್‌ವುಡ್‌ನ ದೂದ್‌ಪೇಡಾ ದಿಗಂತ್ ಕೂಡ ಲೀಡ್‌ನಲ್ಲಿ ಬಣ್ಣ ಹಚ್ಚಿರೋದು ಹೈಲೈಟ್. 2ನೇ ಮದ್ವೆಯಾದ ನಟಿ ಸಮಂತಾ ಗಂಡನ ಪಾತ್ರ ಮಾಡಿರೋ ದಿಗಂತ್, ಪಕ್ಕದ ತೆಲುಗು ಚಿತ್ರರಂಗದಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ.
ಇದೇ ಜೂನ್ 19ಕ್ಕೆ ಮಾ ಇಂಟಿ ಬಂಗಾರಂ ಚಿತ್ರ ವರ್ಲ್ಡ್‌ವೈಡ್ ಗ್ರ್ಯಾಂಡ್ ಆಗಿ ರಿಲೀಸ್ ಆಗ್ತಿದ್ದು, ಇತ್ತೀಚೆಗೆ ಪ್ರೀ ರಿಲೀಸ್ ಇವೆಂಟ್ ರಂಗೇರಿತ್ತು. ಅಲ್ಲಿ ಸಮಂತಾ ಎದುರು ನಮ್ಮ ಕನ್ನಡಿಗ ದಿಗಂತ್ ಇಂಗ್ಲಿಷ್ ಜೊತೆ ತೆಲುಗು ಸ್ಪೀಚ್ ಇಂಪ್ರೆಸ್ಸೀವ್ ಆಗಿತ್ತು. ನಾನು ಕನ್ನಡಿಗ ಎಂದ ದಿಗ್ಗಿ, ನನಗೆ ಇನ್ನೊಂದು ಚಾನ್ಸ್ ಕೊಡ್ತೀರಾ ಅಂತ ನೇರವಾಗಿಯೇ ತೆಲುಗು ಮಂದಿಯನ್ನ ಸಮಂತಾ ಎದುರೇ ಕೇಳಿಬಿಟ್ಟರು. ಅವ್ರ ಮಾತುಗಳೀಗ ಸಖತ್ ವೈರಲ್ ಆಗ್ತಿವೆ.
ಅಂದಹಾಗೆ ದಿಗಂತ್ ಬಗ್ಗೆ ನಟಿ ಸಮಂತಾ ಕೂಡ ಮೆಚ್ಚುಗೆಯ ಮಾತುಗಳಾಡಿದ್ದು, ಚೆನ್ನೈನಲ್ಲಿ ನೂತನ ಸಿಎಂ ವಿಜಯ್‌ರನ್ನ ಕೂಡ ಭೇಟಿ ಮಾಡಿ, ಅವ್ರ ಬಗ್ಗೆಯೂ ವಿಶೇಷ ಪೋಸ್ಟ್ ಹಾಕಿದ್ದಾರೆ.
ಟಿಪಿಕಲ್ ಕ್ಲಾಸಿಕಲ್ ಮೂವಿಗೆ ಆ್ಯಕ್ಷನ್ ಟಚ್ ಕೊಟ್ಟಿರೋ ಮಾ ಇಂಟಿ ಬಂಗಾರಂ ಕಥೆ ಸಖತ್ ಇಂಪ್ರೆಸ್ಸೀವ್ ಆಗಿದ್ದು, ಗಂಡನ ಊರಿಗೆ ತೆರಳುವ ಸೊಸೆ, ಆಕೆಯ ಆ್ಯಕ್ಷನ್ ಧಮಾಕದ ಕಥಾನಕ ಹೊಂದಿದೆ. ಟೀಸರ್, ಟ್ರೈಲರ್ ಹಾಗೂ ಸಾಂಗ್ಸ್ ಸಖತ್ ಇಂಟರೆಸ್ಟಿಂಗ್ ಆಗಿದ್ದು, ಇದೇ ಜೂನ್ 19ರಿಂದ ಅಂದ್ರೆ ಇದೇ ವಾರ ಪ್ರೇಕ್ಷಕರನ್ನ ರಂಜಿಸೋಕೆ ಥಿಯೇಟರ್ ಅಂಗಳಕ್ಕೆ ಬರ್ತಿದೆ ಮೂವಿ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
