ಒಂದೇ ವೇದಿಕೆಯಲ್ಲಿ DCM ಡಿಕೆಶಿ-ಬಿಗ್‌ ಬಾಸ್‌ ಕಿಚ್ಚ ಸುದೀಪ್ ಮೋಡಿ

ಕಿಚ್ಚನಿಗೆ ಬೆನ್ನು ತಟ್ಟಿ, ಸನ್ಮಾನ.. ಡಿಕೆ ಸಾಹೇಬ್ರಿಗೆ ಕೈ ಮುಗಿದ ಕಿಚ್ಚ

Untitled design 2026 01 12T134802.490

ಕನ್ನಡ ಚಿತ್ರರಂಗ ಕಂಡ್ರೆ ಡಿಸಿಎಂ ಡಿಕೆ ಶಿವಕುಮಾರ್‌ಗೆ ಅಷ್ಟಕ್ಕಷ್ಟೇ. ಅದ್ರಲ್ಲೂ ನಟ್ಟು ಬೋಲ್ಟ್ ಟೈಟ್ ಮಾಡ್ತೀನಿ ಅಂತ ಬೇರೆ ಹೇಳಿದ್ರು ಅನ್ನೋದು ಎಲ್ಲರಿಗೂ ಗೊತ್ತೇಯಿದೆ. ಆದ್ರೆ ರಿಯಾಲಿಟಿ ಬೇರೇನೇ ಇದೆ. ಒಂದೇ ವೇದಿಕೆಯಲ್ಲಿ ಬಿಗ್‌ಬಾಸ್ ಹಾಗೂ ನಟ್ಟು-ಬೋಲ್ಟ್ ಬಾಸ್ ಒಟ್ಟೊಟ್ಟಿಗೆ ಕಾಣಿಸಿಕೊಂಡಿದ್ದಾರೆ. ಜನ ಅಂದುಕೊಳ್ಳುವಂತೆ, ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡುವಂತಿಲ್ಲ ಕಿಚ್ಚ-ಡಿಕೆಶಿ. ಅದಕ್ಕೆ ಕುಣಿಗಲ್ ಉತ್ಸವದ ವೇದಿಕೆಯೇ ಸಾಕ್ಷಿ.

ಕರ್ನಾಟಕ ಸರ್ಕಾರ ಆಯೋಜಿಸುವ ಬೆಂಗಳೂರು ಫಿಲ್ಮ್ ಫೆಸ್ಟಿವಲ್‌ಗೆ ಸಾಕಷ್ಟು ಮಂದಿ ಸ್ಟಾರ್‌‌ಗಳು ಗೈರಾಗಿದ್ರು. ಈ ಹಿನ್ನೆಲೆಯಲ್ಲಿ ಚಿತ್ರರಂಗದ ನಟ್ಟು ಬೋಲ್ಟ್ ಟೈಟ್ ಮಾಡ್ತೀನಿ ಅಂದಿದ್ರು ಡಿಸಿಎಂ ಡಿಕೆ ಶಿವಕುಮಾರ್. ಅದಾದ ಬಳಿಕ ಬಿಗ್‌ಬಾಸ್ ಮನೆ ಇದ್ದ ಜಾಲಿವುಡ್‌ಗೆ ಬೀಗ ಬಿದ್ದಿತ್ತು. ಇವೆರಡೂ ಕಾರಣಗಳಿಂದ ಡಿಕೆ ಶಿವಕುಮಾರ್ ಅವರಿಗೆ ಚಿತ್ರರಂಗ ಅಂದ್ರೆ ಅಷ್ಟಕ್ಕಷ್ಟೇ. ಕಲಾವಿದರ ಮೇಲೂ ಅವರಿಗೆ ಒಳ್ಳೆಯ ಅಭಿಪ್ರಾಯ ಆಗಲಿ, ಗೌರವ ಆಗಲಿ ಇಲ್ಲ ಅಂದುಕೊಂಡಿದ್ರು ಎಲ್ರೂ. ಅದಕ್ಕೆ ಸೋಶಿಯಲ್ ಮೀಡಿಯಾಗಳು ಕೂಡ ಸಾಕಷ್ಟು ಅಂತೆ ಕಂತೆಗಳ ಬೆಟ್ಟಗಳನ್ನೇ ಕಟ್ಟಿದ್ದವು.

ಒಂದೇ ವೇದಿಕೆಯಲ್ಲಿ ಬಿಗ್‌ಬಾಸ್ & ನಟ್ಟು-ಬೋಲ್ಟ್ ಬಾಸ್

ಕುಣಿಗಲ್ ಉತ್ಸವದಲ್ಲಿ DCM ಡಿಕೆಶಿ- ಕಿಚ್ಚ ಸುದೀಪ್ ಮೋಡಿ

ಆದ್ರೆ ವಾಸ್ತವದಲ್ಲಿ ನಿಜಾಂಶಗಳು ಬೇರೇನೇ ಇವೆ. ಡಿಸಿಎಂ ಇತ್ತೀಚೆಗೆ ವೃಷಭ ಚಿತ್ರದ ಸಾಂಗ್ ಲಾಂಚ್ ಇವೆಂಟ್‌ಗೆ ಆಗಮಿಸಿದ್ರು. ಅಲ್ಲಿ ಬಾಲಿವುಡ್ ಹ್ಯಾಸ್ ಸ್ಲೆಪ್ಟ್.. ಸ್ಯಾಂಡಲ್‌ವುಡ್ ಈಸ್ ರೈಸಿಂಗ್ ಅನ್ನೋ ಮಾತನ್ನ ಹೇಳಿದ್ರು. ಅಷ್ಟೇ ಅಲ್ಲ, ಸಿನಿಮಾಗಳಿಗೆ ಸಪೋರ್ಟ್ ಮಾಡೋಕೆ ಅಂತ ಆರಂಭಿಸಿರೋ ಅವರದ್ದೇ ಪಿವಿಆರ್ ಸ್ಕ್ರೀನ್‌‌ಗಳು ಸಾಕಷ್ಟು ಇವೆ. ಇದರ ಜೊತೆಗೆ ಕುಣಿಗಲ್ ಉತ್ಸವದಲ್ಲಿ ಬಿಗ್‌ಬಾಸ್ ಸುದೀಪ್, ನಟ್ಟು ಬೋಲ್ಟ್ ಸ್ಟಾರ್ ಡಿಕೆಶಿ ಒಟ್ಟೊಟ್ಟಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಇಂಟರೆಸ್ಟಿಂಗ್.

ಕಿಚ್ಚನನ್ನ ಬೆನ್ನು ತಟ್ಟಿ, ಮುಂದೆ ಹೋಗಿ ಜನರನ್ನ ಉದ್ದೇಶಿಸಿ ಮಾತನಾಡಿ ಅಂತ ಹೇಳಿದ್ದೇ ಡಿಕೆ ಶಿವಕುಮಾರ್. ಅಲ್ಲದೆ, ಸುದೀಪ್ ಮಾತಾಡುವಾಗ ಸ್ವತಃ ಡಿಕೆ ವೇದಿಕೆ ಮುಂಭಾಗದಲ್ಲಿ ಕೂತು ಅವರ ಮಾತುಗಳನ್ನ ಆಲಿಸಿದ್ರು. ನಂತ್ರ ಎಂಎಲ್‌ಎ ರಂಗನಾಥ್ ಜೊತೆಗೂಡಿ ಅವ್ರನ್ನ ಸನ್ಮಾನಿಸಿ, ಕಳುಹಿಸಿಕೊಟ್ಟರು. ಅದಕ್ಕೆ ಡಿಸಿಎಂ ಅವ್ರನ್ನ ಡಿಕೆ ಸಾಹೇಬರೇ ಅಂತ ಕೈ ಕೂಡ ಮುಗಿದರು ಕಿಚ್ಚ ಸುದೀಪ್.

ಅಂತೆ ಕಂತೆಗಳೆಲ್ಲಾ ಸುಳ್ಳು.. ಚಿತ್ರರಂಗ ಅಂದ್ರೆ ಡಿಕೆಶಿಗೆ ಗೌರವ

ಕಿಚ್ಚನಿಗೆ ಬೆನ್ನು ತಟ್ಟಿ, ಸನ್ಮಾನ.. ಡಿಕೆ ಸಾಹೇಬ್ರಿಗೆ ಕೈ ಮುಗಿದ ಕಿಚ್ಚ

ಒಟ್ಟಾರೆ ಜನ, ಸೋಶಿಯಲ್ ಮೀಡಿಯಾ ಅಂದುಕೊಂಡಂತೆ ಯಾವುದೂ ಇರಲ್ಲ. ಒಳಹೊಕ್ಕಿ ನೋಡಿದಾಗಲೇ ಅಲ್ಲಿರೋ ಬಂಧಗಳು, ಸಂಬಂಧಗಳ ಮೌಲ್ಯಗಳು ಗೊತ್ತಾಗಲಿವೆ. ಕಿಚ್ಚ-ಡಿಕೆಶಿ ಹೀಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರೋದು ಸದ್ಯ ಟಾಕ್ ಆಫ್ ದಿ ಟೌನ್ ಆಗಿದೆ. ಈ ಬಾಂಧವ್ಯ ಹೀಗೆಯೇ ಮುಂದುವರೆಯಲಿ ಅನ್ನೋದು ಎಲ್ಲರ ಆಶಯ.

 

 

 

 

Exit mobile version