777 ಚಾರ್ಲಿ ಡೈರೆಕ್ಟರ್ ಕಿರಣ್ ರಾಜ್ ಜೊತೆ ಧ್ರುವ ನೆಕ್ಸ್ಟ್ ಪ್ರಾಜೆಕ್ಟ್ ಫಿಕ್ಸ್

ಕಥೆ ಸಿದ್ಧಗೊಳಿಸಿರೋ ರಾಷ್ಟ್ರ ಪ್ರಶಸ್ತಿ ವಿಜೇತ ಕಿರಣ್ ರಾಜ್

ಮೃತ ವ್ಯಕ್ತಿ (8)

ಕೆಡಿರಿಲೀಸ್ ಡೇಟ್ ಅನೌನ್ಸ್ ಆದ ಬಳಿಕ ಕ್ರಮಿನಿಲ್ ಶೂಟಿಂಗ್ ಕಿಕ್‌ಸ್ಟಾರ್ಟ್ ಮಾಡಿದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ಆಲ್ಮೋಸ್ಟ್ ಶೂಟಿಂಗ್ ಕಂಪ್ಲೀಟ್ ಹಂತಕ್ಕೆ ಬಂದು ನಿಂತಿದ್ದಾರೆ. ಅಷ್ಟೇ ಅಲ್ಲ, ತಮ್ಮ ನೆಕ್ಸ್ಟ್ ವೆಂಚರ್ ಯಾರೊಂದಿಗೆ..? ಯಾವಾಗ ಅನ್ನೋದ್ರ ಹಿಂಟ್ ಕೂಡ ನೀಡಿದ್ದಾರೆ. ಈ ಕುರಿತ ಕಂಪ್ಲೀಟ್ ಇನ್‌ಸೈಡ್ ಮ್ಯಾಟರ್ ಇಲ್ಲಿದೆ ನೋಡಿ..

ಹೌದು.. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಥಿಯೇಟರ್ ಅಂಗಳಕ್ಕೆ ಬಂದು ಬಹಳ ದಿನಗಳೇ ಆಯ್ತು. ಮಾರ್ಟಿನ್ ನಂತ್ರ ಇತ್ತೀಚೆಗೆ ತೆರೆಕಂಡ ಸೀತಾ ಪಯಣ ಚಿತ್ರದಲ್ಲಿ ಬಂದರಾದ್ರೂ ಅದು ಜಸ್ಟ್ ಸ್ಪೆಷಲ್ ಅಪಿಯರೆನ್ಸ್. ಆದ್ರೀಗ ಬ್ಯಾಕ್ ಟು ಬ್ಯಾಕ್ ಎರಡೆರಡು ಸಿನಿಮಾಗಳನ್ನ ಚಿತ್ರಪ್ರೇಮಿಗಳಿಗೆ ಉಣಬಡಿಸೋಕೆ ಸಜ್ಜಾಗಿದ್ದಾರೆ ಧ್ರುವ.

ಒಂದ್ಕಡೆ ಜೋಗಿ ಪ್ರೇಮ್ ನಿರ್ದೇಶನದ ಕೆಡಿ ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿದೆ. ಅದಕ್ಕೂ ಮೊದಲೇ ಕ್ರಿಮಿನಲ್ ಶೂಟಿಂಗ್ ಶುಭಾರಂಭ ಮಾಡಿದ್ದ ಬಹದ್ದೂರ್ ಗಂಡು, ಸದ್ಯ ಅದನ್ನ ಒಂದೇ ಸ್ಟ್ರೆಚ್‌‌‌ನಲ್ಲಿ ಮಾಡಿ ಮುಗಿಸ್ತಿದ್ದಾರೆ. ಶಿರಸಿ, ಸಿದ್ಧಾಪುರ, ಶಿವಮೊಗ್ಗ ಕಡೆಯಲ್ಲೆಲ್ಲಾ ಶೂಟಿಂಗ್ ಮುಗಿಸಿ ಬಂದಿರೋ ಟೀಂ ಕ್ರಿಮಿನಲ್, ಸದ್ಯ ಬೆಂಗಳೂರಿನ ಸಪೋಟ ಗಾರ್ಡನ್‌ನಲ್ಲಿ ಚಿತ್ರೀಕರಣ ನಡೆಸುತ್ತಿದೆ. ಗ್ಯಾರಂಟಿ ನ್ಯೂಸ್‌ಗೆ ಬಂದ ಅಧಿಕೃತ ಮಾಹಿತಿ ಪ್ರಕಾರ ಇನ್ನೊಂದು ಎಂಟು ಹತ್ತು ದಿನದಲ್ಲಿ ಕಂಪ್ಲೀಟ್ ಕ್ರಿಮಿನಲ್ ಚಿತ್ರದ ಶೂಟಿಂಗ್ ಮುಗಿದು, ಕುಂಬಳಕಾಯಿ ಒಡೆಯಲಿದೆಯಂತೆ ಟೀಂ.

ಅಲ್ಲಿಗೆ ಕೆಡಿ, ಕ್ರಿಮಿನಲ್ ಎರಡೂ ಬ್ಯಾಕ್ ಟು ಬ್ಯಾಕ್ ಪ್ರೇಕ್ಷಕರನ್ನ ರಂಜಿಸೋಕೆ ಬರೋದು ಪಕ್ಕಾ ಆಗಿದೆ. ಹೀಗಿರುವಾಗ ಧ್ರುವ ತಮ್ಮ ಫ್ಯಾನ್ಸ್‌ಗೆ ಮತ್ತೊಂದು ಬಿಗ್ ನ್ಯೂಸ್ ನೀಡಿದ್ದಾರೆ. ತಮ್ಮ ಮುಂದಿನ ಸಿನಿಮಾನ ಯಾರೊಟ್ಟಿಗೆ ಮಾಡ್ತಿದ್ದಾರೆ ಅನ್ನೋದ್ರ ಹಿಂಟ್ ನೀಡಿದ್ದಾರೆ. ಯೆಸ್.. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಜೊತೆ 777 ಚಾರ್ಲಿ ಅನ್ನೋ ಸಿನಿಮಾ ಮಾಡಿ ವಿಶ್ವ ಸಿನಿದುನಿಯಾದ ಗಮನ ಸೆಳೆದಿದ್ದ ಕಿರಣ್ ರಾಜ್ ಸದ್ಯ ಧ್ರುವ ಮುಂದಿನ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳೋದು ಕನ್ಫರ್ಮ್ ಆಗಿದೆ.

ಹೌದು.. ಮನುಷ್ಯ ಹಾಗೂ ಶ್ವಾನದ ನಡುವಿನ ಬಾಂಧವ್ಯದ ಭಾವನಾತ್ಮಕ ಕಥೆ ಹೇಳಿದ್ದ ಕಿರಣ್ ರಾಜ್, ಅದನ್ನ ವಿಶ್ವದ ಮೂಲೆ ಮೂಲೆಗೆ ತಲುಪಿಸಿದ್ರು. 777 ಚಾರ್ಲಿ ಸಿನಿಮಾ ಚೈನೀಸ್ ಭಾಷೆಗೂ ಡಬ್ ಆಗಿ ರಿಲೀಸ್ ಆಗಿತ್ತು. ಇನ್ನೂ ಸ್ಟೇಟ್ ಜೊತೆ ನ್ಯಾಷನಲ್ ಅವಾರ್ಡ್ಸ್‌‌ ಕೂಡ ಈ ಸಿನಿಮಾಗೆ ಹರಿದುಬಂದಿತ್ತು. ಇಂತಹ ಮೋಸ್ಟ್ ಟ್ಯಾಲೆಂಟೆಡ್ ಡೈರೆಕ್ಟರ್ ಕಿರಣ್ ರಾಜ್ ಜೊತೆ ಕೈ ಜೋಡಿಸಿರೋ ಧ್ರುವ, ಸಂಥಿಂಗ್ ಇಂಟರೆಸ್ಟಿಂಗ್ ಕಥೆಯೊಂದಿಗೆ ಬರೋ ಮುನ್ಸೂಚನೆ ನೀಡಿದ್ದಾರೆ.

ಈಗಾಗ್ಲೇ ಒಂದು ಹಂತಕ್ಕೆ ಸ್ಕ್ರಿಪ್ಟ್ ಕೂಡ ರೆಡಿಯಾಗಿದ್ದು, ನಾಲ್ಕು ತಿಂಗಳಲ್ಲಿ ಸಿನಿಮಾ ಸೆಟ್ಟೇರುವ ಸೂಚನೆಯಿದೆ. ಅದೇನೇ ಇರಲಿ, ಒಳ್ಳೆಯ ಕಲಾವಿದರಿಗೆ ಒಳ್ಳೆಯ ಡೈರೆಕ್ಟರ್‌‌ಗಳು ಹಾಗೂ ಒಳ್ಳೆಯ ಕಥೆಗಳು ಸಿಕ್ಕಾಗ, ಅದಕ್ಕೆ ತಕ್ಕನಾಗಿ ಬೆಸ್ಟ ಸಿನಿಮಾಗಳು ಹೊರಬರೋಕೆ ಸಾಧ್ಯ. ಈ ಕಾಂಬಿನೇಷನ್ ಸಾಕಷ್ಟು ಬಝ್ ಕ್ರಿಯೇಟ್ ಮಾಡಿದ್ದು, ಯಾವ ಜಾನರ್ ಸಿನಿಮಾನ ಕೈ ಗೆತ್ತಿಕೊಳ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version