DJ ಟಿಲ್ಲು ಪೋರಿ ಜೊತೆ ಧ್ರುವ್ ವಿಕ್ರಮ್ ಡೇಟಿಂಗ್..?

ಅನುಪಮಾಗೆ ಧ್ರುವ್ ಲಿಪ್ ಲಾಕ್.. ಎಲ್ಲೆಡೆ ವೈರಲ್..!

Untitled design 2025 04 13t174228.318

ಧ್ರುವ್ ಕೂಡ ತಂದೆ ವಿಕ್ರಮ್‌‌ರಂತೆ ಹ್ಯಾಂಡ್ಸಮ್ ಹಂಕ್. ಚಿಗುರು ಮೀಸೆ ಯುವಕನಾದ್ರೂ ಸಿಕ್ಕಾಪಟ್ಟೆ ಫ್ಯಾನ್ ಫಾಲೋಯಿಂಗ್ ಇದೆ. ಇದೀಗ ತಾನು ಆ್ಯಕ್ಟ್ ಮಾಡ್ತಿರೋ ಸಿನಿಮಾದ ನಟಿ ಜೊತೆಗೇ ಡೇಟಿಂಗ್ ಶುರುವಿಟ್ಟಿದ್ದಾರಂತೆ. ಲಿಪ್ ಲಾಕ್ ಮಾಡಿರೋ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ.

ಅನುಪಮಾ ಪರಮೇಶ್ವರನ್.. ಅಪ್ಪಟ ಮಲಯಾಳಂ ಕುಟ್ಟಿ. ಪ್ರೇಮಂ ಚಿತ್ರದಿಂದ ಜರ್ನಿ ಶುರು ಮಾಡಿದ ಈಕೆ ಮೊದಲ ಸಿನಿಮಾದಲ್ಲೇ ನೋಡುಗರನ್ನ ಮಂತ್ರಮುಗ್ಧಗೊಳಿಸಿದ್ರು. ಅದಾದ ಬಳಿಕ ಸೌತ್‌ ಸಿನಿದುನಿಯಾದ ಬಹುಬೇಡಿಕೆಯ ನಟೀಮಣಿಯಾಗಿ ಸಾಲು ಸಾಲು ಸಿನಿಮಾಗಳಲ್ಲಿ ಕಳೆದ ಒಂದು ದಶಕದಿಂದ ಪ್ರೇಕ್ಷಕರನ್ನ ರಂಜಿಸುತ್ತಲೇ ಇದ್ದಾರೆ.

ಹತ್ತೇ ವರ್ಷದಲ್ಲಿ 26 ಸಿನಿಮಾ ಮಾಡಿರೋ ಈ ಚೆಲುವೆ ನಮ್ಮ ಕನ್ನಡಿಗರಿಗೂ ಚಿರಪರಿಚಿತ. ಪುನೀತ್ ರಾಜ್‌ಕುಮಾರ್ ನಟನೆಯ ನಟಸಾರ್ವಭೌಮ ಸಿನಿಮಾದಲ್ಲಿ ಬಣ್ಣ ಹಚ್ಚಿ, ಎಲ್ಲರ ದಿಲ್ ದೋಚಿದ್ದರು. ಇತ್ತೀಚೆಗೆ ತಮಿಳು ಬ್ಲಾಕ್ ಬಸ್ಟರ್ ಡ್ರ್ಯಾಗನ್‌‌ನಲ್ಲೂ ಈಕೆ ಬಣ್ಣ ಹಚ್ಚಿದ್ದು, ರೀಸೆಂಟ್ ರಿಲೀಸ್ ಆದ ಡಿಜೆ ಟಿಲ್ಲು ಸಿನಿಮಾದ ಸೀಕ್ವೆಲ್ ಟಿಲ್ಲು ಸ್ಕ್ವೇರ್‌‌‌ನಲ್ಲಿ ಹಸಿ ಬಿಸಿ ದೃಶ್ಯಗಳಿಂದ ನೋಡುಗರ ನಿದ್ದೆ ಕೆಡಿಸಿದ್ದರು.

ಫ್ರೀಡಂ @ ಮಿಡ್ ನೈಟ್ ಅನ್ನೋ ಪಂಚಭಾಷಾ ಕಿರುಚಿತ್ರದಿಂದ ತಾನು ಎಂಥಾ ಅಭಿನಯ ಚತುರೆ ಅನ್ನೋದನ್ನ ಪ್ರೂವ್ ಮಾಡಿದ್ರು. ಸದ್ಯ ಈ ವರ್ಷ ಕೂಡ ಐದು ಸಿನಿಮಾಗಳಲ್ಲಿ ಬ್ಯುಸಿ ಇರೋ ಈಕೆ, ಚಿಯಾನ್ ವಿಕ್ರಮ್ ಮಗ ಧ್ರುವ್ ವಿಕ್ರಮ್ ಜೊತೆ ಬೈಸನ್ ಮೂವಿ ಮಾಡ್ತಿದ್ದಾರೆ. ಅದು ಶೂಟಿಂಗ್ ಮುಗಿಯೋದ್ರ ಒಳಗೆ ಏನೇನೋ ಆಗುವ ಮುನ್ಸೂಚನೆ ಸಿಕ್ಕಿದೆ.

ಹೌದು.. ಇನ್ನೂ ಮೊನ್ನೆ ಮೊನ್ನೆಯಷ್ಟೇ ಬಣ್ಣದ ಲೋಕಕ್ಕೆ ಕಾಲಿಟ್ಟಿರೋ ಧ್ರುವ್, ಮೂರು ಸಿನಿಮಾ ಮಾಡಿದ್ದು, ನಾಲ್ಕನೇ ಸಿನಿಮಾದ ನಟಿಗೇ ಕಾಳು ಹಾಕೋಕೆ ಶುರುವಿಟ್ಟಿದ್ದಾರಂತೆ. ತನಗಿಂತ ಎರಡು ವರ್ಷದ ಕಿರಿಯನಾದ ಧ್ರುವ್ ಜೊತೆ ಅನುಪಮಾ ಪರಮೇಶ್ವರನ್ ಡೇಟಿಂಗ್ ಮಾಡ್ತಿದ್ದಾರೆ ಎನ್ನಲಾಗ್ತಿದೆ. ಅದಕ್ಕೆ ಪೂರಕವಾಗಿ ಅವರಿಬ್ಬರ ಲಿಪ್‌ ಲಾಕ್ ಸ್ಟಿಲ್ ಫೋಟೋ ಎಲ್ಲೆಡೆ ವೈರಲ್ ಆಗ್ತಿದೆ. ಸ್ಪಾಟಿಪೈ ಮ್ಯೂಸಿಕ್ ಪ್ಲಾಟ್‌‌ಫಾರ್ಮ್ ನಲ್ಲಿ ಬ್ಲೂ ಮೂನ್ ಹೆಸರಿನಲ್ಲಿ ಇವರ ಮತ್ತೇರಿಸೋ ಮುತ್ತಿನ ಫೋಟೋ ಸೋರಿಕೆ ಆಗಿದ್ದು, ಶಬ್ಧದಷ್ಟೇ ವೇಗವಾಗಿ ಎಲ್ಲೆಡೆ ಅದು ಹಬ್ಬಿದೆ.

ಬೈಸನ್ ಮೂವಿ ಚಿತ್ರೀಕರಣದ ವೇಳೆ ಇಬ್ಬರೂ ಪರಸ್ಪರ ಕ್ಲೋಸ್ ಆಗಿದ್ದು, ಇವರ ಹಸಿಬಿಸಿ ಲಿಪ್ ಕಿಸ್ ಫೋಟೋ ನೋಡಿ ಸ್ವತಃ ಸೂಪರ್ ಸ್ಟಾರ್ ವಿಕ್ರಮ್ ಅವರೇ ದಂಗಾಗಿದ್ದಾರಂತೆ. ಇನ್ನು ನೆಟ್ಟಿಗರು ಅದಕ್ಕೆ ಮನಬಂದಂತೆ ಕಮೆಂಟ್ಸ್ ಮಾಡ್ತಿದ್ದು, ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಒಂದ್ವೇಳೆ ಮದುವೆ ಏನಾದ್ರು ಆಗ್ತಾರಾ ಅನ್ನೋ ಮಾತುಗಳು ಕೂಡ ಕೇಳಿಬರ್ತಿವೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

 

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..
Exit mobile version