ಡಿಕೆ ಮನೆಯಲ್ಲಿ ಧ್ರುವ ಸರ್ಜಾ.. ಇಲ್ಲಿದೆ ಮೀಟಿಂಗ್ ಸೀಕ್ರೆಟ್

ಕನಕಪುರ ಫಾರ್ಮ್ ಹೌಸ್‌‌ ಡಿ ನೋಟಿಫೈಗೆ ಧ್ರುವ ಒದ್ದಾಟ..?

1 (3)

ಇತ್ತೀಚೆಗೆ ನಟ ಧ್ರುವ ಸರ್ಜಾ ಸದಾಶಿವನಗರದಲ್ಲಿರೋ ಡಿಕೆ ಸುರೇಶ್ ಮನೆಗೆ ಭೇಟಿ ನೀಡಿದ್ದರು. ಇದೊಂದು ಕ್ಯಾಶುವಲ್ ಮೀಟಿಂಗ್ ಅನಿಸಿದ್ರೂ, ಇದರ ಹಿಂದೆ ಬೇರೆನೇ ಕಥೆಯಿದೆ. ಇಷ್ಟಕ್ಕೂ ಆ ಮೀಟಿಂಗ್ ಹಿಂದಿನ ಅಸಲಿ ಸೀಕ್ರೆಟ್ ಏನು ಅಂತೀರಾ..? ಗ್ಯಾರಂಟಿ ನ್ಯೂಸ್ ಬಿಚ್ಚಿಡ್ತಿದೆ.

ಧ್ರುವ ಸರ್ಜಾ.. ಪೊಗರು ಸಿನಿಮಾದ ಬಳಿಕ ಮಾರ್ಟಿನ್, ಕೆಡಿಯಿಂದಾಗಿ ನ್ಯಾಷನಲ್ ಸ್ಟಾರ್ ಆಗಿ ಮಿಂಚ್ತಿರೋ ಸ್ಯಾಂಡಲ್‌ವುಡ್‌ನ ಸ್ಟಾರ್ ನಟ. ಹೈ ವೋಲ್ಟೇಜ್ ಮಾಸ್ ಎಂಟರ್‌ಟೈನರ್‌ಗಳಿಂದ ಮಾಸ್ ಫ್ಯಾನ್ ಫಾಲೋಯಿಂಗ್ ಇರೋ ಮಾಸ್ ಹೀರೋ. ಶಕ್ತಿ ಪ್ರಸಾದ್ ಕುಟುಂಬದ ಕುಡಿಯ ಒಂದೊಂದು ಸಿನಿಮಾ ರಿಲೀಸ್ ಕೂಡ ಹಬ್ಬದ ರೀತಿ ಫ್ಯಾನ್ಸ್ ಸೆಲೆಬ್ರೇಟ್ ಮಾಡ್ತಾರೆ. ಸದ್ಯ ಕೆಡಿ ಲೇಟ್ ಆದ್ರೂ ಲೇಟೆಸ್ಟ್ ಆಗಿ ಎಂಟ್ರಿ ಕೊಡಲಿದೆ.

ಸಿನಿಮಾಗಳ ಜೊತೆ ಫ್ಯಾಮಿಲಿಗೂ ಟೈಮ್ ಕೊಡುವ ಧ್ರುವ ಸರ್ಜಾ, ಇದೇ ಆಗಸ್ಟ್ 11ರಂದು ಡಿ.ಕೆ. ಸುರೇಶ್ ಅವರನ್ನ ಸದಾಶಿವನಗರದ ಅವರ ನಿವಾಸದಲ್ಲಿ ಭೇಟಿ ಮಾಡಿದ್ದಾರೆ. ‘ನಟರಾದ ಶ್ರೀ ಧ್ರುವ ಸರ್ಜಾ ಅವರು ಇಂದು ನನ್ನನ್ನು ಗೃಹಕಚೇರಿಯಲ್ಲಿ ಭೇಟಿ ಮಾಡಿ, ಔಪಚಾರಿಕವಾಗಿ ಮಾತುಕತೆ ನಡೆಸಿದರು’ ಹೀಗಂತ ಡಿಕೆ ಸುರೇಶ್ ಕೂಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫೋಟೋಸ್ ಸಮೇತ ಬರೆದುಕೊಂಡಿದ್ದಾರೆ. ಆದ್ರೆ ಅದು ಭೂಮಿ ವಿಚಾರಕ್ಕೆ ಅನ್ನೋದು ಇಂಟರೆಸ್ಟಿಂಗ್.

ಹೌದು.. ಕನಕಪುರದ ಬಳಿ ಸುಮಾರು ಏಳೆಂಟು ಎಕರೆ ಫಾರ್ಮ್ ಹೌಸ್ ಖರೀದಿಸಿದ್ದ ಧ್ರುವ ಸರ್ಜಾ, ಅದರಲ್ಲೇ ತಮ್ಮ ಅಚ್ಚುಮೆಚ್ಚಿನ ಸಹೋದರ ಚಿರು ಸರ್ಜಾರ ಸ್ಮಾರಕ ಕೂಡ ಕಟ್ಟಿಸಿದ್ದಾರೆ. ಅದನ್ನ ವೇರ್ ಹೌಸ್ ಕನ್ವರ್ಷನ್ ಮಾಡಿಸಿರೋ ಧ್ರುವ ಸರ್ಜಾ, ಡಿ ನೋಟಿಫೈ ಮಾಡಿಸಿಲ್ಲ. ಇದೀಗ ಆ ಜಮೀನು ಸೇರಿದಂತೆ ಅದರ ಸುತ್ತಮುತ್ತಲಿರೋ ಭೂಮಿಯೆಲ್ಲಾ ಕನಕಪುರ ಏರ್‌‌ಪೋರ್ಟ್‌ಗೆ ಸ್ವಾಧೀನ ಆಗಲಿದೆ ಎನ್ನಲಾಗ್ತಿದೆ. ಇದು ತಿಳಿಯುತ್ತಿದ್ದಂತೆ, ತಮ್ಮ ಭೂಮಿ ಡಿ ನೋಟಿಫೈ ಮಾಡಿಸಲು ಕನಕಪುರದ ಸ್ಟಾರ್‌ಗಳಾದ ಡಿಕೆ ಬ್ರದರ್ಸ್‌ ಮೊರೆ ಹೋಗಿದ್ದಾರೆ ಧ್ರುವ ಎನ್ನಲಾಗಿದೆ.

ಒಂದ್ಕಡೆ ಸಿನಿಮಾಗಳ ಶೂಟಿಂಗ್, ಡಬ್ಬಿಂಗ್, ಪ್ರಮೋಷನ್ಸ್. ಮತ್ತೊಂದ್ಕಡೆ ಫ್ಯಾಮಿಲಿ, ಫ್ರೆಂಡ್ಸ್, ವೈಯಕ್ತಿಕ ಪ್ರಾಪರ್ಟಿಗಳ ರಕ್ಷಣೆ. ಮಗದೊಂದು ಕಡೆ ಫ್ಯಾನ್ಸ್. ಎಲ್ಲವನ್ನೂ ಮೇಂಟೇನ್ ಮಾಡೋದು ಸ್ಟಾರ್‌‌ ಆಗಿ ಎಷ್ಟು ಕಷ್ಟ ಅಲ್ಲವೇ..? ಯೆಸ್.. ಇದೆಲ್ಲಾ ಓಕೆ.. ಇನ್ ಕೇಸ್, ಮುಂದೊಂದು ದಿನ ಧ್ರುವ ಕನಕಪುರ ಫಾರ್ಮ್ ಹೌಸ್‌‌ನ ಸರ್ಕಾರ ಭೂ ಸ್ವಾಧೀನ ಮಾಡಿದ್ರೆ ಏನು ಗತಿ..? ಅಲ್ಲಿರೋ ಚಿರಂಜೀವಿ ಸರ್ಜಾ ಪುಣ್ಯಭೂಮಿ ಕಥೆ ಏನು ಅನ್ನೋದೇ ಯಕ್ಷ ಪ್ರಶ್ನೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version