ದಚ್ಚು ಭಂಟ.. ಸ್ಯಾಂಡಲ್‌ವುಡ್‌ನ ಶೋಕ್ದಾರ್ ಧನ್ವೀರ್‌ಗೆ ವಿಜಯಲಕ್ಷ್ಮೀ ಮ್ಯಾನೇಜರ್ ಕೇಸ್ ವಿಚಾರ ಹೈ ಕೋರ್ಟ್ ಬಿಗ್ ರಿಲೀಫ್ ನೀಡಿದೆ. ಒಂದ್ಕಡೆ ಧನ್ವೀರ್ ನಿರಾಳ ಆಗ್ತಿದ್ದಂತೆ.. ಮತ್ತೊಂದ್ಕಡೆ ವಿಜಯಲಕ್ಷ್ಮೀ ದರ್ಶನ್ ಸ್ಯಾಡ್ ಮೋಡ್‌ಗೆ ಜಾರಿದ್ದಾರೆ. ಲಂಕೇಶ್ ಪತ್ರಿಕೆ ಚಿತ್ರದ ಆ ಮೋಡದಿಂದ ಸಾಂಗ್ ಜೊತೆ ಫೋಟೋನ ಸ್ಟೋರೀಸ್‌ಗಾಗಿ ಚಿಂತಾಕ್ರಾಂತರಾಗಿದ್ದಾರೆ. ಈ ಕುರಿತ ಒಂದು ವರದಿ ಇಲ್ಲಿದೆ.
- ಧನ್ವೀರ್‌ಗೆ ಬಿಗ್ ರಿಲೀಫ್.. ಸ್ಯಾಡ್ ಮೋಡ್‌ನಲ್ಲಿ ವಿಜಿ
- ವಿಜಯಲಕ್ಷ್ಮೀ & ಮ್ಯಾನೇಜರ್ ಕೇಸ್ಗಳಲ್ಲಿ ರಿಲೀಫ್..!
- 3 FIR ತನಿಖೆಗೆ ಹೈ ಕೋರ್ಟ್ ಮಧ್ಯಂತರ ತಡೆಯಾಜ್ಞೆ
- ಶೋಕ್ದಾರ್ ಈಗ ಫುಲ್ ಸೈಲೆಂಟ್.. ಬೇಸರದಲ್ಲಿ ವಿಜಿ..!
ಒಡಹುಟ್ಟಿದವರನ್ನೇ ಮೀರಿಸಿದ ರಾಮ-ಲಕ್ಷ್ಮಣರಂತಹ ಆದರ್ಶ ಸಹೋದರರಾಗಲು ಹೊರಟಿದ್ದ ಡಿಬಾಸ್ ದರ್ಶನ್ ಹಾಗೂ ಶೋಕ್ದಾರ್ ಧನ್ವೀರ್ ನಡುವಿನ ಸಂಬಂಧ ಕಿತ್ತು ಹೋಗಿದೆ. ಅದಕ್ಕೆ ಕಾರಣ ಆಗಿರೋದು ಧನ್ವೀರ್‌ನ ನಾಲಗೆ ಮತ್ತು ನಡೆ. ಹೌದು.. ರೇಣುಕಾಸ್ವಾಮಿ ಮರ್ಡರ್ ಕೇಸ್‌ನಲ್ಲಿ ನಟ ದರ್ಶನ್ ಜೈಲು ಪಾಲಾದ ಬಳಿಕ ಇಡೀ ದಾಸನ ಕುಟುಂಬಕ್ಕೆ ಬೆನ್ನೆಲುಬಾಗಿ ನಿಂತಿದ್ದು ನಟ ಧನ್ವೀರ್ ಗೌಡ ಒಬ್ಬರೇ. ಆದ್ರೆ ಆಂತರಿಕವಾಗಿ ಅಲ್ಲಿ ಅವರವರ ನುಡವೆ ಏನೆಲ್ಲಾ ಭಿನ್ನಾಭಿಪ್ರಾಯಗಳು ಬಂದವೋ ಗೊತ್ತಿಲ್ಲ. ಈಗ ಧನ್ವೀರ್ ಹಾಗೂ ದರ್ಶನ್ ಅಥ್ವಾ ಧನ್ವೀರ್ ಹಾಗೂ ದಚ್ಚು ಕುಟುಂಬಕ್ಕೆ ಅಷ್ಟಕ್ಕಷ್ಟೇ.
ಅಂದಹಾಗೆ ವಿಜಯಲಕ್ಷ್ಮೀ, ಆಕೆಯ ಮ್ಯಾನೇಜರ್ ಹಾಗೂ ಧನ್ವೀರ್ ನಡುವಿನ ಕೋಲ್ಡ್ ವಾರ್.. ಧಗ ಧಗನೆ ಒತ್ತಿ ಉರಿದಿದ್ದು ಗೊತ್ತೇಯಿದೆ. ಪೋಸ್ಟ್ ವಾರ್, ಟಾಕ್ ವಾರ್‌ಗಳು ಜೋರಾಗಿ, ಆಡಿಯೋ ಕ್ಲಿಪ್ಸ್ ಲೀಕ್ ಆಗಿ ಸಂಬಂಧಗಳು ಹಾಳಾದವು. ಅದ್ರಲ್ಲೂ ವಿಜಯಲಕ್ಷ್ಮೀ ಮೇಲೆ ಧನ್ವೀರ್.. ಧನ್ವೀರ್ ಮೇಲೆ ವಿಜಿ ಮತ್ತು ಆಕೆ ಮ್ಯಾನೇಜರ್ ಪರಸ್ಪರ ಕೆಸರೆರಚಾಡಿದ್ರು. ಅದೇ ವಿಚಾರ ಧನ್ವೀರ್ ಮೇಲೆ ಒಂದಲ್ಲ ಎರಡಲ್ಲ ಮೂರು ಕಡೆ ಎಫ್‌ಐಆರ್‌ಗಳು ಕೂಡ ಆಗಿದ್ದವು.
ಆರ್ ಆರ್ ನಗರ, ಬಸವೇಶ್ವರ ನಗರ ಹಾಗೂ ಬ್ಯಾಟರಾಯನಪುರ ಪೊಲೀಸ್ ಠಾಣೆಗಳಲ್ಲಿ ವಿಜಯಲಕ್ಷ್ಮೀ ಮ್ಯಾನೇಜರ್ ನಾಗರಾಜ್ ನೀಡಿದ್ದ ದೂರಿನನ್ವಯ ಧನ್ವೀರ್ ಮೇಲೆ ಎಫ್‌ಐಆರ್‌ಗಳು ದಾಖಲಾಗಿದ್ದವು. ಆದ್ರೆ ಅವುಗಳ ರದ್ದು ಕೋರಿ ಹೈ ಕೋರ್ಟ್ ಮೆಟ್ಟಿಲೇರಿದ್ದರು ನಟ ಧನ್ವೀರ್. ಈ ಕುರಿತು ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿ ಅನಂತ್ ರಾಮನಂತನ್ ಹೆಗ್ಡೆ ಪೀಠ ಧನ್ವೀರ್‌ಗೆ ಬಿಗ್ ರಿಲೀಫ್ ನೀಡಿದೆ. ಸದ್ಯ ಮೂರು ಎಫ್‌ಐಆರ್‌ಗಳ ತನಿಖೆಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ಇದ್ರಿಂದ ದಚ್ಚು ಭಂಟ ಧನ್ವೀರ್ ಕೊಂಚ ನಿರಾಳಗೊಂಡಿದ್ದಾರೆ.
ಆದ್ರೆ ವಿಜಯಲಕ್ಷ್ಮೀ ದರ್ಶನ್‌ಗೆ ಈ ವಿಚಾರ ಬೇಸರ ತಂದಿದೆ. ಯಾಕಂದ್ರೆ ಧನ್ವೀರ್‌ಗೆ ಕೋರ್ಟ್‌ನಲ್ಲಿ ರಿಲೀಫ್ ಸಿಕ್ಕಿರೋದು ಸಹಜವಾಗಿಯೇ ಅವರಿಗೆ ಅಸಮಾಧಾನ ತಂದಿದೆ. ಮತ್ತೊಂದೆಡೆ ದರ್ಶನ್ ಹೊರಗೆ ಬರುವ ಯಾವುದೇ ಸುಳಿವು, ಸೂಚನೆ ಸಿಗ್ತಿಲ್ಲ. ಹಾಗಾಗಿ ಇಂದಿಗೂ ಪತಿಗಾಗಿ ಟೆಂಪಲ್ ರನ್ ಮಾಡ್ತಾನೇ ಇದ್ದಾರೆ ವಿಜಿ. ಆಗಾಗ ಲಂಕೇಶ್ ಪತ್ರಿಕೆ ಚಿತ್ರದ ಆ ಮೋಡದಿಂದ ಸಾಂಗ್‌ನ ತಮ್ಮ ಫೋಟೋಗೆ ಹಾಕಿಕೊಂಡು ಇನ್ಸ್‌ಟಾ ಸ್ಟೋರೀಸ್‌ನಲ್ಲಿ ದರ್ಶನ್ ನೆನಪಲ್ಲಿ ಕೊರಗೋದನ್ನ ವ್ಯಕ್ತಪಡಿಸ್ತಾನೆ ಇದಾರೆ ವಿಜಯಲಕ್ಷ್ಮೀ ದರ್ಶನ್.
ಲೈಫ್ ಅಂದ್ಮೇಲೆ ಅಪ್ & ಡೌನ್ಸ್ ಸರ್ವೇ ಸಾಮಾನ್ಯ. ಆದ್ರೆ ದರ್ಶನ್ ಕಳಂಕಮುಕ್ತನಾಗಿ ಹೊರಬಂದ್ರೆ ಚಿತ್ರರಂಗಕ್ಕೆ ಬಹುದೊಡ್ಡ ಪ್ಲಸ್ ಆಗಲಿದೆ. ಅವರ ಅಸಂಖ್ಯಾತ ಅಭಿಮಾನಿಗಳು ಕೂಡ ದಿಲ್‌ಖುಷ್ ಆಗ್ತಾರೆ. ದಾಸನನ್ನ ಮತ್ತೆ ಮೆರೆಸೋಕೆ ತುದಿಗಾಲಲ್ಲಿ ನಿಂತಿದ್ದಾರೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
