‘ಹಯಗ್ರೀವ’ನ ಅವತಾರ.. ಖಾಕಿಯಲ್ಲಿ ದಚ್ಚು ಭಂಟ ಧನ್ವೀರ್

ಆ್ಯಕ್ಷನ್ ಥ್ರಿಲ್ಲರ್‌ಗೆ ಮೈಥಲಾಜಿಕಲ್ ಟಚ್.. ಟೀಸರ್ ಸೂಪರ್

Untitled design 2026 01 28T143251.091

ಡಿಬಾಸ್ ದರ್ಶನ್ ಭಂಟ, ಕರುನಾಡ ಶೋಕ್ಧಾರ್ ಧನ್ವೀರ್ ಗೌಡ ಸದ್ಯ ಹಯಗ್ರೀವನ ಅವತಾರ ತಾಳಿದ್ದಾರೆ. ಆ್ಯಕ್ಷನ್ ಥ್ರಿಲ್ಲರ್ ಸಿನಿಮಾಗೆ ಮೈಥಲಾಜಿಕಲ್ ಟಚ್ ನೀಡಲಾಗಿದ್ದು, ಟೀಸರ್ ಸಖತ್ ಇಂಪ್ರೆಸ್ಸೀವ್ ಆಗಿದೆ.

ಒಬ್ಬ ಪೊಲೀಸ್ ಕ್ರಿಮಿನಲ್‌ನ ಹಿಡಿಯೋಕೆ ಎಷ್ಟು ದೂರ ಬೇಕಾದ್ರೂ ಹೋಗ್ತಾನೆ. ಅಂದ್ರೆ ಬೇರೆ ಊರು, ರಾಜ್ಯ ಅಥ್ವಾ ದೇಶಕ್ಕೆ ಹೋಗಬಹುದು. ಆದ್ರೆ ಇಲ್ಲೊಬ್ಬ ಬೇಗ ಯುಗಕ್ಕೇ ಹೊರಟಿದ್ದಾನೆ. ಅವನೇ ಅರ್ಜುನ್ ಹಯಗ್ರೀವ. ಇದು ಹಯಗ್ರೀವ ಅನ್ನೋ ಸಿನಿಮಾದ ಟೀಸರ್ ಝಲಕ್. ಸ್ಯಾಂಡಲ್‌ವುಡ್ ಶೋಕ್ಧಾರ್ ಧನ್ವೀರ್ ಗೌಡ ನಟನೆಯ ನೆಕ್ಸ್ಟ್ ವೆಂಚರ್. ಫೆಬ್ರವರಿ 27ಕ್ಕೆ ಬಿಗ್‌ಸ್ಕ್ರೀನ್‌ಗೆ ಎಂಟ್ರಿ ಕೊಡ್ತಿರೋ ಈ ಚಿತ್ರ ನೋಡುಗರ ಹುಬ್ಬೇರಿಸಿದ್ದು, ಡಿಫರೆಂಟ್ ಕಂಟೆಂಟ್‌‌ನಿಂದ ಗಮನ ಸೆಳೆಯುತ್ತಿದೆ.

‘ಹಯಗ್ರೀವ’ನ ಅವತಾರ.. ಖಾಕಿಯಲ್ಲಿ ದಚ್ಚು ಭಂಟ ಧನ್ವೀರ್

ಆ್ಯಕ್ಷನ್ ಥ್ರಿಲ್ಲರ್‌ಗೆ ಮೈಥಲಾಜಿಕಲ್ ಟಚ್.. ಟೀಸರ್ ಸೂಪರ್

ಹಯಗ್ರೀವ.. ಜ್ಞಾನ ಮತ್ತು ಬುದ್ಧಿವಂತಿಕೆಯ ಅಧಿ ದೇವತೆಯಾಗಿ ಪೂಜಿಸಲ್ಪಡುವ ವಿಷ್ಣುವಿನ ಕುದುರೆಮುಖದ ಅವತಾರವಿದು. ಸದ್ಯ ಕ್ರಮಿನಲ್‌ನ ಹಿಡಿಯೋಕೆ ಪೊಲೀಸ್ ಆಫೀಸರ್ ಒಬ್ಬ ಹೀಗೆ ಬೇರೆ ಯುಗಕ್ಕೆ ತೆರಳುವ ಮೈಥಲಾಜಿಕಲ್ ಟಚ್ ಈ ಚಿತ್ರಕ್ಕಿರೋದು ಇಂಟರೆಸ್ಟಿಂಗ್. ಅಂದಹಾಗೆ ಹಯಗ್ರೀವ ಸಿನಿಮಾ ಔಟ್ ಅಂಡ್ ಔಟ್ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಮೇಕಿಂಗ್‌‌ನಿಂದ ಪ್ರಾಮಿಸಿಂಗ್ ಅನಿಸಿದೆ. ಅರ್ಜುನ್ ಹಯಗ್ರೀವ ಅನ್ನೋ ಖಡಕ್ ಪೊಲೀಸ್ ಆಫೀಸರ್ ಆಗಿ ಧನ್ವೀರ್ ಖಾಕಿ ರೇಜ್ ಮೈಂಡ್ ಬ್ಲೋಯಿಂಗ್ ಅನಿಸಲಿದೆ.

ಸಮೃದ್ಧಿ ಮಂಜುನಾಥ್ ನಿರ್ಮಾಣದ ಹಯಗ್ರೀವ ಚಿತ್ರಕ್ಕೆ ರಘು ಕುಮಾರ್ ಆ್ಯಕ್ಷನ್ ಕಟ್ ಹೇಳಿದ್ದು, ನಾಯಕನಟಿಯಾಗಿ ಬ್ಯಾಂಗಲ್ ಬಂಗಾರಿ ಸಂಜನಾ ಆನಂದ್ ಕಾಣಸಿಗಲಿದ್ದಾರೆ. ಜೂಡಾ ಸ್ಯಾಂಡಿ ಸಂಗೀತ, ಗಿರೀಶ್ ಗೌಡ ಸಿನಿಮಾಟೋಗ್ರಫಿ ಈ ಸಿನಿಮಾಗಿದೆ. ಚಿತ್ರದಲ್ಲಿ ಸಾಧು ಕೋಕಿಲ, ಶರತ್ ಲೋಹಿತಾಶ್ವ, ರಮೇಶ್ ಭಟ್, ಅಶ್ವಿನಿ ಗೌಡ, ಶೋಭರಾಜ್, ಸಂಗೀತ, ಅಶ್ವಿನಿ ಹಾಸನ್ ಹಾಗೂ ಬಿಗ್‌ಬಾಸ್ ವಿನ್ನರ್ ಗಿಲ್ಲಿ ನಟ ಸೇರಿದಂತೆ ದೊಡ್ಡ ತಾರಾಗಣವಿದೆ.

ಫೆ-27ಕ್ಕೆ ಹಯಗ್ರೀವ ತೆರೆಗೆ.. ದಚ್ಚು ಇಲ್ಲದೆ ಸಿನಿಮಾ ರಿಲೀಸ್

‘ವಾಮನ’ಗೆ ಡಿಬಾಸ್ ಸಾಥ್.. ಕೈ ಹಿಡೀತಾರೆ ದಚ್ಚು ಫ್ಯಾನ್ಸ್..!

ಡಿಬಾಸ್ ದರ್ಶನ್ ಅಪ್ಪಟ ಭಂಟ ಅಂತಲೇ ಕರೆಯಲ್ಪಡುವ ಧನ್ವೀರ್ ಗೌಡ, ಅವ್ರನ್ನ ಸ್ವಂತ ಅಣ್ಣನ ಸ್ಥಾನದಲ್ಲಿ ನೋಡ್ತಾರೆ. ಕಳೆದ ವರ್ಷ ತೆರೆಕಂಡ ವಾಮನ ಸಿನಿಮಾದ ಪ್ರಮೋಷನ್ಸ್‌ಗೆ ದರ್ಶನ್ ಸಾಥ್ ನೀಡಿದ್ರು. ಆದ್ರೀಗ ಈ ಬಾರಿ ದಚ್ಚು ಹೊರಗಿಲ್ಲ. ಡಿಬಾಸ್ ಫ್ಯಾನ್ಸ್ ಕೈ ಹಿಡೀತಾರಾ ಅನ್ನೋದನ್ನ ನಿರೀಕ್ಷಿಸಬೇಕಿದೆ.

 

 

 

 

 

Exit mobile version