ಒಂದಲ್ಲ ಎರಡೆರಡು ನ್ಯಾಷನಲ್ ಅವಾರ್ಡ್‌ಗಳನ್ನ ಮುಡಿಗೇರಿಸಿಕೊಂಡಿರೋ ಕಾಲಿವುಡ್ ಸ್ಟಾರ್ ಧನುಷ್‌ಗೆ ಟೀಕೆಗಳ ಗದಾಪ್ರಹಾರ ನಡೆಯುತ್ತಿತ್ತು. ಇದೀಗ ಮೌನ ಮುರಿದಿರೋ ಧನುಷ್, ವಿವಾದ ಬೇಡ.. ಸಾಧನೆಯನ್ನ ಸಂಭ್ರಮಿಸಿ ಎಂದು ಮಾರ್ಮಿಕವಾಗಿ ಮಾತನಾಡಿದ್ದಾರೆ. ಅಷ್ಟೇ ಅಲ್ಲ.. ಧನುಷ್ ನೀಡಿರೋ ಸ್ಟೇಟ್ಮೆಂಟ್ ಸದ್ಯ ಸ್ಟಾರ್ ವಾರ್ ಹಾಗೂ ಸ್ಟಾರ್‌ಗಳ ಫ್ಯಾನ್ಸ್ ವಾರ್‌ಗೆ ಮುನ್ನುಡಿ ಬರೆದಿದೆ.
ಧನುಷ್ ನ್ಯಾಷನಲ್ ಅವಾರ್ಡ್ ಕಿರಿಕ್.. ಸ್ಟಾರ್ ವಾರ್ ಶುರು
‘ವಿವಾದ ಬೇಡ ಸಾಧನೆಯನ್ನ ಸಂಭ್ರಮಿಸಿ’.. ನಟ ಧನುಷ್ ಕಿಡಿ
ರಾಯನ್‌ಗಿಂತ ಮೇಯಳಗನ್, ಮಹಾರಾಜ ಉತ್ತಮ ಚಿತ್ರಗಳು
ಒಳ್ಳೆಯ ಚಿತ್ರಕ್ಕೆ ಅವಾರ್ಡ್ ಬಾರದಿದ್ದಾಗ ಯಾರೂ ಧ್ವನಿ ಎತ್ತಿಲ್ಲ
ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಮಾಜಿ ಅಳಿಯ.. ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್.. ಮೋಸ್ಟ್ ವರ್ಸಟೈಲ್ ಆ್ಯಕ್ಟರ್ ಧನುಷ್‌ಗೆ 2024ನೇ ಸಾಲಿನ ರಾಷ್ಟ್ರಪ್ರಶಸ್ತಿ ಪಟ್ಟಿಯಲ್ಲಿ ಒಂದಲ್ಲ ಎರಡೆರಡು ಚಿತ್ರಗಳಿಗೆ ನ್ಯಾಷನಲ್ ಅವಾರ್ಡ್ಸ್ ಅನೌನ್ಸ್ ಆದವು. ಹೌದು.. ಕ್ಯಾಪ್ಟನ್ ಮಿಲ್ಲರ್ ಚಿತ್ರದ ನಟನೆಗಾಗಿ ವಿಶೇಷ ತೀರ್ಪುಗಾರರ ಪ್ರಶಸ್ತಿ ಹಾಗೂ ರಾಯನ್ ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಲಭಿಸಿತು. ಆದ್ರೆ ಯಾವಾಗ ಪ್ರಶಸ್ತಿ ಪಟ್ಟಿ ಪ್ರಕಟವಾಯ್ತೋ, ಅಂದಿನಿಂದಲೇ ನಿಜಕ್ಕೂ ಅವು ಪ್ರಶಸ್ತಿಗಳಿಗೆ ಯೋಗ್ಯ ಸಿನಿಮಾಗಳಾ ಅನ್ನೋ ಚರ್ಚೆ ಭುಗಿಲೆದ್ದಿದೆ. ಅದೊಂಥರಾ ವಿವಾದಕ್ಕೆ ನಾಂದಿ ಹಾಡಿತ್ತು.
ಆದ್ರೀಗ ನಟ ಧನುಷ್ ಈ ಬಗ್ಗೆ ಮೌನ ಮುರಿದಿದ್ದಾರೆ. ಸಾಮಾಜಿಕ ಜಾಲತಾಣಗಳು ಹಾಗೂ ಚಿತ್ರರಂಗದಲ್ಲಿ ನಡೆಯುತ್ತಿರೋ ನ್ಯಾಷನಲ್ ಅವಾರ್ಡ್ಸ್ ವಿವಾದಗಳ ಚರ್ಚೆ ಬಗ್ಗೆ ಇದೇ ಮೊದಲ ಬಾರಿಗೆ ಮುಕ್ತವಾಗಿ ಮಾತನಾಡಿದ್ದಾರೆ ಧನುಷ್. ವಿವಾದ ಮಾಡುವ ಮೊದಲು ಒಬ್ಬ ತಮಿಳು ನಟನ ಸಾಧನೆಯನ್ನ ಸಂಭ್ರಮಿಸಬೇಕು ಎಂದಿದ್ದಾರೆ ನಟ. ಅಷ್ಟೇ ಅಲ್ಲ.. ರಾಯನ್ ಸಿನಿಮಾಗಿಂದ ಒಳ್ಳೆಯ ಸಿನಿಮಾಗಳಿದ್ದವು. ಕಾರ್ತಿ-ಅರವಿಂದ್ ಸ್ವಾಮಿ ನಟನೆಯ ಮೇಯಳಗನ್, ವಿಜಯ್ ಸೇತುಪತಿ ಅಭಿನಯದ ಮಹಾರಾಜ ಚಿತ್ರಗಳು ಆ ಪ್ರಶಸ್ತಿಗೆ ಹೆಚ್ಚು ಅರ್ಹವಾದ ಸಿನಿಮಾಗಳಾಗಿದ್ದವು ಅಂತ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.
ಒಟ್ಟಾರೆ ರಾಯನ್‌ಗಿಂತ ಉತ್ತಮ ಚಿತ್ರಗಳಿದ್ದವು. ಅವುಗಳಿಗೆ ಪ್ರಶಸ್ತಿ ಲಭಿಸಬೇಕಿತ್ತು ಅನ್ನೋದನ್ನ ಒಪ್ಪಿಕೊಂಡಿರೋ ಧನುಷ್, ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ತಮ್ಮ ವೃತ್ತಿ ಜೀವನದ ಪುದುಪೆಟ್ಟೈ, ವಡಾ ಚೆನ್ನೈ, ಕರ್ಣನ್, ಮರಿಯನ್ ಚಿತ್ರಗಳಿಗೆ ರಾಷ್ಟ್ರ ಪ್ರಶಸ್ತಿ ಲಭಿಸಬೇಕಿತ್ತು. ಆಗ ಕೇವರ 10% ಜನ ಕೂಡ ಈ ಬಗ್ಗೆ ಧ್ವನಿ ಎತ್ತಲಿಲ್ಲ. ಕೆಲವೊಮ್ಮೆ ಎಷ್ಟೇ ಶ್ರಮ ಪಟ್ಟರೂ ಸಹ ಪ್ರಶಸ್ತಿಗಳ ಮೂಲಕ ಗೌರವ ಸಿಗಲ್ಲ. ಸಿನಿಮಾ ಹೇಗಿದೆ ಅನ್ನೋದಕ್ಕಿಂತ ನಾವು ಮಾಡಿದ ಕೆಲಸ ತೃಪ್ತಿ ಕೊಟ್ರೆ ಸಾಕು ಎಂದಿದ್ದಾರೆ. ಇದು ಇತರೇ ಸ್ಟಾರ್‌ಗಳ ನಡುವೆ ಕಿಚ್ಚು ಹೊತ್ತಿಸಿದೆ. ಸ್ಟಾರ್ ವಾರ್ ಹಾಗೂ ಸ್ಟಾರ್‌ಗಳ ಫ್ಯಾನ್ಸ್ ವಾರ್‌ಗೆ ನಾಂದಿ ಹಾಡಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
