ನಟ ಧನುಷ್‌ಗೆ ಶಾಕ್: 20 ಕೋಟಿ ರೂ. ಪರಿಹಾರ ಕೇಳಿ ಪ್ರಸಿದ್ಧ ನಿರ್ಮಾಣ ಸಂಸ್ಥೆಯಿಂದ ಲೀಗಲ್ ನೋಟಿಸ್

Untitled design 2026 02 14T115237.937

ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ನಟ ಧನುಷ್ ಮತ್ತೊಮ್ಮೆ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. 2016ರಲ್ಲಿ ಆರಂಭವಾದ ಹಳೆಯ ಸಿನಿಮಾ ಯೋಜನೆಯೊಂದನ್ನು ಪೂರ್ಣಗೊಳಿಸದೆ ವಿಳಂಬ ಮಾಡಿರುವ ಆರೋಪದ ಮೇಲೆ ಪ್ರಸಿದ್ಧ ನಿರ್ಮಾಣ ಸಂಸ್ಥೆ ತೆನಾಂಡಲ್ ಫಿಲ್ಮ್ಸ್ ಅವರು ಧನುಷ್‌ಗೆ ಲೀಗಲ್ ನೋಟಿಸ್‌ ಜಾರಿ ಮಾಡಿದೆ. ಈ ನೋಟಿಸ್‌ನಲ್ಲಿ 20 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಬೇಡಿಕೆ ಇಡಲಾಗಿದೆ.

‘ನಾನ್ ರುದ್ರನ್’ ಪ್ರಾಜೆಕ್ಟ್ ಏನು?

ವರದಿಗಳ ಪ್ರಕಾರ, 2016ರಲ್ಲಿ ಧನುಷ್ ಅವರು ‘ನಾನ್ ರುದ್ರನ್’ (Naan Rudran) ಎಂಬ ಸಿನಿಮಾವನ್ನು ತೆನಾಂಡಲ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಒಪ್ಪಿಕೊಂಡಿದ್ದರು. ಈ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ಪ್ರಮುಖ ಪಾತ್ರದಲ್ಲಿ ನಟಿಸುವುದಾಗಿ ಅವರು ಪ್ರಾರಂಭದಲ್ಲಿ ಒಪ್ಪಂದ ಮಾಡಿಕೊಂಡಿದ್ದರು ಎನ್ನಲಾಗಿದೆ. ಆರಂಭಿಕ ಚರ್ಚೆಗಳ ನಂತರ ನಿರ್ಮಾಣ ಸಂಸ್ಥೆ ಅವರ ಬೇಡಿಕೆಗಳಿಗೆ ಸಹಮತ ಸೂಚಿಸಿ ಯೋಜನೆಯನ್ನು ಮುಂದುವರಿಸಲು ಸಿದ್ಧತೆ ನಡೆಸಿತ್ತು.

ಆದರೆ, ಧನುಷ್ ಸಂಪೂರ್ಣ ಚಿತ್ರಕಥೆಯನ್ನು ಒದಗಿಸದೇ ಯೋಜನೆಯನ್ನು ವಿಳಂಬಗೊಳಿಸಿದ್ದಾರೆ. ಇದರಿಂದ ಸಿನಿಮಾ ಪ್ರಾರಂಭ ಹಂತದಲ್ಲೇ ಸ್ಥಗಿತಗೊಂಡಿದೆ ಎಂದು ನಿರ್ಮಾಪಕರು ಆರೋಪ ಮಾಡಿದ್ದಾರೆ..

ಕಾಲ್‌ಶೀಟ್ ವಿವಾದ

ನೋಟಿಸ್‌ನಲ್ಲಿ ಉಲ್ಲೇಖಿಸಿರುವ ಮತ್ತೊಂದು ಪ್ರಮುಖ ಆರೋಪವೆಂದರೆ, ಹಳೆಯ ಪ್ರಾಜೆಕ್ಟ್ ಮುಗಿಸದೆ ಧನುಷ್ ಬೇರೆ ಸಿನಿಮಾಗಳಿಗೆ ಕಾಲ್‌ಶೀಟ್ ನೀಡುತ್ತಿರುವುದು. ಇದರಿಂದ ‘ನಾನ್ ರುದ್ರನ್’ ಸಿನಿಮಾ ಅರ್ಧದಲ್ಲೇ ನಿಂತು ನಿರ್ಮಾಣ ಸಂಸ್ಥೆಗೆ ಭಾರೀ ಹಣಕಾಸಿನ ನಷ್ಟ ಉಂಟಾಗಿದೆ ಎಂದು ಹೇಳಲಾಗಿದೆ.

ಸಂಸ್ಥೆಯ ಪರ ವಕೀಲ ಎ. ಚಿದಂಬರಂ ಮೂಲಕ ಕಳುಹಿಸಿರುವ ನೋಟಿಸ್‌ನಲ್ಲಿ, ಹೂಡಿಕೆಯಾದ ಮೊತ್ತವನ್ನು ವಾಪಸು ಪಡೆಯಲು 20 ಕೋಟಿ ರೂಪಾಯಿ ಪರಿಹಾರ ಕೇಳಲಾಗಿದೆ. ನಿಗದಿತ ಅವಧಿಯಲ್ಲಿ ಹಣ ಪಾವತಿಸದಿದ್ದರೆ ಮುಂದಿನ ಹಂತದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಲಾಗಿದೆ.

ಧನುಷ್ ಪ್ರತಿಕ್ರಿಯೆ ಏನು?

ಈ ಗಂಭೀರ ಆರೋಪಗಳ ನಡುವೆಯೂ ಧನುಷ್ ಕಡೆಯಿಂದ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.  ಮುಂದಿನ ದಿನಗಳಲ್ಲಿ ಧನುಷ್ ಕಾನೂನು ಹೋರಾಟಕ್ಕೆ ಇಳಿಯುವ ಸಾಧ್ಯತೆ ಇದೆ ಎಂದು ಸಿನಿ ವಲಯದಲ್ಲಿ ಮಾತುಕತೆ ನಡೆಯುತ್ತಿದೆ. ಧನುಷ್ ಈಗಾಗಲೇ ಹಲವು ಹಿಟ್ ಸಿನಿಮಾಗಳ ಮೂಲಕ ತಮ್ಮದೇ ಆದ ಸ್ಥಾನವನ್ನು ನಿರ್ಮಿಸಿಕೊಂಡಿದ್ದಾರೆ. ವಿಚಾರವಾಗಿದೆ.

‘D55’ ಘೋಷಣೆ- ಅಭಿಮಾನಿಗಳಿಗೆ ಸಂತೋಷ

ಕಾನೂನು ಸಂಕಷ್ಟದ ನಡುವೆಯೂ ಧನುಷ್ ತಮ್ಮ 55ನೇ ಸಿನಿಮಾವನ್ನು ಘೋಷಿಸಿದ್ದಾರೆ. ತಾತ್ಕಾಲಿಕವಾಗಿ ‘D55’ ಎಂದು ಕರೆಯಲಾಗುತ್ತಿರುವ ಈ ಚಿತ್ರವನ್ನು ಖ್ಯಾತ ನಿರ್ದೇಶಕ ರಾಜಕುಮಾರ್ ಪೆರಿಯಸಾಮಿ ನಿರ್ದೇಶಿಸಲಿದ್ದಾರೆ.

ಈ ಬೃಹತ್ ಚಿತ್ರವನ್ನು ಧನುಷ್ ಅವರ ಸ್ವಂತ ನಿರ್ಮಾಣ ಸಂಸ್ಥೆ Wunderbar Films ಮತ್ತು ಆರ್ ಟೇಕ್ ಸ್ಟುಡಿಯೋಸ್ ಜಂಟಿಯಾಗಿ ನಿರ್ಮಿಸುತ್ತಿವೆ.

ಒಂದು ಕಡೆ 20 ಕೋಟಿ ರೂಪಾಯಿ ಪರಿಹಾರ ಬೇಡಿಕೆಯ ನೋಟಿಸ್‌, ಮತ್ತೊಂದೆಡೆ ಭರ್ಜರಿ ಹೊಸ ಸಿನಿಮಾದ ಘೋಷಣೆ – ಈ ಎರಡೂ ಬೆಳವಣಿಗೆಗಳು ಧನುಷ್‌ ಸುತ್ತ ಚರ್ಚೆಗಳನ್ನು ಮತ್ತಷ್ಟು ಹೆಚ್ಚಿಸಿವೆ.

Exit mobile version