ಸಿದ್ಧಗಂಗಾ ಮಠದಲ್ಲಿ ಡೆವಿಲ್ ಕ್ವೀನ್ ರಚನಾ ರೈ ರಂಗು

ಡೆವಿಲ್ ಪ್ರಚಾರಕ್ಕೆ ಫಿಲ್ಮ್ ಸ್ಟಾರ್ಸ್‌, ರಾಜಕಾರಣಿಗಳ ಸಾಥ್

Untitled design 2025 11 25T163046.637

ಡೆವಿಲ್ ಡೆವಿಲ್ ಡೆವಿಲ್.. ಸದ್ಯ ಎಲ್ಲೆಡೆ ಡಿಬಸ್ ಡೆವಿಲ್‌ದೇ ಸದ್ದು. ಅಷ್ಟರ ಮಟ್ಟಿಗೆ ಕ್ರೇಜ್ ಹುಟ್ಟ್ಟಿಸ್ತಿದೆ ದರ್ಶನ್ ನಟನೆಯ ಡೆವಿಲ್. ಇತ್ತೀಚೆಗೆ ನಾಯಕನಟಿ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದು, ಅದ್ರ ವಿಡಿಯೋ ಹಾಗೂ ಸ್ಟಿಲ್ಸ್ ಎಲ್ಲೆಡೆ ವೈರಲ್ ಆಗ್ತಿವೆ. ಅದರೊಟ್ಟಿಗೆ ಡೆವಿಲ್ ಪ್ರಮೋಷನ್‌ಗೆ ಮುಂದಾಗಿರೋ ಫಿಲ್ಮ್ ಆ್ಯಕ್ಟರ್ಸ್‌ ಹಾಗೂ ಪೊಲಿಟಿಷಿಯನ್ಸ್ ಬಗ್ಗೆ ಕೂಡ ತೋರಿಸ್ತೀವಿ. ನೋಡ್ಕೊಂಡ್ ಬನ್ನಿ.

ರಚನಾ ರೈ.. ಡೆವಿಲ್ ಸಿನಿಮಾದ ನಾಯಕನಟಿ. ಒಂದೇ ಒಂದು ಸಲ ಹಾಡಿನಿಂದ ಸದ್ಯ ಎಲ್ಲೆಡೆ ಸಂಚಲನ ಮೂಡಿಸಿರೋ ನಟಿ. ಚೊಚ್ಚಲ ಚಿತ್ರದಲ್ಲೇ ಡಿಬಾಸ್ ದರ್ಶನ್ ಜೊತೆ ಎಲ್ಲರ ದಿಲ್ ದೋಚಿದ್ದಾರೆ. ಆಕೆಯ ಅಂದದ ಜೊತೆ ಅದೃಷ್ಠ ಕೂಡ ಕೈ ಹಿಡಿದಿದೆ. ಅದೇ ಕಾರಣದಿಂದ ದರ್ಶನ್‌‌ರ ಅಸಂಖ್ಯಾತ ಅಭಿಮಾನಿಗಳ ಪ್ರೀತಿ, ಅಭಿಮಾನ ಈಕಗೆ ದೊರೆಯುತ್ತಿದೆ.

ಪ್ರಕಾಶ್ ವೀರ್ ನಿರ್ದೇಶನದ ಡೆವಿಲ್ ಸಿನಿಮಾ ಇದೇ ಡಿಸೆಂಬರ್ 11ಕ್ಕೆ ತೆರೆಗೆ ಬರ್ತಿದೆ. ಈ ಸಿನಿಮಾದ ಪ್ರಮೋಷನ್ಸ್‌ಗೆ ದರ್ಶನ್ ಇಲ್ಲ. ಹಾಗಂತ ಟೀಂ ಎದೆಗುಂದಿಲ್ಲ. ಡೈರೆಕ್ಟರ್ ಪ್ರಕಾಶ್ ವೀರ್ ಇತ್ತೀಚೆಗೆ ದರ್ಶನ್ ಕುಟುಂಬದ ಜೊತೆಗೂಡಿ ಫ್ಯಾನ್ಸ್ ಜೊತೆ ಒಂದು ಇವೆಂಟ್ ಮಾಡಿದ್ರು. ಅಲ್ಲಿ ಈ ಸಿನಿಮಾದ ಪ್ರಮೋಷನ್ ಸ್ಟ್ರ್ಯಾಟಜಿ ಕೂಡ ಮಾಡಿದ್ರು. ಇದೀಗ ಡೆವಿಲ್ ಕ್ವೀನ್ ರಚನಾ ರೈ ಅವರೇ ಅಫಿಶಿಯಲಿ ಚಿತ್ರದ ಪ್ರಚಾರ ಕಾರ್ಯಕ್ಕೆ ಇಳಿದಿರೋದು ಇಂಟರೆಸ್ಟಿಂಗ್.

ತುಮಕೂರಿನ ಸಿದ್ದಗಂಗಾ ಶಿಕ್ಷಣ ಸಂಸ್ಥೆಗಳು ನಡೆಸೋ ಸ್ಪಂದನ 2025 ಅದ್ದೂರಿ ಕಾರ್ಯಕ್ರಮಕ್ಕೆ ಇತ್ತೀಚೆಗೆ ಮುಖ್ಯ ಅತಿಥಿಯಾಗಿ ರಚನಾ ರೈ ತೆರಳಿದ್ದರು. ಅಲ್ಲಿ ನಡೆದಾಡುವ ದೇವರು ಅಂತಲೇ ಖ್ಯಾತಿ ಪಡೆದಿದ್ದ ಶಿವಕುಮಾರ ಸ್ವಾಮಿಗಳ ಗದ್ದುಗೆಗೆ ಭೇಟಿ ನೀಡಿ, ಸಿದ್ದಲಿಂಗಾ ಸ್ವಾಮಿಗಳ ಆಶೀರ್ವಾದ ಕೂಡ ಪಡೆದರು. ಸಾವಿರಾರು ಮಂದಿ ವಿದ್ಯಾರ್ಥಿಗಳನ್ನ ಉದ್ದೇಶಿಸಿ ಮಾತನಾಡಿದ ನಟಿ, ಜೀವನೋತ್ಸಾಹದ ಮಾತುಗಳಿಂದ ಸ್ಫೂರ್ತಿ ತುಂಬಿದ್ರು.

ಇನ್ನು ಡಿ ಬಾಸ್ ಡಿಬಾಸ್ ಅಂತ ಅಸಂಖ್ಯಾತ ದರ್ಶನ್ ಫ್ಯಾನ್ಸ್ ರಚನಾ ರೈನ ನೋಡಿ ಕೂಗಿದ್ರು. ಎಲ್ಲರೊಂದಿಗೆ ಮಾಸ್ ಸೆಲ್ಫಿ ಕೂಡ ತೆಗೆದುಕೊಂಡು ರಚನಾ, ಒಂದಷ್ಟು ಮಂದಿಗೆ ವೈಯಕ್ತಿಕವಾಗಿಯೂ ಸೆಲ್ಫಿ ನೀಡಿದ್ರು.

ಹಿರಿಯ ನಟಿ ಲೀಲಾವತಿ ಪುತ್ರ ವಿನೋದ್ ರಾಜ್‌ಗೆ ದರ್ಶನ್ ಅಂದ್ರೆ ಪಂಚಪ್ರಾಣ. ಅಲ್ಲದೆ ದರ್ಶನ್ ಬೆಳ್ಳಿ ಮಹೋತ್ಸವದಲ್ಲಿ ಕೂಡ ಅವರು ಭಾಗಿಯಾಗಿದ್ರು. ನಮ್ಮ ತಾಯಿ ಎಂದೂ ದರ್ಶನ್ ಕೈ ಬಿಡಬೇಡ ಅಂತ ಹೇಳಿದ್ದಾರೆ. ಅವ್ರನ್ನ ಅಭಿಮಾನಿಗಳೇ ಕೈ ಹಿಡಿದಿದ್ದಾರೆ. ಆದ್ರೆ ಅವ್ರ ಸಿನಿಮಾಗಾಗಿ ನಾವೆಲ್ಲಾ ಇದ್ದೀವಿ ಅಂತ ಡೆವಿಲ್ ಚಿತ್ರದ ಪೋಸ್ಟರ್‌‌ನ ಹಿಡಿದು ದಚ್ಚು ಫ್ಯಾನ್ಸ್‌ ಜೊತೆ ಫಿಲ್ಮ್ ಪ್ರಮೋಷನ್ ಮಾಡ್ತಿದ್ದಾರೆ ವಿನೋದ್ ರಾಜ್.

ಇನ್ನು ಮಾಜಿ ಸಂಸದ ಕಮ್ ಪತ್ರಕರ್ತ ಪ್ರತಾಪ್ ಸಿಂಹ ಕೂಡ ದರ್ಶನ್ ಪರ ಬ್ಯಾಟ್ ಬೀಸಿದ್ದಾರೆ. ಡಿಬಾಸ್ ದರ್ಶನ್ ಇಲ್ಲದೆ ರಿಲೀಸ್ ಆಗ್ತಿರೋ ಡೆವಿಲ್ ಸಿನಿಮಾದ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ಜೊತೆಗೆ ನಿಲ್ಲೋಣ ಅನ್ನೋ ಭರವಸೆಯ ಮಾತುಗಳನ್ನಾಡಿದ್ದಾರೆ.

ಒಟ್ಟಾರೆ ದರ್ಶನ್ ಇಲ್ಲ ಅಂತ ಬೇಸರದಲ್ಲಿರೋ ಡೆವಿಲ್ ಟೀಂ ಹಾಗೂ ದಚ್ಚು ಕುಟುಂಬಕ್ಕೆ ಹೀಗೆ ಚಿತ್ರನಟರು, ರಾಜಕಾರಣಿಗಳು ಸಾಥ್ ನೀಡ್ತಿರೋದು ಇಂಟರೆಸ್ಟಿಂಗ್.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

 

Exit mobile version