ಕನ್ನಡದ ಮನೆ ಮಗಳು ದೀಪಿಕಾ ಪಡುಕೋಣೆ ಹಾಗೂ ಕರುನಾಡ ಅಳಿಮಯ್ಯ ರಣ್ವೀರ್ ಸಿಂಗ್ ದಂಪತಿ ನಿವಾಸಕ್ಕೆ ಮತ್ತೊಂದು ಹೆಣ್ಣು ಮಗುವಿನ ಆಗಮನವಾಗಿದೆ. ಯೆಸ್.. ಸಕ್ಸಸ್‌ನ ಉತ್ತುಂಗದಲ್ಲಿರೋ ಈ ಬಾಲಿವುಡ್ ತಾರಾ ಜೋಡಿ ಕುಟುಂಬಕ್ಕೆ ಮತ್ತೊಂದು ಮಹಾಲಕ್ಷ್ಮೀ ಸೇರಿಕೊಂಡಿದ್ದಾರೆ. ಸೆಪ್ಟೆಂಬರ್ ತಂದ ಆ ಸೌಭಾಗ್ಯದ ಕಲರ್‌ಫುಲ್ ಕಹಾನಿ ಇಲ್ಲಿದೆ..
- ರಣ್ವೀರ್-ದೀಪಿಕಾಗೆ ಮತ್ತೆ ಹೆಣ್ಮಗು.. ಸೆಪ್ಟೆಂಬರ್ ತಂದ ಸೌಭಾಗ್ಯ
- ತಾರಾ ಜೋಡಿಯ ದೊಡ್ಮಗಳು ದುವಾ ಸೆಪ್ಟೆಂಬರ್‌ನಲ್ಲೇ ಜನನ..!
- ಸೋಶಿಯಲ್ ಮೀಡಿಯಾದಲ್ಲಿ ದೀಪಿಕಾ-ರಣ್ವೀರ್ ದಿಲ್ಖುಷ್
- ಸಕ್ಸಸ್‌ನ ಉತ್ತುಂಗದಲ್ಲಿ ಕನ್ನಡತಿ ಹಾಗೂ ಕರುನಾಡ ಅಳಿಮಯ್ಯ..!
ಧುರಂಧರ್ ಸಿನಿಮಾಗಳ ಮೂಲಕ ರಣ್ವೀರ್ ಸಿಂಗ್ ಭರ್ಜರಿ ಕಂಬ್ಯಾಕ್ ಮಾಡಿದ್ರೆ.. ಇತ್ತ ಶಾರೂಖ್ ಜೊತೆಗಿನ ಸಿನಿಮಾಗಳಿಂದ ದೀಪಿಕಾ ಪಡುಕೋಣೆ ಮಿಂಚುತ್ತಲೇ ಇದ್ದಾರೆ. ಬಾಲಿವುಡ್‌ನ ಈ ತಾರಾ ಜೋಡಿ ಸದ್ಯ ಸಕ್ಸಸ್‌ನ ಉತ್ತುಂಗದಲ್ಲಿದ್ದಾರೆ. ದುಬಾರಿ ಫ್ಲ್ಯಾಟ್ ಸೇರಿದಂತೆ ಐಷಾರಾಮಿ ಕಾರ್‌ಗಳನ್ನ ಕೂಡ ಖರೀಸಿದಿದ್ದ ಈ ತಾರಾ ಜೋಡಿ ಇದೀಗ ವಿಶ್ವ ಸಿನಿದುನಿಯಾಗೆ ಒಂದು ಸ್ವೀಟ್ ನ್ಯೂಸ್ ನೀಡಿದೆ. ಮೂವರಿದ್ದ ಆ ಜೋಡಿ ಇದೀಗ ನಾಲ್ಕು ಮಂದಿ ಮೂಲಕ ಮನೆಗೆ ಹೊಸ ಸದಸ್ಯರ ಸೇರ್ಪಡೆ ಮಾಡಿಕೊಂಡಿದ್ದಾರೆ.
ನಾವಿಬ್ಬರು.. ನಮಗಿಬ್ಬರು.. ಅನ್ನೋ ಮಾತಿನಂತೆ ರಣ್ವೀರ್ ಸಿಂಗ್ ದೀಪಿಕಾ ಜೋಡಿಗೆ ಎರಡನೇ ಮಗುವಿನ ಜನನ ಆಗಿದೆ. ಚೆಲುವೆ ದೀಪಿಕಾ ಎರಡನೇ ಮಗುವಿಗೆ ಜನ್ಮ ನೀಡಿದ್ದು, ಈ ಬಾರಿಯೂ ಹೆಣ್ಣು ಮಗಳೇ ಜನಿಸಿರೋದು ವಿಶೇಷ. ಆ ಮೂಲಕ ಮತ್ತೊಬ್ಬ ಮಹಾಲಕ್ಷ್ಮೀಯನ್ನ ಮನೆಗೆ ಬರಮಾಡಿಕೊಂಡಿದ್ದಾರೆ. ಆ ಖುಷಿಯ ವಿಷಯವನ್ನ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ವೆಲ್ಕಮ್ ಬೇಬಿ ಗರ್ಲ್ ಅಂತ ಪಾದದ ಹೆಜ್ಜೆ ಗುರುತಿನ ಫೋಟೋ ಹಂಚಿಕೊಂಡಿದ್ದಾರೆ.
ಅಂದಹಾಗೆ 2024ರ ಸೆಪ್ಟೆಂಬರ್ ತಿಂಗಳಲ್ಲೇ ಹಿರಿಯ ಮಗಳು ದುವಾ ಕೂಡ ಜನಿಸಿದ್ರು. ಇದೀಗ ಎರಡು ವರ್ಷಗಳ ನಂತ್ರ ಒನ್ಸ್ ಅಗೈನ್ ಸೆಪ್ಟೆಂಬರ್ ತಿಂಗಳಲ್ಲೇ ಈ ಬಾಲಿವುಡ್‌ನ ಸ್ಟಾರ್ ದಂಪತಿಗೆ ಎರಡನೇ ಮಗು ಆಗಿದೆ. ಹೌದು.. ಸೆಪ್ಟೆಂಬರ್ 8ರಂದು ಹಿರಿಯ ಮಗಳು ಹುಟ್ಟಿದ್ರೆ, ಕಿರಿಯ ಮಗಳು ಸೆಪ್ಟೆಂಬರ್ 19ರಂದು ಜನಿಸಿದ್ದಾರೆ. ಇದೊಂಥರಾ ಸೆಪ್ಟೆಂಬರ್ ತಂದ ಸೌಭಾಗ್ಯ ಅಂದ್ರೆ ತಪ್ಪಾಗಲ್ಲ.
ಅವರಿಬ್ಬರ ಇನ್ಸ್‌ಟಾ ಪೋಸ್ಟ್‌ಗಳು ಮಿಲಿಯನ್ ಗಟ್ಟಲೆ ಲೈಕ್ಸ್ ಪಡೆದಿದ್ದು, ಅಭಿಮಾನಿಗಳ ಜೊತೆ ಇಡೀ ಬಾಲಿವುಡ್ ಸ್ಟಾರ್ಸ್ ಎಲ್ಲಾ ಶುಭಾಶಯ ಕೋರುತ್ತಿದ್ದಾರೆ. ದುವಾಗೆ ತಂಗಿ ಬಂದ್ಲು ಅಂತೆಲ್ಲಾ ಕಮೆಂಟ್ಸ್ ಮಾಡ್ತಿದ್ದಾರೆ. ಕಲ್ಕಿ ಸಿನಿಮಾದ ಬಳಿಕ ಸಣ್ಣ ಗ್ಯಾಪ್ ಪಡೆದಿದ್ದ ದೀಪಿಕಾ ಇದೀಗ ಅಲ್ಲು ಅರ್ಜುನ್‌ರ ರಾಕಾ ಹಾಗೂ ಶಾರೂಖ್ ಕಿಂಗ್ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ.
ರಣ್ವೀರ್ ಸಿಂಗ್ ಕೂಡ ಪ್ರಳಯ್ ಸಿನಿಮಾದಿಂದ ಧುರಂಧರ್ ರೀತಿ ಮತ್ತೊಂದು ಬಾಕ್ಸ್ ಆಫೀಸ್ ಪ್ರಳಯಕ್ಕೆ ಸಜ್ಜಾಗ್ತಿದ್ದು, ಮಹಾಲಕ್ಷ್ಮಿಯರ ಆಗಮನದಿಂದ ಅವ್ರ ಲೈಫ್ ಮತ್ತಷ್ಟು, ಮಗದಷ್ಟು ಕಲರ್‌ಫುಲ್ & ಬ್ಯೂಟಿಫುಲ್ ಆಗಿದೆ. ನಮ್ಮ ಕನ್ನಡದ ಮನೆ ಮಗಳು ದೀಪಿಕಾಗೆ ಮಗು ಆಗಿರೋ ಸುದ್ದಿ ಸದ್ಯ ವಿಶ್ವ ಸಿನಿದುನಿಯಾದಲ್ಲಿ ಟ್ರೆಂಡಿಂಗ್ ನಂಬರ್ ಒನ್‌ನಲ್ಲಿರೋದು ಖುಷಿಯ ವಿಚಾರ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
