ಮದರ್ ಇಂಡಿಯಾನ ಅನ್ ಫಾಲೋ ಮಾಡಿದ ದರ್ಶನ್..!

ರೆಬೆಲ್ ಆದ ಸುಮಕ್ಕ.. ದಚ್ಚುಗೆ ಆಸ್ಕರ್ ಕೊಡ್ಬೇಕು ಅಂದ್ರಾ..?

Whatsapp image 2025 03 12 at 2.05.25 pm

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನವಾದ ನಟ ದರ್ಶನ್ ಬಾಳಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಆಗ್ತಿವೆ. ಮುಂದೆಯೂ ಆಗಲಿವೆ. ಅದಕ್ಕೆ ಕಾರಣ ಇತ್ತೀಚೆಗೆ ಆಗ್ತಿರೋ ಬೆಳವಣಿಗೆಗಳು. ಹೌದು.. ಮದರ್ ಇಂಡಿಯಾ ಅಂತ ಸುಮಲತಾರನ್ನ ಪ್ರೀತಿಯಿಂದ ಕರೆಯುತ್ತಿದ್ದ ದಾಸ ದರ್ಶನ್, ದಿಢೀರ್ ಅಂತ ಅವರನ್ನ ಇನ್ಸ್ ಟಾದಿಂದ ಅನ್ ಫಾಲೋ ಮಾಡಿದ್ದಾರೆ. ದರ್ಶನ್ ಅನ್ ಫಾಲೋ ಮಾಡಿರೋದು ಬರೀ ಸುಮಲತಾರನ್ನಷ್ಟೇ ಅಲ್ಲ, ಅಭಿಷೇಕ್ ಹಾಗೂ ಅವಿವಾರನ್ನ ಕೂಡ ಅನ್ನೋದು ಇಂಟರೆಸ್ಟಿಂಗ್.

ಆ ಕಡೆ ಅನ್ ಫಾಲೋ ಮಾಡ್ತಿದ್ದಂತೆ ಈ ಕಡೆ ದೊಡ್ಡ ಮಗನಂತೆ ದರ್ಶನ್ ರನ್ನ ಟ್ರೀಟ್ ಮಾಡ್ತಿದ್ದ ಸುಮಲತಾ, ನಟ ದರ್ಶನ್ ಮೇಲೆ ಮಾರ್ಮಿಕವಾಗಿ ಸೋಶಿಯಲ್ ಮೀಡಿಯಾ ಪೋಸ್ಟ್ ಗಳನ್ನ ಹಾಕೋಕೆ ಮುಂದಾಗಿದ್ದಾರೆ. ನಿನ್ನೆ ತಡರಾತ್ರಿ ಇನ್ಸ್ ಟಾ ಸ್ಟೇಟಸ್ ನಲ್ಲಿ ‘ತನ್ನದೇ ತಪ್ಪು ಇಟ್ಕೊಂಡು, ಬೇರೆಯವರ ಮೇಲೆ ಗೂಬೆ ಕೂರಿಸಿ, ತಮ್ಮನ್ನ ತಾವು ಹೀರೋ ಅಂತೆ ಬಿಂಬಿಸಿಕೊಳ್ತಾರೆ. ಸತ್ಯವನ್ನು ತಿರುಚುವಂತವರಿಗೆ ಈ ಬೆಸ್ಟ್ ಆ್ಯಕ್ಟಿಂಗ್ ಆಸ್ಕರ್ ಅವಾರ್ಡ್ ಹೋಗುತ್ತೆ’ ಅಂತ ಬಹಳ ಮಾರ್ಮಿಕವಾಗಿ ಪೋಸ್ಟ್ ಹಾಕಿದು ಮಾಜಿ ಸಂಸದೆ, ಹಿರಿಯ ನಟಿ ಸುಮಲತಾ.

ಆದ್ರೀಗ ಇಂದು ಸರಣಿ ಪೋಸ್ಟ್ ಗಳ ಮೂಲಕ ದರ್ಶನ್ ಗೆ ದೊಡ್ಡ ಮಟ್ಟಕ್ಕೆ ತಿರುಗೇಟು ನೀಡ್ತಿದ್ದಾರೆ ಸುಮಲತಾ ಅಂಬರೀಶ್. ಇಷ್ಟಕ್ಕೂ ಸುಮಲತಾ ಅಂಬರೀಶ್ ಈ ಪಾಟಿ ರೆಬೆಲ್ ಆಗೋಕೆ ಕಾರಣ ಏನು ಅಂತ ನೋಡೋದಾದ್ರೆ, ಅದಕ್ಕೆ ಹತ್ತು ಹಲವು ಕಾರಣಗಳಿವೆ. ಆ ಪೈಕಿ ಇತ್ತೀಚೆಗೆ ದರ್ಶನ್ ಬರ್ತ್ ಡೇ ವಿಶೇಷ ವಿಶ್ ಮಾಡಿ ಪೋಸ್ಟ್ ಹಾಕಿದ್ದ ಸುಮಲತಾ ವಿರುದ್ಧ ನೆಟ್ಟಿಗರು ಹಾಗೂ ದಚ್ಚು ಫ್ಯಾನ್ಸ್ ಕಿಡಿ ಕಾರಿದ್ದರು. ಇವ್ರು ಫೇಕ್ ಮದರ್ ಇಂಡಿಯಾ. ಈಗ ನೆನಪಾಯ್ತಾ ನಮ್ ಬಾಸ್ ಅಂತೆಲ್ಲಾ ಕಾಲೆಳೆದಿದ್ರು. ಅದು ಸುಮಲತಾ ಅಂಬರೀಶ್ ಗೌರವಕ್ಕೆ ಧಕ್ಕೆ ತರುವಂತಾಗಿತ್ತು. ಆದ್ರೆ ಸುಮಲತಾ ಅವರು ಅಂಬಿಯನ್ನ ಕಳ್ಕೊಂಡಾಗ, ಎಲೆಕ್ಷನ್ ಗೆ ನಿಂತಾಗ, ಸಂಸದೆಯಾಗಿ ಪಾರ್ಲಿಮೆಂಟ್ ಮೆಟ್ಟಿಲೇರಿದಾಗ ಬೆನ್ನೆಲುಬಾಗಿ, ಸ್ವಂತ ಮಗನಂತೆ ನಿಂತಿದ್ರು ನಟ ದರ್ಶನ್. ಅದರಲ್ಲಿ ಎರಡು ಮಾತಿಲ್ಲ.

ದರ್ಶನ್ ಜೈಲಲ್ಲಿದ್ದ ದಿನಗಳಲ್ಲಿ ಸುಮಲತಾ ಅಂಬರೀಶ್ ಒಂದು ಹೇಳಿಕೆ ಕೂಡ ನೀಡಿರಲಿಲ್ಲ. ಅದೇ ಕೋಪಕ್ಕೆ ದರ್ಶನ್, ಬೇಲ್ ಪಡೆದು ಹೊರಬಂದರೂ ಸಹ ಅಭಿಷೇಕ್ ಗೆ ಆಗಲಿ, ಸುಮಲತಾ ಅವರಿಗೆ ಆಗಲಿ ಭೇಟಿ ಆಗೋಕೆ ಪರ್ಮಿಷನ್ ನೀಡಿಲ್ಲ ಎನ್ನಲಾಗ್ತಿದೆ. ಸುಮಲತಾ ಅವರಿಗೆ ಯಶ್ ಜೊತೆ ದರ್ಶನ್ ಸಾಥ್ ಕೊಟ್ಟ ಪರಿಗೆ ಇಡೀ ಕರುನಾಡು ಅವರನ್ನ ಜೋಡೆತ್ತು ಅಂತೆಲ್ಲಾ ಕರೆದಿತ್ತು. ಅದ್ರೆ ದರ್ಶನ್ ಒಂಟಿಯಾಗಿದ್ದು ಸುಳ್ಳಲ್ಲ. ಆ ಏಕಾಂಗಿತನವೇ ಈಗ ಸುಮಲತಾ, ಅಭಿಷೇಕ್, ಅವಿವಾ ಸೇರಿದಂತೆ ಇಡೀ ಅಂಬಿ ಕುಟುಂಬವನ್ನು ದೂರ ಇಟ್ರಾ ದಚ್ಚು ಅನ್ನೋ ಪ್ರಶ್ನೆ ಮೂಡಿಸಿದೆ.
ಇನ್ನು ನಿನ್ನೆ ತಡರಾತ್ರಿ ಒಂದೇ ಒಂದು ಪೋಸ್ಟ್ ಮಾಡಿ ಸುಮ್ಮನಾಗಿದ್ದ ಸುಮಕ್ಕ, ಇಂದು ಸಿಕ್ಕಾಪಟ್ಗಟೆ ರೆಬೆಲ್ ಅಗಿ, ಒಂದರ ಹಿಂದೊಂದು ಪೋಸ್ಟ್ ಗಳನ್ನ ಮಾಡ್ತಾ, ಬಾಣಗಳಂತೆ ಬ್ಯಾಂಡ್ ಬಜಾಯಿಸುತ್ತಿದ್ದಾರೆ. ಆ ಪೈಕಿ ಒಂದು ಪೋಸ್ಟ್ ನಲ್ಲಿ ‘ಐಶಾರಾಮಿ ಲೈಫ್ ಅಂದ್ರೆ ದುಬಾರಿ ಕಾರ್ ಗಳು, ಬಟ್ಟೆಗಳಲ್ಲ. ಸ್ವತಂತ್ರವಾಗಿ ಒಳ್ಳೆಯ ನಿದ್ದೆ, ಮನಸ್ಸಿಗೆ ನೆಮ್ಮದಿ ಮತ್ತು ಸಮಾಧಾನವಾಗಿರೋದು’ ಎಂದಿದ್ದಾರೆ.

ಮತ್ತೊಂದು ಪೋಸ್ಟ್ ನಲ್ಲಿ ‘ನೋವಿಲ್ಲದಂತೆ ಎದ್ದು ಬರೋದು.. ಚಿಂತೆ ಇಲ್ಲದಂತೆ ಇರೋದು.. ನಿಮ್ಮನ್ನ ಯಾರು ಅರ್ಥ ಮಾಡ್ಕೊಳ್ತಾರೋ ಅಂಥವ್ರ ಜೊತೆಗಿನ ಮಾತುಕತೆ.. ಇವೆಲ್ಲವೂ ಸಾಮಾಜಿಕ ಜಾಲತಾಣಗಳಲ್ಲಿ ತೋರಿಸಿಕೊಳ್ಳಲಾಗದ ಖಜಾನೆ. ಆದ್ರೆ ಇದೆಲ್ಲವೂ ಸಂತೃಪ್ತ ಜೀವನಕ್ಕೆ ಬಹಳ ಮುಖ್ಯ. ಸೋಶಿಯಲ್ ಮೀಡಿಯದಲ್ಲಿ ಚೆನ್ನಾಗಿ ಕಾಣಿಸಿಕೊಳ್ಳಲು ಮಾತ್ರ ಫೋಟೋ ತೆಗೆಸಿಕೊಳ್ಳುವುದಲ್ಲ. ಶ್ರೀಮಂತವೆನಿಸೋ ಬದುಕಿಗೆ ಆಂತರಿಕವಾಗಿ ಅಡಿಪಾಯ ಹಾಕಬೇಕು ’ ಅಂತಲೂ ಬರೆದುಕೊಂಡಿದ್ದಾರೆ.

ಇವೆಲ್ಲವೂ ನೋಡ್ತಿದ್ರೆ ಮಗ ಮತ್ತು ಮದರ್ ಇಂಡಿಯಾ ನಡುವೆ ಎಲ್ಲವೂ ಸರಿಯಿಲ್ಲ ಅನ್ನೋದು ಎದ್ದು ಕಾಣ್ತಿದೆ. ಇದಕ್ಕೆಲ್ಲಾ ಸ್ವತಃ ದರ್ಶನ್ ಅಥ್ವಾ ಸುಮಲತಾ ಅವರೇ ನೇರವಾಗಿ ಸ್ಪಷ್ಟನೆ ಕೊಡಬೇಕು. ಇಲ್ಲವಾದಲ್ಲಿ, ಬಹುಶಃ ಇದೇ ಮಾರ್ಚ್ 14ರಂದು ನಡೆಯಲಿರೋ ಅಭಿಷೇಕ್ ಅಂಬರೀಶ್- ಅವಿವಾ ದಂಪತಿಯ ಮಗನ ನಾಮಕರಣ ಮಹೋತ್ಸವಕ್ಕೆ ದರ್ಶನ್ ಬಂದ್ರೆ ಎಲ್ಲಾ ಅಂತೆ ಕಂತೆಗಳಿಗೆ ಬ್ರೇಕ್ ಬೀಳಲಿದೆ. ಸೋ.. ಸುಮಲತಾ ಮೊಮ್ಮಗನ ನಾಮಕರಣಕ್ಕೆ ದರ್ಶನ್ ಬರ್ತಾರಾ ಅನ್ನೋದು ಇನ್ನಷ್ಟೇ ಕಾದು ನೋಡಬೇಕಿದೆ.

Exit mobile version