ದರ್ಶನ್‌ & ಗ್ಯಾಂಗ್‌ನಿಂದ ವಶಪಡಿಸಿಕೊಂಡಿದ್ದ 82 ಲಕ್ಷ ರೂ. IT ವಶ: ಕೋರ್ಟ್‌ ಆದೇಶ

Untitled design 2025 12 03T183630.045

ಬೆಂಗಳೂರು: ಕನ್ನಡ ಚಿತ್ರರಂಗದ ಸೂಪರ್‌ಸ್ಟಾರ್ ದರ್ಶನ್ ಜೊತೆಗಿನ ಗ್ಯಾಂಗ್‌ಗೆ ಮತ್ತೊಂದು ಭೀತಿ ಎದುರಾಗಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಂದ ವಶಪಡಿಸಿಕೊಳ್ಳಲ್ಪಟ್ಟಿದ್ದ 82 ಲಕ್ಷ ರೂಪಾಯಿಗಳನ್ನು ಆದಾಯ ತೆರಿಗೆ (ಐಟಿ) ಇಲಾಖೆಯ ವಶಕ್ಕೆ ನೀಡುವಂತೆ ಬೆಂಗಳೂರು 57ನೇ ಎಸಿಸಿ (ಸ್ಪೆಷಲ್ ಕೋರ್ಟ್) ಹೈಕೋರ್ಟ್ ಆದೇಶ ಹೊರಡಿಸಿದೆ. ಈ ಹಣವು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲ್ಪಟ್ಟಿದ್ದು, ಆರೋಪಿಗಳಿಗೆ ಬಿಗ್‌ ಸಾಕ್‌ ಎದುರಾಗಿದೆ.

ಈ ಆದೇಶವು ಐಟಿ ಇಲಾಖೆಯ ಅರ್ಜಿಯನ್ನು ಪುರಸ್ಕರಿಸಿ ಹೊರಡಿಸಲ್ಪಟ್ಟಿದ್ದು, ಹಣವು ತೆರಿಗೆ ತಪ್ಪಿಸಿಕೊಳ್ಳುವಿಕೆ ಮತ್ತು ಅಕ್ರಮ ಮೂಲಕ ಸಂಗ್ರಹಿಸಲ್ಪಟ್ಟದ್ದು ಎಂದು ಆರೋಪಿಸಲಾಗಿದೆ. ಕೋರ್ಟ್ ತೀರ್ಪಿನಲ್ಲಿ, ದರ್ಶನ್ ಮತ್ತು ಇತರ ಆರೋಪಿಗಳು ಐಟಿ ಇಲಾಖೆಯಲ್ಲಿ ತಮ್ಮ ದಾವೆಯನ್ನು (ತಕರಾರು ಅರ್ಜಿ) ಸಲ್ಲಿಸಬಹುದು ಎಂದು ಸ್ಪಷ್ಟಪಡಿಸಿದೆ. ಐಟಿ ಇಲಾಖೆ ಹಣವನ್ನು ಬಿಡುಗಡೆ ಮಾಡಿದರೆ ಮಾತ್ರ ಆರೋಪಿಗಳು ಅದನ್ನು ಪಡೆಯಬಹುದು ಎಂದು ಕೋರ್ಟ್ ತಿಳಿಸಿದೆ. ಇದು ಪ್ರಕರಣದಲ್ಲಿ ಹಣಕಾಸಿನ ಆರೋಪಗಳನ್ನು ಇನ್ನಷ್ಟು ತೀವ್ರಗೊಳಿಸಿದೆ.

ದರ್ಶನ್‌ನ ಸ್ನೇಹಿತೆ ಪವಿತ್ರಾ ಗೌಡನಿಗೆ ಸೋಷಿಯಲ್ ಮೀಡಿಯಾದದಲ್ಲಿ ರೇಣುಕಾಸ್ವಾಮಿ ಅಶ್ಲೀಲ ಸಂದೇಶಗಳನ್ನ  ಕಳುಹಿಸಿದ್ದಕ್ಕೆ, ದರ್ಶನ್ ಗ್ಯಾಂಗ್  ರೇಣುಕಾಸ್ವಾಮಿಯನ್ನ ಕಿಡ್ನಾಪ್ ಮಾಡಿ ಬೆಂಗಳೂರಿನ ಒಂದು ಶೆಡ್‌ನಲ್ಲಿ ಮೂರು ದಿನಗಳ ಕಾಲ ಕ್ರೂರವಾಗಿ ಹಲ್ಲೆ ಮಾಡಿ ಕೊಂಡಿದ್ದರು. ಶವವನ್ನು ಸುಮನಹಳ್ಳಿ ಸ್ಟಾರ್ಮ್‌ವಾಟರ್ ಡ್ರೈನ್ ಬಳಿ ಇಟ್ಟುಹಾಕಲಾಗಿತ್ತು. ಪೊಲೀಸ್ ತನಿಖೆಯಲ್ಲಿ ದರ್ಶನ್ ಮುಖ್ಯ ಆರೋಪಿಯಾಗಿ (ಆರೋಪಿ ಸಂಖ್ಯೆ 2) ಗುರುತಿಸಲ್ಪಟ್ಟರು. ಪವಿತ್ರಾ ಗೌಡ (ಆರೋಪಿ 1), ರಾಘವೇಂದ್ರ, ಕರ್ತಿಕ್, ನಿಖಿಲ್ ನಾಯಕ್, ಕೇಶವ ಮೂರ್ತಿ ಸೇರಿದಂತೆ 17 ಜನರನ್ನು ಬಂಧಿಸಲಾಯಿತು.

ಇಂದು (ಡಿಸೆಂಬರ್ 3, 2025) ಬೆಂಗಳೂರು 57ನೇ ಎಸಿಸಿ ಹೈಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಡೆಯಿತು. ದರ್ಶನ್ ಮತ್ತು ಸಹಚರರು ದೋಷಾರೋಪಗಳನ್ನು ನಿರಾಕರಿಸಿರುವ ಹಿನ್ನೆಲೆಯಲ್ಲಿ, ಸಾಕ್ಷಿಗಳ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಪ್ರಾಸಿಕ್ಯೂಷನ್‌ಗೆ ಸೂಚಿಸಲಾಗಿದೆ. ಸಾಕ್ಷಿ ವಿಚಾರಣೆಗೆ ದಿನಾಂಕ ನಿಗದಿಪಡಿಸಿ, ಸಾಕ್ಷಿಗಳಿಗೆ ಸಮನ್ಸ್ ಜಾರಿಗೊಳಿಸಲಾಗುವುದು. ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಅವರು ಆರೋಪಿಗಳು ವಿಚಾರಣೆಯನ್ನು ವಿಳಂಬಗೊಳಿಸುವ ತಂತ್ರಗಳನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ದರ್ಶನ್ ಆರೋಪಿಗಳಿಗೆ ಸಾಕ್ಷ್ಯಗಳನ್ನು ಮರೆಮಾಚಲು 30 ಲಕ್ಷ ರೂಪಾಯಿ (ಅ14ಗೆ), 10 ಲಕ್ಷ (ಅ10ಗೆ), 5 ಲಕ್ಷ (ಅ11ಗೆ) ಇತ್ಯಾದಿ ಪಾವತಿಸಿದ್ದರು. ಇದರಲ್ಲಿ 82 ಲಕ್ಷ ರೂಪಾಯಿ ವಶಪಡಿಸಿಕೊಳ್ಳಲ್ಪಟ್ಟದ್ದು ಐಟಿ ತನಿಖೆಗೆ ಒಳಪಟ್ಟಿದೆ.

Exit mobile version