5 ಮಂದಿಗೆ ಬೇಲ್ ಕ್ಯಾನ್ಸಲ್ ಆದ್ರೆ ಡಿಬಾಸ್‌ಗೆ ಸಂಕಷ್ಟ ಫಿಕ್ಸ್

ವಾದ-ಪ್ರತಿವಾದ ಆಲಿಸಿ ತೀರ್ಪು ಕಾಯ್ದಿರಿಸಿದ ಹೈ ಕೋರ್ಟ್

Untitled design (90)

ನಟ ದರ್ಶನ್‌

ಡಿಬಾಸ್ ದರ್ಶನ್ ಇನ್ನೆರಡು ತಿಂಗಳಲ್ಲಿ, ಇನ್ನು ಐದಾರು ತಿಂಗಳಲ್ಲಿ ಹೊರಬರ್ತಾರೆ ಅನ್ನೋ ಸುದ್ದಿಗಳು ಜೋರಾಗಿಯೇ ಹರಿದಾಡ್ತಿವೆ. ಅವರು ಹೊರಗೆ ಬರೋದು ಇರಲಿ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಹೊರಗಿರೋ ಆರೋಪಿಗಳೆಲ್ಲಾ ಒಳಗೆ ಹೋಗೋ ಸಾಧ್ಯತೆಯಿದೆ. ಐದು ಮಂದಿ ಬೇಲ್ ಕ್ಯಾನ್ಸಲ್ ಆಗ್ತಿದ್ದು, ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಕೊಳ್ಳಲಿದ್ದಾರೆ ದಾಸ ದರ್ಶನ್.

ಇಲ್ಲಿಯವರೆಗೆ ಒಂದು ಲೆಕ್ಕ.. ಇನ್ಮುಂದೆ ಹೊಸ ಲೆಕ್ಕ. ಇತ್ತೀಚೆಗೆ ಬಂದಂತಹ ಝೈದ್ ಖಾನ್, ರವಿಚಂದ್ರನ್ ಅವರ ಸ್ಟೇಟ್‌‌ಮೆಂಟ್‌‌ಗಳನ್ನ ಕೇಳಿ ಅಬ್ಬಾ.. ನಮ್ ಡಿಬಾಸ್ ಇನ್ನೇನ್ ಹೊರಕ್ಕೆ ಬಂದುಬಿಡ್ತಾರೆ ಗುರು ಅಂತ ಸಂಭ್ರಮಿಸಿದ್ರು ದರ್ಶನ್ ಫ್ಯಾನ್ಸ್. ಆದ್ರೆ ಕಾನೂನಿನ ಚಕ್ರಕ್ಕೆ ಸಿಲುಕಿ ಎಲ್ಲಾ ಊಹೆಗಳು, ಅಂತೆ ಕಂತೆಗಳು, ಲೆಕ್ಕಾಚಾರಗಳು ಉಲ್ಟಾ ಪಲ್ಟಾ ಆಗ್ತಿವೆ.

5 ಮಂದಿಗೆ ಬೇಲ್ ಕ್ಯಾನ್ಸಲ್ ಆದ್ರೆ ಡಿಬಾಸ್‌ಗೆ ಸಂಕಷ್ಟ ಫಿಕ್ಸ್

ವಾದ-ಪ್ರತಿವಾದ ಆಲಿಸಿ ತೀರ್ಪು ಕಾಯ್ದಿರಿಸಿದ ಹೈ ಕೋರ್ಟ್

ಉಪ್ಪು ತಿಂದವನು ನೀರು ಕುಡಿಯಲೇ ಬೇಕು ಅನ್ನುವಂತೆ.. ತಪ್ಪು ಮಾಡಿದವನು ಶಿಕ್ಷೆ ಅನುಭವಿಸಿಯೇ ಅನುಭವಿಸ್ತಾನೆ ಅನ್ನುವಂತಾಗಿದೆ. ಇದರಲ್ಲಿ ಎ-1, ಎ-2 ಆಗಿರೋ ಪವಿತ್ರಾ ಗೌಡ, ದರ್ಶನ್‌ರಿಂದ ಹಿಡಿದು ಎ-12ವರೆಗೂ ಕಾನೂನು ಸಂಕಷ್ಟ ಎದುರಾಗ್ತಿದೆ. ರೇಣುಕಾಸ್ವಾಮಿ ಮರ್ಡರ್ ಕೇಸ್‌‌ನಲ್ಲಿ ಮೊದಲ ಆರೋಪಿಯಿಂದ ಹಿಡಿದು ಎಲ್ಲರಿಗೂ ಬೇಲ್ ಸಿಕ್ಕಿ, ಹೊರಗೆ ಆರಾಮಾಗಿದ್ರು. ಆದ್ರೆ ದರ್ಶನ್-ಪವಿತ್ರಾ ಸೇರಿದಂತೆ ಏಳು ಮಂದಿ ಆರೋಪಿಗಳ ಬೇಲ್ ಕ್ಯಾನ್ಸಲ್ ಆಗಿ ಮತ್ತೆ ಜೈಲು ಸೇರಿದ್ರು.

ಸದ್ಯ ಪವಿತ್ರಾ ಗೌಡ-ದರ್ಶನ್ ಜೊತೆ ಪ್ರದೋಶ್, ನಾಗರಾಜ್, ಜಗದೀಶ್, ಲಕ್ಷ್ಮಣ್ ಹಾಗೂ ಅನುಕುಮಾರ್.. ಪ್ರಕರಣ ಸಂಬಂಧ 7 ಮಂದಿ ಈಗಾಗ್ಲೇ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಇದೀಗ ಇನ್ನು ಉಳಿದ ಐದು ಮಂದಿ ಆರೋಪಿಗಳ ಬೇಲ್ ಕೂಡ ಕ್ಯಾನ್ಸಲ್ ಆಗುವ ಸಾಧ್ಯತೆಯಿದೆ. ಈ ಕುರಿತು ಹೈ ಕೋರ್ಟ್‌‌ನಲ್ಲಿ ವಾದ-ಪ್ರತಿವಾದ ಆಲಿಸಿರೋ ನ್ಯಾಯಾಧೀಶರು ತೀರ್ಪನ್ನು ಕಾಯ್ದಿರಿಸಿದ್ದಾರೆ. ಬಹುತೇಕ ಆರೋಪಿಗಳಾದ ಪವನ್, ವಿನಯ್, ಧನರಾಜ್, ರಾಘವೇಂದ್ರ ಹಾಗೂ ನಂದೀಶ್ ಬೇಲ್‌ಗಳು ಕ್ಯಾನ್ಸಲ್ ಆಗೋದು ಕನ್ಫರ್ಮ್ ಎನ್ನಲಾಗ್ತಿದೆ.

ದಚ್ಚು ಹೊರ ಬರೋದು ಇರ್ಲಿ.. ಹೊರಗಿದ್ದವರೇ ಅಂದರ್..!

ಆರೋಪ ಸಾಬೀತಾದ್ರೆ D ಗ್ಯಾಂಗ್‌ಗೆ ಜೀವಾವಧಿ ಶಿಕ್ಷೆ ಗ್ಯಾರಂಟಿ

ದರ್ಶನ್ ಹೊರಗೆ ಬರೋದು ಇರಲಿ. ಇಲ್ಲಿ ಹೊರಗಿರೋ ಆರೋಪಿಗಳೇ ಒಳಗೆ ಹೋಗ್ತಿದ್ದಾರೆ. ಸೋ.. ನಟ ದರ್ಶನ್‌‌ ಭವಿಷ್ಯ ನಾವು, ನೀವು ಅಂದುಕೊಂಡಷ್ಟು, ಊಹಿಸಿದಷ್ಟು ಸುಲಭವಾಗಿಲ್ಲ. ಅಂದಹಾಗೆ ಇತ್ತೀಚೆಗೆ ಕಾಮಾಕ್ಷಿಪಾಳ್ಯ ಪೊಲೀಸರು ಎಡವಟ್‌ ಮಾಡಿ, ಬೇರೆ ಕಡೆ ಮಹಜರ್ ಮಾಡಿ,‌ ಸುಳ್ಳು ಸಾಕ್ಷಿ ಸೃಷ್ಟಿಸಿದ್ದಾರೆ ಎನ್ನಲಾಗಿತ್ತು. ಆ ಬಗ್ಗೆ ತನಿಖೆ ನಡೆಸಿದ ಪೊಲೀಸರ ವಿರುದ್ಧವೇ ರಿಟ್ ಅರ್ಜಿ ಸಲ್ಲಿಸಿದ್ರು ದರ್ಶನ್ ಪರ ವಕೀಲರು. ಇದೀಗ ಅದೇ ನಟ ದರ್ಶನ್‌ಗೆ ನೆಗೆಟಿವ್ ಆಗ್ತಿದೆ. ಸುಪ್ರೀಂ ಕೋರ್ಟ್ ಪ್ರಕಾರ ತನಿಖೆ ಎಲ್ಲಿ ಆಗಿದೆ ಅನ್ನೋದಕ್ಕಿಂತ ತನಿಖೆಯಲ್ಲಿ ಸಿಕ್ಕಿರೋ ಸಾಕ್ಷ್ಯಗಳು ಮುಖ್ಯವಾಗುತ್ತವೆ.

ಇದೆಲ್ಲಾ ನೋಡ್ತಾ ಇದ್ರೆ ನಟ ದರ್ಶನ್ ಸದ್ಯಕ್ಕೆ ಹೊರಗೆ ಬರೋ ಯಾವುದೇ ಲಕ್ಷಣಗಳು ಕಾಣ್ತಿಲ್ಲ. ಅಷ್ಟೇ ಅಲ್ಲ, ರೇಣುಕಾಸ್ವಾಮಿ ಕೊಲೆ ಪ್ರಕರಣ ಸಾಬೀತಾದರೆ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲಾ 12 ಮಂದಿ ಆರೋಪಿಗಳಿಗೂ ಜೀವಾವಧಿ ಶಿಕ್ಷೆ ಆಗುವ ಸಾಧ್ಯತೆ ಜಾಸ್ತಿ ಇದೆ. ಕಾನೂನು ಎಲ್ಲರಿಗೂ ಒಂದೇ. ನ್ಯಾಯಾಲಯದಲ್ಲಿ ಅನ್ಯಾಯ ಆದವರಿಗೆ ನ್ಯಾಯ ಸಿಗಲೇಬೇಕು. ತಪ್ಪು ಮಾಡಿದ್ರೆ, ಅಂತವರು ಶಿಕ್ಷೆ ಅನುಭವಿಸಲೇಬೇಕು ಅನ್ನೋದಷ್ಟೇ ಸತ್ಯಾಂಶ.

 

Exit mobile version