ದರ್ಶನ್ ಪರ ಧ್ರುವ.. ರಮ್ಯಾ ಪರ ಯೋಗಿ, ರಾಕ್‌ಲೈನ್..!

ಸ್ಯಾಂಡಲ್‌ವುಡ್ ಈಗ ಮನೆಯೊಂದು ನೂರು ಬಾಗಿಲು..?

Untitled design 2025 08 01t163719.268

ಸ್ಯಾಂಡಲ್‌ವುಡ್‌ನಲ್ಲೀಗ ಮನೆಯೊಂದು ಮೂರು ಬಾಗಿಲು ಅಲ್ಲ, ನೂರು ಬಾಗಿಲು ಅನ್ನುವಂತಾಗಿದೆ. ಅದಕ್ಕೆ ಕಾರಣ ಹತ್ತು ಹಲವು. ಆರೋಗ್ಯಕರವಾದಂತಹ ಸ್ಟಾರ್ ವಾರ್ ಹಾಗೂ ಫ್ಯಾನ್ಸ್ ವಾರ್ ಬದಲಿಗೆ, ತಾರಕಕ್ಕೇರುವಂತಹ, ಪ್ರಚೋದಿಸುವಂತಹ ಬೆಳವಣಿಗೆಗಳು ನಡೆಯುತ್ತಿವೆ. ಸದ್ಯ ದರ್ಶನ್ ಫ್ಯಾನ್ಸ್ ವರ್ಸಸ್ ರಮ್ಯಾ, ಪ್ರಥಮ್ ಪ್ರಕರಣಕ್ಕೆ ಧ್ರುವ ಸರ್ಜಾ, ರಾಕ್‌‌ಲೈನ್, ಭಾಮಾ ಹರೀಶ್, ಲೂಸ್‌ಮಾದ ಕೂಡ ಎಂಟ್ರಿ ಕೊಟ್ಟಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ನಟ ದರ್ಶನ್ ಪುಡಾಂಗ್ ಹಾಗೂ ಪುಂಡ ಅಭಿಮಾನಿಗಳ ಅಟ್ಟಹಾಸ ಸಿಕ್ಕಾಪಟ್ಟೆ ಜೋರಾಗಿದೆ. ಅದರಿಂದ ಬೇಸತ್ತ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಹಾಗೂ ಪ್ರಥಮ್ ನೇವಾಗಿಯೇ ಅಂತಹ ಕೆಟ್ಟ ಹುಳಗಳ ನಡುವೆ ಸಮರ ಸಾರಿದ್ದಾರೆ. ಈಗಾಗ್ಲೇ ಎಸ್‌ಪಿ ಆಫೀಸ್ ಹಾಗೂ ಕಮಿಷನರ್ ಕಚೇರಿಯಲ್ಲಿ ಕೇಸ್‌ಗಳು ದಾಖಲಾಗಿವೆ.

ಅಶ್ಲೀಲ ಹಾಗೂ ಅಸಭ್ಯವಾಗಿ‌‌ ಮೆಸೇಜ್ ಮಾಡಿರೋ ಯಾರೇ ಇದ್ರೂ ಅವರಿಗೆ ತಕ್ಕ ಶಿಕ್ಷೆ ಆಗಬೇಕು ಅಂತ ಸ್ಯಾಂಡಲ್ ವುಡ್‌ನ ಹಲವು ಗಣ್ಯರು ಪಟ್ಟು ಹಿಡಿದಿದ್ದಾರೆ. ಸಿದ್ಲಿಂಗು ಚಿತ್ರದಲ್ಲಿ ರಮ್ಯಾ ಜೊತೆ ನಟಿಸಿದ್ದ ಲೂಸ್ ಮಾದ ಯೋಗಿ ಕೂಡ ಅದಕ್ಕೆ ಪ್ರತಿಕ್ರಿಯಿಸಿದ್ದಾರೆ. ರಮ್ಯಾ ಅವರಿಗೆ ಮೆಸೇಜ್ ಮಾಡಿದವರಿಗೆ ಎಚ್ಚರಿಕೆ ಕೊಡಬೇಕು. ಅಂತವರಿಗೆ ಚಪ್ಲಿಯಲ್ಲಿ ಹೊಡೀಬೇಕು ಅಂತ ಆಕ್ರೋಶಭರಿತವಾಗಿ ಮಾತನಾಡಿದ್ದಾರೆ. ಸ್ಟಾರ್‌ವಾರ್ ಕಾಮನ್. ಆದ್ರೆ ಥಿಯೇಟರ್ ನಲ್ಲಿ ತನ್ನ ಕೈಗೂ ಬ್ಲೇಡ್ ಹಾಕಿದ ಘಟನೆ ಒಮ್ಮೆ ನಡೆದಿತ್ತು ಅಂತ ಶಾಕಿಂಗ್ ಸ್ಟೇಟ್‌ಮೆಂಟ್ ನೀಡಿದ್ದಾರೆ.

ಸದ್ಯದ ಮಟ್ಟಿಗೆ ಸ್ಯಾಂಡಲ್‌ವುಡ್‌ನಲ್ಲಿ ಎಲ್ಲವೂ ಸರಿ ಇಲ್ಲ. ಅದಕ್ಕೆ ಕಾರಣ ನಾಯಕತ್ವದ ಕೊರತೆ. ರೆಬೆಲ್ ಸ್ಟಾರ್ ಅಂಬರೀಶ್ ಹೋದ ಬಳಿಕ ಯಾರೂ ಆ ಸ್ಥಾನ ತುಂಬಲಾಗ್ತಿಲ್ಲ. ಕಲಾವಿದರ ಸಂಘದ ಕಾರ್ಯದರ್ಶಿ ರಾಕ್ ಲೈನ್ ವೆಂಕಟೇಶ್‌ಗೆ ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಭಾಮಾ ಹರೀಶ್ ಮನವಿ ಮಾಡಿದ್ದು, ಕಲಾವಿದರನ್ನ ಕರೆದು ಮಾತನಾಡಬೇಕು ಅಂತ ಹೇಳಿದ್ರು. ಇದೆ ವೇಳೆ ರಾಕ್ ಲೈನ್ ಮಾತನಾಡಿ, ಯಾರೇ ಸ್ಟಾರ್ ಆಗ್ಲಿ ಅವ್ರು ತಮ್ಮ ಅಭಿಮಾನಿಗಳಿಗೆ ಮನವರಿಕೆ‌ ಮಾಡಬೇಕು. ಎಚ್ಚರಿಕೆ ಕೊಡಬೇಕು ಅಂತ ಹೇಳಿದ್ರು.

ಸದ್ಯ ಸ್ಟಾರ್ ನಟರುಗಳ ವರ್ತನೆಗೆ ರಾಕ್‌ಲೈನ್ ವೆಂಕಟೇಶ್ ಬೇಸರ ವ್ಯಕ್ತಪಡಿಸಿದರು. ಸಿನಿಮಾ ಮಾಡೋಕೆ ಭಯ ಆಗ್ತಿದೆ. ಸ್ಟಾರ್‌‌ಗಳು ಒಬ್ಬರನ್ನೊಬ್ಬರು ಕಾಲೆಳೆಯೋ ಕೆಲಸಕ್ಕೆ ರೆಡಿಯಾಗ್ತಿದ್ದಾರೆ. ಅತ್ಯಂತ ಕೆಟ್ಟ ಬೆಳವಣಿಗೆ ಆಗ್ತಿದೆ ಅಂತ ಕನ್ನಡ ಸಿನಿಮಾ‌‌ ಇಂಡಸ್ಡ್ರಿ ಒಡೆದ ಮನೆಯಾಗಿದೆ ಅನ್ನೋದನ್ನ ಬಹಿರಂಗವಾಗಿ ಒಪ್ಪಿಕೊಂಡ್ರು. ಪರೋಕ್ಷವಾಗಿ ದರ್ಶನ್ ಅವರ ಫ್ಯಾನ್ಸ್ ಮಾಡಿರೋ ಕೆಲಸಕ್ಕೂ ಬೇಸರ ವ್ಯಕ್ತಪಡಿಸಿದ್ರು.

ಇದಲ್ಲದೆ, ಮೋಹಕತಾರೆ ಹಾಗೂ ಡಿಬಾಸ್ ಫ್ಯಾನ್ಸ್ ನಡುವಿನ ಟಗ್ ಆಫ್ ವಾರ್ ಬಗ್ಗೆ ರಿಯಾಕ್ಟ್ ಮಾಡಿದ ಧ್ರುವ ಸರ್ಜಾ, ನಟ ದರ್ಶನ್ ಪರ ಬ್ಯಾಟ್ ಬೀಸಿದ್ದಾರೆ. ಪ್ರಥಮ್ ಮಾತನಾಡೋದನ್ನ ಕಲಿಯಬೇಕು. ರಮ್ಯಾ ನಡೆ ಸರಿ ಇದೆ ಅಂತ ತಮ್ಮ ಅಭಿಪ್ರಾಯ ಹೊರಹಾಕಿದ್ರು ಆ್ಯಕ್ಷನ್ ಪ್ರಿನ್ಸ್. ದರ್ಶನ್ ಧ್ರುವ ನಡುವೆ ಏನೇ ಮನಸ್ತಾಪ ಇದ್ರೂ ಸಹ, ನಟ ದರ್ಶನ್ ಪರ ಧ್ರುವ ನಿಂತಿರೋದು ಇಬ್ಬರ ಫ್ಯಾನ್ಸ್‌ಗೂ ಖುಷಿ ಕೊಟ್ಟಿದೆ.

ಇದೆಲ್ಲಾ ನೋಡ್ತಿದ್ರೆ, ಕನ್ನಡ ಚಿತ್ರರಂಗದಲ್ಲಿ ಸ್ಟಾರ್‌‌‌ಗಳು ಆಗಾಗ ಸಿನಿಮಾ ಮಾಡಿ, ಸುದ್ದಿ ಆಗೋದಕ್ಕಿಂತ. ಈ ರೀತಿ ಕೆಲ ಕಹಿ ಘಟನೆಗಳಿಂದ ಸದ್ದು ಮಾಡೋದು ದುರಂತ. ಹಾಗಾದ್ರೆ ಮುಂದೆ ಏನಾಗುತ್ತೆ ಸಿನಿಮಾ‌ ಇಂಡಸ್ಡ್ರಿ ಪರಿಸ್ಥಿತಿ ಅನ್ಮೋದನ್ನ ಕಾದು ನೋಡಬೆಕಿದೆ. ಆ ದೇವರಂತೂ ಕಾಪಾಡೋಕೆ ಸಾಧ್ಯವಿಲ್ಲ. ಇವರುಗಳೇ ಅರಿತುಕೊಂಡು ಬಾಳಿದ್ರೆ ಚಂದನವನಕ್ಕೆ ಉಳಿಗಾಲ. ಇಲ್ಲವಾದ್ರೆ ಯಾವ ಸಂಘ ಸಂಸ್ಥೆಗಳಿಗೂ ಸಮಸ್ಯೆಗಳನ್ನ ಬಗೆಹರಿಸೋ ತಾಕತ್ತು ಇಲ್ಲ ಅನ್ನೋದು ಈಗಾಗ್ಲೇ ಪ್ರೂವ್ ಆಗಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲಂ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version