“ನಿಮ್ಮನ್ನು ಜೈಲಿನಿಂದ ಬಿಡಿಸೋಕೆ ಇಷ್ಟವಿಲ್ಲ”; ಪತ್ನಿ ವಿಜಯಲಕ್ಷ್ಮೀ ಮಾತಿಗೆ ನಕ್ಕು ಹೌದ ಪುಟ್ಟ ಎಂದ ದರ್ಶನ್‌

Your paragraph text 2026 10 28T143820.018

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ (Darshan) ಅವರನ್ನು ಭೇಟಿಯಾದ ಪತ್ನಿ ವಿಜಯಲಕ್ಷ್ಮೀ , ಧನ್ವೀರ್ ಆಡಿಯೋ ಸಂಬಂಧ ಪತಿ ಜೊತೆ ಚರ್ಚಿಸಿದ್ದಾರೆ. ಈ ವೇಳೆ, “ನನಗೆ ನಿಮ್ಮನ್ನು ಜೈಲಿನಿಂದ ಬಿಡಿಸೋಕೆ ಇಷ್ಟವಿಲ್ಲ ಗೊತ್ತಾ” ಎಂದು ವಿಜಯಲಕ್ಷ್ಮೀ ಹೇಳಿದಾಗ, ದರ್ಶನ್ “ಹೌದಾ ಪುಟ್ಟಾ” ಎಂದು ನಕ್ಕಿದ್ದಾರೆ ಎನ್ನಲಾಗಿದೆ.

ದರ್ಶನ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡಿಸಲು ವಿಜಯಲಕ್ಷ್ಮೀ ಅವರಿಗೆ ಇಷ್ಟವಿಲ್ಲ ಎಂಬ ಅರ್ಥ ಬರುವ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಆಡಿಯೋವೊಂದು ವೈರಲ್ ಆಗಿರುವ ಬೆನ್ನಲ್ಲೇ ಈ ವಿಚಾರ ಮುನ್ನೆಲೆಗೆ ಬಂದಿದೆ.

“ನಿಮ್ಮನ್ನು ಬಿಡಿಸೋಕೆ ಇಷ್ಟವಿಲ್ಲ” ಎಂದ ವಿಜಯಲಕ್ಷ್ಮೀ?

ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಅವರನ್ನು ವಿಜಯಲಕ್ಷ್ಮೀ ಭೇಟಿ ಮಾಡಿದ ಸಂದರ್ಭದಲ್ಲಿ ಈ ವಿಚಾರ ಪ್ರಸ್ತಾಪವಾಗಿದೆ ಎನ್ನಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ತಮ್ಮ ಮಾತುಗಳನ್ನು ತಪ್ಪಾಗಿ ಅರ್ಥೈಸಿ ಹೊರಗಡೆ ಬಿಂಬಿಸಲಾಗುತ್ತಿದೆ ಎಂಬ ಬೇಸರವನ್ನು ವಿಜಯಲಕ್ಷ್ಮೀ ಪತಿಯ ಬಳಿ ವ್ಯಕ್ತಪಡಿಸಿದ್ದಾರೆ.

“ನನಗೆ ನಿಮ್ಮನ್ನು ಜೈಲಿನಿಂದ ಬಿಡಿಸೋಕೆ ಇಷ್ಟವಿಲ್ಲ ಗೊತ್ತಾ” ಎಂಬ ಮಾತನ್ನು ವಿಜಯಲಕ್ಷ್ಮೀ ಹೇಳಿದ್ದಾರೆ ಎನ್ನಲಾಗಿದ್ದು, ಅದಕ್ಕೆ ದರ್ಶನ್ ನಗುತ್ತಾ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ. 

ಧನ್ವೀರ್ ಆಡಿಯೋ ವಿವಾದದ ಬಗ್ಗೆಯೂ ಚರ್ಚೆ?

ನಟ ಧನ್ವೀರ್ ಗೌಡಗೆ ಸಂಬಂಧಿಸಿದ ಆಡಿಯೋ ವಿವಾದವೂ ದರ್ಶನ್ ಮತ್ತು ವಿಜಯಲಕ್ಷ್ಮೀ ನಡುವಿನ ಮಾತುಕತೆಯಲ್ಲಿ ಪ್ರಸ್ತಾಪವಾಗಿದೆ ಎನ್ನಲಾಗಿದೆ. ಧನ್ವೀರ್, ನಾಗರಾಜ್ ಹಾಗೂ ಇತರರೊಂದಿಗೆ ನಡೆದಿರುವ ಮಾತುಕತೆಗಳು, ನಿಂದನೆ ಆರೋಪಗಳು ಮತ್ತು ಧನ್ವೀರ್ ಮನೆ ಬಳಿ ಹಣ ಕೇಳಲು ಹೋದಾಗ ನಡೆದ ಘಟನೆಗಳ ಬಗ್ಗೆ ವಿಜಯಲಕ್ಷ್ಮೀ ಅವರು ದರ್ಶನ್‌ಗೆ ವಿವರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ಧನ್ವೀರ್ ಮತ್ತು ವಿಜಯಲಕ್ಷ್ಮೀ ನಡುವಿನ ವಿವಾದದ ಬಗ್ಗೆ ಹಲವು ವಿಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆಡಿಯೋ ತುಣುಕುಗಳು ಹಾಗೂ ಪರಸ್ಪರ ಆರೋಪಗಳು ಚರ್ಚೆಗೆ ಕಾರಣವಾಗಿವೆ.

“ಧನ್ವೀರ್ ಹಿಂದೆ ಯಾರಿದ್ದಾರೆ?” ಎಂದು ಪ್ರಶ್ನಿಸಿದರೇ ದರ್ಶನ್?

ಧನ್ವೀರ್‌ಗೆ ಸಂಬಂಧಿಸಿದ ವಿವಾದದ ಕುರಿತು ಚರ್ಚಿಸುವಾಗ, “ಇಷ್ಟೆಲ್ಲ ಮಾಡುತ್ತಿದ್ದಾನೆ ಎಂದರೆ ಆತನ ಹಿಂದೆ ಯಾರಿದ್ದಾರೆ?” ಎಂದು ದರ್ಶನ್ ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ವಿಜಯಲಕ್ಷ್ಮೀ ಅವರು ತಮಗೆ ತಿಳಿದಿಲ್ಲ ಎಂದು ಉತ್ತರಿಸಿದ್ದಾರೆ ಎನ್ನಲಾಗಿದೆ.

ವಿವಾದದ ಹಿನ್ನೆಲೆ ಭಾವನಾತ್ಮಕವಾಗಿ ಪ್ರತಿಕ್ರಿಯಿಸುವ ಬದಲು ಕಾನೂನಿನ ಚೌಕಟ್ಟಿನಲ್ಲಿಯೇ ಮುಂದುವರಿಯುವಂತೆ ದರ್ಶನ್ ಪತ್ನಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. “ಆತ ಏನಾದರೂ ಮಾತನಾಡಲಿ, ನೀವು ಕಾನೂನು ಬಿಟ್ಟು ಹೋಗಬೇಡಿ” ಎಂದು ದರ್ಶನ್ ಹೇಳಿದ್ದಾರೆ.

“ನಮಗೂ ಕಾಲ ಬರುತ್ತೆ” ಎಂದು ಸಮಾಧಾನ?

ಧನ್ವೀರ್ ವಿವಾದದಿಂದ ಬೇಸರಗೊಂಡಿದ್ದ ವಿಜಯಲಕ್ಷ್ಮೀ ಅವರಿಗೆ ದರ್ಶನ್ ಸಮಾಧಾನ ಹೇಳಿದ್ದಾರೆ ಎನ್ನಲಾಗುತ್ತಿದೆ. “ನಮಗೂ ಕಾಲ ಬರುತ್ತೆ” ಎಂದು ಪತ್ನಿಗೆ ಧೈರ್ಯ ತುಂಬಿದ್ದಾರೆ.

Exit mobile version