ಫ್ಯಾನ್ಸ್ ಮಾಡಿದ ಕಿತಾಪತಿ.. ರಮ್ಯಾ-ರಕ್ಷಿತಾ ರಾ ಫೈಟ್..!

ವಿಷಯ ತಾರಕಕ್ಕೇರಿದ್ರೆ ಡಿಬಾಸ್ ಬೇಲ್ ಖತಂ.. ಖತಂ!

Untitled design 2025 07 28t194525.319

ದರ್ಶನ್ ಫ್ಯಾನ್ಸ್ ಮಾಡಿದ ತಪ್ಪುಗಳಿಂದಾಗಿ ಡಿಬಾಸ್ ಬೇಲ್ ಕ್ಯಾನ್ಸಲ್ ಖತಂ ಆಗೋ ಚಾನ್ಸಸ್ ಜಾಸ್ತಿ ಇದೆ. ಅಷ್ಟೇ ಅಲ್ಲ, ಈ ವಿಷಯಕ್ಕೆ ರಾಜ್ಯ ಮಹಿಳಾ ಆಯೋಗ, ಹೋಮ್ ಮಿನಿಸ್ಟರ್ ಕೂಡ ಎಂಟ್ರಿ ಕೊಟ್ಟಿದ್ದಾರೆ. ಒಂದ್ಕಡೆ ಭಯಮುಕ್ತ ಚಿತ್ರರಂಗ ನೋಡಲು ರಮ್ಯಾಗೆ ಪ್ರಥಮ್ ಸಾಥ್ ನೀಡ್ತಿದ್ರೆ, ಮತ್ತೊಂದೆಡೆ ರಮ್ಯಾಗೆ ಕಾನೂನು ನೆರವಾಗ್ತಿದೆ. ಈ ಎಲ್ಲಾ ಬೆಳವಣಿಗೆಗಳ ಕಂಪ್ಲೀಟ್ ಕಹಾನಿ ಇಲ್ಲಿದೆ.

ಈ ಹಿಂದೆ ಒಮ್ಮೆ ದರ್ಶನ್ ವಿಚಾರಣೆಯ ಸಮಯದಲ್ಲಿ ಪುಂಡಾಟಿಕೆ ಮೆರೆದ ಒಂದಷ್ಟು ಮಂದಿ ದರ್ಶನ್ ಫ್ಯಾನ್ಸ್‌ಗೆ ಖಾಕಿ ಲಾಠಿ ರುಚಿ ತೋರಿಸಿತ್ತು. ಥಿಯೇಟರ್ ಬಳಿ ಕೆಟ್ಟ ಹೇಳಿಕೆಗಳಿಂದ ನಿಂದಿಸ್ತಿದ್ದ ದರ್ಶನ್ ಫ್ಯಾನ್ಸ್‌ನ ಪೊಲೀಸರು ಹೊಯ್ಸಳ ಜೀಪ್‌ನಲ್ಲಿ ಕರೆದೊಯ್ದು ನಟ್ಟು ಬೋಲ್ಟು ರಿಪೇರಿ ಮಾಡಿದ್ರು. ಇದೀಗ ಮತ್ತೆ ಸೋಶಿಯಲ್ ಮೀಡಿಯಾನ ಅಸ್ತ್ರವನ್ನಾಗಿ ಬಳಸಿಕೊಂಡು ಮೆರೆಯೋಕೆ ಶುರುವಿಟ್ಟಿದ್ದಾರೆ.

ಅದಕ್ಕೆ ಕಾನೂನು ಇದೆ, ಕೋರ್ಟ್‌ ಇದೆ. ಮಹಿಳಾ ಆಯೋಗ ಇದೆ. ಲಾ ಅಂಡ್ ಆರ್ಡರ್ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ಅಂತ ಗೊತ್ತಿದ್ದೂ ಸಹ ಬಾಲ ಬಿಚ್ಚುತ್ತಿರೋದು ದುರಂತ. ಇನ್ನು ಆ ಪುಂಡ, ಪೋಕರಿ ಫ್ಯಾನ್ಸ್ ಮಾಡಿದಂತಹ ಎಡವಟ್‌‌ನಿಂದ ಕುಚಿಕುಗಳಂತಿದ್ದ ರಮ್ಯಾ-ರಕ್ಷಿತಾ ನಡುವೆ ರಾ & ರಗಡ್ ಫೈಟ್ ಶುರುವಾಗಿದೆ.

ಅಂದಹಾಗೆ ಈ ವಿಷಯ ತಾರಕಕ್ಕೇರಿದ್ರೆ ಡಿಬಾಸ್ ಬೇಲ್ ರಿಜೆಕ್ಟ್ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಯೆಸ್.. ಮೊದಲೇ ಹೈ ಕೋರ್ಟ್‌ ಮಾಡಿರೋ ತಪ್ಪುಗಳನ್ನ ಸುಪ್ರೀಂ ಕೋರ್ಟ್‌ ಹೈಲೈಟ್ ಮಾಡಿ ಹೇಳಿದೆ. ಇನ್ನು ಒಂದು ವಾರ ಅಥ್ವಾ ಹತ್ತು ದಿನದಲ್ಲಿ ದರ್ಶನ್ ಬೇಲ್ ಭವಿಷ್ಯ ನಿರ್ಧಾರ ಆಗ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಫ್ಯಾನ್ಸ್ ಹೆಸರಿನಲ್ಲಿ ಹೀಗೆ ಕೆಲ ಮಂದಿ ಮೆರೆಯುತ್ತಿರೋದು ಅವರಿಗೇ ಮುಳುವಾಗಲಿದೆ.

ಕೆಟ್ಟ ಕೆಟ್ಟದಾಗಿ ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡೋರಿಗೆ ಛಾಟಿ ಬೀಸಿದೆ ರಾಜ್ಯ ಮಹಿಳಾ ಆಯೋಗ. ಯೆಸ್.. ಈ ಕುರಿತು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದು, ರಮ್ಯಾ ವಿರುದ್ಧ ಕಮೆಂಟ್ ಮಾಡಿರೋರಿಗೆ ಕಠಿಣ ಶಿಕ್ಷೆ ನೀಡೋದಾಗಿ ಹೇಳಿದ್ದಾರೆ. ಹೆಣ್ಣು ಮಗಳನ್ನ ಮಾನಸಿಕವಾಗಿ ಕೊಲ್ಲುವ ಯತ್ನ ಮಾಡಿದವರಿಗೆ ಕನಿಷ್ಟ 3 ರಿಂದ 7 ವರ್ಷ ಜೈಲು ಶಿಕ್ಷೆ ಸಾಧ್ಯತೆಯಿದೆ ಎಂದಿದ್ದಾರೆ.

ಇನ್ನು ಶಾಂತಿಯನ್ನ ಕದಡುತ್ತಿರುವ ಹಾಗೂ ಅಶಿಸ್ತಿನಂದ ವರ್ತಿಸುತ್ತಿರೋ ದರ್ಶನ್ ಅಭಿಮಾನಿಗಳ ವಿಚಾರಕ್ಕೆ ರಾಜ್ಯ ಗೃಹಮಂತ್ರಿ ಡಾ. ಜಿ ಪರಮೇಶ್ವರ ಕೂಡ ಪ್ರತಿಕ್ರಿಯಿಸಿದ್ದಾರೆ. ನಾವಾಗಿ ನಾವೇ ಈ ವಿಚಾರ ದರ್ಶನ್ ಫ್ಯಾನ್ಸ್ ವಿರುದ್ಧ ಸುಮೋಟೋ ಕೇಸ್ ದಾಖಲಿಸಲು ಆಗುವುದಿಲ್ಲ. ಆದರೆ ರಮ್ಯಾ ದೂರು ದಾಖಲಿಸಿದ್ರೆ ಖಂಡಿತಾ ಪೊಲೀಸರು ಕ್ರಮ ಕೈಗೊಳ್ತಾರೆ ಎಂದಿದ್ದಾರೆ.

ಈ ಕುರಿತು ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ನಮ್ಮ ಗ್ಯಾರಂಟಿ ನ್ಯೂಸ್‌ಗೆ ಎಕ್ಸ್‌ಕ್ಲೂಸಿವ್ ಆಗಿ ಪ್ರತಿಕ್ರಿಯಿಸಿದ್ದು, ಪ್ರಥಮ್‌ಗೆ ದರ್ಶನ್ ಫ್ಯಾನ್ಸೇ ಬೆದರಿಸಿದ್ದಾರೆ ಅನ್ನೋದಕ್ಕೆ ಪ್ರೂಫ್ ಏನಿದೆ..? ಸದ್ಯಕ್ಕೆ ದರ್ಶನ್ ಅಭಿಮಾನಿಗಳಿಗೆ ಬುದ್ದಿ ಹೇಳುವ ಪರಿಸ್ಥಿತಿಯಲ್ಲಿ ನಾವಿಲ್ಲ ಅಂತ ಚಿತ್ರರಂಗದ ಮಾತೃಸಂಸ್ಥೆಯ ಅಧ್ಯಕ್ಷರೇ ಜಾರಿಕೊಂಡಿದ್ದಾರೆ.

ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಬರೀ ನಟಿಯಷ್ಟೇ ಅಲ್ಲ. ಮಾಜಿ ಸಂಸದೆ ಕೂಡ ಹೌದು. ಕಾಂಗ್ರೆಸ್ ಪಕ್ಷದಿಂದಲೇ ಪಾರ್ಲಿಮೆಂಟ್ ಮೆಟ್ಟಿಲೇರಿದ್ದ ಮಾಜಿ ಎಂಪಿ ಪರ ಕಾಂಗ್ರೆಸ್ ಕಾರ್ಯಕರ್ತರು ನಿಂತಿದ್ದಾರೆ. ಮಹಿಳಾ ಆಯೋಗಕ್ಕೆ ರಮ್ಯಾ ವಿರುದ್ಧ ಕೆಟ್ಟದಾಗಿ ಕಮೆಂಟ್ ಮಾಡಿದವರನ್ನ ಶಿಕ್ಷಿಸಲು ಮನವಿ ಪತ್ರ ನೀಡಿದ್ದಾರೆ.

ಇಷ್ಟೆಲ್ಲಾ ಆದ್ಮೇಲೆ ಮೋಹಕತಾರೆ ಸುಮ್ಮನೆ ಕೈ ಕಟ್ಟಿ ಕೂರುತ್ತಾರೆಯೇ..? ಚಾನ್ಸೇ ಇಲ್ಲ. ಸದ್ಯದಲ್ಲೇ ಸೈಬರ್ ಕ್ರೈಂ ಹಾಗೂ ಕಮಿಷನರ್‌ಗೂ ದೂರು ನೀಡಲಿದ್ದು, ಪುಂಡಾಟಿಕೆ ಮೆರೆಯುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕಾನೂನುನಾತ್ಮಕ ಹೋರಾಟ ಮಾಡಲು ಸಜ್ಜಾಗ್ತಿದ್ದಾರೆ. ರಮ್ಯಾರ ಈ ನಡೆಗೆ ನಟ ಪ್ರಥಮ್ ಕೂಡ ಸಾಥ್ ನೀಡ್ತಿದ್ದಾರೆ.

ದರ್ಶನ್ ಅಂಧಾಭಿಮಾನಿಗಳ ವಿರುದ್ಧ ಧ್ವನಿ ಎತ್ತಿದ್ದ ನಟ ಪ್ರಥಮ್‌ಗೆ ಕಳೆದ ಒಂದು ವರ್ಷದಿಂದ ಫ್ಯಾನ್ಸ್ ಕಿರುಕುಳ ಕೊಡ್ತಾನೇ ಇದ್ದಾರೆ. ಈ ಕುರಿತು ಜ್ಞಾನ ಭಾರತಿ ಪೊಲೀಸ್ ಠಾಣೆಗೆ ಪ್ರಥಮ್ ದೂರು ನೀಡಿದ್ರು. ಪೊಲೀಸರು ಕೂಡ ಒಂದಷ್ಟು ಮಂದಿಯನ್ನ ಕರೆಸಿ ವಾರ್ನ್ ಮಾಡಿ ಕಳಿಸಿದ್ರು. ಇದೀಗ ಇದೇ ಜುಲೈ 22ರಂದು ನಟ ರಕ್ಷಕ್ ಬುಲೆಟ್, ಇಪ್ಪತ್ತು ಮಂದಿ ರೌಡಿ ಗ್ಯಾಂಗ್‌ನೊಂದಿಗೆ ಪ್ರಥಮ್‌ಗೆ ಜೀವ ಬೆದರಿಕೆ ಹಾಕಿದ್ದಾರೆ.

ಡ್ಯಾಗರ್‌ನಂತಹ ಡೆಡ್ಲಿ ವೆಪನ್‌‌ಗಳನ್ನ ತೋರಿಸಿ ಪ್ರಥಮ್‌ಗೆ ಬೆದರಿಸಿದ್ರು ರಕ್ಷಕ್ ಬುಲೆಟ್. ಆದ್ರೆ ರಮ್ಯಾ ಸದ್ಯ ದರ್ಶನ್ ಫ್ಯಾನ್ಸ್ ವಿರುದ್ಧ ಸಮರ ಸಾರಿರುವ ವಿಚಾರ ಪ್ರಥಮ್ ನಟಿ ರಮ್ಯಾಗೆ ತಮ್ಮ ಬೆಂಬಲ ಸೂಚಿಸಿ ಪೋಸ್ಟ್ ಮಾಡಿದ್ದಾರೆ. ಐ ಸ್ಟ್ಯಾಂಡ್ ವಿತ್ ರಮ್ಯಾ ಮೇಡಂ. ಭಯಮುಕ್ತ ಚಿತ್ರರಂಗಕ್ಕಾಗಿ ಕಲಾವಿದರು ಧ್ವನಿ ಎತ್ತಬೇಕಿದೆ. ಇಲ್ಲವಾದಲ್ಲಿ ಇದ್ದೂ ವೇಸ್ಟ್ ಅನ್ನೋ ಅರ್ಥದಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಅದೇನೇ ಇರಲಿ, ಸ್ಯಾಂಡಲ್‌ವುಡ್ ಮಟ್ಟಿಗೆ ಇದೆಲ್ಲಾ ಒಳ್ಳೆಯ ಬೆಳವಣಿಗೆ ಅಲ್ಲವೇ ಅಲ್ಲ. ನಟ ಪ್ರಥಮ್‌ ಹಾಗೂ ರಮ್ಯಾಗೆ ಪೊಲೀಸ್ ಇಲಾಖೆ ಭದ್ರತೆ ನೀಡಬೇಕಿದೆ. ಬೆದರಿಕೆ ಹಾಕಿದವರು ಹಾಗೂ ಕಮೆಂಟ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ. ಈಗಲೇ ಇಂತಹ ಪುಂಡರನ್ನ ಮಟ್ಟ ಹಾಕದಿದ್ರೆ ಮುಂದಿನ ದಿನಗಳಲ್ಲಿ ಅವ್ರಿಗೆ ಲಂಗು ಲಗಾಮು ಹಾಕೋದು ಕಷ್ಟವಾಗಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್  

Exit mobile version