ಡಿಬಾಸ್ ದರ್ಶನ್ ಹಾಗೂ ಡಿ ಗ್ಯಾಂಗ್ ಕೊನೇ ಗಳಿಗೆಯಲ್ಲಿ ಇದ್ದಂತಹ ಆ ಒಂದೇ ಒಂದು ಹೋಪ್ ಕೂಡ ಕಳ್ಕೊಂಡ್ಬಿಟ್ಟಿದೆ. ಹೌದು ಸುಪ್ರೀಂವರೆಗೂ ಹೋಗಿ ಬೇಲ್ ಇಲ್ಲ ಅಂತ ಬಂದ ದಾರಿಗೆ ಸುಂಕವಿಲ್ಲದೆ ವಾಪಸ್ ಆಗಿದ್ದಾರೆ. ಇದ್ರಿಂದ ಭಾರೀ ಮುಖಭಂಗ ಆಗಿದ್ದು, ದರ್ಶನ್‌ನ ನಂಬಿ ಕ್ಯೂನಲ್ಲಿ ಇದ್ದಂತಹ ಡೈರೆಕ್ಟರ್ಸ್ ಹಾಗೂ ಪ್ರೊಡ್ಯೂಸರ್ಸ್ ಅತಂತ್ರದಲ್ಲಿದ್ದಾರೆ. ಅದೂ ಒಬ್ಬರಲ್ಲ, ಇಬ್ಬರಲ್ಲ.. ಬರೋಬ್ಬರಿ ಐದು ಮಂದಿ ಅನ್ನದಾತರು.
- ಇದ್ದ ಆ ಒಂದೇ ಒಂದು ಹೋಪ್ ಕೂಡ ಕಳ್ಕೊಂಡ್ಬಿಟ್ರು ದಾಸ
- ದಚ್ಚು ಬೇಲ್‌ಗೆ ಸುಪ್ರೀಂ ಅಂಕುಶ.. D ಗ್ಯಾಂಗ್‌ಗೆ ಬ್ಯಾಡ್ ಟೈಂ
- 7 ತಿಂಗಳಲ್ಲಿ 10 ಸಾಕ್ಷಿ ವಿಚಾರಣೆ.. ವರ್ಷದಲ್ಲಿ ಆಗಬೇಕಿದೆ 60
- ಚಾರ್ಜ್‌ಶೀಟ್‌ನಲ್ಲಿ 272 ಸಾಕ್ಷಿ.. ಇನ್ನೊಂದು ವರ್ಷ ಲಾಕ್..!
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಡಿ ಗ್ಯಾಂಗ್ ಈಗಾಗ್ಲೇ ಜೈಲು ಸೇರಿ ಬಹಳ ದಿನಗಳೇ ಕಳೆಯಿತು. ಬೇಲ್ ಮೇಲೆ ಹೊರಗೆ ಇದ್ದಂತಹ ದಾಸನಿಗೆ 2025ರ ಆಗಸ್ಟ್‌ನಲ್ಲಿ ಸ್ವತಃ ಸುಪ್ರೀಂ ಕೋರ್ಟ್ ಬೇಲ್ ಕ್ಯಾನ್ಸಲ್ ಮಾಡಿ, ಮತ್ತೆ ಅವ್ರನ್ನ ಜೈಲಿಗಟ್ಟಿತ್ತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಅವ್ರ ಆಪ್ತ ಗೆಳತಿ ಪವಿತ್ರಾ ಗೌಡ ಕೂಡ ಪ್ರಮುಖ ಆರೋಪಿಯಾಗಿ ಜೈಲು ಹಕ್ಕಿ ಆಗಿರೋದು ಗೊತ್ತೇಯಿದೆ.
ಕರ್ನಾಟಕ ಪೊಲೀಸರು ಸಲ್ಲಿಸಿರೋ ಚಾರ್ಜ್‌ಶೀಟ್‌ನಲ್ಲಿ ಬರೋಬ್ಬರಿ 272 ಸಾಕ್ಷಿಗಳಿವೆ. ಕೋರ್ಟ್ ಟ್ರಯಲ್ಸ್ ಈಗಾಗ್ಲೇ ಶುರುವಾಗಿದ್ದು, ಆ ಸಾಕ್ಷಿಗಳ ಪೈಕಿ ಈ 7 ತಿಂಗಳಲ್ಲಿ ಕೇವಲ 10 ಸಾಕ್ಷಿಗಳ ವಿಚಾರಣೆ ಮಾತ್ರ ಆಗಿದೆ. ಇನ್ನೂ 262 ಸಾಕ್ಷಿಗಳ ವಿಚಾರಣೆ ಆಗೋದು ಬಾಕಿ ಉಳಿದಿದೆ. ಕೋರ್ಟ್‌ನಲ್ಲಿ ವಿಟ್ನೆಸ್‌ಗಳ ವಿಚಾರಣೆ ತಡವಾಗ್ತಿದೆ. ಹಾಗಾಗಿ ಜಾಮೀನು ಮಂಜೂರು ಮಾಡಿ ಅಂತ ದರ್ಶನ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ರು. ಆದ್ರೀಗ ಸುಪ್ರೀಂ ಅಕ್ಷರಶಃ ದಾಸ ದರ್ಶನ್ & ಟೀಂಗೆ ಶಾಕ್ ನೀಡಿದೆ.
ನ್ಯಾಯಮೂರ್ತಿ ಜೆ. ಬಿ. ಪರ್ದಿವಾಲಾ ಹಾಗೂ ವಿಜಯ್ ಬಿಷ್ಣೋಯಿ ನೇತೃತ್ವದಲ್ಲಿ ವಿಚಾರಣೆ ನಡೆಸಿ, ಅಭಿಯೋಜನೆ ಕೇಳುವಂತೆ ಉಳಿದ ಪ್ರಮುಖ 60 ಸಾಕ್ಷಿಗಳ ವಿಚಾರಣೆಯನ್ನ ಒಂದು ವರ್ಷದಲ್ಲಿ ಮುಗಿಸಿ ಎಂದಿದೆ. ಅಂದಹಾಗೆ ದರ್ಶನ್ ಪರ ವಕೀಲ ಮುಕುಲ್ ರೋಹಟಗಿ ವಾದ ಮಂಡಿಸಿದ್ರೆ, ರಾಜ್ಯ ಸರ್ಕಾರದ ಪರ ಸಿದ್ದಾರ್ಥ್ ಲೂತ್ರಾ ವಾದ ಮಂಡಿಸಿದ್ದರು. ಸದ್ಯ ಒಂದು ವರ್ಷ ಕಾಲ ಸಾಕ್ಷಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ಅವಕಾಶ ನೀಡಿದೆ. ಅಲ್ಲಿಗೆ ಮುಂದಿನ ವರ್ಷ, ಅಂದ್ರೆ 2027ರ ಮೇ 15ರ ತನಕ ದರ್ಶನ್‌ಗಿಲ್ಲ ಬಿಡುಗಡೆ ಭಾಗ್ಯ.
ದಸರಾ, ದೀಪಾವಳಿ, ಸಂಕ್ರಾಂತಿ, ಯುಗಾದಿ ಹಬ್ಬಗಳ ಜೊತೆ ಮುಂದಿನ ವರ್ಷದ ಜನುಮ ದಿನವನ್ನ ಕೂಡ ಜೈಲಲ್ಲೇ ಆಚರಿಸಬೇಕಿದೆ ದಾಸ ದರ್ಶನ್. ಸೋ.. ಸುಪ್ರೀಂನಲ್ಲಿ ಬೇಲ್ ಸಿಕ್ಕೇ ಸಿಗುತ್ತೆ ಅನ್ನೋ ಸಣ್ಣ ಹೋಪ್ ಇಟ್ಕೊಂಡಿದ್ದ ದರ್ಶನ್ ಈಗ ಆ ಹೋಪ್ ಕೂಡ ಕಳೆದುಕೊಂಡು, ಜೈಲಲ್ಲೇ ಕೊಳೆಯುವಂತಾಗಿದೆ. ಸುಪ್ರೀಂ ಹಾಕಿದ ಈ ಅಂಕುಶದಿಂದ ದರ್ಶನ್‌ಗೆ ಬ್ಯಾಡ್ ಟೈಂ ಕಳೆದು ಗುಡ್ ಟೈಂ ಶುರುವಾಗುವ ಯಾವುದೇ ಸುಳಿವಿಲ್ಲದಂತಾಗಿದೆ.
- ಫಲಿಸದ ವಿಜಯಲಕ್ಷ್ಮೀ ಪೂಜಾಫಲ.. ಕೈ ಕೊಟ್ಟ ದೇವರು
- ಫ್ಯಾನ್ಸ್, ಕುಟುಂಬ, ಅತ್ಯಾಪ್ತರ ಬಳಗಕ್ಕಿಲ್ಲ ಸೆಲೆಬ್ರೇಷನ್..!!
ದರ್ಶನ್ ಪತ್ನಿ ವಿಜಯಲಕ್ಷ್ಮೀ ತಮ್ಮ ಪತಿ ಜೈಲಿಂದ ಆಷ್ಟು ಬೇಗ ಹಾಗೂ ಕ್ಷೇಮವಾಗಿ ಹೊರಬರಲಿ ಅಂತ ದೇವಾನು ದೇವತೆಗಳಿಗೆ ಹರಕೆ ಹೊತ್ತು, ವಿಶೇಷ ಪೂಜೆ, ಪುನಸ್ಕಾರಗಳನ್ನ ಸಲ್ಲಿಸುತ್ತಲೇ ಬರ್ತಿದ್ದಾರೆ. ಇತ್ತೀಚೆಗೆ ಕೂಡ ಅಮೃತಸರದ ಗೋಲ್ಡನ್ ಟೆಂಪಲ್‌ಗೆ ತೆರಳಿ, ದೇವರ ಮೊರೆ ಹೋಗಿದ್ರು. ಆದ್ರೆ ಅವರ ಹರಕೆಗಳ್ಯಾವೂ ಫಲಿಸಲಿಲ್ಲ. ಆಕೆಯ ಕೂಗು ಆ ದೇವರಿಗೆ ಮುಟ್ಟಲೇ ಇಲ್ಲ ಅನಿಸುತ್ತೆ. ಇನ್ನೊಂದು ವರ್ಷ ದರ್ಶನ್‌ಗೆ ಜೈಲೇ ಗಟ್ಟಿ. ಪಂಜರದ ಪಕ್ಷಿಯಂತೆ ನಾಲ್ಕು ಗೋಡೆಗಳ ನಡುವೆ ಬಂಧಿಯಾಗೇ ಉಳಿಯಬೇಕಿದೆ.
ಅಂದಹಾಗೆ ತಮ್ಮ ನೆಚ್ಚಿನ ನಾಯಕನಟ ಬಂದ್ಬಿಡ್ತಾನೆ ಅಂತ ಅಸಂಖ್ಯಾತ ದರ್ಶನ್ ಅಭಿಮಾನಿಗಳು ಬಹಳ ಕಾತರದಿಂದ ಕಾಯ್ತಿದ್ರು. ಸೋಶಿಯಲ್ ಮೀಡಿಯಾಗಳಲ್ಲಿ ಒಂಥರಾ ಪಾಸಿಟಿವ್ ಕ್ಯಾಂಪೇನ್ ಕೂಡ ಶುರುವಾಗಿತ್ತು. ಆದ್ರೀಗ ಅವ್ರನ್ನ ನಂಬಿಕೊಂಡಿರೋ ಕುಟುಂಬ, ಆಪ್ತರ ವಲಯ ಸೇರಿದಂತೆ ದಾಸನ ಸೆಲೆಬ್ರಿಟೀಸ್ ಕೂಡ ಅಸಮಾಧಾನಗೊಂಡಿದ್ದಾರೆ. ಅವ್ರ ನಿರೀಕ್ಷೆ ಹುಸಿಯಾಗಿ ಠುಸ್ ಪಟಾಕಿಯಂತೆ ಸೈಲೆಂಟ್ ಆಗಿಬಿಟ್ಟಿದ್ದಾರೆ.
- ಒಂದಲ್ಲ ಎರಡಲ್ಲ.. ಆ ಐದು ಸಿನಿಮಾಗಳು ಮತ್ತಷ್ಟು ವಿಳಂಬ
- ಡಿಬಾಸ್ಗಾಗಿ ಕಾದು ಕುಳಿತಿದ್ದ ಪ್ರೊಡ್ಯೂಸರ್ಸ್ ಯಾಱರು?
- ಶೈಲಜಾ ನಾಗ್, KVN, ರಾಘವೇಂದ್ರ ಹೆಗಡೆ, ರಾಮಮೂರ್ತಿ
- ತೆಲುಗಿನ BVNS ಪ್ರಸಾದ್ ಪ್ರಾಜೆಕ್ಟ್ಸ್ ಮತ್ತೆ ಪೋಸ್ಟ್ಪೋನ್..!
ಯೆಸ್.. ದರ್ಶನ್ ಜೈಲು ಸೇರಿರೋದ್ರಿಂದ ಕನ್ನಡ ಚಿತ್ರರಂಗಕ್ಕೆ ಬಹುದೊಡ್ಡ ಆಘಾತ ಎದುರಾಗಿರೋದು ಸುಳ್ಳಲ್ಲ. ಯಾಕಂದ್ರೆ ದರ್ಶನ್‌ರಂತಹ ಬಿಗ್ ಸ್ಟಾರ್ಸ್ ಬಿಗ್ ಮೂವೀಸ್ ಮಾಡೋದ್ರಿಂದ ನೂರಾರು ಮಂದಿ ಕಲಾವಿದರು, ಸಾವಿರಾರು ಮಂದಿ ತಂತ್ರಜ್ಞರು, ಸಹಕಲಾವಿದರು ಅನ್ನ ತಿನ್ನುವಂತಾಗುತ್ತೆ. ಅದಕ್ಕೆಲ್ಲಾ ಈಗ ಬ್ರೇಕ್ ಬಿದ್ದಿದೆ. ಅಷ್ಟೇ ಅಲ್ಲ, ಅವ್ರನ್ನ ನಂಬಿಕೊಂಡು ಸಿನಿಮಾ ಮಾಡೋಕೆ ಕಾದು ಕುಳಿತಿರೋ ಪ್ರೊಡ್ಯೂಸರ್‌ಗಳಿಗೂ ಕ್ಲ್ಯಾರಿಟಿ ಇರಲಿಲ್ಲ. ಅವರಿಗೆಲ್ಲಾ ಸದ್ಯಕ್ಕಂತೂ ದಾಸನಿಗೆ ಸಿನಿಮಾ ಮಾಡೋಕೆ ಆಗಲ್ಲ ಅನ್ನೋ ಸ್ಪಷ್ಟತೆ ಸಿಕ್ಕಾಗಿದೆ.
ಅಂದಹಾಗೆ ದರ್ಶನ್ ಜೊತೆ ಸಿನಿಮಾ ಮಾಡೋಕೆ ಒಬ್ಬರಲ್ಲ, ಇಬ್ಬರಲ್ಲ. ಬರೋಬ್ಬರಿ 5 ಮಂದಿ ನಿರ್ಮಾಪಕರುಗಳು ಕ್ಯೂ ನಲ್ಲಿ ಕಾಯ್ತಿದ್ರು. ಆ ಪೈಕಿ ಈ ಹಿಂದೆ ಯಜಮಾನ ಸಿನಿಮಾ ಮಾಡಿದ್ದ ಶೈಲಜಾ ನಾಗ್ ಹಾಗೂ ಬಿ ಸುರೇಶ್ ಒಬ್ಬರು. ಹೌದು.. ರಾಬರ್ಟ್ ಹಾಗೂ ಕಾಟೇರ ಡೈರೆಕ್ಟರ್ ತರುಣ್ ಸುಧೀರ್ ಕೈಯಿಂದ ವೀರ ಸಿಂಧೂರ ಲಕ್ಷ್ಮಣ ಸಿನಿಮಾ ಮಾಡೋಕೆ ಕಾತರರಾಗಿದ್ರು. ಆದ್ರೆ ಇನ್ನೂ ಒಂದು ವರ್ಷ ದಾಸ ಹೊರಗೆ ಬರಲ್ಲ ಅನ್ನೋದು ಸ್ಪಷ್ಟವಾಗಿದ್ದು, ಇದೀಗ ಅವ್ರು ಬೇರೆ ಸಿನಿಮಾಗೆ ಕಮಿಟ್ ಆದ್ರೂ ಅಚ್ಚರಿಯಿಲ್ಲ.
ತೆಲುಗಿನ BVNS ಪ್ರಸಾದ್ ಜೊತೆ ಒಂದು ಸಿನಿಮಾಗೆ ಕಮಿಟ್ ಆಗಿದ್ದರು ನಟ ದರ್ಶನ್. ಅಲ್ಲದೆ, ಜಗ್ಗುದಾದಾ ಸಿನಿಮಾ ಮಾಡಿ ಹಿಟ್ ಕಾಂಬಿನೇಷನ್ ಅನಿಸಿಕೊಂಡಿದ್ದ, ಮುಂಬೈನಲ್ಲಿ ಸೆಟಲ್ ಆಗಿರೋ ಕನ್ನಡಿಗ ರಾಘವೇಂದ್ರ ಹೆಗಡೆ ಜೊತೆ ಒಂದು ಸಿನಿಮಾ ಮಾಡೋಕೂ ಗ್ರೀನ್ ಸಿಗ್ನಲ್ ನೀಡಿದ್ರು. ಆದ್ರೀಗ ಅದ್ಯಾವ ಪ್ರಾಜೆಕ್ಟ್ ಕೂಡ ಶುರುವಾಗೋ ಸುಳಿವಿಲ್ಲ.
ಮೆಜೆಸ್ಟಿಕ್ ನಿರ್ಮಾಪಕ ಬಿ ರಾಮಮೂರ್ತಿ ಜೊತೆ ಮತ್ತೊಂದು ಹೊಸ ಸಿನಿಮಾ ಮಾಡೋದಾಗಿ ಹೇಳಿದ್ದರಂತೆ ದರ್ಶನ್. ಇವಲ್ಲದೆ, ಪ್ರತಿಷ್ಠಿತ ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಜೋಗಿ ಪ್ರೇಮ್ ನಿರ್ದೇಶನದಲ್ಲಿ ದರ್ಶನ್ ನಟಿಸೋದು ಕೂಡ ಪಕ್ಕಾ ಆಗಿತ್ತು. ಅದ್ರ ಫಸ್ಟ್‌ಲುಕ್, ಮೀಟಿಂಗ್ ವಿಡಿಯೋ ಕೂಡ ರಿವೀಲ್ ಆಗಿತ್ತು. ಆದರೆ ಎಲ್ಲಕ್ಕೂ ಬಿಗ್ ಬ್ರೇಕ್ ಬಿದ್ದಿದೆ. ಇನ್ ಕೇಸ್ ಒಂದು ವರ್ಷದೊಳಗೆ 60 ಸಾಕ್ಷಿಗಳ ವಿಚಾರಣೆ ಆಗಿ, ಆರೋಪ ಸಾಬೀತಾದ್ರೆ ಅಪರಾಧಿಯಾಗಿ, ಪರ್ಮನೆಂಟ್ ಆಗಿ ಜೈಲೂಟವೇ ಸವಿಯುವ ಪ್ರಮೇಯ ಎದುರಾಗಬಹುದು. ಇಲ್ಲ ಆರೋಪ ಸಾಬೀತಾಗದಿದ್ರೆ ಹೊರಬಂದು ನ್ಯೂ ಇನ್ನಿಂಗ್ಸ್ ಆರಂಭಿಸಬಹುದು.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
