ಜೈಲಿನಿಂದಲೇ ಧನ್ವೀರ್‌ಗೆ ದಚ್ಚು ಬಿಗ್ ಶಾಕ್: 42 ಪುಟಗಳ ಇಂಜಂಕ್ಷನ್ ಆರ್ಡರ್‌ನಲ್ಲಿ ಏನಿದೆ?

11 (13)

ಧನ್ವೀರ್-ವಿಜಯಲಕ್ಷ್ಮೀ ಜಗಳ ಇದೀಗ ಪರಪ್ಪನ ಅಗ್ರಹಾರದಲ್ಲಿರೋ ದರ್ಶನ್‌‌ವರೆಗೂ ಹೋಗಿ ನಿಂತಿದೆ. ಜೈಲಿಂದಲೇ ದಾಸ ದರ್ಶನ್ ಧನ್ವೀರ್ ಮೇಲೆ ಇಂಜಂಕ್ಷನ್ ಆರ್ಡರ್ ತಂದಿದ್ದಾರೆ. ಹೇಡಿಯಂತೆ ಕದ್ದುಮುಚ್ಚಿ ಓಡಾಡ್ತಿರೋ ದಚ್ಚು ಭಂಟ ಧನ್ವೀರ್‌, ವಕೀಲರ ಮೂಲಕ ತ್ಯಾಪೆ ಹಾಕುವ ಕಾರ್ಯ ಮಾಡಿದ್ರು. ಆದ್ರೆ ಇನ್ಮೇಲೆ ಧನ್ವೀರ್ ಆಟಕ್ಕೆ ಕಂಪ್ಲೀಟ್ ಬ್ರೇಕ್ ಬಿದ್ದಂತಾಗಿದೆ. 42 ಪುಟಗಳ ಇಂಜಂಕ್ಷನ್ ಆರ್ಡರ್‌‌ನಲ್ಲಿ ಏನೇನಿದೆ..? ಜಸ್ಟ್ ವಾಚ್.

ಹೇಡಿಯಾದ ಧನ್ವೀರ್.. ಜೈಲಿಂದ ದಚ್ಚು 42 ಪುಟ ಇಂಜಂಕ್ಷನ್

ಧನ್ವೀರ್‌ಗೆ ದರ್ಶನ್ ಅಷ್ಟದಿಗ್ಬಂಧನ.. ತುಟಿಕ್ ಪಿಟಿಕ್ ಅನ್ನಂಗಿಲ್ಲ

ಡಿಬಾಸ್, ಕುಟುಂಬದ ಹೆಸ್ರು ಬಳಸ್ಬಾರ್ದು, ಪೋಸ್ಟ್ ಹಾಕ್ಬಾರ್ದು

ಧನ್ವೀರ್ ಎಲ್ಲಾ ಆಟಗಳಿಗೂ ಬಿತ್ತು ಬ್ರೇಕ್.. ನಾಟಕ್ ಬಂದ್..!!

ದರ್ಶನ್ ಹೊರಗೆ ಬರೋದು ಪತ್ನಿ ವಿಜಯಲಕ್ಷ್ಮೀಗೇ ಇಷ್ಟವಿಲ್ಲ. ಮಾಫಿಸಾಕ್ಷಿ ಪ್ರದೋಶ್ ಮೇಲೆ ವಿಜಯಲಕ್ಷ್ಮೀ ಪ್ರಭಾವ ಬೀರುತ್ತಿದ್ದಾರೆ. ಆಕೆ ದೇವಸ್ಥಾನಗಳಿಗೆ ಹೋಗೋದೆಲ್ಲಾ ತೋರ್ಪಡಿಕೆಗೆ.. ಹೀಗೆ ಸಾಕಷ್ಟು ಆರೋಪಗಳನ್ನ ಮಾಡಿದ್ರು ನಟ ಧನ್ವೀರ್. ಅದರಿಂದ ದರ್ಶನ್ ಹಾಗೂ ವಿಜಯಲಕ್ಷ್ಮೀ ಕುಟುಂಬಸ್ಥರು ಸಿಕ್ಕಾಪಟ್ಟೆ ವಿಚಲಿತರಾಗಿದ್ದು, ಸಿವಿಲ್ ಕೋರ್ಟ್‌‌ನಿಂದ ಸುಮಾರು 42 ಪುಟಗಳಷ್ಟು ದೊಡ್ಡ ಇಂಜಂಕ್ಷನ್ ಆರ್ಡರ್ ತಂದಿದ್ದಾರೆ.

ನಟ ಧನ್ವೀರ್ ಇನ್ಮೇಲೆ ದರ್ಶನ್ ಹೆಸರನ್ನ ಎಲ್ಲಿಯೂ ಬಳಸುವಂತಿಲ್ಲ. ವಿಜಯಲಕ್ಷ್ಮೀ ಅಥ್ವಾ ಮಗ ವಿನೀಶ್ ಹೆಸರು ಕೂಡ ಬಳಸಬಾರದು. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಬಾರದು. ಸಿನಿಮಾಳ ಪ್ರಮೋಷನ್ಸ್‌ಗೂ ದರ್ಶನ್ ಅವರ ಹೆಸರು ಬಳಸಬಾರದು. ಎಲ್ಲೇ ಸಂದರ್ಶನಗಳನ್ನ ನೀಡುವಾಗ ಆತ ಆಗಲಿ ಆತನ ಅನುಯಾಯಿಗಳಾಗಲಿ ದಚ್ಚು ಹೆಸರೇ ಪ್ರಸ್ತಾಪ ಮಾಡುವಂತಿಲ್ಲ. ಇದು ಒಂಥರಾ ಧನ್ವೀರ್‌ಗೆ ಅಷ್ಟದಿಗ್ಬಂಧನ ಆಗಿದ್ದು, ತುಟಿಕ್ ಪಿಟಿಕ್ ಅನ್ನದಂತೆ ಎಲ್ಲಾ ನಾಟಕ ಬಂದ್ ಮಾಡುವಂತಾಗಿದೆ.

ಮಾಧ್ಯಮಗಳ ಮುಂದೆ ನಾಲಿಗೆ ಹರಿಬಿಟ್ಟಿದ್ದ ಧನ್ವೀರ್‌ಗೆ ಈಗ ಬ್ರೇಕ್ ಹಾಕುವ ಉದ್ದೇಶದಿಂದಲೇ ದರ್ಶನ್ ಜೈಲಿಂದಲೇ ಈ ಇಂಜಂಕ್ಷನ್ ಆರ್ಡರ್ ತಂದಿದ್ದಾರೆ. ಅಂದಹಾಗೆ ಧನ್ವೀರ್ ಮೆಂಟಲ್ ರೀತಿ ಮನಸೋ ಇಚ್ಚೆ ಸ್ಟೇಟ್ಮೆಂಟ್‌‌ಗಳನ್ನ ನೀಡ್ತಿದ್ರು. ಅದು ದರ್ಶನ್ ಕೇಸ್‌‌ಗೆ ಹಾಗೂ ಕರಿಯರ್‌ ಮೇಲೆ ಬಹುದೊಡ್ಡ ಇಂಪ್ಯಾಕ್ಸ್ ಕ್ರಿಯೇಟ್ ಮಾಡ್ತಿತ್ತು. ಆ ಹಿನ್ನೆಲೆಯಲ್ಲಿ ಧನ್ವೀರ್ ಮೇಲೆ ಈಗಾಗ್ಲೇ ಒಂದಲ್ಲ ಎರಡಲ್ಲ ಬರೋಬ್ಬರಿ 3 ಎಫ್‌‌ಐಆರ್‌‌ಗಳು ಕೂಡ ಆಗಿವೆ.

ಹೇಡಿಯಂತೆ ಎಲ್ಲಿಯೂ ಯಾರ ಕೈಗೂ ಸಿಗದೆ.. ಕದ್ದು ಮುಚ್ಚಿ ಓಡಾಡ್ತಿರೋ ಧನ್ವೀರ್ ಗೌಡ, ನೇರವಾಗಿ ಮಾಧ್ಯಮಗಳನ್ನ ಫೇಸ್ ಮಾಡಲು ಆಗದೆ.. ತನ್ನ ವಕೀಲರ ಮೂಲಕ ಸ್ಪಷ್ಟನೆ ಕೊಡಿಸಿದ್ದರು. ನಾವು ಯಾವುದೇ ತನಿಖೆಗೆ ಸಿದ್ಧ ಅನ್ನೋ ಉತ್ತರ ಬಿಟ್ರೆ ವಕೀಲರ ಬಳಿ ಬೇಱವುದಕ್ಕೂ ಉತ್ತರ ಇರಲಿಲ್ಲ. ಇದೊಂಥರಾ ಧನ್ವೀರ್‌ ಮತ್ತಷ್ಟು ನಗೆಪಾಟಲಿಗೆ ಈಡಾಗುವಂತಾಗಿದೆ. ಎಲ್ಲಾ ಆ್ಯಂಗಲ್‌‌ಗಳಿಂದ ಧನ್ವೀರ್‌ ಆಟಗಳಿಗೆ ಬ್ರೇಕ್ ಬಿದ್ದಿದ್ದು, ಇನ್ಮೇಲೆ ಏನ್ ಮಾಡ್ತಾರೆ ಈ ಉತ್ತರ ಕುಮಾರ ಅನ್ನೋದನ್ನ ಕಾದುನೋಡಬೇಕಿದೆ.

 

 

Exit mobile version