ಡಿಬಾಸ್ ದಾಂಪತ್ಯಕ್ಕೆ 22 ವರ್ಷ.. ಬಾಲಿಯಲ್ಲಿ ದರ್ಶನ್ ಜಾಲಿ ಜಾಲಿ..!

Befunky collage 2025 05 19t130349.489

ಡಿಬಾಸ್ ದರ್ಶನ್‌ಗೆ ಶುಕ್ರದೆಸೆ ಶುರುವಾಗಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಳಿಕ ಸಾಕಷ್ಟು ಅವಮಾನ ಹಾಗೂ ಅಪಮಾನಗಳನ್ನು ಎದುರಿಸಿರೋ ನಟ ದರ್ಶನ್, ಇದೀಗ ಖುಷಿ ಕ್ಷಣಗಳಿಗೆ ಸಾಕ್ಷಿ ಆಗ್ತಿದ್ದಾರೆ. ಡೆವಿಲ್ ಸಿನಿಮಾದ ಶೂಟಿಂಗ್ ಜೊತೆ ಜೊತೆಗೆ 22ನೇ ವೆಡ್ಡಿಂಗ್ ಆ್ಯನಿವರ್ಸರಿಯನ್ನ ಬಹಳ ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಅದ್ರ ಕಂಪ್ಲೀಟ್ ಕಲರ್‌ಫುಲ್ ಕಹಾನಿ ನಿಮ್ಮ ಮುಂದೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಪಾಲಾದರು. ಆಗ ಇಡೀ ಕರ್ನಾಟಕ ಅವರ ಕರಿಯರ್ ಮುಗಿದೇ ಹೋಯ್ತು ಅಂದರು. ಸಿನಿಮಾ ಜೊತೆ ವೈಯಕ್ತಿಕ ಜೀವನವೂ ಹಾಳಾಯ್ತು ಅಂದ್ರು. ಇನ್ಮೇಲೆ ಜೈಲೂಟವೇ ಫಿಕ್ಸ್ ಅಂದ್ರು. ಆದ್ರೆ ಲೆಕ್ಕಾಚಾರಗಳೆಲ್ಲಾ ಉಲ್ಟಾ ಪಲ್ಟಾ ಆಗಿವೆ. ದರ್ಶನ್ ಬಾಳಲ್ಲಿ ಶುಕ್ರದೆಸೆ ಶುರುವಾಗಿದೆ. ಹೌದು.. ಬೇಲ್ ಮೇಲೆ ಹೊರಗೆ ಬಂದಿರೋ ದಾಸ ದಚ್ಚು, ಹಳೆಯ ಟ್ರ್ಯಾಕ್‌ಗೆ ಮರಳಿದ್ದಾರೆ.

ಡೆವಿಲ್ ಸಿನಿಮಾದ ಶೂಟಿಂಗ್ ಶುರುವಾಗಿದ್ದಾಯ್ತು. ಟೆಂಪಲ್ ರನ್ ಮೂಲಕ ಮಾನಸಿಕವಾಗಿ ಮತ್ತಷ್ಟು ಸದೃಢರಾದರು ದರ್ಶನ್. ಅಷ್ಟೇ ಅಲ್ಲ, ಪತ್ನಿ, ಅಮ್ಮ, ಮಗ, ಸಹೋದರನ ಕುಟುಂಬ ಸೇರಿದಂತೆ ಇಡೀ ತೂಗುದೀಪ ಕುಟುಂಬದ ಜೊತೆ ಹಬ್ಬ, ಹರಿದಿನಗಳನ್ನು ಸೆಲೆಬ್ರೇಟ್ ಮಾಡಿಕೊಂಡರು. ಇದೀಗ ಮತ್ತೊಂದು ಸಂಭ್ರಮಾಚರಣೆಗೆ ಸಾಕ್ಷಿ ಆಗಿದ್ದಾರೆ ಡಿಬಾಸ್.

ಯೆಸ್.. ಇಂದಿಗೆ ವಿಜಯಲಕ್ಷ್ಮೀ ಕೈ ಹಿಡಿದ ನಟ ದರ್ಶನ್ ದಾಂಪತ್ಯಕ್ಕೆ ಬರೋಬ್ಬರಿ 22 ವರ್ಷ. ಇಟ್ಕೊಂಡವಳು ಇರೋ ತನಕ ಕಟ್ಕೊಂಡವಳು ಕೊನೆಯ ತನಕ ಅನ್ನೋ ಮಾತು ದರ್ಶನ್ ಬಾಳಲ್ಲೂ ನಿಜವಾಗಿದೆ ಅಂತಾರೆ ನೆಟ್ಟಿಗರು. ಅದ್ಯಾರಿಗಾಗಿಯೋ ಏನೋ ಮಾಡೋಕೆ ಹೋಗಿ, ಇನ್ನೇನೋ ಆಗಿ, ತಾನು ಅವಮಾನ ಹಾಗು ಅಪಮಾನಗಳನ್ನು ಎದುರಿಸುವಂತಾಗಿತ್ತು ದರ್ಶನ್‌ಗೆ. ಆದ್ರೀಗ ಎಲ್ಲವೂ ತಿಳಿಯಾಗಿದೆ. ಧರ್ಮ ಪತ್ನಿ ಜೊತೆ ದಾಸ ದಚ್ಚು ಹ್ಯಾಪಿ ಆಗಿ ಇದ್ದಾರೆ.

ಇಂಜಿನಿಯರಿಂಗ್ ಮಾಡಿಕೊಂಡೇ ಉದಯದಲ್ಲಿ ಪಾರ್ಟ್ ಟೈಂ ಜಾಬ್ ಮಾಡ್ತಿದ್ದ ವಿಜಯಲಕ್ಷ್ಮೀ ನಟ ದರ್ಶನ್‌ಗೆ ಪರಿಚಯ ಆಗಿ, ಅವರಿಬ್ಬರ ಮಧ್ಯೆ ಒಳ್ಳೆ ಸ್ನೇಹ ಏರ್ಪಟ್ಟಿತ್ತು. ಕಷ್ಟದ ದಿನಗಳಲ್ಲಿ ದರ್ಶನ್‌ನ ಕೈ ಹಿಡಿದಿದ್ರು ವಿಜಯಲಕ್ಷ್ಮೀ. ಹಾಗಾಗಿಯೇ ಅವರಿಬ್ಬರ ನಡುವೆ ಪ್ರೇಮಾಂಕುರಿಸಿ, ನಂತ್ರ ದಾಂಪತ್ಯ ಜೀವನಕ್ಕೂ ಕಾಲಿಟ್ಟದ್ದರು. ಅಂದಹಾಗೆ ದರ್ಶನ್ ಹಾಗೂ ವಿಜಯಲಕ್ಷ್ಮೀ ವಿವಾಹ ಮಹೋತ್ಸವ ಶ್ರೀಕ್ಷೇತ್ರ ಧರ್ಮಸ್ಥಳದ ವಸಂತ ಮಹಲ್‌‌ನಲ್ಲಿ ನಡೆದಿತ್ತು.

2003ರ ಮೇ 19ರ ಸೋಮವಾರ ಬೆಳಗ್ಗೆ 9.15ರಿಂದ 9.50ರ ವರೆಗಿನ ಮಿಥುನ ಲಗ್ನದಲ್ಲಿ ವಿಜಯಲಕ್ಷ್ಮೀ ಕೈ ಹಿಡಿದಿದ್ರು ದಾಸ ದರ್ಶನ್. 22 ವರ್ಷಗಳ ಹಿಂದಿನ ಆ ಲಗ್ನ ಪತ್ರಿಕೆ ಇಲ್ಲಿ ನೀವು ಕಾಣಬಹುದು. ಅಂದಿನಿಂದ ಇಂದಿನವರೆಗೆ ಒಮ್ಮೆ ಅಲ್ಲ ಎರಡೆರಡು ಬಾರಿ ಪತ್ನಿ ಜಗಳದಲ್ಲೇ ಜೈಲು ಪಾಲಾಗಿದ್ರು ನಟ ದರ್ಶನ್. ಹೌದು.. ಗಂಡ- ಹೆಂಡತಿ ಜಗಳ ಉಂಡು ಮಲಗುವ ತನಕ ಅನ್ನೋ ಮಾತಿದೆ. ಆದ್ರೆ ಇವರುಗಳು ಬೀದಿಗೆ ಬರುವಂತೆ ಮಾಡಿಕೊಂಡ ಹಿನ್ನೆಲೆ ಡೊಮೆಸ್ಟಿಕ್ ವಯಲೆನ್ಸ್ ಮೇಲೆ ದರ್ಶನ್ ಅರೆಸ್ಟ್ ಕೂಡ ಆಗಿದ್ರು.

ಗಜಪಡೆಯೊಂದಿಗೆ ಹಾಡಿ, ಕುಣಿದು ಕುಪ್ಪಳಿಸಿದ ಡಿಬಾಸ್

ಯೆಸ್.. ಇದು ಕಳೆದ ರಾತ್ರಿ ಕನಕಪುರ ಬಳಿ ಇರೋ ಬಾಲಿ ಹೆಸರಿನ ರೆಸಾರ್ಟ್‌ನಲ್ಲಿ 22ನೇ ವೆಡ್ಡಿಂಗ್ ಆ್ಯನಿವರ್ಸರಿ ಸೆಲೆಬ್ರೇಟ್ ಮಾಡಿಕೊಂಡ ದರ್ಶನ್‌‌ ಮೋಜು, ಮಸ್ತಿಯ ಅವಿಸ್ಮರಣೀಯ ಕ್ಷಣಗಳ ದೃಶ್ಯಾವಳಿಗಳು. ಸುಮಾರು 100ಕ್ಕೂ ಅಧಿಕ ಮಂದಿ ಇದ್ದ ಅತ್ಯಾಪ್ತ ಬಳಗವನ್ನು 41ಕ್ಕೆ ಮೊಟಕು ಗೊಳಿಸಿರೋ ದಚ್ಚು, ಅದ್ರಲ್ಲೂ ಬೆರಳೆಣಿಕೆಯಷ್ಟು ಆಪ್ತರೊಂದಿಗೆ ವಿವಾಹ ವಾರ್ಷಿಕೋತ್ಸವವನ್ನು ಮೆಮೊರೆಬಲ್ ಆಗಿ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ.

ಪತ್ನಿ ವಿಜಯಲಕ್ಷ್ಮೀ ಹಾಗೂ ಮಗ ವಿನೀಶ್ ಅಲ್ಲದೆ ನಟ ಚಿಕ್ಕಣ್ಣ, ಧನ್ವೀರ್ ಗೌಡ ಸೇರಿದಂತೆ ಹದಿನೈದರಿಂದ 20 ಮಂದಿ ಈ ಆ್ಯನಿವರ್ಸರಿ ಪಾರ್ಟಿಗೆ ಸಾಕ್ಷಿ ಆಗಿದ್ದಾರೆ. ವಿಶೇಷ ಅಂದ್ರೆ ಇದೇ ಮೊದಲ ಬಾರಿ ದರ್ಶನ್ ಬಹಳ ಖುಷಿಯಿಂದ ತನ್ನ ನೆಚ್ಚಿನ ಮಡದಿಗಾಗಿ ಹಿಂದಿ ಹಾಡುಗಳನ್ನ ಹಾಡುವ ಮೂಲಕ ಗಮನ ಸೆಳೆದಿದ್ದಾರೆ. ಅಲ್ಲದೆ, ತಮ್ಮದೇ ಲಂಕೇಶ್ ಪತ್ರಿಕೆ ಚಿತ್ರದ ಹಾಡೊಂದಕ್ಕೆ ಪತ್ನಿ ಜೊತೆ ಸ್ಟೆಪ್ ಕೂಡ ಹಾಕಿದ್ದಾರೆ.

ಧನ್ವೀರ್ ಗೌಡ ನಟನೆಯ ವಾಮನ ಚಿತ್ರದ ಮುದ್ದು ರಾಕ್ಷಸಿ ಸಾಂಗ್ ನನಗೆ ತುಂಬಾ ಇಷ್ಟ ಅಂದಿದ್ರು ದಾಸ. ಹಾಗಾಗಿ ಪಾರ್ಟಿಯಲ್ಲಿ ಕೂಡ ಮುದ್ದು ರಾಕ್ಷಸಿ ಸಾಂಗ್ ಮಾರ್ದನಿಸಿದೆ. ಅದೇನೇ ಇರಲಿ, ದರ್ಶನ್ ಇಷ್ಟು ಖುಷಿಯಾಗಿರೋದನ್ನ ನೋಡೋದೇ ಚೆಂದ. ಲೈಫ್‌ನ ಮತ್ತೆ ಸರಿದಾರಿಗೆ ತಂದುಕೊಂಡಿರೋ ಡಿಬಾಸ್, ಒನ್ಸ್ ಅಗೈನ್ ಬಾಕ್ಸ್ ಆಫೀಸ್ ಸುಲ್ತಾನನಾಗಿ ಅಬ್ಬರಿಸೋ ಮುನ್ಸೂಚನೆ ನೀಡಿದ್ದಾರೆ.

ಇವರ ಈ ಖುಷಿಯ ಕ್ಷಣಗಳನ್ನು ನೋಡಿ ದಚ್ಚು ಫ್ಯಾನ್ಸ್ ಅಷ್ಟೇ ಅಲ್ಲ, ಇಡೀ ಕರುನಾಡು ಖುಷ್ ಆಗಿದೆ. ಈ ಸಂಭ್ರಮ ದುಪ್ಪಟ್ಟು ಆಗಲಿ, ದರ್ಶನ್ ವರ್ಷಕ್ಕೆ ಎರಡೆರಡು ಸಿನಿಮಾ ಮಾಡುವಂತಾಗಲಿ. ನಿರ್ಮಾಣ ಹಾಗೂ ವಿತರಣೆಯಲ್ಲೂ ತೊಡಗಿಸಿಕೊಳ್ಳಲಿ ಅನ್ನೋದು ನಮ್ಮ ಆಶಯ. ಹ್ಯಾಪಿ ವೆಡ್ಡಿಂಗ್ ಆ್ಯನಿವರ್ಸರಿ ದರ್ಶನ್ & ವಿಜಯಲಕ್ಷ್ಮೀ.      

Exit mobile version