ಡಾರ್ಲಿಂಗ್ ಕೃಷ್ಣ ಒಂದಲ್ಲ ಎರಡು ಮಕ್ಕಳ ತಂದೆ. ಅರೇ..ಇತ್ತೀಚೆಗೆ ಪರಿಗೆ ತಂದೆಯಾದ ನಟ ಮತ್ಯಾವಾಗ ಇನ್ನೊಂದು ಮಗುಗೆ ಫಾದರ್ ಆದ್ರು ಅಂತ ಹುಬ್ಬೇರಿಸಬೇಡಿ. ಒಂದ್ಕಡೆ ಫಾದರ್ ಆದ್ರೂ ಕೋಪ ಮಾತ್ರ ಕಿಂಚಿತ್ತೂ ಬದಲಿಸಿಕೊಂಡಿಲ್ಲ. ಅದೇ ಫ್ರಸ್ಟ್ರೇಷನ್, ದುಡ್ಡಿನ ಮೋಹ.
ಈ ಸೆಪ್ಟೆಂಬರ್ ಬಂದ್ರೆ ಡಾರ್ಲಿಂಗ್ ಕೃಷ್ಣ ತಂದೆಯಾಗಿ ಬಡ್ತಿ ಪಡೆದು ಒಂದು ವರ್ಷವಾಗಲಿದೆ. ಲವ್ ಮಾಕ್ಟೇಲ್ ಫ್ರಾಂಚೈಸ್ ಸಿನಿಮಾಗಳಿಂದ ಸಿಕ್ಕಾಪಟ್ಟೆ ಕಿಕ್ ಕೊಟ್ಟಿರೋ ಮಿಲನಾ-ಕೃಷ್ಣ ಪ್ರೇಮ ಪರ್ವಕ್ಕೆ ಪರಿ ಸಾಕ್ಷಿಯಾಗಿದ್ದಾಳೆ. ಮುದ್ದಾದ ಮಗು ಹುಟ್ಟಿದ್ದು ಒಂದು ಖುಷಿಯಾದ್ರೆ, ಫಾದರ್ ಅನ್ನೋ ಸಿನಿಮಾ ಸಿಕ್ಕಿದ್ದು ಮತ್ತೊಂದು ಖುಷಿ.
ಆರ್ ಚಂದ್ರು ನಿರ್ಮಾಣದ ಫಾದರ್ ಸಿನಿಮಾದಲ್ಲಿ ಪ್ರಕಾಶ್ ರೈ ಹಾಗೂ ಅಮೃತಾ ಅಯ್ಯಂಗಾರ್ ಜೊತೆ ಡಾರ್ಲಿಂಗ್ ಸ್ಕ್ರೀನ್ ಶೇರ್ ಮಾಡಿದ್ದಾರೆ. ಇದರ ಫಸ್ಟ್ ಲುಕ್‌ನ ಕಿಚ್ಚ ಸುದೀಪ್ ಲಾಂಚ್ ಮಾಡಿ, ಕೃಷ್ಣನ ಬೆನ್ನಿಗೆ ನಿಂತರು. ಈ ಸಿನಿಮಾ ತಂದೆ-ಮಕ್ಕಳ ಎಮೋಷನಲ್ ಬಾಂಡಿಂಗ್ ಆಗಿರೋದ್ರಿಂದ, ಆರ್ ಚಂದ್ರು ಇದನ್ನ ಎಲ್ಲಾ ಫಾದರ್ಸ್ ಹಾಗೂ ಮಕ್ಕಳಿಗೆ ಡೆಡಿಕೇಟ್ ಮಾಡ್ತಿದ್ದಾರೆ.
ಅಲ್ಲದೆ, ಮೊಗ್ಗಿನ ಮನಸ್ಸು ಶಶಾಂಕ್ ಜೊತೆ ಡಾರ್ಲಿಂಗ್ ಕೃಷ್ಣ ಬ್ರ್ಯಾಟ್ ಅನ್ನೋ ಮತ್ತೊಂದು ಸಿನಿಮಾ ಕೂಡ ಮಾಡಿ ಮುಗಿಸಿದ್ದಾರೆ. ಬರ್ತ್ ಡೇ ವಿಶೇಷ ಒಂದ್ಕಡೆ ಫಾದರ್ ಫಸ್ಟ್ ಲುಕ್ ಪೋಸ್ಟರ್, ಮತ್ತೊಂದ್ಕಡೆ ಬ್ರ್ಯಾಟ್ ಸ್ಪೆಷಲ್ ಟೀಸರ್ ಲಾಂಚ್ ಮಾಡಿವೆ ಚಿತ್ರತಂಡಗಳು. ಅಂದಹಾಗೆ ಬ್ರ್ಯಾಟ್ ಸಿನಿಮಾ ಒಬ್ಬ ಮಿಡಲ್ ಕ್ಲಾಸ್ ಯೂತ್ ಸ್ಟೋರಿ ಆಗಿದ್ದು, ದುಡ್ಡು ಮಾಡೋಕೆ ಆತ ಎಷ್ಟೆಲ್ಲಾ ಫ್ರಸ್ಟ್ರೇಟ್ ಆಗಿರ್ತಾನೆ ಅನ್ನೋ ಕಂಟೆಂಟ್‌ನಿಂದ ಕೂಡಿದೆ.
ಟೀಸರ್ ಇಂಪ್ರೆಸ್ಸೀವ್ ಆಗಿದ್ದು, ಸಿನಿಮಾ ಇದೇ ಸೆಪ್ಟೆಂಬರ್‌ನಲ್ಲಿ ಪ್ರೇಕ್ಷಕರ ಮುಂದೆ ಬರೋ ಮುನ್ಸೂಚನೆ ನೀಡಿದೆ. ಶಶಾಂಕ್ ಮನರಂಜನೆ ಜೊತೆ ಸಮಾಜಕ್ಕೆ ಏನಾದ್ರೂ ಒಂದು ಸಂದೇಶ ನೀಡುವ ಸಿನಿಮಾಗಳನ್ನೇ ಮಾಡ್ತಾರೆ. ಆ ನಿಟ್ಟಿನಲ್ಲಿ ಇದು ದುಡ್ಡು ಮಾಡೋಕೆ ಆಗದೆ ಸಿಕ್ಕಾಪಟ್ಟೆ ಒತ್ತಡದಲ್ಲಿರೋ ಯುವಕರಿಗೆ ಇದು ಕೊಂಚ ಜಾಸ್ತಿನೇ ಕನೆಕ್ಟ್ ಆಗಲಿದೆ. ಮಂಜುನಾಥ್ ಕಂದಕೂರ್ ನಿರ್ಮಾಣದ ಬ್ರ್ಯಾಟ್ ಟೈಟಲ್‌ನಿಂದ ಡಿಫರೆಂಟ್ ಅನಿಸಿಕೊಂಡಿದ್ದು, ಕಥೆಯಿಂದಲೂ ಇಂಪ್ರೆಸ್ ಮಾಡೋ ಸೂಚನೆ ನೀಡಿದೆ.
ಲವ್ ಮಾಕ್ಟೇಲ್, ಲವ್ ಮಾಕ್ಟೇಲ್-2ನಿಂದ ನಿರ್ದೇಶಕ, ನಿರ್ಮಾಪಕರಾಗಿಯೂ ಸಕ್ಸಸ್ ಕಂಡಿರೋ ಕೃಷ್ಣ, ಒಳ್ಳೆಯ ಕ್ರಿಕೆಟರ್ ಕೂಡ ಹೌದು. ಬ್ರ್ಯಾಟ್ ಸಿನಿಮಾದ ಟೀಸರ್‌ನಲ್ಲಿ ಕ್ರಿಕೆಟರ್ ಆಗಿಯೂ ಕಾಣಿಸಿಕೊಂಡಿದ್ದು, ಲವ್ ಮಾಕ್ಟೇಲ್-3 ಕಥೆ ಬರೆಯೋದ್ರಲ್ಲಿ ಸಹ ಬ್ಯುಸಿ ಆಗಿದ್ದಾರಂತೆ. ಮಿಲನಾ-ಕೃಷ್ಣ ಕಾಂಬೋನಲ್ಲಿ ಮತ್ತೊಂದು ಲವ್ ಮಾಕ್ಟೇಲ್ ಫ್ರಾಂಚೈಸ್ ಸಿನಿಮಾ ಬಂದ್ರೆ ನೋಡುಗರಿಗೆ ಮಸ್ತ್ ಮನರಂಜನೆ ಫಿಕ್ಸ್.