ಟಿವಿಕೆ & ದಳಪತಿ ವಿಜಯ್‌ಗೆ ಐತಿಹಾಸಿಕ ವಿಕ್ಟರಿ..!!

ತಮಿಳುನಾಡಿನಾದ್ಯಂತ ಎಲ್ಲೆಡೆ ಸಖತ್ ಸೆಲೆಬ್ರೇಷನ್

Untitled design 2026 05 04T181552.181

ವಿಜಯ್ ವಿಜಯೋತ್ಸವ ನಿಜಕ್ಕೂ ಐತಿಹಾಸಿಕ ಹಾಗೂ ಅವರ್ಣನೀಯ. ಇಷ್ಟಕ್ಕೂ ಎಷ್ಟು ಸೀಟ್‌‌‌ಗಳ ಅಂತರದಿಂದ ಟಿವಿಕೆ ಪಕ್ಷ ಗೆಲುವಿನ ಸಿಂಚನ ಬೀರಿತು..? ವಿಜಯ್ ವಿಕ್ಟರಿಗೆ ದೇಶ ಏನು ಹೇಳ್ತಿದೆ..? ದಳಪತಿ ಫ್ಯಾನ್ಸ್, ಟಿವಿಕೆ ಅಭ್ಯರ್ಥಿಗಳು, ಕ್ಯಾಂಡಿಡೇಟ್ಸ್ ಸೆಲೆಬ್ರೇಷನ್ ಹೇಗಿದೆ..? ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ನೇರವಾಗಿ ವಿಜಯ್ ಮನೆಗೆ ಆಗಮಿಸಿದ ತ್ರಿಶಾ ಹೇಳಿದ್ದೇನು..? ತಮಿಳುನಾಡಿನ ಮುಂದಿನ ಸಿಎಂ ವಿಜಯ್ ವಿಕ್ಟರಿ ವರ್ಡ್ಸ್‌ ಇಲ್ಲಿದೆ.

234 ವಿಧಾನಸಭಾ ಕ್ಷೇತ್ರಗಳಲ್ಲೂ ಕಂಟೆಸ್ಟ್ ಮಾಡಿದ್ದ ವಿಜಯ್ ಟಿವಿಕೆ ಪಕ್ಷ, ಸರ್ಕಾರ ರಚಿಸೋಕೆ ಬೇಕಾಗುವಷ್ಟು ಸೀಟ್‌‌ಗಳನ್ನ ಭರ್ಜರಿ ಗೆಲುವುನೊಂದಿಗೆ ಗೆದ್ದು ಬೀಗಿದೆ. ಆ ಪೈಕಿ ವಿಜಯ್ ನಿಂತಿದ್ದ ಪೆರಂಬೂರು ಹಾಗೂ ತಿರುಚಿ ಪೂರ್ವ ಎರಡೂ ಕ್ಷೇತ್ರಗಳಲ್ಲಿ ದೊಡ್ಡ ಮತಗಳ ಅಂತರದಿಂದಲೇ ವಿಕ್ಟರಿ ಸಾಧಿಸಿದ್ದಾರೆ. ಸೋ.. ಒಂದಲ್ಲ ಎರಡೆರಡು ಕಡೆ ವಿಜಯ್‌ಗೆ ವಿಜಯೋತ್ಸವ ಸಿಕ್ಕಿದೆ. ಕ್ರಿಶ್ಚಿಯನ್ ಕಮ್ಯುನಿಟಿ ಜಾಸ್ತಿ ಇರೋ ಆ ಕ್ಷೇತ್ರಗಳಲ್ಲಿಯೇ ವಿಜಯ್ ಕಂಟೆಸ್ಟ್ ಮಾಡಲು ನಿರ್ಧರಿಸಿದ್ದು ಕೂಡ ಅವರಿಗೆ ಪ್ಲಸ್ ಆಗಿದೆ.

ಟಿವಿಕೆ ಪಕ್ಷ ಗೆಲುವಿನ ಲಹರಿ ಕಂಡು ಬೆಳಗ್ಗೆಯಿಂದಲೇ ಮತ ಎಣಿಕೆ ಕೇಂದ್ರಗಳು ಹಾಗೂ ಟಿವಿಕೆ ಕಚೇರಿ ಮುಂದೆ ಫ್ಯಾನ್ಸ್ ಸಖತ್ ಸೆಲೆಬ್ರೇಷನ್ ಮಾಡಿದ್ದಾರೆ. ಪಟಾಕಿ ಸಿಡಿಸಿ, ಸ್ವೀಟ್ಸ್ ಹಂಚಿ ಸಂಭ್ರಮಾಚರಿಸಿದ್ದಾರೆ. ವಿಜಯ್‌‌ಗೆ ವಿಜಲ್ ಹೊಡೆದು ನಮ್ಮ ದಳಪತಿಯೇ ತಮಿಳುನಾಡಿನ ಸರ್ಕಾರ್‌ ಅಂತ ಕೂಗಿ ಹೇಳ್ತಿದ್ದಾರೆ. ಮಕ್ಕಳಿಂದ ಮುದುಕರ ವರೆಗೆ ಬದಲಾವಣೆ ಬಯಸ್ತಿದ್ದ ತಮಿಳುನಾಡಿನಲ್ಲಿ ಆ ಬದಲಾವಣೆಯನ್ನ ವಿಜಯ್ ತಂದಿದ್ದಾರೆ.

ದಳಪತಿ ವಿಜಯ್‌‌ಗೆ ಬಹಳ ವರ್ಷಗಳಿಂದ ಡ್ರೈವರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ರಾಜೇಂದ್ರನ್ ಮಗ ಶಬರಿನಾಥನ್‌ಗೆ ದಳಪತಿ ಎಂಎಲ್‌ಎ ಟಿಕೆಟ್ ನೀಡಿದ್ರು. ಅಂದು ಟಿಕೆಟ್ ಅನೌನ್ಸ್ ಮಾಡ್ತಿದ್ದಂತೆ ಕಣ್ಣೀರು ಹಾಕಿ, ವಿಜಯ್ ಕಾಲಿಗೆ ಬಿದ್ದು ನಮಸ್ಕರಿಸಿದ್ರು ಶಬರಿನಾಥನ್. ಆದ್ರೀಗ ಅದೇ ವಿಜಯ್ ಡ್ರೈವರ್ ಮಗ ಗೆದ್ದು ಬೀಗಿದ್ದಾರೆ. ಇಂದಿನ ಫಲಿತಾಂಶದಲ್ಲಿ ಶಬರಿನಾಥನ್‌‌ಗೆ ಭರ್ಜರಿ ಗೆಲುವು ಸಿಕ್ಕಿದ್ದು, ಎಂಎಲ್‌‌ಎ ಪಟ್ಟಕ್ಕೇರಿದ್ದಾರೆ. ಇದು ಟಿವಿಕೆಯ ನಿಜವಾದ ವಿಕ್ಟರಿಯೂ ಹೌದು.

ಅಂದಹಾಗೆ ದಳಪತಿ ವಿಜಯ್ ಸುಮಾರು ವರ್ಷಗಳಿಂದ ತಮ್ಮ ಫ್ಯಾನ್ಸ್ ಅಸೋಸಿಯೇಷನ್‌‌‌ನಲ್ಲಿ ಅಧ್ಯಕ್ಷರುಗಳಾಗಿದ್ದಂತಹ ನಂಬಿಕಸ್ಥರ ಮೂಲಕ ಟಿಕೆಟ್ಸ್‌‌ನ ಫೈನಲ್ ಮಾಡಿದ್ರು. ಅದರಂತೆ ವಿಜಯ್ ಲೆಕ್ಕಾಚಾರ ಏರುಪೇರು ಆಗಲೇ ಇಲ್ಲ. ಒಳ್ಳೆಯ ಹೆಸರು ಇದ್ದಂತಹ ಬಹುತೇಕ ಟಿವಿಕೆ ಅಭ್ಯರ್ಥಿಗಳು ಗೆದ್ದಿದ್ದಾರೆ. ಆ ಮೂಲಕ ವಿಜಯ್ ನಂಬಿಕೆಯನ್ನ ಅವರೆಲ್ಲಾ ಉಳಿಸಿಕೊಂಡಿದ್ದಾರೆ.

ನಟಿ ತ್ರಿಶಾಗೂ ವಿಜಯ್‌ಗೂ ಸಂಥಿಂಗ್ ಸಂಥಿಂಗ್ ಅನ್ನೋ ಮಾತುಗಳು ಮೊದಲಿನಿಂದಲೂ ಕೇಳಿಬರುತ್ತಲೇ ಇವೆ. ಇತ್ತ ವಿಜಯ್ ಪತ್ನಿ ಸಂಗೀತಾ ಡಿವೋರ್ಸ್ ನೀಡ್ತಿರೋದಕ್ಕೂ ಅತ್ತ ತ್ರಿಶಾ-ವಿಜಯ್ ರಿಲೇಷನ್‌‌ಶಿಪ್ ಗಟ್ಟಿಗೊಳ್ಳುತ್ತಿರೋದಕ್ಕೂ ಸಾಮ್ಯತೆ ಇದೆ. ಅದ್ರಂತೆ ತ್ರಿಶಾಗೆ ಇಂದು ಡಬಲ್ ಧಮಾಕ. ತಮ್ಮ ಬರ್ತ್ ಡೇ ದಿನವೇ ವಿಜಯ್‌ಗೆ ನಿರೀಕ್ಷೆಗೂ ಮೀರಿದ ಜಯ ಸಿಕ್ಕಿರೋದು ಆಕೆಯ ಖುಷಿಯನ್ನ ಇಮ್ಮಡಿಗೊಳಿಸಿದೆ.

ಎಲೆಕ್ಷನ್ ರಿಸಲ್ಟ್ ಇದ್ದ ಹಿನ್ನೆಲೆ ಇಂದು ಮುಂಜಾನೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು, ತನ್ನ ಕೋರಿಕೆ ಈಡೇರುವಂತೆ ಬೇಡಿಕೊಂಡಿದ್ರು ತ್ರಿಶಾ. ಅಲ್ಲದೆ ಲಡ್ಡು ಪ್ರಸಾದವನ್ನ ತಗೊಂಡು ನೇರವಾಗಿ ವಿಜಯ್ ಮನೆಗೇ ಆಗಮಿಸಿದ್ರು. ಅಲ್ಲಿಂದ ಬಂದು ಪ್ರಸಾದ ಹಂಚಿ, ಖಂಡಿತಾ ನೀವೇ ಸಿಎಂ ಆಗ್ತೀರಾ ಅನ್ನೋ ಭರವಸೆ ನೀಡಿದ್ರು ತ್ರಿಶಾ. ಅದೀಗ ನಿಜವಾಗ್ತಿದೆ.

ಅತ್ತೆಗೊಂದು ಕಾಲ.. ಸೊಸೆಗೊಂದು ಕಾಲ ಅನ್ನೋ ಮಾತಿನಂತೆ ವಿಜಯ್‌‌ ವಿಕ್ಟರಿ ಸನಿಹ ಆಗ್ತಿದ್ದಂತೆ ಡಿಎಂಕೆ ಕಚೇರಿ ಮುಂದೆ ಸೆಲೆಬ್ರೇಷನ್ ಮಾಡ್ತಿದ್ದ ವೇದಿಕೆಯನ್ನ ಎತ್ತಂಗಡಿ ಮಾಡಿಸಿದ್ದಾರೆ ಪೊಲೀಸರು. ಅಷ್ಟೇ ಅಲ್ಲ, ಚೆನ್ನೈನ ವಿಜಯ್ ನಿವಾಸಕ್ಕೆ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ನೀಡಿದ್ದಾರೆ. ವಿಜಯ್ ಟಿವಿಕೆ ಪಕ್ಷದ ಸಿಂಬಲ್ ವಿಜಲ್. ಆದ್ರೆ ಆ ವಿಜಲ್ ಸೌಂಡ್ ಈಗ ಕನ್ಯಾಕುಮಾರಿಯಿಂದ ಡೆಲ್ಲಿ ತನಕ ಕೇಳುವಂತಾಗಿದೆ.

ಅದರಲ್ಲೂ ವಿಜಯ್ ಕುಟುಂಬಸ್ಥರು ಮನೆಯಲ್ಲಿ ಒಟ್ಟಿಗೆ ಒಂದೆಡೆ ಸೇರಿ ಟಿವಿ ನೋಡುತ್ತಾ ಟಿವಿಕೆ ಗೆಲುವನ್ನ ವಿಜಲ್ ಹೊಡೆಯೋ ಮೂಲಕ ಸಂಭ್ರಮಿಸಿರೋದು ಅವಿಸ್ಮರಣೀಯ. ಅಲ್ಲದೆ ಟಾಲಿವುಡ್ ಸ್ಟಾರ್‌ಗಳಾದ ನಾನಿ, ನಿಖಿಲ್ ಸಿದ್ದಾರ್ಥ್, ಟೈಗರ್‌ ಶ್ರಾಫ್, ಅಜು ವರ್ಗೀಸ್, ವೆಂಕಟ್ ಪ್ರಭು, ಸತ್ಯರಾಜ್, ಸಾಯಿ ಧರ್ಮ ತೇಜ್, ಸಿಮ್ರಾನ್, ಶರ್ವಾನಂದ್ ಸೇರಿದಂತೆ ಸಾಕಷ್ಟು ಮಂದಿ ಚಿತ್ರರಂಗದ ಮಂದಿ ವಿಜಯ್‌ಗೆ ಶುಭ ಕೋರಿದ್ದಾರೆ.

ಟಿವಿಕೆ ಪಕ್ಷದ ಸಿಂಬಲ್ ಆಗಿದ್ದ ವಿಜಲ್‌‌ ಮೇಲೆ ಎಷ್ಟರ ಮಟ್ಟಿಗೆ ನಿರ್ಬಂಧ ಹೇರಲಾಗಿತ್ತು ಅಂದ್ರೆ, ಐಪಿಎಲ್‌‌ನ ಸಿಎಸ್‌ಗೆ ಮ್ಯಾಚ್‌‌‌ಗಳಿಗೆ ವಿಜಲ್‌‌ ತರುವಂತಿಲ್ಲ. ವಿಜಲ್ ಹೊಡೆಯುವಂತಿಲ್ಲ ಎನ್ನಲಾಗಿತ್ತು. ಆದ್ರೆ ಫ್ಯಾನ್ಸ್‌ನ ಎಲ್ಲಿಂದ ಎಲ್ಲಿಗೆ ಕಂಟ್ರೋಲ್ ಮಾಡೋಕೆ ಸಾಧ್ಯ ನೀವೇ ಹೇಳಿ. ಅದರ ಹೊರತಾಗಿಯೂ ವಿಜಲ್ ಹೊಡೆದು ಮ್ಯಾಚ್‌‌ಗಳಲ್ಲಿ ಸಂಭ್ರಮಿಸಿದ್ರು ಅಭಿಮಾನಿಗಳು.

ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ತಮಿಳುನಾಡು ಚುನಾವಣೆಗೂ ಮೊದಲೇ ವಿಜಯ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ರು. ಒಂದಷ್ಟು ಸಲಹೆ ಸೂಚನೆಗಳನ್ನ ಕೂಡ ನೀಡಿದ್ರು. ವಿಜಯ್ ಬಿಗ್ಗೆಸ್ಟ್ ಸೂಪರ್ ಸ್ಟಾರ್. ಅಂದುಕೊಂಡಿದ್ದನ್ನ ಸಾಧಿಸೋ ಛಲ ಅವರಲ್ಲಿದೆ. ಸೋತರೆ ಕುಗ್ಗಬಾರದು ಎಂದಿದ್ದರು.

ಯೆಸ್.. ಟಿವಿಕೆ 110 ಸೀಟ್‌‌ಗಳ ಮುನ್ನಡೆ ಇದ್ದಾಗಲೇ ದಳಪತಿ ವಿಜಯ್ ತಂದೆ ಎಸ್‌.ಎ. ಚಂದ್ರಶೇಖರ್, ನನಗೆ ಬಹಳ ಹೆಮ್ಮೆಅನಿಸುತ್ತಿದೆ ಹಾಗೂ ಹೇಳಲಾಗದಷ್ಟು ಸಂತಸ ತಂದಿದೆ. ಅದರಲ್ಲೂ ವಿಜಯ್ ಆತ್ಮ ವಿಶ್ವಾಸ ಎರಡು ವರ್ಷಗಳಿಂದೀಚೆಗೆ ಬಹಳಷ್ಟು ಗಟ್ಟಿಯಾಗಿತ್ತು. ನಾನು ತಮಿಳುನಾಡು ಸಿಎಂ ಆಗಿ ಬಂದೇ ಬರ್ತೀನಿ ಅಂತ ಹೇಳಿದ್ದ ವಿಜಯ್. ಆ ಆ್ಯಟಿಟ್ಯೂಡ್‌‌ನ ನಾನು ಪ್ರಶಂಸಿಸುತ್ತೇನೆ. ಯಾರೊಟ್ಟಿಗೂ ಕೈ ಜೋಡಿಸದೆ ನಮ್ಮ ಒಂದೇ ಪಕ್ಷದ ಮೇಲೆ ಸರ್ಕಾರ ಸ್ಥಾಪಿಸುತ್ತೇವೆ ಅನ್ನೋ ಅವರ ನಾಯಕತ್ವದ ಗುಣ ಮೆಚ್ಚುವಂತಿದೆ. ವಿಜಯ್‌ಗೆ ಇದು ಐತಿಹಾಸಿಕ ಗೆಲುವು ಹಾಗೂ ಐತಿಹಾಸಿಕ ಕ್ಷಣ ಎಂದಿದ್ದಾರೆ.

234 ವಿಧಾನಸಭಾ ಕ್ಷೇತ್ರಗಳಿದ್ದು, ಸ್ವತಂತ್ರವಾಗಿ ಯಾವುದೇ ಪಕ್ಷ ಸರ್ಕಾರ ಸ್ಥಾಪಿಸೋಕೆ ಬರೋಬ್ಬರಿ 118 ಸೀಟ್‌‌ಗಳನ್ನ ಗೆಲ್ಲಬೇಕಾಗುತ್ತದೆ. ಮ್ಯಾಜಿಕ್ ನಂಬರ್ 118 ಆಗಿದ್ದು, ವಿಜಯ್ ಟಿವಿಕೆ ಪಕ್ಷ 110 ಸೀಟ್‌‌ಗಳನ್ನ ಗೆದ್ದಿರೋದ್ರಿಂದ ಬೇಕಿರೋ ಬೆರಳೆಣಿಕೆಯಷ್ಟು ಸೀಟ್‌‌‌ಗಳಿಗಾಗಿ ಪಕ್ಷೇತರ ಎಂಎಲ್‌ಎಗಳ ಮೊರೆ ಹೋಗುವ ಸಾದ್ಯತೆಯಿದೆ. ವಿಜಯ್ ಸಿಎಂ ಆಗ್ತಿದ್ದಾರೆ ಅಂದ್ರೆ ಅವರ ಮೇಲಿರೋ ಅಭಿಮಾನದಿಂದಲೋ ಅಥ್ವಾ ಅವ್ರ ಸಿದ್ಧಾಂತಗಳನ್ನ ಬೆಂಬಲಿಸೋ ಪಕ್ಷೇತರರು ಅಥ್ವಾ ಇತರೇ ಪಕ್ಷದ ಕೆಲ ಎಂಎಲ್‌ಎಗಳು ಟಿವಿಕೆಗೆ ಸಾಥ್ ನೀಡುವ ಸಾಧ್ಯತೆಯಿದೆ.

ಹಾಗೆ ಆದಲ್ಲಿ ಸ್ವತಂತ್ರವಾಗಿ ವಿಜಯ್ ಅವರೇ ಡಿಎಂಕೆ ಅಥ್ವಾ ಎಐಡಿಎಂಕೆ ಸಹಾಯ ಇಲ್ಲದೆ ತಮ್ಮ ಪಕ್ಷದಿಂದಲೇ ಗೌರ್ನಮೆಂಟ್‌ನ ಫಾರ್ಮ್ ಮಾಡಲಿದ್ದಾರೆ. ಒಟ್ಟಾರೆ ಈ ವಿಜಯ್ ವಿಕ್ಟರಿ ಡೆಲ್ಲಿಯಲ್ಲಿರೋ ಮೋದಿ, ರಾಹುಲ್ ಗಾಂಧಿ ತನಕ ಎಲ್ಲರೂ ಮಾತನಾಡಿಕೊಳ್ಳುವ ರೇಂಜ್‌ಗೆ ಟಾಕ್ ಕ್ರಿಯೇಟ್ ಮಾಡಿದೆ. ಅಧಿಕಾರ ಸ್ವೀಕಾರ ಯಾವತ್ತು..? ಎಲ್ಲಿ..? ಅನ್ನೋದ್ರ ಜೊತೆಗೆ ಸಿಎಂ ಆಗಿ ವಿಜಯ್ ಪ್ರಮಾಣ ವಚನ ಸ್ವೀಕಾರ ಮಾಡೋದನ್ನ ಅಧಿಕೃತವಾಗಿ ಅನೌನ್ಸ್ ಮಾಡುವುದೊಂದೇ ಬಾಕಿ ಉಳಿದಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version