ಡಾಲಿ ಮನೆಗೆ ಕಂದಮ್ಮ ಆಗಮನ: ತಂದೆ ಆಗ್ತಿರೋ ಖುಷಿ ಹಂಚಿಕೊಂಡ ಡಾಲಿ ಧನಂಜಯ್‌

ಡ್ಯಾಡಿ ಆಗೋ ಖುಷಿಯಲ್ಲಿ ಈಗ ಡಾಲಿ ಧನಂಜಯ್‌̤̤!

123

ಕನ್ನಡ ಚಿತ್ರರಂಗದ ನಟರಾಕ್ಷಸ ಹಾಗೂ ನಟ ರಕ್ಷಕ ಡಾಲಿ ಧನಂಜಯ ತಂದೆಯಾಗಿ ಬಡ್ತಿ ಪಡೆಯುತ್ತಿದ್ದಾರೆ. ಮೇ ಮೊದಲ ವಾರದಲ್ಲಿ ಮಗುವಿನ ನಿರೀಕ್ಷೆಯಲ್ಲಿರೋ ಡಾಕ್ಟರ್-ಆ್ಯಕ್ಟರ್ ಜೋಡಿ, ಪ್ರೆಗ್ನೆನ್ಸಿ ಪೋಟೋಶೂಟ್ ಹಂಚಿಕೊಂಡಿದೆ. ಈ ಕುರಿತ ಡಾಲಿ ದಿಲ್ ಕಿ ಬಾತ್ ಕಹಾನಿ.

ಯೆಸ್.. ಮೋಸ್ಟ್ ವರ್ಸಟೈಲ್ ಆ್ಯಕ್ಟರ್ ಡಾಲಿ ಧನಂಜಯ ಗೈನೋಕಾಲಜಿಸ್ಟ್ ಡಾ. ಧನ್ಯತಾ ಕೈ ಹಿಡಿದಿದ್ದು ಎಲ್ಲರಿಗೂ ಗೊತ್ತೇಯಿದೆ. ಇದೀಗ ಈ ಆ್ಯಕ್ಟರ್-ಡಾಕ್ಟರ್ ಜೋಡಿ ತಂದೆ ತಾಯಿಯಾಗಿ ಪ್ರಮೋಷನ್ ಪಡೆಯುತ್ತಿದ್ದು, ಡಾಲಿ ತನ್ನ ಪತ್ನಿಯ ಪ್ರೆಗ್ನೆನ್ಸಿ ಫೋಟೋಶೂಟ್ ಹಂಚಿಕೊಂಡಿದ್ದಾರೆ. ಅದನ್ನ ಕಂಡು ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.

ನಮ್ಮ ಪ್ರಪಂಚ ವಿಸ್ತಾರವಾಗುತ್ತಿದೆ ಎಂದಿರೋ ಡಾಲಿ, ಬಾ ಬೆಳಕಾಗಿ ಬಾ.. ಬಾ ಮನದುಂಬಿ ಬಾ.. ಬಾ ಮನೆತುಂಬು ಬಾ.. ಕಾಯುವೆ ಕಾಯುವೆ ಕಾಯುವೆ.. ನಿಮ್ಮ ಪ್ರೀತಿ, ಆಶೀರ್ವಾದವಿರಲಿ ಅಂತ ತಮ್ಮ ಪೇಜ್‌‌ನಲ್ಲಿ ಫೋಟೋ ಸಮೇತ ಪೋಸ್ಟ್ ಮಾಡಿದ್ದಾರೆ. ಈ ಹಿಂದೆ ಡಾ ಧನ್ಯತಾರನ್ನ ಇಂಟ್ರಡ್ಯೂಸ್ ಮಾಡೋಕೆ, ಬ್ಯಾಚುಲರ್ ಲೈಫ್‌ಗೆ ಗುಡ್ ಬೈ ಹೇಳೋಕೆ ಹಾಗೂ ಮದ್ವೆ ವಿಡಿಯೋಗಳನ್ನ ಹಂಚಿಕೊಂಡಿದ್ದ ಡಾಲಿ, ಇದೀಗ ತಂದೆಯಾಗ್ತಿರೋ ಖುಷಿ ಕೂಡ ಫ್ಯಾನ್ಸ್ ಹಾಗೂ ಕನ್ನಡಿಗರ ಜೊತೆ ಬಹಿರಂಗವಾಗಿ ಹಂಚಿಕೊಂಡಿದ್ದಾರೆ. ಅಂದಹಾಗೆ ಮೇ ಮೊದಲ ವಾರದಲ್ಲಿ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಡಾಲಿ ದಂಪತಿ.

ತಮ್ಮದೇ ಡಾಲಿ ಪಿಕ್ಚರ್ಸ್ ಬ್ಯಾನರ್‌‌ನಡಿ ಸಿನಿಮಾ, ವೆಬ್ ಸೀರೀಸ್‌‌ಗಳ ನಿರ್ಮಾಣ ಮಾಡೋ ಮೂಲಕ ಹೊಸಬರಿಗೆ ವೇದಿಕೆ ಕೂಡ ಆಗ್ತಿದ್ದಾರೆ ಡಾಲಿ. ಅಲ್ಲದೆ, ಮದ್ವೆ ಬಳಿಕ ಅಣ್ಣ ಫ್ರಮ್ ಮೆಕ್ಸಿಕೋ, ಉತ್ತರಕಾಂಡ, 666 ಆಪರೇಷನ್ ಡ್ರೀಮ್ ಥಿಯೇಟರ್, ಮದರ್ ಪ್ರಾಮಿಸ್, ಹಲಗಲಿ.. ಹೀಗೆ ಸಾಲು ಸಾಲು ಚಿತ್ರಗಳಲ್ಲಿ ನಟಿಸೋ ಮೂಲಕ ಸಿಕ್ಕಾಪಟ್ಟೆ ಬ್ಯುಸಿ ಕೂಡ ಆಗಿದ್ದಾರೆ.

 

| Reported by: ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
Exit mobile version